Vydyaloka

ಬಂಜೆತನ ಸಮಸ್ಯೆಯಿಂದ ಬದುಕಿನ ನೆಮ್ಮದಿ ಹಾಳು : ಡಾ.ಪಿ.ರಮಾದೇವಿ

ಡಾ. ರಮಾಸ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ಗೆ 6 ನೇ ವಾರ್ಷಿಕೋತ್ಸವ ಸಂಭ್ರಮ

ಬೆಂಗಳೂರು: ತಾಯ್ತತನದ ಕನಸು ಕಾಣುತ್ತಿರುವ ಸ್ತ್ರೀಯರಲ್ಲಿ ಬಂಜೆತನ ಸಮಸ್ಯೆ ಎದುರಾದರೆ ಮಾನಸಿಕ ಸಮತೋಲನ ಕಳೆದುಕೊಳ್ಳುವುದಲ್ಲದೆ, ಬದುಕಿನಲ್ಲಿ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಡಾ. ರಮಾಸ್ ಟೆಸ್ಟ್ಟ್ಯೂಬ್ ಬೇಬಿ ಸೆಂಟರ್ ಸಂಸ್ಥಾಪಕಿ ಮತ್ತು ಐವಿಎಫ್ ತಜ್ಞೆ ಡಾ.ಪಿ.ರಮಾದೇವಿ ಎಚ್ಚರಿಕೆ ನೀಡಿದ್ದಾರೆ.

ಅವರು ಇಂದಿರಾನಗರದ ತಮ್ಮ ಶಾಖೆಯ 6ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, 27 ವರ್ಷಗಳ ಹಿಂದೆ ಹೈದರಾಬಾದ್‍ನಲ್ಲಿ ಡಾ.ರಮಾಸ್ ಇನ್ಸ್‍ಟಿಟ್ಯೂಟ್ ಫಾರ್ ಫರ್ಟಿಲಿಟಿ ಸೆಂಟರ್ ಆರಂಭಿಸಿದ್ದೆವು. ಅದು ಇದೇ ದಿನವಾದ್ದರಿಂದ ರಮಾಸ್‍ನ 28ನೇ ವರ್ಷಾಚರಣೆಯೂ ಆಗಿದೆ ಎಂದು ಹೇಳಿದರು.

ಇಂದಿನವರು ತಮ್ಮ ಜೀವನಶೈಲಿಯನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯವಾಗಿರಿಸಿಕೊಳ್ಳದೆ ಒತ್ತಡಗಳ ಕೂಟ ಮಾಡಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪರಿಣಾಮ ಬಂಜೆತನ, ಗರ್ಭಕೋಶ ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಹಾಗೆಂದು ಬಂಜೆತನವೆಂಬುದು ಬಹು ದೊಡ್ಡ ಸಮಸ್ಯೆಯೇನಲ್ಲ ಎಂಬುದನ್ನು ಅರಿಯಬೇಕು. ಸಮಸ್ಯೆ ಕೇವಲ ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲೂ ಉಂಟು. ಗರ್ಭಕೋಶದ ಸಮಸ್ಯೆಗಳು ಐವಿಎಫ್ ಚಿಕಿತ್ಸೆಯಿಂದ ಮಾತ್ರವಲ್ಲ ಆಹಾರ ಶೈಲಿ, ಆರೋಗ್ಯಕರ ವಾತಾವವರಣ, ಒತ್ತಡ ನಿಯಂತ್ರಣ, ಯೋಗ, ಧ್ಯಾನ, ವ್ಯಾಯಾಮದಿಂದಲೂ ಸರಿಪಡಿಸಬಹುದು ಎಂದು ಸಲಹೆ ನೀಡಿದರು.

ಸೆಂಟರ್ ಸಿಇಒ ಡಾ.ರಾಖಿ ಮಿಶ್ರಾ ಮಾತನಾಡಿ, ಜೀವನದಲ್ಲಿ ದೈನಂದಿನ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ. ಹಾಗೆಂದು ಸಂಬಂಧಗಳ ಬಗ್ಗೆ ಅಸಡ್ಡೆ, ಪತಿ-ಪತ್ನಿ ಹೊಂದಾಣಿಕೆಯಲ್ಲಿ ಕೊರತೆ, ಪರಿಸರ ಮಾಲಿನ್ಯ ಸೇರಿದಂತೆ ಹಲವಾರು ಕಾರಣಗಳಿಂದಲೂ ಗರ್ಭಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವ ಸಾಧ್ಯತೆ ಉಂಟು. ಇದಕ್ಕಾಗಿ ಚಿಂತಿಸುವ ಅಗತ್ಯವೇನಿಲ್ಲ. ತಜ್ಞ ವೈದ್ಯರ ಸಲಹೆ ಮತ್ತು ಸೂಕ್ತ ಚಿಕಿತ್ಸೆ ಪಡೆದರೆ ಎಲ್ಲವೂ ಸರಿಯಾಗುತ್ತದೆ ಎಂದು ತಿಳಿಸಿದರು.

ಬಂಜೆತನಕ್ಕೆ ಚಿಕಿತ್ಸೆ ನೀಡುವುದಷ್ಟೇ ತಜ್ಞರ ಕೆಲಸವಲ್ಲ. ಚಿಕಿತ್ಸೆ ಪಡೆದ ಮಹಿಳೆ ಅಥವಾ ಪುರುಷನು ಆರೋಗ್ಯಕರ ಹಾಗೂ ಸಮರಸ ಜೀವನದ ನಡೆಸುವಂತೆ ಸಲಹೆ ನೀಡುವುದು, ಗರ್ಭ ಧರಿಸಿದ ಸ್ತ್ರೀಯ ಆರೋಗ್ಯ ಕಾಪಾಡುವುದು, ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ರಕ್ಷಣೆ ಮಾಡುವುದು ಹಾಗೂ ಕೂಸು ಹುಟ್ಟಿದ ನಂತರ ಯೋಗಕ್ಷೇಮ ನೋಡಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಪರಿಪೂರ್ಣ ಅರ್ಥ ಕಲ್ಪಿಸುವ ಕರ್ತವ್ಯವೈ ಅವರದ್ದಾಗಿರುತ್ತದೆ ಎಂದು ಕಿವಿಮಾತು ಹೇಳಿದರು.

ಈ ಎಲ್ಲಾ ಕ್ರಿಯೆಯನ್ನು ಡಾ. ರಮಾಸ್ ಟೆಸ್ಟ್‍ಟ್ಯೂಬ್ ಬೇಬಿ ಸೆಂಟರ್‍ನ ಮಾಡಲಾಗುತ್ತಿದೆ. ಇಲ್ಲಿ ಎಲ್ಲವೂ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಮಾನವೀಯತೆ ದೃಷ್ಟಿಕೋನದಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂಬುದು ಗಮನಾರ್ಹ ಎಂದ ಅವರು, ಬೆಂಗಳೂರು ಸೇರಿದಂತೆ ನಮ್ಮ ಸಮೂಹದಲ್ಲಿ ಎಂಟು ಸೆಂಟರ್‍ಗಳಿವೆ. ಮುಂಬರುವ ದಿನಗಳಲ್ಲಿ ಮಹಾನಗರದ ವೈಟ್ಫೀಲ್ಡ್, ಕೋರಮಂಗಲ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸುಸಜ್ಜಿತ ವ್ಯವಸ್ಥೆಗಳುಳ್ಳ ಸೆಟಲೈಟ್ ಸೆಂಟರ್ಗಳನ್ನು ತೆರೆಯಲಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

ಬೆಂಗಳೂರಿನ ಇಂದಿರಾನಗರದಲ್ಲಿ ಡಾ. ರಮಾಸ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ 6ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಡಾ. ರಮಾಸ್ ಟೆಸ್ಟ್‍ಟ್ಯೂಬ್ ಬೇಬಿ ಸೆಂಟರ್‍ನ ಸಂಸ್ಥಾಪಕಿ ಮತ್ತು ಐವಿಎಫ್ ತಜ್ಞೆ ಡಾ.ಪಿ.ರಮಾದೇವಿ ಉದ್ಘಾಟಿಸಿದರು. ಸೆಂಟರ್‍ನ ಸಿಇಒ ಡಾ. ರಾಖಿ ಮಿಶ್ರಾ, ಡಾ.ಸಂಧ್ಯಾ ಮಿಶ್ರ ಉಪಸ್ಥಿತರಿದ್ದರು.

Share this: