ಡೆಂಘಿ ಅಥವಾ ಡೆಂಗ್ಯೂ ಜ್ವರ : ಇದು ತೀಕ್ಷ್ಣ ಜ್ವರದ ಒಂದು ಮಾರಕ ಸೋಂಕು ರೋಗ

ಡೆಂಘಿ ಅಥವಾ ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಉಷ್ಣವಲಯ ಪ್ರದೇಶದ ರೋಗವಾಗಿದ್ದು, ಮುಖ್ಯವಾಗಿ ಇದು ನಗರ ಮತ್ತು ಪಟ್ಟಣ ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ (ಅಧಿಕ ಜನಸಂಖ್ಯೆ ಸಾಂದ್ರತೆಯಿಂದಾಗಿ). ಇದು ಸೊಳ್ಳೆಯಿಂದ ಹರಡುವ (ಸಂದಿಪದಿಯಿಂದ ಹಬ್ಬುವ) ರೋಗವಾಗಿದ್ದು, ನಿರ್ದಿಷ್ಟವಾಗಿ ಎ.ಆಯಿಜಿಪ್ಟಿ ಹಾಗೂ ಎ.ಅಲ್ಬೋಪಿಕ್ಟಸ್‍ನಂಥ ಏಡೆಸ್ ಸೊಳ್ಳೆಗಳಿಂದ ವ್ಯಾಪಿಸುತ್ತದೆ. ಸೋಂಕು ರಕ್ತ ಉತ್ಪನ್ನಗಳ (ರಕ್ತ ಪರಿಚಲನೆ, ಪ್ಲಾಸ್ಮಾ ಮತ್ತು ಪ್ಲೇಟ್‍ಲೆಟ್‍ಗಳು) ಮೂಲಕವು ಸಹ ಡೆಂಗ್ಯೂ ಹರಡಬಹುದು.

dengi_vy2.jpg

ಡೆಂಘಿ ಜ್ವರವು ಸಾಮಾನ್ಯವಾಗಿ ಸ್ವಯಂ-ಮಿತಿಯ ರೋಗವಾಗಿದ್ದು, ಏಡೆಸ್ ಸೊಳ್ಳೆಗಳು ಅಧಿಕ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ಡೆಂಗ್ಯೂ ಹಿಮೊರ್ರೇಜಿಕ್ ಫೀವರ್ (ಡಿಎಚ್‍ಎಫ್) ಮತ್ತು ಡೆಂಗ್ಯೂ ಶಾಕ್ ಸಿಂಡ್ರೋಮ್(ಡಿಎಸ್‍ಎಸ್) ಉಲ್ಭಣಗೊಳ್ಳುವುದನ್ನು ಕಾಣಬಹುದು. ಇಂಥ ವೈರಸ್‍ಗಳಿಂದ ಉಂಟಾಗುವ ಸೋಂಕು ಈ ಕೆಳಕಂಡ ರೋಗ ಲಕ್ಷಣಗಳಿಗೆ ಅಥವಾ ರೋಗಗಳಿಗೆ ಕಾರಣವಾಗುತ್ತದೆ :-
1. ಕ್ಲಾಸಿಕಲ್ ಡೆಂಘಿ ಫೀವರ್
2. ಡೆಂಘಿ ಹಿಮೊರ್ರೇಜಿಕ್ ಫೀವರ್ (ಡಿಎಚ್‍ಎಫ್)
3. ಡೆಂಘಿ ಶಾಕ್ ಸಿಂಡ್ರೋಮ್(ಡಿಎಸ್‍ಎಸ್)

ಹರಡುವಿಕೆ:

ರೋಗಿಯ ರಕ್ತ ಹೀರುವ ಏಡೆಸ್ ಸೊಳ್ಳೆ ಸೋಂಕಿಗೆ ಒಳಗಾಗುತ್ತದೆ (ಜ್ವರ ಬರುವುದಕ್ಕೆ ಮುನ್ನ ಮೊದಲ ದಿನದಿಂದ ಕಾಯಿಲೆಯ 5ನೇ ದಿನದ ತನಕ). ವೈರಸ್ ಸೊಳ್ಳೆಯೊಳಗೆ ಅಭಿವೃದ್ದಿ ಹೊಂದಲು 8-10 ದಿನ ತೆಗೆದುಕೊಳ್ಳುತ್ತದೆ. ಇದಾದ ನಂತರ, ಸೊಳ್ಳೆ ಅರೋಗ್ಯವಂತ ವ್ಯಕ್ತಿಗೆ ಕಚ್ಚಿ ಸೋಂಕು ಉಂಟು ಮಾಡುತ್ತದೆ. ಒಮ್ಮೆ ಸೊಳ್ಳೆ ಸೋಂಕಿಗೆ ಒಳಗಾದರೆ ಅದು ಮುಂದೆ ಅದು ಬದುಕಿರುವ ತನಕ ಹಾಗೇ ಮುಂದುವರೆಯುತ್ತದೆ. ಇದನ್ನು ‘ಮಾನವ-ಸೊಳ್ಳೆ-ಮಾನವ’ ಈ ರೀತಿಯ ಸೋಂಕಿಗೆ ಹೋಲಿಸಬಹುದು. ಸೊಳ್ಳೆಗಳು ಸಾಮಾನ್ಯವಾಗಿ ಮುಂಜಾನೆ ಮತ್ತು ಮುಸ್ಸಂಜೆ ವೇಳೆ ಕಚ್ಚುತ್ತದೆ ಹಾಗೂ ಸಂತಾನೋತ್ಪತ್ತಿಯ ಕಾಲವಾದ್ದರಿಂದ ಮಳೆಗಾಲದಲ್ಲಿ ಅವು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ.


ಚಿಹ್ನೆ ಮತ್ತು ಲಕ್ಷಣಗಳು:

ಇದು ಯಾವುದೇ ವಯಸ್ಸು ಅಥವಾ ಲಿಂಗ ವ್ಯಕ್ತಿ ಮೇಲೆ ಪರಿಣಾಮ ಬೀರಬಹುದು, ಮಕ್ಕಳಲ್ಲಿ ಕೆಲವೊಮ್ಮೆ ಅಲ್ಪ ಚಿಹ್ನೆ ಮತ್ತು ಲಕ್ಷಣಗಳು ಕಂಡು ಬರುತ್ತವೆ.

  • 3-10 ದಿನಗಳ ಕಾಲ ರೋಗವು ಪಕ್ವ ಸ್ಶಿತಿಗೆ ಬಂದ ನಂತರ ದಿಢೀರನೇ ಉಲ್ಬಣಗೊಳ್ಳುತ್ತದೆ.
  • ರೋಗಿಗೆ ಅಧಿಕ ಜ್ವರ, ಗುಳ್ಳೆ, ಚಳಿಯಾಗುವಿಕೆ, ತೀವ್ರ ತಲೆ ನೋವು, ಸ್ನಾಯು ಮತ್ತು ಜಂಟಿ ಕೀಲು ನೋವು ಕಾಣಿಸಿಕೊಳ್ಳಬಹುದು.
  • ರೋಗಿ ದುರ್ಬಲಗೊಂಡು, ಹಸಿವು ಇಲ್ಲದೆ, ರುಚಿಯ ಸಂವೇದನೆ ಬದಲಾಗಬಹುದು.
  • ಮಲಬದ್ದತೆ, ಹೊಟ್ಟೆ ಊದಿಕೊಳ್ಳುವಿಕೆ, ಯಾತನೆಯ ಕಣ್ಣು ಚಲನೆಯೊಂದಿಗೆ ಕಣ್ಣುಗಳ ಹಿಂದೆ ನೋವು, ತೊಡೆ ಸಂದಿಯಲ್ಲಿ ನೋವು, ಗಂಟಲು ಹುಣ್ಣು, ಅತಿಸಾರ ಮತ್ತು ವಾಂತಿ ರೋಗದ ಇತರ ಚಿಹ್ನೆಗಳಾಗಿರುತ್ತದೆ.
  • ಪದೇ ಪದೇಜ್ವರ ಕಾಣಿಸಿಕೊಳ್ಳುವಿಕೆ ಮತ್ತು ಗುಳ್ಳೆಗಳೊಂದಿಗೆ ಜ್ವರ ಹಾಗೂ ಮುಖದ ಮೇಲೆ ಸೂಜಿ ಮೊನೆಯಂಥ ಗುಳ್ಳೆಗಳ ಗೋಚರ. ದೇಹದ ಎಲ್ಲಾ ಭಾಗಗಳಲ್ಲೂ ಗಂದೆಗಳು ಕಾಣಿಸಿಕೊಳ್ಳಬಹುದು.
  • ಜ್ವರ ಸಾಮಾನ್ಯವಾಗಿ 5-7 ದಿನಗಳ ನಂತರ ಕಡಿಮೆಯಾಗುತ್ತದೆ, ಹಾಗೂ ಅಪಾಯವಾಗುವ ಸಾಧ್ಯತೆ ಕಡಿಮೆಯಾಗುತ್ತದೆ
  • ಡೆಂಘಿ ಹಿಮೊರ್ರೇಜಿಕ್ ಫೀವರ್
  • ಇದು ಡೆಂಘಿ ಜ್ವರಕ್ಕಿಂತ ತೀವ್ರವಾಗಿರುತ್ತದೆ.
  • ಡೆಂಘಿ ವೈರಸ್‍ನಿಂದ ದುಪ್ಪಟ್ಟು ಸೋಂಕು ಆಗುವುದರಿಂದ ತೀವ್ರತೆ ಹೆಚ್ಚಾಗಿರುತ್ತದೆ.
  • ಡೆಂಘಿ ಜ್ವರ ಸ್ವರೂಪವನ್ನೇ ಇದು ಹೊಂದಿದ್ದು, ತೀವ್ರತೆ ಮಾತ್ರ ಹೆಚ್ಚಾಗಿರುತ್ತದೆ. ಇದರೊಂದಿಗೆ ಚರ್ಮದ ಮೇಲೆ ಮೊಳೆಯಂಥ ಸಣ್ಣ ಗೆಡ್ಡೆಗಳು (ಇಕ್ಕಿಮೊಸಿಸಿಸ್, ಪೆಟಿಚಿಯಾ, ಪುರ್‍ಪುರಾದಂಥ
  • ಹಿಮೋರ್ರೇಜಿಕ್ ಸಮಸ್ಯೆಗಳು), ಮೂಗು ಮತ್ತು ಒಸಡಿನಿಂದ ರಕ್ತಸ್ರಾವ (ಎಪಿಸ್ಟಾಕ್ಸಿಸ್), ವಾಂತಿ ಮತ್ತು ಮಲದಲ್ಲಿ ರಕ್ತ ಕಾಣಿಸಿಕೊಳ್ಳುವಿಕೆ ಕಂಡುಬರುತ್ತದೆ.
  • ಶಿಶುಗಳಲ್ಲಿ ತೀಕ್ಷ್ಣ ಜ್ವರ ಗೋಚರಿಸುತ್ತದೆ.
  • ಲಿವರ್ ಅಥವಾ ಪಿತ್ತಕೋಶ ವಿಸ್ತಾರವಾಗಬಹುದು.
  • ರಕ್ತ ಪರೀಕ್ಷೆಗಳಿಂದ ರಕ್ತದಲ್ಲಿ ಕಡಿಮೆ ಪ್ಲೇಟ್‍ಲೆಟ್‍ಗಳು ಬಹಿರಂಗವಾಗಬಹುದು.
  • ಲಿವರ್ ಕಿರ್ರೋಸಿಸ್‍ನ ಪ್ರಕರಣಗಳಲ್ಲಿ ಡೆಂಘಿ ಹಿಮೋರ್ರೇಜಿಕ್ ಫೀವರ್, ಲಿವರ್‍ಕ್ಯಾನ್ಸರ್ ವೃದ್ದಿಯೊಂದಿಗೆ ಸಂಬಂಧ ಹೊಂದಿರುತ್ತದೆ.

ಡೆಂಘಿ ಶಾಕ್ ಸಿಂಡ್ರೋಮ್ :

ಡೆಂಘಿ ಹಿಮೋರ್ರೇಜಿಕ್ ಫೀವರ್ ಇರುವ ರೋಗಿಗಳಲ್ಲಿ ಸಾಕಷ್ಟು ರಕ್ತ ನಷ್ಟವಾದಾಗ ಸಂಭವಿಸುವ ಆಘಾತವನ್ನು ಡೆಂಗ್ಯೂ ಶಾಕ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.
ಈ ತೀವ್ರ ಸಮಸ್ಯೆ ಎದುರಾದಾಗ, ರೋಗಿಯ ನಾಡಿ ಮಿಡಿತ ವೇಗವಾಗಿರುತ್ತದೆ. ಜೊತೆಗೆ ಕಡಿಮೆ ರಕ್ತ ಪ್ರಮಾಣ ಮತ್ತು ಕಡಿಮೆ ರಕ್ತದೊತ್ತಡವಿರುತ್ತದೆ. ಚರ್ಮ ತಣ್ಣಗಾಗಿ ಅವಿಶ್ರಾಂತಿ ಸ್ಥಿತಿಯನ್ನು ರೋಗಿ ತಲುಪುತ್ತಾನೆ. ಈ ಸನ್ನಿವೇಶದಲ್ಲಿ ರೋಗಿಗೆ ತುರ್ತುಚಿಕಿತ್ಸೆ ನೀಡಬೇಕಾಗುತ್ತದೆ.

ರೋಗ ತಪಾಸಣೆ:

ಡೆಂಘಿ ರೋಗ ತಪಾಸಣೆ ಮತ್ತು ರೋಗ ನಿರ್ಧಾರವನ್ನು ಸಾಮಾನ್ಯವಾಗಿ ಕ್ಲಿನಿಕಲ್ ಪರೀಕ್ಷೆಯಿಂದ ನಡೆಸಲಾಗುತ್ತದೆ. ಕಡಿಮೆ ಪ್ಲೇಟ್‍ಲೆಟ್‍ಗಳು ಮತ್ತು ಬಿಳಿ ರಕ್ತ ಕೋಶಗಳ ಕೌಂಟ್‍ನೊಂದಿಗೆ ಸಣ್ಣ ಗುಳ್ಳೆಗಳು ಗೋಚರಿಸಿರುವ ಅಧಿಕ ಜ್ವರದ ಸ್ಪಷ್ಟ ಚಿತ್ರಗಳ ಸಹಾಯದಿಂದ ರೋಗ ತಪಾಸಣೆ ಮಾಡಲಾಗುತ್ತದೆ. ಇದರೊಂದಿಗೆ ಡೆಂಗ್ಯೂ ಹಿಮೋರ್ರೇಜಿಕ್ ಫೀವರ್ ಮತ್ತು ಡೆಂಗ್ಯೂ ಶಾಕ್ ಸಿಂಡ್ರೋಮ್‍ನ ಚಿಹ್ನೆ ಮತ್ತು ಲಕ್ಷಣ-ಸ್ವರೂಪಗಳನ್ನು ತಪಾಸಣೆ ಮಾಡುವುದು ಕೂಡ ಮುಖ್ಯವಾಗಿರುತ್ತದೆ. ಅಂತಿಮ ಹಂತ ಲಿವರ್‍ರೋಗದ ಲಕ್ಷಣವಾಗಿರುವುದರಿಂದ ಡೆಂಗ್ಯೂ ಹಿಮೋರ್ರೇಜಿಕ್ ಫೀವರ್ ರೋಗ ಪರೀಕ್ಷೆ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.

ಕ್ಷಿಪ್ರ ರೋಗ ತಪಾಸಣೆ ಪರೀಕ್ಷೆ ಕಿಟ್‍ಗಳ ಸಹಾಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯೂ ರೋಗ ನಿರ್ಧಾರದ ತ್ವರಿತ ವಿಲೇವಾರಿ ಮಾಹಿತಿಯನ್ನು ಪಡೆಯಬಹುದು. ಇದು ಪ್ರಾಥಮಿಕ ಮತ್ತು ದ್ವಿತೀಯ ಡೆಂಗ್ಯೂ ಸೋಂಕಿನ ನಡುವಣ ವ್ಯತ್ಯಾಸವನ್ನು ತೋರಿಸುತ್ತದೆ. ಕ್ಲಿನಿಕ್‍ನಲ್ಲಿ ಸೂಚಿಸಲ್ಪಟ್ಟ ಡೆಂಗ್ಯೂ ರೋಗ ತಪಾಸಣೆಯನ್ನು ದೃಢಪಡಿಸಿಕೊಳ್ಳಲು ಸೆರೋಲಾಜಿ ಅಂಡ್ ಪಾಲಿಮೆರಸೆಚೈನ್ ರಿಯಾಕ್ಷನ್ (ಪಿಸಿಆರ್) ಅಧ್ಯಯನಗಳು ಸಹ ಲಭ್ಯವಿದೆ.

ಒಂದು ವೇಳೆ ರೋಗಿಗೆ ಜ್ವರವು 2 ದಿನಗಳು ಮತ್ತು /ಅಥವಾ ಹೆಚ್ಚಿನ ಕಾಲ ಮುಂದುವರೆದು ನಿರಂತರ ತಲೆ ನೋವಿದ್ದರೆ, ಆಗ ಅತ/ಅಕೆ ಸಂಪೂರ್ಣ ರಕ್ತ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಪ್ಲೇಟ್‍ಲೆಟ್ ಕೌಂಟ್ ಮತ್ತು ಬಿಳಿ ರಕ್ತ ಕೋಶ ಎಣಿಕೆ ಸಾಮಾನ್ಯ ಶ್ರೇಣಿಗಿಂತ ಕಡಿಮೆ ಇದ್ದರೆ, ಡೆಂಗ್ಯೂ ಆಂಟಿಜೆನ್ ಪರೀಕ್ಷೆ ನಡೆಸಬೇಕಾಗುತ್ತದೆ. ಸಿಬಿಸಿ ಕೌಂಟ್‍ನ ಫಲಿತಾಂಶದ ಆಧಾರದ ಮೇಲೆ ಡೆಂಗ್ಯೂ ಪರೀಕ್ಷೆಯನ್ನು ನಿರ್ಧರಿಸಲಾಗುತ್ತದೆ.

ಚಿಕಿತ್ಸೆ:

ಚಿಕಿತ್ಸೆಯ ಮುಖ್ಯ ಸಂಗತಿ ಎಂದರೆ ಸಕಾಲಿಕ ಬೆಂಬಲಿತ ಥೆರಪಿ.
ರೋಗಿಗೆ ಬೆಡ್‍ರೆಸ್ಟ್‍ಗೆ ಸಲಹೆ ಮಾಡಲಾಗುತ್ತದೆ ಹಾಗೂ ಆಂಟಿ ಪೈರೆಟಿಕ್ಸ್ (ಜ್ವರಕ್ಕೆ) ಹಾಗೂ ಬಾಯಿಯ ಮೂಲಕ ತೆಗೆದುಕೊಳ್ಳುವ ದ್ರಾವಣ ಮತ್ತು ಎಲೆಕ್ಟ್ರೋಲೈಟ್ಸ್ (ನಿರ್ದಿಷ್ಟವಾಗಿ ಅತಿಸಾರ ಪ್ರಕರಣಗಳಲ್ಲಿ) ನೀಡಲಾಗುತ್ತದೆ. ರೋಗಿ ವಾಂತಿ ಮಾಡಿಕೊಳ್ಳುತ್ತಿದ್ದರೆ ಇಂಟ್ರಾವೆನಸ್ ಫ್ಲೋಯೆಡ್ಸ್‍ಗೆ ಸಲಹೆ ಮಾಡಲಾಗುತ್ತದೆ.
ಅಸ್ಪ್ರಿನ್ ಮತ್ತು ಸ್ಟ್ರಿರಾಯ್ಡ್ ಅಲ್ಲದ ನಾನ್-ಇನ್‍ಫ್ಲಾಮೇಟರಿ ಔಷಧಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಿಸಬೇಕಾಗುತ್ತದೆ. ಏಕೆಂದರೆ ಇವುಗಳು ರಕ್ತ ಸ್ರಾವವನ್ನು ಉಲ್ಬಣಗೊಳಿಸುತ್ತದೆ.
ಡೆಂಘಿ ಶಾಕ್ ಸಿಂಡ್ರೋಮ್ ನಿರ್ವಹಣೆಯ ಮುಖ್ಯ ಸಂಗತಿ ಏಕೆಂದರೆ ರಕ್ತಸ್ರಾವದಿಂದ ಉಂಟಾದ ಆಘಾತವನ್ನು ತಡೆಗಟ್ಟಬೇಕು. ಚಿಹ್ನೆ ಮತ್ತು ಲಕ್ಷಣಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ಒರಲ್ ಮತ್ತು ಇನ್‍ಟ್ರಾವಿನಸ್ ಫ್ಲೂಯಿಡ್‍ಗಳನ್ನು ಅತಿಸಾರ ತಡೆಗಟ್ಟಲು ನೀಡಬೇಕಾಗುತ್ತದೆ. ಪ್ಲೇಟ್‍ಲೆಟ್‍ಗಳ ಮಟ್ಟ ತೀವ್ರ ಇಳಿಮುಖವಾಗಿದ್ದರೆ (20,000ಕ್ಕಿಂತ ಕಡಿಮೆ) ಅಥವಾ ಗಣನೀಯವಾಗಿ ರಕ್ತಸ್ರಾವವಾಗುತ್ತಿದ್ದರೆ, ಇಂಥ ಪ್ರಕರಣಗಳಲ್ಲಿ ರಕ್ತ ಪರಿಚಲನೆ ಅಥವಾ ಪ್ಲೇಟ್‍ಲೆಟ್‍ಗಳ ಪರಿಚಲನೆಯನ್ನು ಮಾಡಬಹುದು. ಮೆಲೋನಾ (ಮಲದಲ್ಲಿರಕ್ತ ಸೋರಿಕೆ) ಕಂಡು ಬಂದರೆ, ಕರುಳಿನಲ್ಲಿ ರಕ್ತ ಸ್ರಾವದ ಸೂಚನೆಯಾಗಿದ್ದು, ಪ್ಲೇಟ್‍ಲೆಟ್‍ಗಳು ಮತ್ತು/ಅಥವಾ ಕೆಂಪು ರಕ್ತ ಕೋಶಗಳನ್ನು ಸೇರಿಸಬೇಕಾಗುತ್ತದೆ.

ನಿಯಂತ್ರಣ ಕ್ರಮಗಳು- ಸೊಳ್ಳೆಗಳ ನಿಯಂತ್ರಣ:

ನಗರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕಪ್‍ಗಳು, ಬಳಸಿದ ಟೈರ್‍ಗಳು, ಒಡೆದ ಬಾಟಲ್‍ಗಳು, ಪ್ಲವರ್ ಪಾಟ್ ಇತ್ಯಾದಿಯಂಥ ಕೃತಕ ಕಂಟೈನರ್‍ಗಳಲ್ಲಿ ನೆಲೆ ನಿಂತ ನೀರಿನ ಸಂಗ್ರಹಗಳಲ್ಲಿ ರೋಗಕಾರಕ ಏಡೆಸ್ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅಗಾಗ ಇಂತಹ ನೀರನ್ನು ಹೊರಗೆಚೆಲ್ಲುವುದು ಅಥವಾ ಕೃತಕ ಕಂಟೈನರ್‍ಗಳನ್ನು ತೆಗೆದು ಹಾಕುವುದು ಸೊಳ್ಳೆಗಳ ಸಂತತಿ ನಿರ್ಮೂಲನೆಗೆ ಇರುವ ಪರಿಣಾಮಕಾರಿ ಮಾರ್ಗವಾಗಿದೆ.
ಸೊಳ್ಳೆ ಮೊಟ್ಟೆಗಳ ನಿವಾರಣೆಗೆ ಮೊಟ್ಟೆ ನಾಶಕ ಚಿಕಿತ್ಸೆ (ಲಾರ್ವಿಸೈಡ್‍ಟ್ರೀಟ್‍ಮೆಂಟ್) ಮತ್ತೊಂದು ಪರಿಣಾಮಕಾರಿ ವಿಧಾನವಾಗಿದೆ. ಕ್ರಿಮಿಕೀಟ ಬೆಳವಣಿಗೆಯನ್ನು ನಿಯಂತ್ರಿಸುವ ತುಂಬಾ ಪರಿಣಾಮಕಾರಿಗಯಾದ ಐಜಿಆರ್ ಔಷಧಿಗಳು ಲಭ್ಯವಿದ್ದು, ಇವು ಸುರಕ್ಷಿತ ಮತ್ತು ದೀರ್ಘ ಪರಿಣಾಮಕಾರಿ (ಉದಾ.ಪೈರಿಪ್ರಾಕ್ಸಿಫೆನ್).
ವಯಸ್ಕ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಿಮಿನಾಶಕಗಳ ಹೊಗೆ ಸಿಂಪಡಿಸುವುದು ಕೂಡ ಪರಿಣಾಮಕಾರಿ.
ಸೊಳ್ಳೆಗಳು ಕಚ್ಚುವುದನ್ನು ತಡೆಗಟ್ಟುವುದು ಕೂಡ ರೋಗ ನಿಯಂತ್ರಣದ ಮತ್ತೊಂದು ಮಾರ್ಗ. ಇನ್ಸೆಕ್ಟ್‍ರಿಪೆಲೆಂಟ್, ಸೊಳ್ಳೆ ಪರದೆಗಳು ಅಥವಾ ಮಸ್ಕಿಟೋ ಟ್ರ್ಯಾಪ್‍ಗಳ ಸಹಾಯದಿಂದ ಇದನ್ನು ನಿಯಂತ್ರಿಸಬಹುದು.

ಚುಚ್ಚುಮದ್ದು/ಲಸಿಕೆ:

ಡೆಂಘಿ ಫ್ಲಾವಿವೈರಸ್ ನಿಯಂತ್ರಣಕ್ಕಾಗಿ ಮಾರುಕಟ್ಟೆಯಲ್ಲಿ ಯಾವುದೇ ಚುಚ್ಚುಮದ್ದು ಅಥವಾ ಲಸಿಕೆಗಳು ಲಭ್ಯವಿಲ್ಲ. ಅದಾಗ್ಯೂ, ಅನೇಕ ಲಸಿಕೆಗಳು ಹಂತ 1 ಅಥವಾ 2ನೇ ಪರೀಕ್ಷೆ ಹಂತದಲ್ಲಿವೆ.

 

 

 

 

 

 

 

 


ಡಾ. ಚಲಪತಿ

ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
080-28413384/82/83.   www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!