ಮೂಲವ್ಯಾಧಿ ಅಥವಾ ಪೈಲ್ಸ್ ಇದೆಯೇ? ಭಯಪಡಬೇಡಿ

ಮೂಲವ್ಯಾಧಿ ಅಥವಾ ಪೈಲ್ಸ್ ಗುದದ್ವಾರದಲ್ಲಿನ ವ್ಯಾಧಿಗಳಲ್ಲಿ ಅತಿ ಸಂಕಷ್ಟಕ ವ್ಯಾಧಿ. ಆದರೂ  ಕೆಲವು ಜಾಗರೂಕತೆ ಕ್ರಮಗಳನ್ನು ನಿರ್ವಹಿಸಿದರೆ ಖಂಡಿತಾ ಉಪಶಮನವನ್ನು ಕಾಣಬಹುದು. ಪೈಲ್ಸ್ ಬಂದರೆ ಸರಿಯಾಗಿ ಕೂರಲಾಗದು.. ಸರಿಯಾಗಿ ನಿಲ್ಲಲಾಗದು..! ಹೆಚ್ಚಾಗಿ ರಕ್ತಸ್ರಾವಾಗುತ್ತಿದ್ದರೆ ಮನಸ್ಸಿನಲ್ಲಿ ನೀರಸ ಉಂಟಾಗುತ್ತದೆ. ಕೋಪ, ಅಶಾಂತಿ ಹೆಚ್ಚಾಗುತ್ತದೆ.

ಮನುಷ್ಯನ ಗುದದ್ವಾರದ ಒಳಗೆ ಅನೇಕ ರಕ್ತನಾಳಗಳು ರಕ್ತವನ್ನು ಸರಬರಾಜು ಮಾಡುತ್ತಿರುತ್ತವೆ. ಈ ಭಾಗವು ಬಹಳ ಮೃದುವಾಗಿರುತ್ತದೆ. ಹೆಚ್ಚು ಒತ್ತಡದಿಂದ ತಿಣುಕಿದಾಗ ಗುದನಾಳಗಳು ಹೊರಕ್ಕೆ ಚಿಮ್ಮಿಕೊಂಡು ಬರುತ್ತದೆ. ಇದನ್ನೇ ಪೈಲ್ಸ್.. ಮೂಲವ್ಯಾಧಿ ಎನ್ನುತ್ತಾರೆ! ಗುದದ್ವಾರದಲ್ಲಿನ ವ್ಯಾಧಿಗಳಲ್ಲಿ ಅತಿ ಸಂಕಷ್ಟಕ ವ್ಯಾಧಿ ಎಂದರೆ ಪೈಲ್ಸ್. ಇದನ್ನು `ಭಯಂಕರ ವ್ಯಾಧಿ ಎಂತಲೇ ಹೇಳಬಹುದು. ಮಲ ವಿಸರ್ಜನೆಯ ಸಮಯದಲ್ಲಿ ಪುಷ್ಟದಲ್ಲಿ ನೋವು, ಉರಿ, ರೋದನೆ, ರಕ್ತ ಸೋರುವುದು, ಗುದದ್ವಾರದ ನಾಳಗಳು ಹೊರಗೆ ಬರುವುದು, ವಿಸರ್ಜನೆಗೆ ತಿಣುಕಾಡುವುದು.. ಇಂಥ ಪ್ರಕ್ರಿಯೆ ಪೈಲ್ಸ್ ನಿಂದ ಆಗುವಂತಹವು. ಪೈಲ್ಸ್ ಬಾಧೆ ಬಹಳ ಕಷ್ಟ. ಆದರೂ  ಕೆಲವು ಜಾಗರೂಕತೆ ಕ್ರಮಗಳನ್ನು ನಿರ್ವಹಿಸಿದರೆ ಖಂಡಿತಾ ಉಪಶಮನವನ್ನು ಕಾಣಬಹುದು. ಯಾವುದೇ ಕಾರಣ ಇರಲಿ, ರಕ್ತನಾಳಗಳಿಗೆ ಆಧಾರವಾಗಿರುವ ಜೀವಕೋಶಗಳು ಹಿಗ್ಗಿದಾಗ, ತತ್ಪರಿಣಾಮವಾಗಿ ರಕ್ತನಾಳಗಳು ವಿಸ್ತರಿಸುತ್ತದೆ; ಅದರ ಗೋಡೆಗಳು ತೆಳುವಾಗಿ ರಕ್ತಸ್ರಾವವಾಗುತ್ತದೆ. ಹಿಗ್ಗುವಿಕೆ ಮತ್ತು ಒತ್ತಡ ಮುಂದುವರೆದರೆ, ದುರ್ಬಲಗೊಂಡ ರಕ್ತನಾಳಗಳು ಹೊರಕ್ಕೆ ಚಾಚಿಕೊಳ್ಳುತ್ತವೆ.

ಪೈಲ್ಸ್ ಲಕ್ಷಣ ಮತ್ತು ಚಿಹ್ನೆಗಳು :

ಮೂಲವ್ಯಾಧಿ ರೋಗದ ಲಕ್ಷಣ ಮತ್ತು ಚಿಹ್ನೆಗಳು ಸ್ವರೂಪದಲ್ಲಿ ವ್ಯಕ್ತಿಗತವಾಗಿರುತ್ತದೆ. ಕೆಲವೇ ದಿನಗಳಲ್ಲಿ ರೋಗ ಲಕ್ಷಣ ಮತ್ತು ಚಿಹ್ನೆಗಳು ಗೋಚರಿಸಬಹುದು ಅಥವಾ ಗೋಚರಿಸದೇ ಇರಬಹುದು. ರೋಗ ಮುಂದುವರೆದಂತೆ ಲಕ್ಷಣ ಮತ್ತು ಚಿಹ್ನೆಗಳು ಬದಲಾಗುತ್ತಾ ಹೋಗುತ್ತವೆ. ರಕ್ತಸ್ರಾವ ಸೇರಿದಂತೆ ಇಂತಹ ಎಲ್ಲ ಲಕ್ಷಣಗಳು ಎಲ್ಲ ವ್ಯಕ್ತಿಗಳಲ್ಲೂ ಗೋಚರಿಸದೇ ಇರಬಹುದು. ಬಹುತೇಕ ಪ್ರಕರಣಗಳಲ್ಲಿ, ಚಿಹ್ನೆಗಳು ಕೆಲವೇ ದಿನಗಳಲ್ಲಿ ಪರಿಹಾರವಾಗುತ್ತವೆ. ಪೈಲ್ಸ್ ಗೆ ಒಂದಕ್ಕಿಂತ ಹೆಚ್ಚು ಅಂಶಗಳು ಕಾರಣವಿರಬಹುದು, ರೋಗ ಮುಂದುವರೆದಂತೆ ಲಕ್ಷಣ ಮತ್ತು ಚಿಹ್ನೆಗಳು ಬದಲಾಗುತ್ತಾ ಹೋಗುತ್ತವೆ. ಕೆಲವು ಲಕ್ಷಣಗಳು ಈ ಕೆಳಕಂಡಂತೆ ಇರುತ್ತವೆ.

1. ಮಲವಿಸರ್ಜನೆ ವೇಳೆ ರಕ್ತಸ್ರಾವ :

ಆರಂಭಿಕ ಲಕ್ಷಣಗಳೆಂದರೆ, ಮಲವಿಸರ್ಜನೆಗಾಗಿ ಗುದನಾಳವು ತೆರೆದುಕೊಂಡಾಗ ರಕ್ತ ಗೋಚರಿಸುತ್ತದೆ. ಬಾಹ್ಯ ಮೂಲವ್ಯಾಧಿಗಿಂತ ಆಂತರಿಕ ಮೂಲವ್ಯಾಧಿ ಇದ್ದರೆ ಗುದದಿಂದ ರಕ್ತಸ್ರಾವ ಹೆಚ್ಚು ಸಾಮಾನ್ಯವಾಗಿರುತ್ತದೆ. ಇದು ವಿಸರ್ಜನೆಗೆ ಮುನ್ನ ಅಥವಾ ನಂತರ ಕಾಣಿಸಿಕೊಳ್ಳುತ್ತದೆ.

ಮೂಲವ್ಯಾಧಿ ಅಥವಾ ಪೈಲ್ಸ್ ಇದೆಯೇ? ಭಯಪಡಬೇಡಿ

2. ಮಲವಿಸರ್ಜನೆ ವೇಳೆ ನೋವು:

ಗುದದ್ವಾರದ ಹೊರಗೆ ಇರುವ ಪೈಲ್ಸ್ ಯಾತನಮಯವಾಗಿದ್ದರೆ, ಒಳಗಿರುವ ಮೂಲವಾಧ್ಯಿಯಲ್ಲಿ ರಕ್ತ ಹೆಪ್ಪುಗಟ್ಟದ ಹೊರತು ಸಾಮಾನ್ಯವಾಗಿ ನೋವು ಇರುವುದಿಲ್ಲ.

3. ಮಲವಿಸರ್ಜನೆ ಕಷ್ಟಕರವಾಗುವಿಕೆ:
ಮೂಲವ್ಯಾಧಿಯಿಂದ ನರಳುತ್ತಿರುವ ರೋಗಿಗಳು ಮಲವಿಸರ್ಜನೆ ಮಾಡುವಾಗ ಕಷ್ಟ ಅನುಭವಿಸುತ್ತಾರೆ. ಪೈಲ್ಸ್ ಹೊರಚಾಚಿರುವುದರಿಂದ ಸರಿಯಾಗಿ ಮಲವಿಸರ್ಜನೆಯಾಗದೆ ಮಲಬದ್ದತೆ ಭಾವನೆಯಿಂದ ಬಳಲುತ್ತಾರೆ.

4. ನೈರ್ಮಲೀಕರಣದ ವೇಳೆ ಅಂಗಾಂಶದ ಕೆಂಪು ವಸ್ತುಗಳು ಹೊರಬರುವಿಕೆ:

ಕಡುಗೆಂಪು ರಕ್ತ ಲೇಪಿತ ಮಲ ಆಂತರಿಕ ಮೂಲವ್ಯಾಧಿಯ ತೀರಾ ಸಾಮಾನ್ಯ ಲಕ್ಷಣವಾಗಿರುತ್ತದೆ. ಈ ಪರಿಸ್ಥಿತಿಯನ್ನು ಹೆಮಟೋಚೆಜಿಯಾ ಎನ್ನುತ್ತಾರೆ. ನೈರ್ಮಲೀಕರಣದ ವೇಳೆ ಅಂಗಾಂಶದ ಕೆಂಪು ವಸ್ತುಗಳು ಹೊರಕ್ಕೆ ಬಂದಿರುತ್ತದೆ.

5. ಗುದದಲ್ಲಿ ಊತ:

ಬಾಹ್ಯ ಮೂಲವ್ಯಾಧಿಯಲ್ಲಿ ನೋವಿನೊಂದಿಗೆ ಗುದ ಭಾಗದ ಸುತ್ತ ಊತವಿರುವ ಲಕ್ಷಣವಿರುತ್ತದೆ.

6. ದೀರ್ಘಕಾಲೀನ ಮಲಬದ್ಧತೆ:

ಮೂಲವಾಧ್ಯಿಯ ಮತ್ತೊಂದು ಮುಖ್ಯ ಲಕ್ಷಣವೆಂದರೆ, ದೀರ್ಘಕಾಲದ ಮಲಬದ್ದತೆ ಮತ್ತು ಮಲವಿಸರ್ಜನೆಯಲ್ಲಿನ ಇತರೆ ದೋಷಗಳು. ಮಲಬದ್ದತೆಯಿಂದ ಗಟ್ಟಿಯಾಗಿರುವ ಮಲವನ್ನು ಹೊರಹಾಕಲು ತುಂಬಾ ಒತ್ತಡ ಹೇರುವುದರಿಂದ ಸುತ್ತಮುತ್ತಲ ರಕ್ತನಾಳಗಳು ಮತ್ತು ನರಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಮೂಲವ್ಯಾಧಿಗೆ ಮೂಲ ಕಾರಣವಾಗುತ್ತದೆ. ಇನ್ನು ಕೆಲವು ವ್ಯಕ್ತಿಗಳು ಮೇಲಿನ ರೋಗ ಚಿಹ್ನೆ ಅಥವಾ ಲಕ್ಷಣಗಳಲ್ಲಿ ಒಂದೇ ಒಂದು ಮಾತ್ರ ಇರಬಹುದು ಅಥವಾ ಅದು ಪ್ರಬಲವಾಗಿರಬಹುದು. ಗುದದ್ವಾರದ ಹೊರಗೆ ಮೂಲವ್ಯಾಧಿ ಚಾಚಿಕೊಂಡಿದ್ದರೆ, ಅದು ರೋಗದ ಮುಂದುವರೆದ ಹಂತವಾಗಿರುತ್ತದೆ. ಇಂಥ ಲಕ್ಷಣವು ಕೆಲವು ವ್ಯಕ್ತಿಗಳಲ್ಲಿ ಮೊದಲು ಕಾಣಿಸಿಕೊಳ್ಳಬಹುದು.

 piles_

ಯಾರ್ಯಾರಿಗೆ- ಪೈಲ್ಸ್ ವ್ಯಾಧಿ?

ಗಂಡು, ಹೆಣ್ಣು ಎಂಬ ಯಾವ ಭೇದ-ಭಾವವೂ ಇಲ್ಲದೆ ಯಾರಿಗಾದರೂ ಬರಬಹುದು. 40-65 ವರ್ಷ ದಾಟಿದವರಿಗೂ ಬರುವ ಅವಕಾಶಗಳು ಹೆಚ್ಚು. ಗರ್ಭವತಿಯರಿಗೂ ಪೈಲ್ಸ್ ಬಂದರೆ ಪ್ರಸವದ ಅನಂತರ ತಂತಾನೆ ಸರಿಹೋಗುತ್ತದೆ. ಟೀನೇಜ್, ಕಾಲೇಜ್ ಓದುವ ಯುವಕರಿಗೆ ಬರುತ್ತದೆ.
1. ಮಲವಿಸರ್ಜನೆಯ ಸಮಯದಲ್ಲಿ ಹೆಚ್ಚು ತಿಣುಕುವವರಿಗೆ.
2. ವೆರಿಕೋಸ್ ಪೆಯಿನ್ಸ್ ಇರುವವರಿಗೆ.
3. ಸತತವಾಗಿ (ಕ್ರಾನಿಕ್) ಡಯೇರಿಯಾ, ಸಿಸೆಂಟ್ರಿ (ಆಮಶಂಕೆ) ಇರುವಂಥವರಿಗೆ. ಮಲಬದ್ಧತೆ ಇರುವವರಿಗೆ.
4. ಹೆಚ್ಚು ಸಮಯ ಆಸನದಲ್ಲಿ ಕದಲದೆ ಕುಳಿತುಕೊಳ್ಳುವವರಿಗೆ.
5. ಯಾವ ವಿಧವಾದ ವ್ಯಾಯಾಮವನ್ನು ಮಾಡದವರಿಗೆ.
6. ಕೆಲ ಆಹಾರ ಸೇವನೆಯಿಂದ- ಉಪ್ಪಿನಕಾಯಿ, ಚೆಟ್ನಿ, ಹಸಿ ಮೆಣಸಿಕಾಯಿ, ಮಿತಿಮೀರಿ ಶುಂಠಿ, ಮೆಣಸು ಇಂಥ ಖಾರವಾದ ಪದಾರ್ಥಗಳನ್ನು ಅಧಿಕವಾಗಿ ಬಳಸುವವರಿಗೆ.
7. ಅಧಿಕವಾಗಿ ಶ್ರಮ ಜೀವನ, ಮಾನಸಿಕ ಒತ್ತಡ ಮತ್ತು ಸ್ಥೂಲಕಾಯ ದೇಹ, ಅಶಾಂತಿ ಇರುವಂಥವರಿಗೆ.

ಆರಂಭ ಹೇಗೆ?

ಪೈಲ್ಸ್ ಎಲ್ಲರಲ್ಲೂ ಇರುತ್ತದೆ. ಸಾಮಾನ್ಯವಾಗಿ ಇದರಿಂದ ಯಾರಿಗೂ ಏನೇ ತೊಂದರೆ ಆಗುವುದಿಲ್ಲ. ಆದರೆ ಗುದ ನಾಳದೊಳಗಡೆ ಇರುವ ರಕ್ತನಾಳಗಳು ಉಬ್ಬಿದಾಗ ಪೈಲ್ಸ್ ಹೊರಕ್ಕೆ ಬರುತ್ತದೆ. ಬರದಿದ್ದರೂ ಬಾಧೆ ತಪ್ಪದು. ಆಗ ನೋವು, ಬಾಧೆ, ಉರಿ, ರಕ್ತ ಸೋರುವುದರಿಂದ ಆರಂಭವಾಗುತ್ತದೆ. ಕ್ರಮೇಣ ಹೀಗೆ ಮೆಲ್ಲಗೆ ತಿಣುಕಿದರೂ ಗುದದ್ವಾರಗಳಿಂದ ರಕ್ತಸ್ರಾವವಾಗುತ್ತದೆ. ಇದು ಬರಬರುತ್ತ ರಕ್ತವು ಕಪ್ಪ ಬಣ್ಣವಾಗಿ ಸ್ರಾವವಾಗುತ್ತದೆ. ಕೆಮ್ಮಿದರೆ ಏನಾದರೂ ಹೆಚ್ಚು ಶ್ರಮವಾದರೂ ರಕ್ತ ಸ್ರಾವವಾಗುತ್ತದೆ.

ಗುದದ್ವಾರದಲ್ಲಿ ಒಳಗಡೆ ಇರುವ ಪೈಲ್ಸ್ ನ್ನು ಅಂತರರ್ಗತ ಪೈಲ್ಸ್ ಎನ್ನುತ್ತಾರೆ. ಅದು ಹೊರಗಡೆ ಬಂದರೆ ಬಹಿರ್‍ಗತ ಪೈಲ್ಸ್ ಅಂತಾರೆ. ಸಾಧಾರಣವಾಗಿ ಅಂತರರ್ಗತ ಪೈಲ್ಸ್‍ನಲ್ಲಿ ನೋವು ಅಷ್ಟಾಗಿ ತಿಳಿಯುವುದಿಲ್ಲ. ಬಹಿರ್‍ಗತ ಪೈಲ್ಸ್ ನಲ್ಲಿ ವಿಪರೀತವಾದ ಸಹಿಸಲಾಗದ ನೋವು ಇರುತ್ತದೆ. ಇದರಲ್ಲಿ ರಕ್ತ ಹೆಪ್ಪುಗಟ್ಟಿದರೇ ನೋವು ಇನ್ನೂ ಹೆಚ್ಚಾಗುತ್ತದೆ. ಸೋಂಕು ಅಂತೂ ಭಯಂಕರ ನೋವುಂಟಾಗುತ್ತದೆ. ಅಂತರರ್ಗತ ಪೈಲ್ಸ್ ನಲ್ಲಿ 4 ಹಂತಗಳಿವೆ. ಆರಂಭಿಕ ಹಂತ ಹೊರಕ್ಕೆ ಕಾಣವುದು. ಎರಡನೇ ಹಂತದಲ್ಲಿ ಮಲ ವಿಸರ್ಜನೆಯ ಸಮಯದಲ್ಲಿ ಹೊರಕ್ಕೆ ಬರುವುದು. ಥಟ್ಟನೇ ಒಳಗೆ ಹೋಗಿಬಿಡುವುದು. ಮೂರನೇಯ ಹಂತದಲ್ಲಿ ಕೈಯಿಂದ ಗಟ್ಟಿಯಾಗಿ ಒಳಕ್ಕೆ ತಳ್ಳಿದರೂ ಒಳಕ್ಕೆ ಹೋಗುವುದಿಲ್ಲ ಹಾಗೂ ನಾಲ್ಕನೇ ಹಂತ. ಅದನ್ನು ಒಳಕ್ಕೆ ತಳ್ಳುವುದು ಬಹಳ ತ್ರಾಸದಾಯಕವಾಗುವುದು, ಹೊರಗೆ ಇದ್ದು ಹೋಗುತ್ತದೆ.

ಬಾಧಕಗಳಂತೂ..

ಪೈಲ್ಸ್ ಬಂದರೆ ಸರಿಯಾಗಿ ಕೂರಲಾಗದು.. ಸರಿಯಾಗಿ ನಿಲ್ಲಲಾಗದು..! ಹೆಚ್ಚಾಗಿ ರಕ್ತಸ್ರಾವಾಗುತ್ತಿದ್ದರೆ ಮನಸ್ಸಿನಲ್ಲಿ ನೀರಸ ಉಂಟಾಗುತ್ತದೆ. ಕೋಪ, ಅಶಾಂತಿ ಹೆಚ್ಚಾಗುತ್ತದೆ. ಸೊಂಟ ನೋವು, ಮಲಬದ್ಧತೆ, ಹೃದ್ರೋಗಗಳು ಹೈಪೋಕಾಂಡ್ರಿಯಾಸಿಸ್, ಪ್ರಾಲಾಪ್ಸ್, ಉರಿ, ಹೊಟ್ಟೆಯಲ್ಲಿ ಶೂಲೆ, ರಾತ್ರಿ ವೇಳೆಯಲ್ಲಿ ನಡುಕ, ಭಯ ಉಂಟಾಗುವುದು. ಕಾಲುಗಳ ಸೆಳೆತ ವಿಪರೀತವಾಗಿರುತ್ತದೆ. ಸೋಂಕು ಆಗಬಹುದು. ರಕ್ತಹೀನತೆ-ಅನಿಮೀಯ ಆಗಬಹುದು. ಕ್ಯಾನ್ಸರ್ ಆಗುವ ಅವಕಾಶಗಳೂ ಉಂಟು.

Dr-Chalapathi

ಡಾ. ಡಿ.ವಿ.ಚಲಪತಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು- 560066 
ದೂರವಾಣಿ: 080-49069000 Extn: 1147/1366
www.vims.ac.in 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!