Health Vision

Health Vision

SUBSCRIBE

Magazine

Click Here

ಹೋಮಿಯೋಪತಿಯಿಂದ ಮೂಲವ್ಯಾಧಿಯ ಶಾಶ್ವತ ನಿರ್ಮೂಲನೆ 

ಡಾಕ್ಟ್ರೆ,ನಂಗೆ ಕಕ್ಕಸು ಮಾಡುವಾಗ ತುಂಬಾ ಉರಿ, ನೋವು , ಕೆಲವೊಮ್ಮೆ ರಕ್ತ ಬೀಳ್ತದೆ, ಕೆಲವೊಮ್ಮೆ ರಾತ್ರಿಯೆಲ್ಲಾ ನೋವು ನಿದ್ರೆಬರಲ್ಲಾ , ತುಂಬಾ ಕಡೆ ಟ್ರೀಟ್ಮೆಂಟ್ ಮಾಡ್ದೆ ಕಮ್ಮಿಅಗಿಲ್ಲ ಹೆಂಗಾದ್ರೂ ಮಾಡಿ ಸರಿಮಾಡಿ ಹೀಗೆ ತಮ್ಮ ತೊಂದರೆ ತೋಡಿಕೊಂಡರು ಕೃಷ್ಣಯ್ಯ ಶೆಟ್ರು.
ಕೃಷ್ಣಯ್ಯ ಶೆಟ್ರು ಅನುಭವಿಸ್ತಾ ಇರೋದು ನಿಮಗೆಲ್ಲಾ ಗೊತ್ತಿರಬಹುದಾದ ಮೂಲವ್ಯಾಧಿ ಅಥವಾ ವೈದ್ಯಕೀಯ ಶಬ್ಧಗಳಲ್ಲಿ ಹೇಳುವುದಾದರೆ ಪೈಲ್ಸ್ (piles) ಅಥವಾ ಹೇಮರಾಯ್ಡ್ಸ್(Hemorrhoids) .
ಆಧುನಿಕತೆ  ನಮ್ಮ ಜೀವನದಲ್ಲಿ ವ್ಯಾಪಿಸಿದಂತೆ, ಮಾನವನ ಆರೋಗ್ಯವನ್ನು ಬೆನ್ನುಹತ್ತಿದ ಅನೇಕ ವ್ಯಾಧಿಗಳಲ್ಲಿ ಮೂಲವ್ಯಾಧಿ ಕೂಡ ಒಂದು. ಅನಾರೋಗ್ಯಕರ ಜೀವನಶೈಲಿ, ಕುರ್ಚಿಗಂಟಿಸುವ ವೃತ್ತಿಗಳು ಇವೇ ಇತ್ಯಾದಿಗಳು ಮೂಲವ್ಯಾಧಿ ಉಂಟಾಗಲು ಪೂರಕ ಅಂಶಗಳು.

ಈ ವ್ಯಾಧಿಯ ಬಗ್ಗೆ ಮತ್ತು ಅದರ ನಿಯಂತ್ರಣದ ಬಗ್ಗೆ ತಿಳಿಯೋಣ.
ಈ ಮೂಲವ್ಯಾಧಿ ಮಾನವನ ಗುದದ್ವಾರದ (ಮಲದ್ವಾರ) ರಕ್ತನಾಳಗಳ ಊತದಿಂದ ಉಂಟಾಗುತ್ತದೆ, ಮೂಲವ್ಯಾಧಿಯಲ್ಲಿ 2 ವಿಧವುಂಟು. ರಕ್ತನಾಳಗಳು ಗುದನಾಳದ ಒಳಗೇ ಊದಿಕೊಂಡಾಗ ಅಂತರ್ ಮೂಲವ್ಯಾಧಿ (Internal piles) ಎನ್ನುವರು, ಒಂದು ಪಕ್ಷ ಈ ರಕ್ತನಾಳಗಳು ಗುದದ್ವಾರದ ಅಂತ್ಯದಲ್ಲಿ ಅಥವಾ ಹೊರಭಾಗದಲ್ಲಿ  ಊದಿಕೊಂಡಿದ್ದರೆ ಅದಕ್ಕೆ ಬಾಹ್ಯ ಮೂಲವ್ಯಾಧಿ (external piles) ಎನ್ನಲಾಗುತ್ತದೆ.

