Vydyaloka

ದೀಪಾವಳಿ ಮತ್ತು ವೈಜ್ಞಾನಿಕತೆ

 ರೂಢಿಯಲ್ಲಿ ಬಂದ ಆಚಾರ ಸಂಪ್ರದಾಯದ ಹಿಂದೆ ಒಂದಲ್ಲ ಒಂದು ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ. ಅದನ್ನು ಅರಿತು ಬಾಳುವುದರಲ್ಲಿ ನಮ್ಮ ಜಾಣತನ ಅಡಗಿದೆ.

ಹಬ್ಬಗಳಲ್ಲಿ ಅನೇಕ ವಿಧಗಳಿವೆ. ನಾಡಹಬ್ಬ, ರಾಷ್ಟ್ರೀಯ ಹಬ್ಬ, ಧಾರ್ಮಿಕ ಹಬ್ಬ ಇತ್ಯಾದಿ. ಆದೆರ ಬೆಳಕಿನ ಹಬ್ಬವೆಂದು ಪ್ರಸಿದ್ಧವಾಗಿರುವ ದೀಪಾವಳಿ ಎಲ್ಲಾ ಧರ್ಮದವರು ಆಚರಿಸುವ ಒಂದು ಹಬ್ಬವಾಗಿದೆ. ಜೈನರು, ಸಿಖ್ಖರು, ಹಿಂದು, ಪಾರಸಿ ಎಲ್ಲ ಧರ್ಮದವರು ಆಚರಿಸುವ ಹಬ್ಬ ದೀಪಾವಳಿ. ದೀಪವು ಜ್ಞಾನದ ಸಂಕೇತ. ಮನಸ್ಸಿನ ಅಂಧಕಾರವನ್ನು, ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನದ ಕಡೆಗೆ ಮನಸ್ಸನ್ನು ಕರೆದೊಯ್ಯುವ ಹಬ್ಬ ದೀಪಾವಳಿ. ಬೆಳಕು ಮನಸ್ಸಿಗೆ ಹುಮ್ಮಸ್ಸನ್ನು, ಸ್ಫೂರ್ತಿಯನ್ನು, ಉಲ್ಲಾಸವನ್ನು ತಂದು ಕೊಡುತ್ತದೆ. ಪರಿಸರದಲ್ಲಿ ಹಾಗೂ ಮಾನವನಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸತ್ತದೆ. ಮಾನವನ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗಳನ್ನು ಪ್ರಚೋದಿಸುತ್ತದೆ. ದೀಪಾವಳಿಯನ್ನು ಆಶ್ವಿಜ ಮಾನ ಕೃಷ್ಣ ಪಕ್ಷದಲ್ಲಿ ಆಚರಿಸುತ್ತಾರೆ. ಇನ್ನು ಕೆಲವರು ನಾಲ್ಕು ದಿನ ಆಚರಿಸುತ್ತಾರೆ.
ಸಿದ್ಧತೆ & ಆಚರಣೆ : ಅನೇಕತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುವ ದೇಶ ನಮ್ಮ ಭಾರತ. ಕರಾವಳಿ, ದಕ್ಷಿಣ ಕನ್ನಡ, ಕೇರಳ ಇತ್ಯಾದಿ ಭಾಗಗಳಲ್ಲಿ ವಿಷ್ಣುವನ್ನು ಆರಾಧಿಸುತ್ತಾರೆ. ಉತ್ತರ ಭಾರತದ ಕಡೆ ರಾಮನನ್ನು ಆರಾಧಿಸುತ್ತಾರೆ. ಒಟ್ಟಾಗಿ ಹೇಳುವುದಾದರೆ ವಿಷ್ಣುವಿನ ಆರಾಧನೆ. ಬೆಂಗಳೂರಿನಲ್ಲಿ ಕೆಲವರು ಕೇದಾರೇಶ್ವರನ ವೃತ (ನೋಮು) ಮಾಡಿ ಪೂಜಿಸುತ್ತಾರೆ.
ನರಕ ಚತುರ್ದಶಿಯ ಮುಂಚಿನ ದಿನ ರಾತ್ರಿ ತಾಮ್ರದ ಹಂಡೆಯಲ್ಲಿ ನೀರು ತುಂಬಿಸುತ್ತಾರೆ. ಬೆಳಿಗ್ಗೆ ಬಿಸಿನೀರು ಕಾಯಿಸುತ್ತಾರೆ. ಎಲ್ಲರೂ ಮೈಗೆ ಕೊಬ್ಬರಿ ಎಣ್ಣೆ ಹಚ್ಚಿ ಅಭ್ಯಂಜನ ಮಾಡುತ್ತಾರೆ. ನರಕಾಸುರ ಎಂಬ ರಾಕ್ಷಸನನ್ನು ಕೃಷ್ಣನು ಸಂಹರಿಸಿದ ದಿನ. ಹದಿನಾರು ಸಾವಿರ ನಾರಿಮಣಿಗಳನ್ನು ನರಕಾಸುರನ ಬಂಧನದಿಂದ ಬಿಡುಗಡೆಗೊಳಿಸಿದ ದಿನ. ಆ ಹದಿನಾರು ಸಾವಿರ ಗೋಪಿಕೆಯರಿಗೆ ಧೈರ್ಯ ಹೇಳಿ ನರಕಾಸುರನನ್ನು ಕೊಂದು ಭೂಮಿಯಲ್ಲಿ ನೆಮ್ಮದಿ ನೆಲೆಸುವಂತೆ ಮಾಡಿದ ಶುಭದಿನ. ಆದ್ದರಿಂದ ಆ ದಿನ ಎಲ್ಲರೂ ಎಣ್ಣೆ ನೀರು ಸ್ನಾನ ಮಾಡಿ ಮೈ ಮನಸ್ಸನ್ನು ಶದ್ಧೀಕರಿಸಿಕೊಂಡು ಭಗವಂತನ ನಾಮಸ್ಮರಣೆ ಮಾಡುತ್ತಾರೆ. ಹೊಸಬಟ್ಟೆ ಧರಿಸುತ್ತಾರೆ. ಸಿಹಿತಿಂಡಿ, ಪಾಯಸ ಮಾಡುತ್ತಾರೆ.
ಅಮಾವಾಸ್ಯೆಯ ದಿನ ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಮನೆ, ಕಛೇರಿ, ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ. ಅಷ್ಟ ಲಕ್ಷ್ಮಿಯರು ಒಲಿದು ಬರಲಿ, ಸಂಪತ್ತು ತುಂಬಿ ಹರಿದು ಬರಲಿ ಎಂದು ಸಾಯಂಕಾಲ ಆರಾಧಿಸುತ್ತಾರೆ. ಒಬ್ಬಟ್ಟು, ಕಜ್ಜಾಯ, ತಿರುಮಧುರ (ಜೇನು, ತುಪ್ಪ, ಸಕ್ಕರೆ ಬೆರೆಸಿ) ಲಕ್ಷ್ಮೀಗೆ ನೈವೈದ್ಯ ಮಾಡುತ್ತಾರೆ.
ಬಲಿ ಪಾಡ್ಯಮಿ (ಗೋಪೂಜೆ) : ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ವಾಮನ ಅವತಾರದಲ್ಲಿ ವಿಷ್ಣುದೇವರು ಬಲಿಚಕ್ರವರ್ತಿಯಲ್ಲಿ ತನಗೆ 3 ಅಡಿ (ಪಾದ) ಜಾಗವನ್ನು ದಾನವಾಗಿ ಕೇಳುತ್ತಾನೆ. (ಬಲಿ ಚಕ್ರವರ್ತಿ ಪ್ರಹ್ಲಾದನ ಮೊಮ್ಮಗ) ಆಗ ಬಲಿ ಚಕ್ರವರ್ತಿ ಆಗಲಿ ಎಂದು ಹೇಳುತ್ತಾರೆ. ವಿಷ್ಣುವು ಒಂದು ಕಾಲನ್ನು ಭೂಮಿಯಲ್ಲೂ, ಇನ್ನೊಂದನ್ನು ಆಕಾಶಕ್ಕೂ ಇಟ್ಟು ಮತ್ತೊಂದು ಪಾದ ಎಲ್ಲಿಡಲಿ ಎಂದು ಬಲಿ ಚಕ್ರವರ್ತಿಯನ್ನು ಕೇಳುತ್ತಾನೆ. ಆಗ ಬಲಿ ಚಕ್ರವರ್ತಿ ತನ್ನ ತಲೆಯನ್ನು ತೋರಿಸುತ್ತಾನೆ. ವಿಷ್ಣುವು ತನ್ನ ಕಾಲನ್ನು ಬಲಿಚಕ್ರವರ್ತಿಯ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳುತ್ತಾನೆ. ಆಗ ಬಲಿ ಚಕ್ರವರ್ತಿ ವರುಷಕ್ಕೆ ಒಮ್ಮೆ ಮೂರು ದಿನ ಭೂಮಿಗೆ ಬಂದು ಪ್ರಜೆಗಳನ್ನು ನೋಡಿ ಹೋಗಲು ಅನುಮತಿ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತಾನೆ. ವಿಷ್ಣು ದೇವ ತಥಾಸ್ತು ಎಂದು ಹೇಳುತ್ತಾನೆ. ಹಾಗಾಗಿ ದೀಪಾವಳಿಯಲ್ಲಿ ಬಲಿ ಚಕ್ರವರ್ತಿಯ ಮೂರ್ತಿಯನ್ನು ಹಾಲೆ ಮರ ಅಥವಾ ಬಾಳೆಕಂಬ (ಕಂದು)ಗಳಲ್ಲಿ ಮಾಡಿ ಚೆಂಡು ಹೂ, ಪಾರೆ ಹೂ (ಕಲ್ಲುಗಳ ಮೇಲೆ ಬೆಳೆಯುವ ಒಂದು ಜಾತಿಯ ಹೂ), ರುದ್ರಾಕ್ಷಿ ಹೂ ಇತ್ಯಾದಿಗಳಿಂದ ಅಲಂಕಾರ ಮಾಡಿ ತುಳಸಿ ಕಟ್ಟೆಯ ಪಕ್ಕದಲ್ಲಿ ನಿಲ್ಲಿಸುತ್ತಾರೆ. ಅಂದು ಗೋ ಪೂಜೆ, ಬಲೀಂದ್ರ ಪೂಜೆ ಮಾಡುತ್ತಾರೆ. “ಬಲೀಂದ್ರ ಬಲೀಂದ್ರ ಹರಿಯೋ ಹರಿ’’ ಎಂದು ಹೊದಳನ್ನು ಅಕ್ಷತೆಯಂತೆ ಬಲೀಂದ್ರ ಮೂರ್ತಿಯ ಮೇಲೆ ಹಾಕುತ್ತ 3 ಪ್ರದಕ್ಷಿಣೆ ಬರುತ್ತಾರೆ. (ಹೊದಳು ಅಂದರೆ ಭತ್ತದ ಹರಳು, ಭತ್ತದ ಪಾಪ್‍ಕಾರ್ನ್. ಇದನ್ನು ಪೂಜೆ, ಶುಭ ಸಮಾರಂಭಗಳಲ್ಲಿ ಬಳಸುತ್ತಾರೆ.) ಅಂದು ಕಾರ್ತಿಕ ಮಾಸದ ಪಾಡ್ಯದ ದಿನವಾದ್ದರಿಂದ ಆ ದಿನವನ್ನು ಬಲಿಪಾಡ್ಯಮಿ ಎಂದು ಕರೆಯುತ್ತಾರೆ.

ವೈಜ್ಞಾನಿಕವಾಗಿ ಹಾಗೂ ಆರೋಗ್ಯದ ದೃಷ್ಟಿಯಿಂದ ದೀಪಾವಳಿ ಆಚರಣೆಯ ಉಪಯೋಗಗಳು :

 

Share this: