Vydyaloka

ಇನ್‍ಎಕ್ಸ್‌ಎಸ್ ಕ್ಲಿನಿಕ್‍ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರಿಂದ ಸೌಂದರ್ಯ ವರ್ಧಕ ಚಿಕಿತ್ಸೆ

ಅವಧಿಗೆ ಮುನ್ನವೇ ವಯಸ್ಸಾಗುವಿಕೆ ತಡೆಗಟ್ಟಲು ಮತ್ತು ಸ್ಥೂಲಕಾಯ ನಿವಾರಿಸಲು ಅಪಾರ ಪರಿಣಿತಿ ಪಡೆದಿರುವ ವೈಯಾಲಿಕಾವಲ್‍ನ ಇನ್‍ಎಕ್ಸ್‌ಎಸ್ ಕ್ಲಿನಿಕ್‍ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರಿಂದ ಸೌಂದರ್ಯ ವರ್ಧಕ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಆಂಟಿ ಏಜಿಂಗ್ ಚಿಕಿತ್ಸೆಗಳು ಮತ್ತು ಫೇಸ್ ಲಿಫ್ಟ್‍ಗಳನ್ನು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ವೈದ್ಯರು ನೆರವೇರಿಸುತ್ತಿದ್ದು, ಯುವತಿಯರು, ಫ್ಯಾಷನ್ ಶೋಗಳು ಮತ್ತು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಹೆಸರಾಂತ ರೂಪದರ್ಶಿಯರೂ ಈ ಚಿಕಿತ್ಸೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಇಲ್ಲಿ ಸೌಂದರ್ಯ ವರ್ಧನೆಗೆ ಹಾಗೂ ಅತ್ಯಂತ ಸುಂದರವಾಗಿ ಕಾಣುವ ವಿಶೇಷ ಚಿಕಿತ್ಸಾ ಸೌಲಭ್ಯಗಳು ಲಭಿಸುತ್ತಿವೆ. ಮಾಡೆಲ್/ಮೂವಿ ಮೇಕ್ ಒವರ್ (ರೂಪದರ್ಶಿ/ಸಿನಿಮಾ ನಟಿಯರ ವಿಶೇಷ ಸೌಂದರ್ಯ ವರ್ಧನೆ), ಫೇಸ್‍ಲಿಫ್ಟ್(ವದನ ಸೌಂದರ್ಯ ಹೆಚ್ಚಳ), ಜಾಲೈನ್ ಶೇಪಿಂಗ್(ಮುಖದ ಚೆಲುವು ವೃದ್ದಿ), ದಪ್ಪ ಕೆನ್ನೆಗಳನ್ನು ತೆಳುವಾಗಿಸುವಿಕೆ, ಬಾಡಿ ಶೇಪಿಂಗ್(ಆಕರ್ಷಕ ಮೈಮಾಟ), ಬಾಡಿ ಗ್ಲೋ(ತನು ಕಾಂತಿ ವರ್ಧನೆ) ಇತರ ಬ್ಯೂಟಿ ಚಿಕಿತ್ಸೆಗಳನ್ನು ಇಲ್ಲಿ ನೀಡಲಾಗುತ್ತಿದೆ.

ಈ ಕ್ಲಿನಿಕ್‍ನ ರೂವಾರಿಗಳಲ್ಲಿ ಒಬ್ಬರಾದ ಡಾ. ಸಂಗೀತ ಪಟೇಲ್ ಅವರು ಇನ್‍ಎಕ್ಸ್‌ಎಸ್ ಕ್ಲಿನಿಕ್‍ನಲ್ಲಿ ಮಿಸ್ ಫೆಮಿನಾ ದಿವಾ ಸ್ಪರ್ಧಿಗಳಿಗೆ ಹಾಗೂ ಖ್ಯಾತ ರೂಪದರ್ಶಿಯರಿಗೆ ಸೌಂದರ್ಯ ಚಿಕಿತ್ಸೆ ನೆರವೇರಿಸಿ ಗಮನ ಸೆಳೆದಿದ್ದಾರೆ. ಈ ಕ್ಲಿನಿಕ್‍ನಲ್ಲಿ ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ ಲಭಿಸುವ ಅತ್ಯಾಧುನಿಕ ಮತ್ತು ವಿಶ್ವದರ್ಜೆಯ ಬ್ಯುಟಿ ಥೆರಪಿಗಳು ಲಭ್ಯ. ರೂಪದರ್ಶಿಯರು, ಟೆಲಿವಿಷನ್ ನಟಿಯರು, ಚಿತ್ರ ತಾರೆಯರು ಈ ಕ್ಲಿನಿಕ್‍ನ ಪ್ರಯೋಜನ ಪಡೆದು ತಮ್ಮ ಗ್ಲಾಮರ್ ಹೆಚ್ಚಿಸಿಕೊಂಡು ಆಯಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ.

ಡಾ. ಕೀರ್ತಿ ಆರ್. ಪಟೇಲ್ ಮತ್ತು ಡಾ. ಸಂಗೀತ ಕೆ. ಪಟೇಲ್ ಯುವ ವೈದ್ಯ ದಂಪತಿಗಳ ಪ್ರಯತ್ನದ ಫಲವೇ ಇನ್‍ಎಕ್ಸ್‌ಎಸ್ ಕ್ಲಿನಿಕ್. ಆಂಟಿ ಏಜಿಂಗ್ ಮತ್ತು ಆಂಟಿ ಒಬೇಸಿಟಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಪಟೇಲ್ ದಂಪತಿಗಳು ತಮ್ಮ ವಿಶೇಷ ಸೇವಾ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಬಾಲಿವುಡ್ ಖ್ಯಾತ ಅಭಿನೇತ್ರಿ ದಿವಂಗತ ಶ್ರೀದೇವಿ ಇದನ್ನು ಉದ್ಘಾಟಿಸಿ ಶುಭ ಕೋರಿದ್ದರು.

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವೈಯಾಲಿಕಾವಲ್‍ನ ಎರಡನೇ ಮುಖ್ಯರಸ್ತೆಯಲ್ಲಿರುವ ಇನ್‍ಎಕ್ಸ್‌ಎಸ್ ಕ್ಲಿನಿಕ್ “ಆರೋಗ್ಯಕರ ರೀತಿಯಲ್ಲಿ ವಯಸ್ಸಾಗುವಿಕೆ ಹಾಗೂ ಬೊಜ್ಜು ನಿಯಂತ್ರಣಕ್ಕೆ ಉತ್ತಮ ರೀತಿಯಲ್ಲಿ ನಾವು ವಿಶಿಷ್ಟ ಸೇವೆಗಳನ್ನು ಒದಗಿಸುತ್ತಿದ್ದೇವೆ. ನಮಗೆ ವಯಸ್ಸಾದಂತೆ ನಮ್ಮ ದೇಹದಲ್ಲಿನ ಹಾರ್ಮೋನುಗಳ ಮಟ್ಟ ಕಡಿಮೆಯಾಗುತ್ತದೆ. ಆದರೆ, ನಾವು ಸೂಕ್ತ ರೀತಿಯಲ್ಲಿ ಸಂತುಲಿತ ಆಹಾರ ಸೇವಿಸಿದರೆ ಹಾರ್ಮೋನುಗಳು ಉತ್ತಮ ಆಕಾರದಲ್ಲಿ ಪೋಷಿಸಲ್ಪಡುತ್ತವೆ” ಎನ್ನುತ್ತಾರೆ ಸೌಂದರ್ಯ ತಜ್ಞರು ಮತ್ತು ಇನ್‍ಎಕ್ಸ್‌ಎಸ್ ಕ್ಲಿನಿಕ್ ನಿರ್ದೇಶಕರಾದ ಡಾ.‌ ಕೀರ್ತಿ ಪಟೇಲ್.

ಯುವ ವೈದ್ಯ ದಂಪತಿಗಳಾದ ಡಾ. ಕೀರ್ತಿ ಪಟೇಲ್ ಮತ್ತು ಡಾ. ಸಂಗೀತ ಪಟೇಲ್ ಅವರ ಸಮರ್ಥ ನೇತೃತ್ವದಲ್ಲಿ ಇನ್‍ಎಕ್ಸ್‌ಎಸ್ ಆಂಟಿ ಏಜಿಂಗ್ ಹಾಗೂ ಆಂಟಿ ಒಬೇಸಿಟಿ ಕ್ಲಿನಿಕ್ ಮುಂಚೂಣಿಯಲ್ಲಿದೆ. ಇನ್‍ಎಕ್ಸ್‌ಎಸ್ ಕಳೆದ 18 ವರ್ಷಗಳಿಂದ ಸ್ಥೂಲಕಾಯ ಮತ್ತು ಬೊಜ್ಜು ಸಮಸ್ಯೆಗೆ ಚಿಕಿತ್ಸೆ ನೀಡುತ್ತಿರುವ ಪ್ರಪ್ರಥಮ ಮತ್ತು ಏಕೈಕ ವೈದ್ಯಕೀಯ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಈವೆರೆಗೆ ಇಲ್ಲಿ ಸಾವಿರಾರು ರೋಗಿಗಳು ಯಶಸ್ವಿ ಚಿಕಿತ್ಸೆ ಪಡೆದಿದ್ದಾರೆ. ಡಾ. ಕೀರ್ತಿ ಮತ್ತು ಡಾ. ಸಂಗೀತ ಅವರುಗಳು ಸ್ಥೂಲಕಾಯದ ವಿವಿಧ ಸಮಸ್ಯೆಗಳ ಕುರಿತು ನಾನ್-ಕ್ಲಿನಿಕಲ್ ಸಂಶೋಧನೆಯನ್ನು ಸಹ ನಡೆಸಿದ್ದಾರೆ.

ಇನ್‍ಎಕ್ಸ್‌ಎಸ್ ಕ್ಲಿನಿಕ್ ಮೂಲಕ ಆಂಟಿ ಏಜಿಂಗ್ ಮತ್ತು ಆಂಟಿ ಒಬೇಸಿಟಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಪಟೇಲ್ ದಂಪತಿಗಳು ಅತ್ಯಾಧುನಿಕ ಸೌಂದರ್ಯ ಚಿಕಿತ್ಸೆ ಮೂಲಕ ತಮ್ಮ ವಿಶೇಷ ಸೇವಾ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಇನ್‍ಎಕ್ಸ್‌ಎಸ್ ಕ್ಲಿನಿಕ್:
ನಂ.36, ವೈಯಾಲಿಕಾವಲ್, 2ನೇ ಮುಖ್ಯ ರಸ್ತೆ, ಬೆಂಗಳೂರು – 560003
 ಫೋನ್: 080-23311774/23449140
             98454 24024/984535763

 

Share this: