ಬೆಂಗಳೂರು: ಡಾಲ್ವಕೋಟ್ ವೂಂಡ್ ಕೇರ್ (ಡಿಡಬ್ಲ್ಯುಸಿ) ಒಂದು ವಿಶಿಷ್ಟ ಹಾಗೂ ಅಪರೂಪದ ಗಾಯ ಸುರಕ್ಷಾ ಕೇಂದ್ರವಾಗಿದ್ದು, ತನ್ನ ಮೊಟ್ಟ ಮೊದಲ ಪರಿಪೂರ್ಣ ಗಾಯಗೊಂಡವರ ಚಿಕಿತ್ಸಾ ಕೇಂದ್ರವನ್ನು ಬೆಂಗಳೂರಿನ ವೈಟ್‍ಫೀಲ್ಡ್‍ನಲ್ಲಿರುವ ವೈದೇಹಿ ಕ್ಯಾಂಪಸ್‍ನಲ್ಲಿ ಆರಂಭಿಸಿದೆ. ಡಿಡಬ್ಲ್ಯುಸಿ ಸ್ಥಾಪನೆಯು ಅಮೆರಿಕಾದ ಟೆಕ್ಸಾಸ್ ನಗರದ ಡಲ್ಲಾಸ್‍ನ ಸಾಂಕ್ರಾಮಿಕ ರೋಗಗಳ ಸಲಹೆಗಾರ ಮತ್ತು ಗಾಯಗೊಂಡವರ ಚಿಕಿತ್ಸಾ ತಜ್ಞ ಡಾ. ಮಹೇಶ್ ಕೊಟಪಲ್ಲಿ, ಎಂ.ಡಿ. ಅವರ ಕನಸಿನ ಕೂಸು. ದೀರ್ಘಾವಧಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಕ್ರಮಣಶೀಲವಲ್ಲದ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡುವ ಸದುದ್ದೇಶದೊಂದಿಗೆ ಒಂದು ಗುರಿ ಇಟ್ಟುಕೊಂಡು ಆರಂಭವಾದ ಸಂಸ್ಥೆ. ಇದು ಇಷ್ಟು ಮಾತ್ರವಲ್ಲದೇ ಇದುವರೆಗೂ ಭಾರತ ದೇಶದಲ್ಲಿ ಚಿಕಿತ್ಸೆ ಲಭ್ಯವಿರದ “ಮೊಣಕಾಲು ಸಾಲ್ವೇಜ್ ಸಮಸ್ಯೆ’ಗೂ ಪರಿಹಾರ ಒದಗಿಸುವ ಕೇಂದ್ರವಾಗಿ ಲಭಿಸಿದೆ.
ಇಂದು, ನಗರೀಕರಣದ ಪ್ರಭಾವ ಹಾಗೂ ಜೀವನ ಶೈಲಿಯ ಅಳವಡಿಕೆಯ ಕಾರಣದಿಂದಾಗಿ ನಮ್ಮ ಆರೋಗ್ಯ ಹದಗೆಡುತ್ತಿದೆ. ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಇದರಿಂದಾಗಿ ಜೀವನಶೈಲಿ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಉಸಿರಾಟದ ಸಮಸ್ಯೆ ಹಾಗೂ ಕ್ಯಾನ್ಸರ್‍ನಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇಂತಹ ಅಸ್ವಸ್ಥತೆಯಿಂದ ಉಂಟಾಗುವ ದೀರ್ಘಾವಧಿ ಕಾಯಿಲೆಗಳು, ಗಾಯಗಳು ಎದುರಿಸುವುದು ಕೂಡ ಸವಾಲಾಗಿ ಜನರನ್ನು ಕಾಡುತ್ತಿದೆ. ಡಿಡಬ್ಲ್ಯುಸಿ ಇದೀಗ ನಗರಕ್ಕೆ ಬಂದಿದ್ದು, ಇಲ್ಲಿನ ಜನರ ಗಾಯದ ಸುರಕ್ಷೆಯ ಬಗ್ಗೆ ಇದುವರೆಗೂ ಇದ್ದ ನೋಟವನ್ನು ಬದಲಿಸಲಿದೆ. ಜತೆಗೆ ತಜ್ಞ ವೈದ್ಯಕೀಯ ತಂಡದ ಕಾಳಜಿಯೊಂದಿಗೆ ಗಾಯಗಳನ್ನು ಗುಣಪಡಿಸಲು ಇತ್ತೀಚಿನ ಹಾಗೂ ಆಧುನಿಕ ತಂತ್ರಜ್ಞಾನಗಳ ಬಳಕೆ ಮಾಡಲಿದೆ. ಕೇಂದ್ರವನ್ನು ಇವುಗಳ ಜತೆ ಮಧುಮೇಹಿಗಳ ಕಾಲಿನ ಸುರಕ್ಷತೆಗೂ, ಶಸ್ತ್ರಚಿಕಿತ್ಸಾ ನಂತರದ ಗಾಯ ಗುಣಪಡಿಸಲು, ಎಂಡೊ ವಾಸ್ಕ್ಯುಲರ್ ಕಾರ್ಯವಿಧಾನ, ನಾಳಿಯ ಮತ್ತು ಲೇಸರ್ ಥೆರಪಿ ಹಾಗೂ ಗಾಯಗೊಂಡವರ ಪುನರ್ವಸತಿ ಕಾರ್ಯಕ್ರಮಗಳಿಗೂ ಸಹಕಾರಿಯಾಗಿ ಕಾರ್ಯನಿರ್ವಹಿಸಲಿದೆ.
ಡಿಡಬ್ಲ್ಯುಸಿಯು ಅತ್ಯಂತ ಪ್ರತಿಭಾವಂತ ಮತ್ತು ಅನುಭವಿಗಳನ್ನು ಒಳಗೊಂಡ ತಜ್ಞರ ತಂಡ ಒಳಗೊಂಡಿದ್ದು, ಗಾಯದ ಆರೈಕೆ ವಿಚಾರದಲ್ಲಿ ವಿಶೇಷ ಕಾಳಜಿ ಹೊಂದಿದವರನ್ನೆ ತಮ್ಮವರನ್ನಾಗಿಸಿಕೊಂಡಿದೆ. ಇದರ ಜತೆ ಪ್ರಮಾಣಪತ್ರ ಹೊಂದಿದ ಎಂಡೋವಾಸ್ಕ್ಯೂಲರ್, ಹೃದಯ ಮತ್ತು ಲ್ಯಾಪರೋಸ್ಕೋಪಿ ತಜ್ಞರನ್ನು ಕೂಡ ಹೊಂದಿದೆ. ಗಾಯದ ಆರೈಕೆ ಶುಶ್ರೂಷಣೆಯಲ್ಲಿ ತರಬೇತಿ ಪಡೆದ 50 ಸದಸ್ಯರ ಬೆಂಬಲ ಕೂಡ ಇಲ್ಲಿದೆ. 10-12 ಸಿಟ್ಟಿಂಘ್‍ನ ಹೈಪರ್‍ರ್ಬೇರಿಕ್ ಆಕ್ಸಿಜನ್ ಥೆರಫಿ, 1 ರಿಂದ 1.5 ಗಂಟೆ ಕಾಲಾವಧಿಯ ಚಿಕಿತ್ಸೆಯ ವೆಚ್ಚವು 40 ರಿಂದ 45 ಸಾವಿರ ರೂ. ಆಗಲಿದೆ. ಆದಾಗ್ಯೂ ಇದು ಪ್ರತಿಯೊಬ್ಬ ರೋಗಿಯ ಆರೋಗ್ಯ ಲಕ್ಷಣ ಆಧರಿಸಿ ಬದಲಾಗುತ್ತದೆ.
ಡಿಡಬ್ಲ್ಯುಸಿ ನಿರ್ದೇಶಕ ಡಾ. ಡಿ.ವಿ. ಚಲಪತಿ ಅವರು ಮಾತನಾಡಿ, “ಡಿಡಬ್ಲ್ಯುಸಿ ಗಾಯದ ಆರೈಕೆಗೆ ಮೀಸಲಾದ ದೇಶದ ಪ್ರವರ್ತಕ ಸಂಸೆಯಾಗುವ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದೆ. ನಮ್ಮ ಸೌಲಭ್ಯದಲ್ಲಿ ಇತ್ತೀಚಿನ ತಂತ್ರಜ್ಞಾನವಾದ ಏಕ ಕೋಣೆಯ ಎಚ್‍ಬಿಒಟಿ (ಯುಎಸ್‍ಎಫ್‍ಡಿಎ ಪ್ರಮಾಣಿತ) ಭಾರತ ದೇಶದ ಸಂಸ್ಥೆಯಾಗಿದೆ. ಇದನ್ನು 2.5 ಕೋಟಿ ರೂ. ಭಾರತೀಯ ಮೊತ್ತದಲ್ಲಿ ಸ್ಥಾಪಿಸಲಾಗಿದೆ. ಗಾಯದ ಆರೈಕೆ ಕೇಂದ್ರವು ಬೆಂಗಳೂರಿನಲ್ಲಿ 25 ಹಾಸಿಗೆ ಸೌಲಭ್ಯದೊಂದಿಗೆ ಸ್ಥಾಪಿತವಾಗಿದೆ. ಇದರೊಂದಿಗೆ ಭಾರತದಾದ್ಯಂತ ನಮ್ಮ ಹೆಜ್ಜೆ ಗುರುತನ್ನು ಸ್ಥಾಪಿಸಲು ನಿರ್ಧರಿಸಿದ್ದು, ಕನಿಷ್ಠ 25 ಕೇಂದ್ರಗಳಿಗೆ ವಿಸ್ತರಿಸಲು ನಾವು ಯೋಜಿಸಿದ್ದೇವೆ. ಭಾರತದಲ್ಲಿ ಕೈಗೆಟುಕುವ, ಕೇಂದ್ರಿತ ಹಾಗೂ ಮುಂದಿನ ತಲೆಮಾರಿನ ಗಾಯದ ನಿರ್ವಹಣೆ ಬಗ್ಗೆ ಹೊಸ ಅಧ್ಯಾಯವನ್ನು ತೆರೆಯಲು ಡಿಡಬ್ಲ್ಯುಸಿ ಸಿದ್ಧವಾಗಿದೆ. ಇಂದು ನನಗೆ ತುಂಬಾ ಖುಶಿಕೊಟ್ಟ ದಿನವಾಗಿದೆ’ ಎಂದಿದ್ದಾರೆ.
ಅಮೆರಿಕಾ ಮೂಲದ ಗಾಯದ ಆರೈಕೆ ಕಾರ್ಯಕ್ರಮ ಸಹಯೋಗದೊಂದಿಗೆ ಡಿಡಬ್ಲ್ಯುಸಿ “ಲಿಂಬ್ ಸಾಲ್ವೇಜ್ ಕಾರ್ಯಕ್ರಮ’ ವನ್ನು ಭಾರತದಲ್ಲಿ ಎಚ್‍ಡಿಒಟಿಯೊಂದಿಗೆ ನೀಡುತ್ತಿರುವ 1ನೇ ವಿಶೇಷ ಗಾಯ ಸುರಕ್ಷಾ ಕೇಂದ್ರವಾಗಿದೆ. ತರಬೇತಿ ಪಡೆದ ಗಾಯದ ಆರೈಕೆ ಪರಿಣಿತರು ಮತ್ತು ತಜ್ಞರ ಮೂಲಕ ಎಚ್‍ಬಿಒಟಿ ನಡೆಸುವಿಕೆ ಇಲ್ಲಾಗುತ್ತಿದೆ. ಇದು ಗಾಯದ ಕಲೆಗೂ ಆರೈಕೆ ಒದಗಿಸಲಿದೆ. ಗಾಯದ ಆರೈಕೆಯ ಬಗ್ಗೆ ಈಗಿರುವ ಗ್ರಹಿಕೆ ಬದಲಿಸಲು ಸಂಸ್ಥೆ ಶ್ರಮಿಸುತ್ತಿದೆ. ವೇಗವಾಗಿ ಚಿಕಿತ್ಸೆ ಒದಗಿಸಲು ಉತ್ತಮ ಆರೈಕೆ ಕೇಂದ್ರವನ್ನು ಒದಗಿಸುತ್ತಿದೆ.
ಗಾಯದ ಆರೈಕೆ ತಜ್ಞರ ತಂಡ, ಎಂಡಾವಾಸ್ಕ್ಯುಲರ್ ಮತ್ತು ಹೃದಯ ಶಸ್ತ್ರಚಿಕಿತ್ಸಕರು ಮತ್ತು ಬೋರ್ಡ್ ಆಫ್ ಡೈರೆಕ್ಟರ್ಸ್ ಮತ್ತು 50 ಗಾಯದ ಆರೈಕೆ ದಾದಿಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ತಂಡದಿಂದ ಡಿಡಬ್ಲ್ಯುಸಿ ಭಾರತದಲ್ಲಿ ಕೈಗೆಟುಕುವ ಬೆಲೆಗೆ, ಕೇಂದ್ರೀಕೃತವಾದ ಮತ್ತು ಮುಂದಿನ ಜನಾಂಗಕ್ಕೆ ಅತ್ಯಂತ ಉಪಯುಕ್ತವಾಗುವ ಚಿಕಿತ್ಸಾ ಪದ್ಧದಿ ಹಾಗೂ ಆರೋಗ್ಯ ನಿರ್ವಹಣೆ ಮೂಲಕ ಹೊಸ ಅಧ್ಯಾಯವನ್ನು ರಾಜ್ಯದಲ್ಲಿ ತೆರೆಯಲು ಮುಂದಾಗಿದೆ. ಗಾಯದ ಸಮಸ್ಯೆಗೆ ಚಿಕಿತ್ಸೆ ಪಡೆದೂ ಗುಣಮುಖರಾಗದವರ ಪಾಲಿಗೆ ಇದು ಎರಡನೇ ಆಯ್ಕೆಯಾಗಿದೆ. ಡಿಡಬ್ಲ್ಯುಸಿ ಬಗ್ಗೆ ಇನ್ನಷ್ಟು ತಿಳಿಯಲು ಭೇಟಿಕೊಡಿ: http://www.dwcare.in