Vydyaloka

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಮನೆಮದ್ದುಗಳು

ಚಳಿಗಾಲದಲ್ಲಿ ಚರ್ಮದ ಆರೈಕೆ ಎಲ್ಲರಿಗೂ ಕಷ್ಟವೇ. ಕೈಕಾಲುಗಳೆಲ್ಲಾ ಬಿರುಕು ಬಿಟ್ಟು ನೋಡಲು ಅಸಹ್ಯವಾಗಿ ಕಂಡರೆ ತುಟಿಯು ಒಣಗಿ ರಕ್ತ ಸೋರಿ ಮುಖದ ಚರ್ಮ ಒರಟಾಗಿ ಏನೂ ಮಾಡಬೇಕೆಂದು ಅರ್ಥವಾಗೋದಿಲ್ಲ, ಹೀಗಾಗಿ ಚಳಿಗಾಲದಲ್ಲಿ ಚರ್ಮ ನುಣುಪಾಗಿಡಲು ಈ ಕೆಳಗೆ ಕೆಲವು ವಿಧಾನಗಳಿವೆ. ಪ್ರಯತ್ನಿಸಿ ನೋಡಿ.
ಪರಂಗಿ ಹಣ್ಣು:
ಪರಂಗಿಯಲ್ಲಿ ಹಲವು ಚರ್ಮಕ್ಕೆ ನೆರವಾಗುವ ಗುಣಗಳಿವೆ. ಪರಂಗಿಹಣ್ಣನ್ನು ಹಿಸುಕಿ ಹಾಲನ್ನು ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷದವರೆಗೆ ಮಸಾಜ್ ಮಾಡಿ. ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ.
ಮೊಟ್ಟೆಯ ಬಿಳಿ ಅಂಶ ಮತ್ತು ಮೊಸರಿನ ಮಾಸ್ಕ್:
ಮೊಟ್ಟೆಯ ಒಡೆದು ಅದರೊಳಗಿರುವ ಬಿಳಿ ಅಂಶದ ಭಾಗವನ್ನು ಹಳದಿ ಅಂಶದ ಭಾಗದಿಂದ ಬೇರ್ಪಡಿಸಿ ಇದಕ್ಕೆ ಮೊಸರು ಮತ್ತು ಸಕ್ಕರೆಯನ್ನು ಮಿಶ್ರಮಾಡಿ ನಿಮ್ಮ ಮುಖದ ಮೇಲೆ ಲೇಪಿಸಿ. ಚೆನ್ನಾಗಿ ಒಣಗಿದ ನಂತರ ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ಮೊಸರು ನಿಮ್ಮ ಮುಖದ ಚರ್ಮವನ್ನು ಶುದ್ಧೀಕರಿಸುತ್ತದೆ, ಸಕ್ಕರೆಯು ನೈಸರ್ಗಿಕವಾಗಿ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತೆ.
ಹಾಲು ಮತ್ತು ಜೇನು:
ಇದೊಂದು ಸರಳವಾದ ಫೇಸ್ ಪ್ಯಾಕ್. ಇದು ಒಣ ಚರ್ಮಕ್ಕೆ ಉತ್ತಮವಾದ ಪರಿಹಾರ. ಹಾಲು ಮತ್ತು ಜೇನನ್ನು ಕಲಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 3-4 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ.
ಎಲೆಕೋಸು ಮತ್ತು ಜೇನುತುಪ್ಪದ ಮಾಸ್ಕ್:
ಎರಡು ಅಥವಾ ಮೂರು ಎಲೆಕೋಸಿನ ಎಲೆಗಳನ್ನು ಅರೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಮೊಸರು ಮತ್ತು ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಿಮಗೆ ಒಣ ಚರ್ಮವಿದ್ದಲ್ಲಿ ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಸೇರಿಸಿ ಈ ಪೇಸ್ಟನ್ನು ನಿಮ್ಮ ಮುಖದ ಮೇಲೆ ಲೇಪಿಸಿ 15-20 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿರುವ ನೀರಿನಿಂದ ಚೆನ್ನಾಗಿ ನೆನೆಸಿ ತೊಳೆದುಕೊಳ್ಳಿ.
ಓಟ್ ಮೀಲ್ ಫೇಸ್ ಪ್ಯಾಕ್:
ಓಟ್ ಮೀಲ್ ಫೇಸ್ ಪ್ಯಾಕ್ ಸ್ಕರ್ಬರ್‍ನ ಹಾಗೇ ವರ್ತಿಸುತ್ತದೆ. ಇದನ್ನು ಜೇನು ಮತ್ತು ಮೊಸರಿನೊಂದಿಗೆ ಬೆರೆಸಿ ಕೆಲವು ಹನಿ ಗ್ಲಿಸರಿನ್ ಸೇರಿಸಿ ಇದನ್ನು ತಯಾರಿಸಿ. ಇದನ್ನು ಮುಖದ ಮೇಲೆ ಹಚ್ಚಿ 10 ನಿಮಿಷದ ನಂತರ ತೊಳೆಯಿರಿ.
ಕಿತ್ತಳೆ ಮತ್ತು ಜೇನುತುಪ್ಪ:
ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಳ್ಳಿ ಇದಕ್ಕೆ ಹಾಲು ಮತ್ತು ಜೇನು ತುಪ್ಪವನ್ನು ಸೇರಿಸಿ ಇದು ಹಲವು ರೀತಿಯಲ್ಲಿ ಚರ್ಮಕ್ಕೆ ಲಾಭದಾಯಕ.

Share this: