Vydyaloka

ಮಧುಮೇಹ ಪಾದ ಹುಣ್ಣುಗಳಿಗೆ ಎಚ್‍ಬಿಒಟಿ ಚಿಕಿತ್ಸೆ

ಮಧುಮೇಹ ರೋಗಿಯ ಕಾಲಿನಲ್ಲಿ ಸಣ್ಣ ಗುಳ್ಳೆ ಅಥವಾ ಗಾಯವಾದರೆ ಅದಕ್ಕೆ ಸಕಾಲಿಕ ಮತ್ತು ಸೂಕ್ತ ಚಿಕಿತ್ಸೆ ಮಾಡದಿದ್ದರೆ ಅದು ಕ್ಷಿಪ್ರವಾಗಿ ವ್ಯಾಪಿಸಿ ಜೀವಕ್ಕೇ ಸಂಚಕಾರ ತರುವ ಅಪಾಯವಿರುತ್ತದೆ. ಇಂಥ ಸಂದರ್ಭಗಳಲ್ಲಿ ಮಧುಮೇಹ ಪಾದ ಹುಣ್ಣುಗಳಿಗೆ ಅತ್ಯಾಧುನಿಕ ಆಮ್ಲಜನಕ ಚಿಕಿತ್ಸಾ ವಿಧಾನ ಅಥವಾ ಹೈಪರ್‍ಬೊಲಿಕ್ ಆಕ್ಸಿಜನ್ ಥೆರಪಿ (ಎಚ್‍ಬಿಒಟಿ) ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎನಿಸಿದೆ. ಇದು ಅತ್ಯಂತ ಸರಳ, ಶಸ್ತ್ರಚಿಕಿತ್ಸೆ ರಹಿತ ಹಾಗೂ ನೋವು ರಹಿತ ಚಿಕಿತ್ಸೆಯಾಗಿದೆ.

ಡಯಾಬಿಟಿಸ್ ಅಥವಾ ಮಧುಮೇಹ ರೋಗವನ್ನು ಆರಂಭದಲ್ಲೇ ಪತ್ತೆ ಮಾಡಿ ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ, ಅದು ಜೀವಕ್ಕೇ ಸಂಚಕಾರ ಉಂಟು ಮಾಡುತ್ತದೆ. ಈ ಹೆಮ್ಮಾರಿಯನ್ನು ಆರಂಭದಲ್ಲೇ ಪಳಗಿಸಿದರೆ ಮತ್ತು ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡರೆ ಈ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು. ಆದರೆ ದುರಾದೃಷ್ಟವಶಾತ್ ಭಾರತದಲ್ಲಿ ಈ ರೋಗವು ಒಂದು ಸೋಂಕು ವ್ಯಾದಿಯಂತೆ ದುಷ್ಪರಿಣಾಮ ಬೀರುತ್ತಿದೆ.

ಭಾರತದಲ್ಲಿ ಅಂದಾಜು 40 ದಶಲಕ್ಷ ಮಂದಿ ಡಯಾಬಿಟಿಸ್‍ನಿಂದ ಬಳಲುತ್ತಿದ್ದಾರೆ ಹಾಗೂ ತಜ್ಞರ ಪ್ರಕಾರ, ಎಚ್ಚರಿಕೆ ಪ್ರಮಾಣದಲ್ಲಿ ಈ ಪಿಡುಗು ವೃದ್ದಿಯಾಗುತ್ತದೆ. 2020ರ ವೇಳೆಗೆ ಈಗಿರುವ ಸಂಖ್ಯೆಗಿಂತ ಎರಡರಷ್ಟು ಹೆಚ್ಚಾಗಲಿದ್ದು, ಸೋಂಕು ಹಬ್ಬುವ ರೀತಿಯಲ್ಲಿ ವ್ಯಾಪಿಸಲಿದೆ. ಮಾರಕ ಮಧುಮೇಹ ರೋಗವನ್ನು ಸಕಾದಲ್ಲಿ ಪತ್ತೆ ಮಾಡಿ ಸಮರ್ಪಕವಾಗಿ ನಿಯಂತ್ರಿಸದಿದ್ದರೆ, ಅನೇಕ ಮಂದಿಯ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಭಾರೀ ಗಂಡಾಂತರ ಎಂದರೆ ದೃಷ್ಟಿ ಹಾನಿ.

ದೇಶದಲ್ಲಿನ ಅನೇಕ ತಜ್ಞ ವೈದ್ಯರು ಭಾರತವನ್ನು ವಿಶ್ವ ಮಧುಮೇಹ ರಾಜಧಾನಿ ಎಂದು ಪರಿಗಣಿಸಿದ್ದಾರೆ ಹಾಗೂ ಪರಿಸ್ಥಿತಿಯನ್ನು ಮಹಾಸ್ಪೋಟಕ್ಕಾಗಿ ಕಾಯುತ್ತಿರುವ ಟೈಮ್ ಬಾಂಬ್‍ಗೆ ಹೋಲಿಸಿದ್ದಾರೆ. ಆದಾಗ್ಯೂ ಮತ್ತೊಂದು ಆತಂಕಕಾರಿ ಸಂಗತಿ ಎಂದರೆ ಈ ಪಿಡುಗಿನ ಬಗ್ಗೆ ಮತ್ತು ಮಧುಮೇಹ ಹೆಮ್ಮಾರಿಯ ಬಗ್ಗೆ ಮೂಡಿಸಲಾಗುತ್ತಿರುವ ಜಾಗೃತಿ ತುಂಬಾ ಅಲ್ಪ ಮಟ್ಟದ್ದಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಜರೂರು ನಿಯಂತ್ರಣ ಮಾಡಿಕೊಳ್ಳುವ ಅಗತ್ಯವಿದೆ. ಈ ಮಾರಕ ರೋಗವು ಕಾಲಕ್ರಮೇಣ ಕಾಲುಗಳು, ಕಣ್ಣುಗಳು, ಮೂತ್ರಪಿಂಡಗಳು, ಹೃದಯ, ಮೆದುಳು ಹಾಗೂ ದೇಹದ ಪ್ರತಿ ಮುಖ್ಯ ಅಂಗಾಂಗದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂಬ ಬಗ್ಗೆ ರೋಗಿಗಳಲ್ಲಿ ಸಾಕಷ್ಟು ಜಾಗೃತಿ ಮತ್ತು ಅರಿವು ಇಲ್ಲ ಎಂಬುದು ಕಳವಳಕ್ಕೆ ಕಾರಣವಾಗಿದೆ.

ಮಧುಮೇಹ ರೋಗಿಯ ಕಾಲಿನಲ್ಲಿ ಸಣ್ಣ ಗುಳ್ಳೆ ಅಥವಾ ಗಾಯವಾದರೆ ಅದಕ್ಕೆ ಸಕಾಲಿಕ ಮತ್ತು ಸೂಕ್ತ ಚಿಕಿತ್ಸೆ ಮಾಡದಿದ್ದರೆ ಅದು ಕ್ಷಿಪ್ರವಾಗಿ ವ್ಯಾಪಿಸಿ ಜೀವಕ್ಕೇ ಸಂಚಕಾರ ತರುವ ಅಪಾಯವಿರುತ್ತದೆ. ಇಂಥ ಸಂದರ್ಭಗಳಲ್ಲಿ ಮಧುಮೇಹ ಪಾದ ಹುಣ್ಣುಗಳಿಗೆ ಅತ್ಯಾಧುನಿಕ ಆಮ್ಲಜನಕ ಚಿಕಿತ್ಸಾ ವಿಧಾನ ಅಥವಾ ಹೈಪರ್‍ಬೊಲಿಕ್ ಆಕ್ಸಿಜನ್ ಥೆರಪಿ (ಎಚ್‍ಬಿಒಟಿ) ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎನಿಸಿದೆ. ಇದು ಅತ್ಯಂತ ಸರಳ, ಶಸ್ತ್ರಚಿಕಿತ್ಸೆ ರಹಿತ ಹಾಗೂ ನೋವು ರಹಿತ ಚಿಕಿತ್ಸೆಯಾಗಿದೆ.

ಏನಿದು ಎಚ್‍ಬಿಒಟಿ?

ಮಧುಮೇಹ ರೋಗಿಗಳ ಪಾದಗಳಿಗೆ ಸಾಕಷ್ಟು ರಕ್ತ ಪೂರೈಕ ಇಲ್ಲದೆ ಇರುವುದರಿಂದ ನ್ಯೂರೋಪಥಿ (ನರ ಹಾನಿ) ದೋಷವು ಪಾದ ಹುಣ್ಣುಗಳಿಗೆ ಕಾರಣವಾಗುತ್ತದೆ. ಇದಕ್ಕೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಕಾಲು ಕತ್ತರಿಸಬೇಕಾದ ಪರಿಸ್ಥಿತಿಗೂ ಎಡೆ ಮಾಡಿಕೊಡುತ್ತದೆ.

ಡಯಾಬಿಟಿಕ್ ಫೂಟ್ ಅಲ್ಸರ್ ಅಥವಾ ಮಧುಮೇಹ ಪಾದ ಹುಣ್ಣು ಸಂದರ್ಭದಲ್ಲಿ ಹೈಪರ್‍ಬೊಲಿಕ್ ಆಕ್ಸಿಜನ್ ಥೆರಪಿ(ಎಚ್‍ಬಿಒಟಿ) ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂಬುದು ಸಾಬೀತಾಗಿದೆ. ಇದೊಂದು ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಯಾಗಿದೆ. ರೋಗಿಯ ಶರೀರದಲ್ಲಿ ಶೇ.100ರಷ್ಟು ಆಮ್ಲಜನಕ ಲಭ್ಯವಾಗುವಂತೆ ಮಾಡುವ ಮೂಲಕ ದೇಹವು ಸ್ವಾಭಾವಿಕವಾಗಿಯೇ ಗುಣಮುಖವಾಗಲು ಎಚ್‍ಬಿಒಟಿ ನೆರವಾಗುತ್ತದೆ. ದೇಹದಲ್ಲಿ ವಾತಾವರಣದ ಆಮ್ಲಜನಕ ಒತ್ತಡವನ್ನು ಹೆಚ್ಚಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ. ದೇಹದಲ್ಲಿ ಸೂಕ್ತ ರೀತಿಯಲ್ಲಿ ಆಮ್ಲಜನಕ ಪೂರೈಕೆಯಾಗುವಂತೆ ಮಾಡುವ ಮೂಲಕ ಮಧುಮೇಹ ರೋಗಿಗಳ ಪಾದಗಳಿಗೆ ಸಾಕಷ್ಟು ರಕ್ತ ಪೂರೈಕೆಯಾಗುವಂತೆ ಮಾಡಿ ನ್ಯೂರೋಪಥಿ (ನರ ಹಾನಿ) ದೋಷವನ್ನು ತಪ್ಪಿಸಲಾಗುತ್ತದೆ. ಇದರಿಂದ ಪಾದ ಹುಣ್ಣುಗಳು ಸ್ವಾಭಾವಿಕವಾಗಿ ಮತ್ತು ಕ್ಷಿಪ್ರವಾಗಿ ಗುಣಮುಖವಾಗುತ್ತದೆ.

ಸಾಮಾನ್ಯ ಸನ್ನಿವೇಶಗಳ ಅಡಿ, ಆಮ್ಲಜನಕವು ಕೆಂಪು ರಕ್ತ ಕಣಗಳು/ಕೋಶಗಳ (ರೆಡ್ ಬ್ಲಡ್ ಸೆಲ್ಸ್) ಮೂಲಕ ದೇಹದ ಎಲ್ಲ ಭಾಗಗಳಿಗೂ ರವಾನೆಯಾಗುತ್ತದೆ. ಎಚ್‍ಬಿಒಟಿಯೊಂದಿಗೆ ಇದೇ ವಿಧಾನವನ್ನು ಅನ್ಯ ಮಾರ್ಗದಲ್ಲಿ ಅನುಸರಿಸಲಾಗುತ್ತದೆ. ದೇಹದ ಎಲ್ಲ ದ್ರವಗಳಿಗೆ ಎಚ್‍ಬಿಒಟಿ ಮೂಲಕ ಆಮ್ಲಜನಕವನ್ನು ವಿಲೀನಗೊಳಿಸಲಾಗುತ್ತದೆ.

ಪ್ಲಾಸ್ಮಾ, ಕೇಂದ್ರ ನರವ್ಯೂಹ ವ್ಯವಸ್ಥೆಯಲ್ಲಿರು ದ್ರವಗಳು, ಶ್ಲೇಷ್ಮ, ದುಗ್ಧರಸ ಮತ್ತು ಎಲುಬಿನಲ್ಲಿರುವ ದ್ರವ ಅಂಶಗಳು ಪರಿಚಲನೆ ಕಡಿಮೆ ಇರುವ ಮತ್ತು ಅಡತಡೆಯಾಗುರುವ ಜಾಗಗಳಿಗೆ ರಕ್ತ ಮತ್ತು ಆಮ್ಲಜನಕವನ್ನು ಪೂರೈಸಲು ನೆರವಾಗುತ್ತದೆ. ಯಾವುದೇ ಗಾಯವಿರಲಿ ಅಲ್ಲಿಗೆ ರಕ್ತ ಪೂರೈಕೆಯಾಗುತ್ತಿದ್ದರೆ ಅದು ಶೀಘ್ರ ಗುಣಮುಖವಾಗುತ್ತದೆ.

