Vydyaloka

ಬಾಯಿ ದುರ್ವಾಸನೆಯೇ?-ದೂರ ಮಾಡಲು ಸ್ವಾಭಾವಿಕ ಪರಿಹಾರಗಳು

ಕೆಲವರು ಬಳಿ ಬಂದರೆ, ಬಾಯಿ ತೆರೆದು ಮಾತಾಡಿದರೆ, ಅವರ ಬಾಯಿಯ ದುರ್ವಾಸನೆ ತಡೆಯಲಾಗದು. ಇದಕ್ಕೆ ಕಾರಣ ಅವರ ನಾಲಿಗೆಯ ಮೇಲೆ ಹಾಗೂ ಬಾಯಿಯ ಇತರ ಭಾಗಗಳಲ್ಲಿ ನೆಲಸಿರುವ ಬ್ಯಾಕ್ಟೀರಿಯಾ ಅಥವಾ ಅಣು ಜೀವಿಗಳು. ಇದಕ್ಕೆ ಈ ಮುಂದೆ ಹೇಳಲಾಗುವ ಸ್ವಾಭಾವಿಕ ವಿಧಾನಗಳನ್ನು ಅನುಸರಿಸಬಹುದು.

• ಪುದೀನ ಸೊಪ್ಪು ಅಗಿಯಿರಿ: ಬಾಯಿಯ ದುರ್ವಾಸನೆ ತಡೆಯುವ ಉತ್ತಮ ಹಾಗೂ ಸ್ವಾಭಾವಿಕ ವಿಧಾನ ಇದು. ಪುದೀನ ನಿಮ್ಮ ಬಾಯಿಯನ್ನು ತಾಜಾ ಇಡುತ್ತದೆ ಹಾಗೂ ಸುಮಧುರ ಸುವಾಸನೆ ನೀಡುತ್ತದೆ. ಎಲೆಗಳಲ್ಲಿರುವ ಹರಿತ್ತು ವಾಸನೆಗಳನ್ನು ಹೀರಿ, ಬಾಯಿಯಲ್ಲಿ ತಾಜಾ ಉಸಿರು ಕೊಡುತ್ತದೆ.
• ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ: ಉಪ್ಪು ನೀರನ್ನು ಬಾಯಲ್ಲಿ ಹಾಕಿಕೊಂಡು ಬಾಯಿ ತೊಳೆದರೆ, ಗುಳಗುಳನೆ ಮುಕ್ಕಳಿಸಿದರೆ, ಬಾಯಿಯಲ್ಲಿರುವ ಅಣುಜೀವಿಗಳು-ಆಹಾರದ ಅಳಿದುಳಿದ ಭಾಗಗಳು ಹಾಗೂ ಅವಶೇಷಗಳು ದೂರವಾಗಿ, ಅವುಗಳನ್ನಾಧರಿಸಿ ಉಳಿದ ಬ್ಯಾಕ್ಟೀರಿಯಾ ಮಾಯವಾಗುತ್ತದೆ. ಬೆಚ್ಚನೆಯ ನೀರಿನಲ್ಲಿ ಒಂದು ಚಮಚ ಉಪ್ಪು ಹಾಕಿ, ಮಿಶ್ರಣ ಕಲಕಿರಿ. ಆ ನೀರಿನಲ್ಲಿ ಉಪ್ಪು ಸಂಪೂರ್ಣ ಕರಗಬೇಕು. ಈ ನೀರು ಮುಕ್ಕಳಿಸಿ ಆರೋಗ್ಯಕರÀ ಬಾಯಿ ಹೊಂದಿರಿ.
• ಅಡಿಗೆ ಸೋಡಾದಿಂದ ಹಲ್ಲುಜ್ಜಿ: ಅಡಿಗೆ ಸೋಡಾದಲ್ಲಿರುವ ಹೈಡ್ರೋಜನ್ ಪೆರಾಕ್ಸೈಡ್, ಬಾಯಿಯಲ್ಲಿರುವ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಬಾಯಿಯಲ್ಲಿ ಆಮ್ಲವಾತಾವರಣÀವಿದ್ದಲ್ಲಿ, ಅಣುಜೀವಿಗಳಿಗೆ ಅನುಕೂಲಕರ ವಾತಾವgಣ ಇರುತ್ತದೆ. ನಿಮ್ಮ ಹಲ್ಲುಜ್ಜುವ ಬ್ರಷ್‍ನ್ನು ಒದ್ದೆ ಮಾಡಿ, ಅದರ ಮೇಲೆ ಸ್ವಲ್ಪ ಅಡಿಗೆ ಸೋಡಾ ಹಾಕಿ, ಹಲ್ಲುಜ್ಜಿ.
• ಸೇಬು ತಿನ್ನಿರಿ: ಸೇಬನ್ನು ಪ್ರಕೃತಿಯ ಹಲ್ಲುಜ್ಜುವ ಬ್ರಷ್ ಎನ್ನುತ್ತಾರೆ. ಬಾಯಿಯಲ್ಲಿ ದುರ್ವಾಸನೆ ಮಾಡುವ ಬ್ಯಾಕ್ಟೀರಿಯಾಗಳನ್ನು ಸೇಬು ಮಾಯ ಮಾಡುತ್ತದೆ. ಇದಕ್ಕಾಗಿ ಬಾಯಲ್ಲಿ ಸೇಬು ಹಣ್ಣು ಹಾಕಿ, ಚೆನ್ನಾಗಿ ಅಗಿದು ತಿನ್ನಿರಿ.
• ಮೊಸರನ್ನು ಹೆಚ್ಚು ಬಳಸಿರಿ: ಶಾಶ್ವತವಾಗಿ ಬಾಯಿಯ ದುರ್ವಾಸನೆ ತೊಲಗಿಸಲು ಮೊಸರು ಉತ್ತಮ. 6 ವಾರಗಳವರೆಗೆ ಸತತ ಮೊಸರು ಬಳಸಿರಿ.
• ಸಿ ಜೀವಸತ್ವ ಬಳಸಿ: ದವಡೆಯ ಊತ ಹಾಗೂ ಉರಿಯಂತಹ ರೋಗಗಳು, ಹಾಗೂ ಬಾಯಿಯ ಬ್ಯಾಕ್ಟೀರಿಯಾ ಓಡಿಸಲು, ಸಿ ಜೀವಸತ್ವವಿರುವ ನಿಂಬೆ, ಮೋಸಂಬಿ, ಕಿತ್ತಳೆ ಹಾಗೂ ಗಜ್ಜರಿ ಹೆಚ್ಚು ತಿನ್ನಿರಿ.
• ಹೆಚ್ಚು ನೀರು ಕುಡಿಯಿರಿ: ಬಾಯಿ ಒಣ ಇದ್ದರೆ ಬ್ಯಾಕ್ಟೀರಿಯಾ ನೆಲಸುತ್ತದೆ. ಆದ್ದರಿಂದ ಬಾಯಿ ತೇವವಾಗಿಟ್ಟರೆ, ನಿಮ್ಮ ದೇಹ, ಎಲ್ಲ ಜೈವಿಕ-ರಾಸಾಯನಿಕ ವಿಧಾನವನ್ನು ನಿಯಂತ್ರಿಸಿ, ತ್ಯಾಜ್ಯ ಹಾಗೂ ವಿಷಕಾರಿ ಅಂಶಗಳನ್ನು ನಿಯಂತ್ರಿಸುತ್ತದೆ. ಪ್ರತಿ ದಿನ ಕನಿಷ್ಟ 8 ಲೋಟ ನೀರು ಕುಡಿಯಿರಿ
• ಬೇವು ಅಗಿಯಿರಿ: ಬೇವಿನಲ್ಲಿ ಅಣುಜೀವಿ ಹಾಗೂ ಶೀಲಿಂಧ್ರ ಸೋಂಕು ತಡೆಯುವ ಗುಣಗಳಿವೆ. ಹೀಗಾಗಿ ದಿನ ಬೇವು ಅಗಿದರೆ ಬಾಯಿ ವಾಸನೆ ದೂರ.
• ಏಲಕ್ಕಿ ಜಗಿಯಿರಿ: ಏಲಕ್ಕಿ ಪರಿಮಳದೊಂದಿಗೆ, ಜೀರ್ಣಕಾರಿ ಅಂಶ ಹೊಂದಿದೆÉ ಹೀಗಾಗಿ ಆಗಾಗ ಏಲಕ್ಕಿ ಜಗಿಯುತ್ತಿದ್ದರೆ ಬಾಯಿಯಲ್ಲಿ ಸುವಾಸನೆ ತುಂಬುತ್ತದೆ.
• ದಿನಾಲೂ 2 ಬಾರಿ ಹಲ್ಲು ತಿಕ್ಕಿರಿ: 2ರಿಂದ 3 ನಿಮಿಷ, ಪ್ರತಿದಿನ 2 ಬಾರಿ ಹಲ್ಲುಜ್ಜಿ. ನಿದ್ರಿಸುವ ಮೊದಲು ಹಲ್ಲುಜ್ಜಿ.
• ಫ್ಲಾಸಿಂಗ್ ಮಾಡಿ: ಹಲ್ಲುಗಳ ಮಧ್ಯೆ ಉಳಿದಿರುವ ಆಹಾರದ ಅವಶೇಷ, ಹಲ್ಲಿನ ವಿಶೇಷ ದಾರದಿಂದ ಸ್ವಚ್ಛ ಮಾಡಿರಿ.
• ನಾಲಿಗೆ ತಿಕ್ಕಿರಿ: ನಾಲಿಗೆ ಉಜ್ಜುವ ಸಲಕರಣೆಯಿಂದ ನಾಲಿಗೆ ತಿಕ್ಕಿರಿ.
• ಬಾಯಿ ಮುಕ್ಕಳಿಸುವ ದ್ರವ ಬಳಸಿರಿ.
• ತಜ್ಞ ದಂತ ವೈದ್ಯರನ್ನು ಸಂಪರ್ಕಿಸಿ.
• ಸಿಗರೇಟು, ಬೀಡಿ, ತಂಬಾಕು ಉತ್ಪಾದನೆ ಬಳಸಬೇಡಿ.
• ಸಕ್ಕರೆ ಇರದ ಕ್ಯಾಂಡಿ ತಿನ್ನಿ.
• ಗರಿಗರಿಯಾದ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಅಗಿಯಿರಿ. ಉದಾ: ಗಜ್ಜರಿ, ಅಜವಾನದ ಎಲೆಗಳು.
• ಉಪವಾಸ ಅಥವಾ ಹಸಿವಿದ್ದಾಗ, ಹೊಟ್ಟೆಯಲ್ಲಿ ಆಮ್ಲಗಳು ಹೆಚ್ಚುತ್ತವೆ. ಊಟ ತ್ಯಜಿಸಿದರೂ ಬಾಯಿಯ ದುರ್ವಾಸನೆ ಖಾತ್ರಿ.

ಬಾಯಿಗೆ ದುರ್ವಾಸನೆ ಬರುವ ಆಹಾರ ತಿನ್ನಬೇಡಿ. ಈರುಳ್ಳಿ ಹಾಗೂ ಬೆಳ್ಳುಳ್ಳಿ ತಿಂದರೆ, ಬಾಯಿ ವಾಸನೆ ಅಪಾರ. ಹೀಗಾಗಿ ಇವುಗಳನ್ನು ತಿನ್ನದಿರಿ. ಅಥವಾ ಮನೆಯಿಂದ ಹೊರಗೆ ಹೋಗುವಾಗ ತಿಂದು ಹೋಗಬೇಡಿ.

ಎನ್.ವ್ಹಿ ರಮೇಶ್, ಮೈಸೂರು
ಮೊ: 9845565238

Share this: