Vydyaloka

ಜೀವನ ಕೌಶಲ್ಯ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ- ಕುಲಪತಿ ಡಾ||ಎಸ್. ಸಚ್ಚಿದಾನಂದ

ಜೀವನ ಕೌಶಲ್ಯ ಸಮಗ್ರ ವ್ಯಕ್ತಿತ್ವ ಹಾಗೂ ಸಮಗ್ರವಾದ ಬದುಕು ನಿರ್ಮಾಣಕ್ಕೆ ಸಹಕಾರಿ ಎಂದು ಡಾ|| ಎಸ್. ಸಚ್ಚಿದಾನಂದ್‌, ಗೌರವಾನ್ವಿತ ಕುಲಪತಿಗಳು, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ತಿಳಿಸಿದರು.

ಬೆಂಗಳೂರು, ಮಾರ್ಚ್-16: ನಾವು ಯಾವುದೇ ಕೆಲಸವನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ಅದರ ಬಗ್ಗೆ ಪೂರ್ವ ತಯಾರಿ ಮಾಡಿದ್ದಲ್ಲಿ ಕೆಲಸದಲ್ಲಿ ಯಶಸ್ಸನ್ನು ಹೇಗೆ ಸಾಧ್ಯವೊ ಅದೇ ರೀತಿಯಲ್ಲಿ ಸಮಗ್ರವಾದ ಬದುಕು ಹಾಗೂ ವ್ಯಕ್ತಿತ್ವವನ್ನು ರೂಪಿಸಲು ಜೀವನ ಕೌಶಲ್ಯಗಳು ಸಹಕಾರಿಯಾಗಿದೆ ಎಂದು ಡಾ|| ಎಸ್. ಸಚ್ಚಿದಾನಂದ್‌, ಗೌರವಾನ್ವಿತ ಕುಲಪತಿಗಳು, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ತಿಳಿಸಿದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್.ಜಿ.ಯು.ಹೆಚ್.ಎಸ್) ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ ವಿಶ್ವವಿದ್ಯಾಲಯದ ಸಂಯೋಜನೆಗೊಳಪಟ್ಟ ರಾಷ್ವ್ರಿಯ ಸೇವಾ ಯೋಜನೆಯ ಅಧಿಕಾರಿಗಳಿಗಾಗಿ ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನಿಮ್ಹಾನ್ಸ್‌ ಸಹಯೋಗದೊಂದಿಗೆ ನಿಮ್ಹಾನ್ಸ್‌ ಆವರಣದಲ್ಲಿ ದಿನಾಂಕ:15.03.2021 ರಿಂದ 20.03.2021 ರವರೆಗೆ ಹಮ್ಮಿಕೊಂಡಿರುವ 06 ದಿನಗಳ ಕಾಲ ಜೀವನ ಕೌಶಲ್ಯ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಸಮಗ್ರ ವ್ಯಕ್ತಿತ್ವ ಮತ್ತು ಬದುಕಿನ ನಿರ್ವಹಣೆಗೆ ಜೀವನ ಕೌಶಲ್ಯ ಸಹಕಾರಿಯಾಗಿದೆ ಎಂದು ಡಾ|| ಎಸ್. ಸಚ್ಚಿದಾನಂದ್‌, ತಿಳಿಸಿದರು.

06 ದಿನಗಳ ತರಬೇತಿ ಶಿಬಿರದ ಮುಖ್ಯ ಉದ್ದೇಶ ಧನಾತ್ಮಕ ಚಿಂತನೆಯ ಮೂಲಕ ಸಮಾಜದಲ್ಲಿ ಬದಲಾವಣೆ ಹೇಗೆ ಸಾಧ್ಯ ಎನ್ನುವ ಮೂಲ ಉದ್ದೇಶದೊಂದಿಗೆ ಜೀವನ ಕೌಶಲ್ಯಗಳಾದ ಪರಿಣಾಮಕಾರಿ ಸಂವಹನ, ಮಾನಸಿಕ ಒತ್ತಡ ನಿರ್ವಹಣೆ, ಕ್ರಿಯಾಶೀಲ ನಾಯಕತ್ವ, ಸಮುದಾಯ ಸೇವೆ, ಸ್ವಯಂ ಅರಿವು, ಪರಿಣಾಮಕಾರಿಯಾಗಿ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದನೆ, ಮೌಲ್ಯಾಧಾರಿತ ವ್ಯಕ್ತಿತ್ವ ನಿರ್ಮಾಣಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕಾವಾದ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

ಡಾ|| ಸತೀಶ್‌ ಗಿರಿಮಾಜಿ, ಡೀನ್‌, ನಿಮ್ಹಾನ್ಸ್‌, ಬೆಂಗಳೂರು, ಕೇಂದ್ರ ಸರ್ಕಾರದ ರಾ.ಸೇ.ಯೋ ಪ್ರಾದೇಶಿಕ ನಿರ್ದೇಶಕರಾದ ಶ್ರೀ.ಖಾದ್ರಿ ನರಸಿಂಹಯ್ಯ, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ.ಪ್ರತಾಪ್‌ ಲಿಂಗಯ್ಯ, ಡಾ||ಗಿರೀಶ್‌ ಮತ್ತು ಡಾ||ಬಿ.ವಸಂತಶೆಟ್ಟಿ, ಉಪಕುಲಸಚಿವರು, ರಾ.ಗಾ.ಆ.ವಿ.ವಿ ರವರು ಭಾಗವಹಿಸಿದ್ದರು.

Share this: