ಅಗಸೆ – ಆರೋಗ್ಯಕಾರಿ ಆಹಾರ

ಅಗಸೆಯನ್ನು ಇಂಗ್ಲೀಷನಲ್ಲಿ ‘ಫ್ಲಾಕ್ಸ’ ಅಥವಾ ಲಿನ್‍ಸೀಡ್ ಎಂದು ಕರೆಯುತ್ತಾರೆ. ಮೂಲತಃ ಇಂಗ್ಲೀಷ ಪದಗಳಲ್ಲಿ ಅರ್ಥೈಸಿದಂತೆ ಅಗಸೆಯು ಫ್ಲಾಕ್ಸ ಎಂಬ ಗಿಡದಿಂದ ಬೀಜಗಳ ರೂಪದಲ್ಲಿ ಸಿಗುವ ಆಹಾರವಾಗಿದೆ. ಅಗಸೆಯ ವೈಜ್ಞಾನಿಕ ಹೆಸರು ‘ಲಿನಮ್ ಯುಸಿಟಾಟಿಸಿಮಮ್’ (Linum usitatissimum). ಫ್ಲಾಕ್ಸ ಗಿಡವು ಉದ್ದನೆಯದ್ದಾಗಿದ್ದು, ನೀಲಿ ಬಣ್ಣದ ಹೂವುಗಳನ್ನು ಬಿಡುವ ಗಿಡವಾಗಿದೆ. ಫ್ಲಾಕ್ಸ ಗಿಡದಿಂದ ಬೆಳೆಯುವ ಅಗಸೆ ಬೀಜಗಳು ಸಾಮಾನ್ಯವಾಗಿ ಕಂದು ಬಣ್ಣ ಅಥವಾ ಹಳದಿ ಬಣ್ಣದಲ್ಲಿರುತ್ತವೆ. ಈ ಫ್ಲಾಕ್ಸ ಗಿಡದಿಂದ ಲಿನಿನ್ ಬಟ್ಟೆಗಳನ್ನೂ ಕೂಡ ತಯಾರಿಸಲಾಗುತ್ತದೆ.

ಅಗಸೆಯು ಅತ್ಯಂತ ಪ್ರಾಚೀನ ಕಾಲದ ಆಹಾರವಾಗಿದೆ. ಇದರ ಮೂಲವು ಈಜಿಪ್ಟ ಎಂದು ಭಾವಿಸಲಾಗಿದೆ. ಅಗಸೆ ಬೀಜವನ್ನು ಮುಖ್ಯವಾಗಿ ಎಣ್ಣೆ ಬೀಜಗಳ ಪಟ್ಟಿಯಲ್ಲಿ ಸೇರಿಸಿದೆ. ಇದಕ್ಕೆ ಕಾರಣ ಅಗಸೆ ಬೀಜದಲ್ಲಿರುವ ಎಣ್ಣೆಯ ಪ್ರಮಾಣ, ಸುಮಾರು 35 ರಿಂದ 47 ಪ್ರತಿಶತ ಕೊಬ್ಬಿನಾಂಶದಿಂದ ಕೂಡಿರುತ್ತದೆ. ಈ ಬೀಜಗಳಿಂದ ದೊರೆಯುವ ಎಣ್ಣೆಯು/ಕೊಬ್ಬಿನಾಂಶವು ಅತ್ಯಂತ ಆರೋಗ್ಯಕಾರವಾದದ್ದು, ಏಕೆಂದರೆ ಇದರಲ್ಲಿ ಶೇಕಡಾ 73 ರಷ್ಟು ಒಮೇಗಾ-3 ಮತ್ತು ಒಮೇಗಾ-6 ಎಂಬ ಆರೋಗ್ಯಕರ ಕೊಬ್ಬಿನಾಂಶಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಒಮೇಗಾ-3 ಎಂಬ ಕೊಬ್ಬಿನಾಂಶವು ಮೀನು ಹಾಗೂ ಮೀನಿನ ಪದಾರ್ಥಗಳಲ್ಲಿ ಕಂಡುಬರುತ್ತದೆ. ಆದರೆ ಸಸ್ಯ ಪದಾರ್ಥಗಳಲ್ಲಿ ಕಂಡುಬರುವುದು ಅತ್ಯಂತ ಹೇರಳಕರ. ಹಾಗಾಗಿ ಅಗಸೆಯು ಒಂದು ಒಳ್ಳೆಯ ಆರೋಗ್ಯಕಾರಿ ಕೊಬ್ಬಿನಾಂಶವನ್ನು ಹೊಂದಿರುವ ಆಹಾರವಾಗಿದೆ. ಅಗಸೆಯ ಇಡೀ ಬೀಜವನ್ನು ತಂಪಾದ ಹಾಗೂ ಶುಷ್ಕ ಸ್ಥಳಗಳಲ್ಲಿ ಸುಮಾರು ಒಂದು ವರ್ಷಗಳ ಕಾಲ ಶೇಖರಿಸಿಡಬಹುದು. ಆದರೆ ಪುಡಿ ಮಾಡಿದ ಅಗಸೆಯನ್ನು ಕೇವಲ ಕೆಲವು ದಿನಗಳ ಕಾಲ ಮಾತ್ರ ಶೇಖರಿಸಿಡಬಹುದು. ಕೆಲವು ತಜ್ಞರು ತಿಳಿಸಿದಂತೆ ದಿನನಿತ್ಯ ಒಬ್ಬ ವ್ಯಕ್ತಿಯು 1 ರಿಂದ 2 ಟೀ ಚಮಚಗಳಷ್ಟು ಅಗಸೆಯನ್ನು ಸೇವಿಸುವುದು ಒಳ್ಳೆಯದು.

ಒಂದು ಟೀ ಚಮಚ ಅಗಸೆಯಲ್ಲಿರುವ ಪೋಷಕಾಂಶಗಳ ವಿವರ –

13 ಕಿಲೋಕ್ಯಾಲೋರಿಗಳು, 0.4 ಗ್ರಾಂ ಪ್ರೋಟಿನ, 0.7 ಗ್ರಾಂ ನಾರು, 0 ಕೊಲೆಸ್ಟೆರೋಲ್, 6 ಮಿ. ಗ್ರಾಂ ಕ್ಯಾಲ್ಸಿಯಂ, 0.14 ಮಿ ಗ್ರಾಂ ಕಬ್ಬಿಣ, 1.05 ಗ್ರಾಂ ಕೊಬ್ಬು, 0.11 ಮಿ ಗ್ರಾಂ ಸತುವು, 2 ಮಿ ಗ್ರಾಂ ಫೋಲೆಟ್, 0.1 ಮೈಕ್ರೋ ಗ್ರಾಂ ಜೀವಸತ್ವ ಕೆ.

ಅಗಸೆಯ ಚಿಕಿತ್ಸಾತ್ಮಕ ಗುಣಗಳು :

1. ಅಗಸೆಯನ್ನು ನ್ಯೂಟ್ರಾಸ್ಯುಟಿಕಲ್ ಎಂದು ಕರೆಯಲಾಗುತ್ತದೆ, ಏಕೆಂದರೆ ಇದರಲ್ಲಿರುವ ಪ್ರತಿಯೊಂದು ಪೋಷಕಾಂಶವು ಆರೋಗ್ಯದ ಪ್ರಯೋಜನವನ್ನು ಒಳಗೊಂಡಿದೆ. ಅಂದರೆ ಹಲವು ರೀತಿಯ ಕಾಯಿಲೆಗಳನ್ನು ನಿಯಂತ್ರಿಸುವ ಹಾಗೂ ಆರೋಗ್ಯವನ್ನು ವೃದ್ಧಿಸುವ ಗುಣಗಳನ್ನೊಳಗೊಂಡಿದೆ.

2. ಅಗಸೆಯನ್ನು ದಿನನಿತ್ಯ ಸೇವಿಸುವುದರಿಂದ ಇದರಲ್ಲಿರುವ ಒಮೇಗಾ-3 ಕೊಬ್ಬಿನಾಂಶವು, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ದೂರಮಾಡುವುದಲ್ಲದೆ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

3. ಕೆಲವು ತಜ್ಞರು ತಿಳಿಸಿದಂತೆ, ಅಗಸೆಯನ್ನು ಸೇವಿಸುವುದರಿಂದ ರಕ್ತದ ಒತ್ತಡ (Blood pressure), ಹೃದಯಾಘಾತ, ಅಥ್ರೈಟಿಸ್ ಹಾಗೂ ರಕ್ತ ಹೆಪ್ಪುಗಟ್ಟುವಿಕೆಗಳನ್ನು ನಿಯಂತ್ರಿಸುತ್ತದೆ.

4. ಒಮೇಗಾ-3 ಕೊಬ್ಬಿನಾಂಶ ಅಷ್ಟೇ ಅಲ್ಲದೆ, ಅಗಸೆಯು ‘ಲಿಗ್ನನ್’ ಎಂಬ ಚಿಕಿತ್ಸಕ ರಸಾಯನಿಕ ಅಂಶವನ್ನು ಒಳಗೊಂಡಿದೆ.

5. ಅಗಸೆಯಲ್ಲಿನ ಈ ಲಿಗ್ನನ್ ರಸಾಯನಿಕ ಅಂಶವು, ಮಹಿಳೆಯರಲ್ಲಿ ಗ್ರಂಥಿಗಳ ಮೂಲಕ ಸ್ರವಿಕೆಯಾಗುವ ‘ಈಸ್ಟ್ರೋಜನ್’ ಎಂಬ ಹಾರ್ಮೋನಿನ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಈಸ್ಟ್ರೋಜನ್ ಹಾರ್ಮೋನ್ ಹಲವು ರೀತಿಯ ಕ್ಯಾನ್ಸರಗಳು (ಹಾರ್ಮೋನ್‍ಗಳಿಗೆ ಸಂಬಂಧಿಸಿದ ಕ್ಯಾನ್ಸರಗಳು, ಸ್ಥನ ಕ್ಯಾನ್ಸರ, ಗರ್ಭಕೋಶ ಕ್ಯಾನ್ಸರ), ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹಾಗೂ ಆಸ್ಟಿಯೋಪೊರೋಸಿಸ್ ಎಂಬ ಹಲವು ರೀತಿಯ ಕಾಯಿಲೆಗಳನ್ನು ನಿಯಂತ್ರಿಸುತ್ತದೆ.

6. ಮಹಿಳೆಯರ ಮಧ್ಯವಯಸ್ಸಿನಲ್ಲಿ (45-55ವರ್ಷ) ಈಸ್ಟ್ರೋಜನ್ ಎಂಬ ಹಾರ್ಮೋನ್‍ಗಳ ಸ್ರವಿಕೆಯು ಕಡಿಮೆಗೊಳ್ಳುತ್ತದೆ ಹಾಗೂ ಹಾರ್ಮೋನ್‍ಗಳ ಅಸಮತೋಲನ ಕೂಡ ಉಂಟಾಗುತ್ತದೆ.

7. ಆದ್ದರಿಂದ ಅಗಸೆಯನ್ನು ದಿನನಿತ್ಯ ಸೇವಿಸುವುದರಿಂದ, ಇದರಲ್ಲಿರುವ ಲಿಗ್ನನ್ ಅಂಶವು ಈಸ್ಟ್ರೋಜನ್ ಹಾರ್ಮೋನಿನಂತೆ ಕಾರ್ಯನಿರ್ವಹಿಸಿ, ಹಾರ್ಮೋನ್‍ಗಳ ಅಸಮತೋಲನವನ್ನು ಕಡಿಮೆಗೊಳಿಸುತ್ತದೆ.

8. ಇದರಲ್ಲಿರುವ ನಾರಿನಾಂಶವು ಕೂಡ ವಿವಿಧ ರೀತಿಯ ಕಾಯಿಲೆಗಳನ್ನು ನಿಯಂತ್ರಿಸುತ್ತದೆ. ಕೆಲವೊಬ್ಬರು ನಾರಿನಾಂಶವನ್ನು ದೇಹಕ್ಕೆ ಒದಗಿಸಲು ಅಗಸೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ. ಈ ರೀತಿ ಅತೀಯಾದ ಸೇವನೆಯಿಂದ ಕೆಲವೊಮ್ಮೆ ಅತಿಸಾರ ಬೇಧಿಯು ಮತ್ತು ಹೊಟ್ಟೆ ನೋವಿಗಳು ಕೂಡ ಉಂಟಾಗಬಹುದು. ಆದ್ದರಿಂದ ಪ್ರತಿಯೊಬ್ಬರು ಆರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ಸೇವಿಸಿ, ನಂತರ ಕ್ರಮೇಣ ಪ್ರಮಾಣವನ್ನು ಹೆಚ್ಚಿಸಬೇಕು. ಇದರ ಜೊತೆಜೊತೆಗೆ ಹೆಚ್ಚು ಹೆಚ್ಚು ನೀರನ್ನು ಕೂಡ ಕುಡಿಯಬೇಕು.

9. ಅಗಸೆ ಬೀಜದಲ್ಲಿರುವ ನಾರಿನಾಂಶವು ಮಲಬದ್ಧತೆಯನ್ನು ಕೂಡ ನಿವಾರಣೆ ಮಾಡುತ್ತದೆ.

10. ಇತ್ತೀಚಿನ ಕೆಲವು ಸಂಶೋಧನೆಗಳಲ್ಲಿ ಕಂಡುಬಂದಂತೆ ಅಗಸೆಯು ಇನ್ಸುಲಿನ್ ಎಂಬ ಹಾರ್ಮೋನಿನ ಕಾರ್ಯಕ್ಕೆ ಸಹಕಾರಿಯಾಗಿದೆ, ಅಷ್ಟೆ ಅಲ್ಲದೆ ಮಧುಮೇಹ ಕಾಯಿಲೆಯನ್ನು ಕಡಿಮೆಗೊಳಿಸುವ ಶಕ್ತಿಯನ್ನು ಹೊಂದಿದೆ.

ಚೈತನ್ಯ ಆರ್. ಇಟಗಿ
ಕಿರಿಯ ವಿಜ್ಞಾನಿ, ಆಹಾರ ಮತ್ತು ಪೋಷಣೆ
`ಶ್ರೀ ದುರ್ಗಾ’, ಎಂಐಜಿ-1-57, ಕೆಹೆಚ್‍ಬಿ ಕಾಲೋನಿ, ಸಂಪಿಗೆ ನಗರ ಸಮೀಪ,
ದೊಡ್ಡನಾಯಕನ್‍ಕೊಪ್ಪ, ಧಾರವಾಡ-580008
ಮೊ.: 9449970666

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!