ಆದರೆ, ಕೊಳಚೆ ಪ್ರದೇಶದ ಜನರು, ಬೀದಿಯಲ್ಲಿ ಅಲೆಯುವ ಮಕ್ಕಳು. ಸೂರು ಕಾಣದೆ ಫುಟ್ಪಾತ್, ಬೀದಿಯಲ್ಲಿ ಮಲಗುವ ನಿರ್ಗತಿಕರು, ದೇವಸ್ಥಾನದ ಮುಂದೆ ದಯನೀಯವಾಗಿ ಕೈಚಾಚುವ ಭಿಕ್ಷುಕರು. ಇವರ ಬದುಕು ನಾವಂದುಕೊಂಡಷ್ಟು ಸುಲಭವಿಲ್ಲ. ನಾವು ಕಳೆಯುವ ರಾತ್ರಿಯ ನಿದ್ದೆಯಷ್ಟು ಸುಖವೂ ಅಲ್ಲ. ಅನೇಕ ರೋಗಗಳಿಗೆ ಬೀದಿ ಹೆಣವಾಗುತ್ತಾರೆ.
ಸ್ಥಿತಿವಂತರೇ ಹಾಸ್ಪಿಟ್ ಗೆ ಹೋಗಲು ಹೆದರುವ ಈ ದಿನಗಳಲ್ಲಿ ಆರೋಗ್ಯ ತಪಾಸಣೆ ಎಂಬುದು ಇವರಿಗೆ ದೂರದಮಾತು. ಫುಟ್ಫಾತ್ ಮೇಲೆ ಮಲಗಿರೋ ನಿರ್ಗತಿಕರು, ರಾತ್ರಿ ಬಾರ್‌ನಲ್ಲಿ ಕಂಠಪೂರ್ತಿ ಕುಡಿದ ಶ್ರೀಮಂತನೊಬ್ಬನ ಕಾರಿನಡಿ ಸಿಕ್ಕು ಸಾಯಬಹುದು, ರಾತ್ರೀ ವೇಳೆ ಬಯಲಿನಲ್ಲಿ ಮಲಗುವ ಎಷ್ಟೋ ಮಾನಸಿಕ ಅಸ್ವಸ್ಥರು ಕಾಮುಕರ ಅತ್ಯಾಚಾರಕ್ಕೆ
ಬಲಿಯಾಗಿರುತ್ತಾರೆ, ಇನ್ನು ಬೀದಿನಾಯಿ, ವಿಷಜಂತುಗಳ ಕಾಟ, ಕಡಿತ ನೋವು ಅಸಹಾಯಕತೆ ಹೇಳತೀರದು.
ದಾರಿ ಮಧ್ಯೆ ತೆವಳಲು ಆಗದಷ್ಟು ನಿಶ್ಯಕ್ತವಾಗಿ ಬಿದ್ದ ಮನುಷ್ಯನೊಬ್ಬನನ್ನು ಉಳಿದ ಮನುಷ್ಯರು ನೋಡುತ್ತಾ, ತಮಗೆ ಸಂಬಂಧವಿಲ್ಲದಂತೆ ತಿರುಗಾಡುತ್ತಾರಲ್ಲ ಅದು ಮನುಷ್ಯತ್ವದ ಗುಣವೇ ನಾಶವಾಗಿ, ಮನುಷ್ಯ ಮನುಷ್ಯನಾಗಿ ಉಳಿದಿಲ್ಲ ಎಂಬುವುದರ ಸೂಚನೆ ಇರಬಹುದು.
ಹಲವು ವರ್ಷಗಳಿಂದ ಪರಿಚಿತರಾದ, ಆತ್ಮೀಯರೂ ಆಗಿರುವ, ಸದಾ ಬಡವರು, ನಿರ್ಗತಿಕರು, ಬೀದಿ ಜನಗಳ ಉತ್ತಮ ಆರೋಗ್ಯಕ್ಕಾಗಿಯೇ “ಮಾತೃಶ್ರೀ ಟ್ರಸ್ಟ್” ಸ್ಥಾಪಿಸಿಕೊಂಡು ಬೆಂಗಳೂರಿನ ಮೂಲೆ ಮೂಲೆಗೂ ತೆರಳಿ ಯಾವುದೇ ಹಣ ಪಡೆಯದೇ ಉಚಿತವಾಗಿ ನಿರ್ಗತಿಕ, ಬಡಜನಗಳ ಆರೋಗ್ಯ ತಪಾಸಣೆ ಮಾಡುತ್ತಿರುವ ಡಾ. ಸುನೀಲ ಕುಮಾರ ಹೆಬ್ಬಿ, ಇವರು ತಮ್ಮ ಹುಟ್ಟು ಹಬ್ಬವನ್ನು ಬಡಜನರು, ಕೊಳಚೆ ಪ್ರದೇಶಗಳಲ್ಲಿನ ನಿರ್ಗತಿಕ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸುವ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ.
ಪ್ರೋಗ್ರಾಂ ಸಹಚರರು: ಮೀಡಿಯಾ ಐಕಾನ್, ರೋಟಿ ಚಾರಿಟಿ ಟ್ರಸ್ಟ್, ಪ್ರತಿಬಿಂಬ ಟ್ರಸ್ಟ್, ಹೆಲ್ಪಿಂಗ್ ಹ್ಯಾಂಡ್ಸ್, ಕ್ರಿಯೇಟಿವ್ ಐಕಾನ್
ನೀವೂ ಈ ಟ್ರಸ್ಟ್‌ನೊಂದಿಗೆ ಕೈಜೋಡಿಸುವ ಮೂಲಕ ಬಡವರಿಗೆ ಕೈಲಾದ ಸಹಾಯ ಸೇವೆಸಲ್ಲಿಸಲು ಮುಂದಾಗಿ.
ಹೆಚ್ಚಿನ ಮಾಹಿತಿಗೆ :
+91-97-419-58-428
+91-97-394-594-79
e-Mail : matrusirifoundation@gmail.com
Dr. Sunil Kumar Hebbi Social Initiative Matru Siri Foundation