  • ಮೂಲವ್ಯಾಧಿಗೆ ಮುಖ್ಯ ಕಾರಣಗಳು

1. ಧೀರ್ಘಕಾಲೀನ ಮಲಬದ್ದತೆ (constipation) ಮತ್ತು  ಅತಿಸಾರ (diarrhea)

2. ಮಲವಿಸರ್ಜನೆ ಮಾಡುವಾಗ ತುಂಬಾ ತಿಣುಕುವುದು

3. ನಿಯಮವಿಲ್ಲದ ಜೇವನಶ್ಯೆಲಿ, ಒಬೆಸಿಟಿ, ಬೊಜ್ಜುತನ

4. ಗರ್ಭಿಣಿಯರಲ್ಲಿ (Pregnancy induced )

5. ನಾರಿನಂಶವಿಲ್ಲದ ಆಹಾರ ಸೇವನೆ

6. ಹೆಚ್ಚು ನೀರು ಕುಡಿಯದವರಲ್ಲಿ

7. ದೈಹಿಕ ಕಸರತ್ತು ಇಲ್ಲದಿರುವುದು

8. ಮಾನಸಿಕ ಒತ್ತಡ ಇತ್ಯಾದಿ.

ಮೂಲವ್ಯಾಧಿ ಇತ್ತೀಚಿಗೆ ಎಲ್ಲಾ ವಯಸ್ಸಿನವರಲ್ಲೂ ಒಂದಿಲ್ಲೊಂದು ರೀತಿಯಲ್ಲಿ ಕಂಡುಬರುತ್ತದೆ, ಆಧುನಿಕ ಜಗತ್ತಿನ ಯಾಂತ್ರಿಕ ಜೀವನ, ದಿನದ ಹೆಚ್ಚಿನಾಂಶ ನಮ್ಮನ್ನು ಕುರ್ಚಿಗೇ ಅಂಟಿಸುವ ವೃತ್ತಿಗಳು,  ಮೂಲವ್ಯಾಧಿಯನ್ನು ಉಂಟುಮಾಡಲು ಪೂರಕಗಳಾಗಿವೆನ್ನಬಹುದು.

  • ಮೂಲವ್ಯಾಧಿಯ ಲಕ್ಷಣಗಳು

1. ಮಲವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವ

2. ಮಲಬದ್ಧತೆ

3. ಮಲವಿಸರ್ಜನೆಯ ಸಮಯದಲ್ಲಿ ಅಥವಾ ನಂತರ ನೋವು,

4. ಗುದದ್ವಾರದಲ್ಲಿ ತುರಿಕೆ

5. ಬಾಹ್ಯ ಮೂಲವ್ಯಾಧಿಯಲ್ಲಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ  ಸಣ್ಣ ಗಾತ್ರದ ಉಬ್ಬುವಿಕೆ ಗುದದ್ವಾರದ ಹೊರಗೆ ಕಂಡುಬರುತ್ತದೆ

6. ಮಲವಿಸರ್ಜನೆಯಲ್ಲಿ ಅಡಚಣೆ ಇತ್ಯಾದಿ ಗುದದ್ವಾರದಿಂದಾಗುವ ರಕ್ತಸ್ರಾವ ಬರೀ ಮೂಲವ್ಯಾಧಿಗೆ ಮಾತ್ರ ಸೀಮಿತವಲ್ಲ ಕೆಲವೊಮ್ಮೆ ಈ ತರಹದ ರಕ್ತಸ್ರಾವ ಜೀರ್ಣಾಂಗ ವ್ಯವಸ್ತೆಯ ಇತರ ವ್ಯಾಧಿಗಳಲ್ಲೂ ಕಂಡುಬರುತ್ತದೆ ಅವುಗಳಲ್ಲಿ ಗುದನಾಳದ ಕ್ಯಾನ್ಸರ್ ಒಂದು, ಹಾಗಾಗಿ ವೈದ್ಯರ ಸಲಹೆ ಅತ್ಯವಶ್ಯಕ.

  • ಮೂಲವ್ಯಾಧಿಬರದಂತೆ  ತಡೆಗಟ್ಟುವುದು ಹೇಗೆ ?

ಬಾಲ್ಯದಿಂದಲೇ ಮಲವಿಸರ್ಜನೆಯ ಸರಿಯಾದ ನಿಯಮ ಪಾಲಿಸುವುದು ಅವಶ್ಯಕ, ಪೋಷಕರು ಮಕ್ಕಳಿಗೆ ಇದನ್ನು ತಿಳಿಹೇಳಬೇಕು. ಮಲವಿಸರ್ಜನೆಯ ಕ್ರಿಯೆಯಲ್ಲಿ ಅತೀಯಾಗಿ ತಿಣುಕುವುದು ಸಲ್ಲದು, ದಿನಕ್ಕೆ 2-3 ಲೀಟರ್ ನೀರು ಕುಡಿಯುವುದು ಅವಶ್ಯಕ. ಇತಿ ಮಿತಿಯಲ್ಲಿ ಆಹಾರ ಸೇವನೆ, ಮಾಂಸಹಾರ,ಬ್ರೆಡ್ಡು, ಬಿಸ್ಕೆಟ್ಟು, ಬೇಕರಿ ತಿನಿಸು, ಮಸಾಲೆಯುಕ್ತ ಆಹಾರ ಪದಾರ್ಥಗಳ ಸೇವನೆಯಲ್ಲಿ ಮಿತಿ, ತರಕಾರಿ, ಸೊಪ್ಪುಗಳಂತಹ ನಾರಿನಂಶವಿರುವ ಪದಾರ್ಥಗಳ ಅಧಿಕ ಸೇವನೆ, ಧೂಮಪಾನ, ಮದ್ಯ ಇನ್ನಿತರ ವಸ್ತುಗಳು ಅಪಾಯಕಾರಿ. ಎಲ್ಲದಕ್ಕಿಂತ ಮುಖ್ಯವಾಗಿ ಜೀವನಶೈಲಿಯಲ್ಲಿ ಬದಲಾವಣೆ, ದೈಹಿಕ ವ್ಯಾಯಾಮ, ಮಾನಸಿಕ ಒತ್ತಡಗಳ ಸಮರ್ಪಕ ನಿರ್ವಹಣೆ ಇತ್ಯಾದಿ.

ಮೂಲವ್ಯಾಧಿಯ ಪ್ರಾರಂಭಿಕ ಹಂತದಲ್ಲಿ ಮೇಲೆತಿಳಿಸಿದ ಹಾಗೆ ಆಹಾರದಲ್ಲಿ ಮತ್ತು  ಜೀವನಶೈಲಿಯಲ್ಲಿ ಬದಲಾವಣೆಯಿಂದಲೇ ಅನೇಕಸಲ ಈ ವ್ಯಾಧಿಯನ್ನು ತಡೆಗಟ್ಟಬಹುದು. ಮೂಲವ್ಯಾಧಿಯಿಂದ ಬಳಲುವವರು ಕೆಲವು ಕ್ರಮಗಳನ್ನು ಪಾಲಿಸುವುದು ಅಗತ್ಯ, ಅವುಗಳೆಂದರೆ
1. ಮಲವಿಸರ್ಜನೆ ಸಮಯದಲ್ಲಿ ಹೆಚ್ಚು ಒತ್ತಡಕೊಟ್ಟು ತಿಣುಕಬಾರದು ಇದಕ್ಕೆ ಮಲವು ಆದಷ್ಟು ಗಟ್ಟಿಯಾಗದಹಾಗೆ ಜಾಗರೂಕತೆ ವಹಿಸಿರಿ ಅದಕ್ಕೆ  ದಿನಕ್ಕೆ ೮-೧೦ ಗ್ಲಾಸ್ ನೀರಿನ ಸೇವನೆ, ಬೆಂಡೆಕಾಯಿ, ಬೀನ್ಸ್, ಸೌತೆ, ಮೂಲಂಗಿ ಇತರೇ ನಾರಿನಂಶವುಳ್ಳ ಸೊಪ್ಪು , ತರಕಾರಿಗಳ ಸೇವನೆ ಅಗತ್ಯ. ಹಸೀ ತರಕಾರಿ ಸೇವನೆ ಇನ್ನೂ ಉಪಯುಕ್ತ.

2. ಅನ್ನ, ಬಿಳಿ ಬ್ರೆಡ್ಡು, ಬೇಕರಿಯ ತಿನಿಸುಗಳು, ಎಣ್ಣೆಯುಕ್ತ ತಿನಿಸುಗಳ ಸೇವನೆ ಮಿತವಾಗಿರಲಿ

3. ಧೂಮಪಾನ ಮತ್ತು ಮದ್ಯ ಸೇವನೆ ವರ್ಜ್ಯ

4. ಸಿಟ್ಜ್ ಬಾತ್ –ಒಂದು ಟಬ್ ಬೆಚ್ಚನೆ ನೀರಿನಲ್ಲಿ ಸ್ವಲ್ಪ ಉಪ್ಪು  ಅಥವಾ ಪೊಟ್ಯಾಸಿಯಂ ಪರಮಂಗನೆಟ್ ಕಲಸಿ ಅದರಲ್ಲಿ ಗುದಭಾಗವು ಮುಳುಗುವ ಹಾಗೆ 20 ನಿಮಿಷ ಕುಳಿತುಕೊಳ್ಳುವುದು.

ಮೂಲವ್ಯಾಧಿಯ ಚಿಕಿತ್ಸೆ

ಮಲಬದ್ಧತೆ, ಅಸಿಡಿಟಿ, ಅಜೀರ್ಣತೆಗಳು ಮೂಲವ್ಯಾಧಿಗೆ ಪ್ರಮುಖ ಕಾರಣಗಳು, ಇವುಗಳ ಚಿಕಿತ್ಸೆ ಮತ್ತು ನಿವಾರಣೆಯ ಜೊತೆಗೆ ಜೀವನಶೈಲಿಯ ಸುಧಾರಣೆ ಅತ್ಯಗತ್ಯ.
ಮೂಲವ್ಯಾಧಿಗೆ ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆಯ ಮೊರೆಹೋಗುವುದುಂಟು, ಊದಿಕೊಂಡಿರುವ ಗುದದ್ವಾರದ ರಕ್ತನಾಳಗಳನ್ನು ಸಂಕುಚಿಸುವ, ಕಟ್ಟುವ, ಹೆಪ್ಪುಗಟ್ಟಿಸುವ ಕ್ರಮಗಳಿಂದ ತಾತ್ಕಾಲಿಕ ಪರಿಹಾರ ಲಭಿಸುವುದೇ ಹೊರತು ಮೂಲವ್ಯಾಧಿಯ ಸಂಪೂರ್ಣ ನಿರ್ಮೂಲನೆ ಆಗುವುದಿಲ್ಲ. ಶಸ್ತ್ರ ಚಿಕಿತ್ಸೆಯಾದ ನಂತರ ಕೆಲವು ತಿಂಗಳುಗಳಲ್ಲೇ ಮೂಲವ್ಯಾಧಿ ಮರುಕಳಿಸುವ ಸಂಭವ ಹೆಚ್ಚು.
ಹೋಮಿಯೋಪಥಿ ಚಿಕಿತ್ಸೆಯಿಂದ ಮೂಲವ್ಯಾಧಿಯ ಸಂಪೂರ್ಣ ನಿರ್ಮೂಲನೆ ಸಾಧ್ಯ, ಮೂಲವ್ಯಾಧಿಯು ಮರುಕಳಿಸುವುದನ್ನೂ ತಡೆಗಟ್ಟಬಹುದು. ಪೈಲ್ಸ್  ಕಾಣಿಸಿಕೊಂಡ ಆರಂಭದಲ್ಲೇ ಹೋಮಿಯೋ ಚಿಕಿತ್ಸೆಯನ್ನು ಆರಂಭಿಸಿದರೆ ಹೆಚ್ಚು ಪರಿಣಾಮಕಾರಿ ಮತ್ತು ಶೀಘ್ರ ಪರಿಹಾರ ಸಾಧ್ಯ.
ಹೋಮಿಯೋಪತಿಯು ಒಂದು ಸೌಮ್ಯಕಾರಿ ಮತ್ತು ಅಡ್ಡಪರಿಣಾಮರಹಿತ ಚಿಕಿತ್ಸಾಪದ್ಧತಿ, ಅನೇಕ ರೋಗಗಳನ್ನು ಶಸ್ತ್ರಚಿಕಿತ್ಸೆಇಲ್ಲದೆಯೇ ಔಷಧಿಗಳ ಮೂಲಕ ಗುಣಪಡಿಸಬಹುದು ಅಂಥವುಗಳ ಪಟ್ಟಿಯಲ್ಲಿ  ಮೂಲವ್ಯಾಧಿಯೂ ಸೇರುತ್ತದೆ. ಹೋಮಿಯೋಪತಿಯ ರೆಪರ್ಟರಿ ಗ್ರಂಥದಲ್ಲಿ ಸುಮಾರು 172 ಔಷಧಿಗಳನ್ನು ಮೂಲವ್ಯಾಧಿಯ ಚಿಕಿತ್ಸೆಗೆ ನೀಡಲಾಗಿದೆ. ಈ ಪದ್ಧತಿಯಲ್ಲಿ ಮೂಲವ್ಯಾಧಿಯಿಂದ ಬಳಲುವ ವ್ಯಕ್ತಿಯ ಹಾಗೂ  ರೋಗದ ಗುಣಲಕ್ಷಣಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸೂಕ್ತವಾದ ಚಿಕಿತ್ಸೆ ನೀಡಲಾಗುತ್ತದೆ, ಎಲ್ಲರಿಗೂ ಒಂದೇ ತೆರನಾದ ಔಷಧಿ ಇರುವುದಿಲ್ಲ. ಉದಾಹರಣೆಗೆ:ಮೂಲವ್ಯಾಧಿಯ ಜೊತೆ ಕೆಳಬೆನ್ನು ನೋವಿದ್ದರೆ — 10 ಔಷಧಿಗಳಿವೆಮೂಲವ್ಯಾಧಿಯ ಜೊತೆ ರಕ್ತಸ್ರಾವ (bleeding) ಇಲ್ಲದಿದ್ದರೆ — 25 ಔಷಧಿಗಳಿವೆಅಂತರ್ ಮೂಲವ್ಯಾಧಿ (internal piles)– 37 ಔಷಧಿಗಳು ಬಾಹ್ಯ ಮೂಲವ್ಯಾಧಿ (external piles)– 76 ಔಷಧಿಗಳು ಗರ್ಭಿಣಿಯರಲ್ಲಿ ಮೂಲವ್ಯಾಧಿ — 18 ಔಷಧಿಗಳು….ಇತ್ಯಾದಿ … ಎಸ್ಚುಲಸ್ ಹಿಪ್, ಆಲೋಸೋಕ್, ಆರ್ಸ್ ಅಲ್ಬ್, ಹಮಮೆಲಿಸ್, ನಕ್ಸ್ ವೋಮಿಕಾ, ಸಲ್ಫರ್, ರಟನಿಯ, ಪಿಯೋನಿಯ ಹೀಗೆ ಅನೇಕ  ಹೋಮಿಯೋಪತಿ ಔಷಧಿಗಳು ಮೂಲವ್ಯಾಧಿಯನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ಹೋಮಿಯೋಪತಿ ವೈದ್ಯರ ಭೇಟಿ ಮಾಡಿಯೇ ಚಿಕಿತ್ಸೆ ಪಡೆಯುವುದು ಒಳಿತು.
ಹೋಮಿಯೋಪತಿಯಿಂದ ಮೂಲವ್ಯಾಧಿಯ ಶಾಶ್ವತ ನಿರ್ಮೂಲನೆ ಸಾಧ್ಯ, ಆರಂಭಿಕ ಹಂತಗಳಲ್ಲೇ ಚಿಕಿತ್ಸೆ ಆರಂಭಿಸಿದರೆ ಶೀಘ್ರ ಪರಿಹಾರ ಪಡೆಯಬಹುದು.

Back To Top