Vydyaloka

ಬೆಳಗಿನ ತಿಂಡಿ ಸೇವಿಸದಿದ್ದರೆ ಮಧುಮೇಹ ಗ್ಯಾರಂಟಿ

ಬೆಳಿಗ್ಗೆ ತಿಂಡಿ ತಿನ್ನದೇ ಮಧ್ಯಾನ್ಹದ ಹೊತ್ತು ಊಟ, ತಿಂಡಿ ಒಟ್ಟಿಗೆ ಮಾಡುವುದು ಹಲವರ ಅಭ್ಯಾಸ. ಆದರೆ ಹೀಗೆ ಮಾಡುವದರಿಂದ ದೇಹದಲ್ಲಿ ಇನ್ಸುಲಿನ್ ಬಳಕೆಗೆ ನಿರೋಧಕತೆ ಏರ್ಪಟ್ಟು ಟೈಪ್ -2 ಮಧುಮೇಹ ಬರುವ ಸಾಧ್ಯತೆ ಅಧಿಕವಾಗಿದೆ. ಕೊಲೆರಾಡೋ ವಿಶ್ವವಿದ್ಯಾಲಯದಲ್ಲಿ 29ರ ಆಸುಪಾಸು ವಯಸ್ಸಿನ 9 ಬೊಜ್ಜುಳ್ಳ ಮಹಿಳೆಯರನ್ನು ತಿಂಗಳಿಗೆ 2 ದಿನದಂತೆ ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದಾಗ ಈ ವಿಷಯ ಬಹಿರಂಗವಾಗಿದೆ.
ಬೆಳಗಿನ ತಿಂಡಿ ಬಿಟ್ಟರೆ ದೇಹದಲ್ಲಿ ಕೊಬ್ಬು ಶೇಖರವಾಗುತ್ತದೆ ಎಂದು ಇಲ್ಲಿಯವರೆಗೆ ಅಧ್ಯಯನದಿಂದ ತಿಳಿದುಬಂದ ವಿಷಯವಾಗಿತ್ತು. ಈಗ ಈ ಅಧ್ಯಯನದಿಂದ ಹೆಚ್ಚಾದ ಬೊಜ್ಜು, ಇನ್ಸುಲಿನ್ ನಿರೋಧಕವಾಗಿಯೂ ಕೆಲಸ ಮಾಡುತ್ತದೆ ಎಂದು ಸಾಬೀತಾಗಿದೆ. ಒಂದೆರಡು ದಿನ ಮಧ್ಯಾನ್ಹ ಊಟ ಮಾಡಿದ ನಂತರ 30 ನಿಮಿಷಕ್ಕೆ ರಕ್ತ ತೆಗೆದುಕೊಂಡು ಪರೀಕ್ಷೆ ನಡೆಸಲಾಗುತ್ತಿತ್ತು. ಬೆಳಗಿನ ಉಪಹಾರ ಮಾಡಿದ ಮತ್ತು ಮಾಡದವರ ರಕ್ತದ ಸ್ಯಾಂಪಲ್ ತೆಗೆದುಕೊಂಡು ನೋಡಿದಾಗ, ಬೆಳಿಗ್ಗೆ ಉಪಹಾರ ಮಾಡದೆ, ಏನೂ ತಿನ್ನದೇ ಇರುವವರಲ್ಲಿ ಇನ್ಸುಲಿನ್ ನಿರೋಧಕತೆಯನ್ನು ಕಂಡರು.
ಇವರಿಗೆ ಹೆಚ್ಚು ಹೆಚ್ಚು ಇನ್ಸುಲಿನ್ ಅನ್ನು ಕೊಡಬೇಕಾಯಿತು. ಅಂದರೆ ರಕ್ತದಲ್ಲಿ ಇರಬೇಕಾದ ಸಕ್ಕರೆಯ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾಯಿತು. ಆದ್ದರಿಂದ ಯಾರೂ, ಅದರಲ್ಲೂ ಮಹಿಳೆಯರು ಬೆಳಗಿನ ಉಪಹಾರವನ್ನು ತಿನ್ನದೇ ಇರಬಾರದು ಎಂದು ಅಲ್ಲಿಯ ವೈದ್ಯಕೀಯ ತಂಡ ಶಿಫಾರಸ್ಸು ಮಾಡಿದೆ.

Share this: