ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ಪೂಜಾ ವಿಧಾನದಲ್ಲಿ
ಧೂಪದ ಪಾತ್ರ ಹಾಗೂ ಆರೋಗ್ಯ ರಕ್ಷಣೆ
ಹಿಂದೂ ಪೂಜಾ ವಿಧಾನದಲ್ಲಿ ಧೂಪಂ ಆಗ್ರಾಪಯಾಮಿ ಎನ್ನುತ್ತಾರೆ. ಧೂಪದ ಬಗ್ಗೆ ಇರುವ ಮಂತ್ರ ಹೀಗಿದೆ.
ವನಸ್ಪತ್ಯುದ್ಭವೊಂ ದಿವ್ಯೋ ಗಂಧಾಢ್ಯೋಗಂಧ ಉತ್ತಮ
ಆಘ್ರೇಯಸ್ಸರ್ವ ದೇವನಾಂ ಧೂಪೊಯಂ ಪ್ರತಿಗೃಹ್ಯತಾಂ
ಪೂಜೆಯಲ್ಲಿ ನಮ್ಮ ನಾಲ್ಕು ಅಂಗಗಳು ನಿರತವಾಗಿರುತ್ತವೆ. ಎಣ್ಣೆ ಬತ್ತಿಯ ದೀಪದ ಬೆಳಗುವಿಕೆಯಿಂದ, ದೇವತೆಯ ಆಭರಣಗಳು, ವಸ್ತ್ರಗಳು, ಮೃದು ಹಾಗೂ ವರ್ಣರಂಜಿತ ಹೂಗಳು, ಮಾಲೆಗಳು ಎಲ್ಲ ಕಣ್ಣಿಗೆ ಆನಂದ ನೀಡುತ್ತವೆ. ಗಂಟೆಯ ನಾದ ಅದರ ಪ್ರತಿಧ್ವನಿಗಳು ಮಂತ್ರ ಹೇಳುವುದು, ಎಲ್ಲ ಭಕ್ತರ ಕಿವಿಯನ್ನು ಜಾಗೃತವಿರಿಸುತ್ತವೆ.
ಮೂಗಿಗೆ ಸೂಸುವ ಧೂಪ ಹಾಗೂ ಅಗರಬತ್ತಿಯ ಸುವಾಸನೆ, ಸಂತಸ- ನೆಮ್ಮದಿ- ಸಾಂಗತ್ಯ- ಸಾಮರಸ್ಯ ವಾತಾವರಣ ಸೃಷ್ಟಿಸುತ್ತದೆ. ದೈವಸ್ತುತಿಯಲ್ಲಿ ದೇವರಿಗೆ ಶರಣಾಗುತ್ತೇವೆ. ಏನೂ ಉಳಿಯದೇ ಉರಿವ ಕರ್ಪೂರ ಉರಿದಾಗ, ಪರಿಸರ ಶುದ್ಧವಾಗುತ್ತದೆ. ಅದು ಬ್ಯಾಕ್ಟೀರಿಯಾ, ಸೂಕ್ಷ್ಮಾಣುಗಳು ಹಾಗೂ ಅತಿ ಸೂಕ್ಷ್ಮ ರೋಗಾಣುಗಳನ್ನು ಕೊಲ್ಲುತ್ತದೆ. ದೊಡ್ಡ ಹಸಿರು ಕರ್ಪೂರ ಮರದ ಟೊಂಗೆ ಹಾಗೂ ಮರಗಳ ಮಹತ್ವ 6000 ವರ್ಷಗಳ ಹಿಂದೆಯೇ ಆಯುರ್ವೇದಲ್ಲಿ ಹೇಳಲ್ಪಟ್ಟಿದೆ. ನರವ್ಯವಸ್ಥೆಯ ತೊಂದರೆಗಳನ್ನು ಇದು ಕಡಿಮೆ ಮಾಡುತ್ತದೆ. ಮೂರ್ಛೆ, ದುರ್ಬಲತೆ, ತಳಮಳ, ತೀವ್ರ ಆತುರತೆಗಳನ್ನು ಇದು ನಿಯಂತ್ತಿಸುತ್ತದೆ.
ಪ್ರಪಂಚದಲ್ಲಿ ಪರಿಮಳ ದ್ರವ್ಯಗಳ ಉತ್ಪಾದನೆಯ ಮುಖ್ಯ ದೇಶ ಭಾರತ. ಇದನ್ನು ಚೀನಾ, ಜಪಾನ್, ಏಶಿಯಾ ದೇಶಗಳಿಗೆ ರಫ್ತು ಮಾಡುತ್ತದೆ. ಆದರೆ ಕಚ್ಛಾವಸ್ತುಗಳ ಬೆಲೆ ಹೆಚ್ಳಳ, ಪಾಶ್ಚಿಮಾತ್ಯ ದೇಶಗಳು ಸುವಾಸನೆ ಇರದ ಕಡ್ಡಿ ಕೊಳ್ಳುತಿರುವುದು, ಕೆಲವು ಭಾರತೀಯ ಕಂಪನಿಗಳು ನಕಲಿ ವಸ್ತು ತಯಾರಿಸುತ್ತಿರುವುದು, ವಾಸ್ತವಿಕ ಸಂಗತಿ. ಮುಖ್ಯವಾಗಿ ಸುಗಂಧ ಉರಿಸುವುದು ಊದುಬತ್ತಿ, ಇದಕ್ಕೆ ಬಿದಿರಿನ ಕಡ್ಡಿಗಳು, ಇದ್ದಲಿನ ಪುಡಿ ಮರದ ಹೊಟ್ಟು, ಅಂಟು ಬೇಕು. ಅಥರ್ವ ವೇದ ಹಾಗೂ ಋಗ್ ವೇದಗಳಲ್ಲಿ ಕೆಟ್ಟವಾಸನೆ ತಡೆಯಲು, ಪರಿಮಳ ದ್ರವ್ಯಗಳನ್ನು ಮಾಡಲು ಒಂದೇ ಸಾಮಾನ್ಯ ವಿಧಾನ ಹೇಳಲಾಗಿದ್ದು, ಅದನ್ನೇ ಪ್ರೋತ್ಸಾಹಿಸಲಾಗಿದೆ. ಆದರೆ ಆಧುನಿಕ ಕಾಲದಲ್ಲಿ ವೈದ್ಯಕೀಯ ಪೂಜಾರಿಗಳು, ಆಯುರ್ವೇದಿಕ್ ವೈದ್ಯಕೀಯ ವ್ಯವಸ್ಥೆಗೆ ಅನುಗುಣವಾಗಿ, ಈ ಸುಗಂಧ ಪದಾರ್ಥಗಳನ್ನು ಶಂಕುಗಳು, ಮರದ ತುಂಡುಗಳು ಹಾಗೂ ಸಾಂಬ್ರಾಣಿ ರೂಪದಲ್ಲಿ ತಯಾರಿಸುತ್ತಿದ್ದಾರೆ. ಹಿಂದೆ ಇದನ್ನು ಸುಟ್ಟು ಖುಷಿಪಡಿಸುವ ಸಾಧನವಾಗಿ, ವೈದ್ಯಕೀಯ ವಸ್ತುವಾಗಿ ದೇಹ – ಮನಸ್ಸು ಗುಣಪಡಿಸಲು ಸನ್ಯಾಸಿಗಳು ಬಳಸುತ್ತಿದ್ದರು.
ಹಿಂದೂ ಪೂಜಾವಿಧಿಯ ಅವಿಭಾಜ್ಯ ಅಂಗವಾಗಿದೆ ಧೂಪ. ಇದನ್ನು ಹಚ್ಚುವುದರಿಂದ ಪವಿತ್ರ ವಿಧಿಗೆ ಅತ್ಯುತ್ತಮ ಹಿನ್ನಲೆ ಒದಗಿಸಿದಂತೆ. ಇದರ ಹೊಗೆ ಸೋಂಕು ನಿವಾರಕಗಳಾಗಿ ಕ್ರಿಮಿಗಳನ್ನು ಓಡಿಸುತ್ತದೆ. ಧೂಪವು ಬಿದಿರು ಕಡ್ಡಿ ಇರದೇ ಕೇಂದ್ರೀಕರಿಸಲ್ಪಟ್ಟ ಸುಗಂಧ ಹೊಂದಿದ್ದು, ಉರಿಸಿದಾಗ ಬಹಳ ಧೂಮ ಬರುತ್ತದೆ.
ಷೋಡಷಾಂಗ-ನೈಸರ್ಗಿಕ ಧೂಪ
ಈ ಷೋಡಷಾಂಗ ಧೂಪ 16 ವಿಶೇಷ ಪದಾರ್ಥಗಳ ಮಿಶ್ರಣದ, ವೈಜ್ಞಾನಿಕ ನಿರ್ಮಾಣ. ಇಲ್ಲಿ 16 ವಿಶೇಷ ಮೂಲಿಕೆಗಳಿವೆ. ಶುದ್ಧ ದೇಶೀ ಹಸುವಿನ ತುಪ್ಪ ಹಾಗೂ ಶುದ್ಧ ಜೇನುತುಪ್ಪ ಸಹ ಇವೆ.
ಈ `ಧೂಪ ಸಮೃದ್ಧಿ’ ಉರಿಸುವುದರಿಂದ ಸಂಪತ್ತು, ಆಕರ್ಷಿತವಾಗುತ್ತದೆ; ಕೆಟ್ಟ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ. ಆಧ್ಯಾತ್ಮಿಕ ಬೆಳವಣಿಗೆಗೆ, ಧನಾತ್ಮಕ ವಾತಾವರಣ ಸೃಷ್ಟಿಗೆ, ಪರಿಶುದ್ಧ ಗಾಳಿಗೆ, ಕಲ್ಪನೆಯ ವಿಕಾಸಕ್ಕೆ, ಒತ್ತಡ ಕಡಿಮೆಯಾಗಲು, ಖಿನ್ನತೆ ದೂರಮಾಡಲು, ವಿವಿಧ ಸೋಂಕುಗಳಿಂದ ರಕ್ಷಣೆಗಾಗಿ, ಏಕಾಗ್ತತೆ ಹೆಚ್ಚಿಸಲು, ಸಾಂತ್ವನ ನೀಡುವ ಪರಿಸರ ನಿರ್ಮಾಣಕ್ಕೆ, ವಾಸ್ತುವಿನ ದೋಷ ನಿವಾರಣೆಗಾಗಿ ನಿಮಗೆ ನೆರವು ನೀಡುತ್ತದೆ.
ಬಳಸುವುದು ಹೇಗೆ ?
ಧೂಪದ ಪುಡಿಯನ್ನು ಕೋನ್ ಅಚ್ಚಿನಲ್ಲಿ ಲಘುವಾಗಿ ತುಂಬಿರಿ. ಲೋಹದ ತಟ್ಟೆಯ ಮೇಲೆ ಇದನ್ನು ಕೆಳಮುಖವಾಗಿ ಇಡಿ ಅದರ ತುದಿಯನ್ನು ಬೆರಳಿನಿಂದ ತೆಗೆದು ಅಚ್ಚನ್ನು ತೆಗೆಯಿರಿ. ಧೂಪಕ್ಕೆ ಬೆಂಕಿ ಹಚ್ಚಿ 1 ನಿಮಿಷದ ನಂತರ ಆರಿಸಿರಿ.
ನಮ್ಮ ಆಂತರಿಕ -ಬಾಹ್ಯ, ಮನಸ್ಸು- ದೇಹ, ಮನೆ -ವಾತಾವರಣ ಹೀಗೆ ಸಮಗ್ರ ಆರೋಗ್ಯ ಜೀವನಕ್ಕೆ ರಾಸಾಯನಿಕ ಮುಕ್ತ ಪದಾರ್ಥಗಳನ್ನು ಬಳಸಲು ಮನಸ್ಸು ಮಾಡಬೇಕಾಗಿದೆ. ಕೆಂಡದ ಮೇಲೆ ಹಾಕಿ ಅಥವಾ ಹಾಗೆಯೇ ಉರಿಸಿದರೂ, ಈ ಸಹಜ ಧೂಪ ನಿಮ್ಮ ಮನಸ್ಸು ಹಗುರ ಮಾಡುತ್ತದೆ. ಗಾಳಿ ಹಾಗೂ ಪರಿಸರವನ್ನು ಶುದ್ಧ ಮಾಡಿ ಪೂಜಾ ಮವಾತಾವರಣಕ್ಕೆ ಪವಿತ್ರ ಹಿನ್ನೆಲೆ ನಿರ್ಮಿಸುತ್ತದೆ. ನಿಮ್ಮ ಸುತ್ತ ಧನಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಹೀಗಾಗಿ ಸಾಂಪ್ರದಾಯಿಕ, ಪ್ರಾಕೃತಿಕ ಧೂಪ ಬಳಸಿದರೆ, ಪವಿತ್ರ ಪರಿಸರದಲ್ಲಿ ದೈವಿಕ ಭಾವನೆ ಉಂಟಾಗಲು, ಮಂಗಳಕರ ವಾತಾವರಣ ಸೃಷ್ಟಿಯಾಗುತ್ತದೆ.