ಮಧುಮೇಹ ಪಾದ ಹಣ್ಣುಗಳು ಅಥವಾ ಡಯಾಬಿಟಿಕ್ ಫುಟ್ ಅಲ್ಷರ್ ಆದಾಗ ಗಾಯವಾದ ಸ್ಥಳಗಳಿಗೆ ರಕ್ತ ಪೂರೈಕೆ ಸಮಪರ್ಕವಾಗಿ ಇಲ್ಲದೇ ಕಾರಣ ಅಲ್ಲಿ ಕೀವು ಮತ್ತು ಸೋಂಕು ಉಲ್ಬಣಗೊಂಡು ಗಾಯ ಮಹಾಮಾರಿಯಾಗುತ್ತದೆ. ಇಂಥ ಸ್ಥಳಗಳಿಗೆ ಆಮ್ಲಜನಕ ರಹಿತ ರಕ್ತ ಪೂರೈಕೆಯಾಗುತ್ತಿದ್ದರೆ ಹಣ್ಣು ಮತ್ತು ಗಾಯಗಳು ಬೇಗ ವಾಸಿಯಾಗುತ್ತದೆ. ಇದೇ ವಿಧಾನವನ್ನು ಎಚ್‍ಬಿಒಟಿಯಲ್ಲೂ ಬಳಸಲಾಗುತ್ತದೆ.

ಎಚ್‍ಬಿಒಟಿ ಚಿಕಿತ್ಸೆ ಮೂಲಕ ಹೆಚ್ಚುವರಿ ಆಮ್ಲಜನಕವು, ಹಾನಿಗೀಡಾದ ಅಂಗಾಂಶಗಳು ಮತ್ತು ಜೀವಕೋಶಗಳಿಗೆಲ್ಲಾ ತಲುಪುತ್ತದೆ. ಇದು ದೇಹದ ಸಹಜ ಉಪಶಮನ ಪ್ರಕ್ರಿಯೆಗೆ ನೆರವಾಗುತ್ತದೆ. ಆಮ್ಲಜನಕ ಹೆಚ್ಚಾಗುವುದರಿಂದ ಬ್ಯಾಕ್ಟೀರಿಯಾ ಮತ್ತು ಇತರ ರೋಗಕಾರಕ ಸೂಕ್ಷ್ಮಾಣುಗಳನ್ನು ಕೊಲ್ಲಲು ಬಿಳಿ ರಕ್ತಕಣಗಳ (ವೈಟ್ ಬ್ಲಡ್ ಸೆಲ್ಸ್) ಸಾಮಥ್ರ್ಯ ಹೆಚ್ಚಿಸುತ್ತದೆ. ಇದು ಊತವನ್ನು ಕಡಿಮೆ ಮಾಡುತ್ತದೆ ಹಾಗೂ ಹಾನಿಗೀಡಾದ ಸ್ಥಳಗಳಿಗೆ ಹೊಸ ರಕ್ತನಾಳಗಳು ಕ್ಷಿಪ್ರವಾಗಿ ಬೆಳೆಯುವಂತೆ ಮಾಡುತ್ತದೆ. ಇದು ಅತ್ಯಂತ ಸರಳ, ಶಸ್ತ್ರಚಿಕಿತ್ಸೆ ರಹಿತ ಹಾಗೂ ನೋವು ರಹಿತ ಚಿಕಿತ್ಸೆಯಾಗಿದೆ.

ಎಚ್‍ಬಿಒಟಿ ಪ್ರಯೋಜನಗಳೇನು?

ಡಾ ಎಂ ನಾಗರಾಜ್
ಮೆಡಿವಿಷನ್ ಹೆಲ್ತ್ ಕೇರ್
ಮಾರತಹಳ್ಳಿ
ಬೆಂಗಳೂರು 560037
ಮೊ. : 9901133022 /9845848474

 

Share this: