ಕರೋನ ವೈರಸ್ ಉಸಿರಾಟದ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ

 ಕರೋನ ವೈರಸ್  ಉಸಿರಾಟದ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದು. ಉಸಿರಾಟದ  ಕ್ರಿಯೆಗಳನ್ನು ತಜ್ಞರ ಸಲಹೆಯನ್ನು ಪಡೆದು ಅಭ್ಯಾಸಿಸುವುದು ಒಳ್ಳೆಯದು.

ಕರೋನ ವೈರಸ್ (COVID-19)- ಉಸಿರಾಟದ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮಇಡೀ ವಿಶ್ವವೇ ಇಂದು ‘ಕರೋನ ವೈರಸ್’ ಎಂಬ ಮಹಾಮಾರಿಯ ಆರ್ಭಟದಿಂದ ತತ್ತರಿಸಿದ್ದು, ಅನಾರೋಗ್ಯದ ಸ್ಥಿತಿಯು ಉಲ್ಬಣಿಸಿ ಎಲ್ಲರ ಮುಖದಲ್ಲಿ ಭಯವು ತಾಂಡವಾಡುವಂತೆ ಮಾಡಿದೆ. ಸಮಾಜಿಕ ಅಭದ್ರತೆಯಷ್ಟೇ ಅಲ್ಲದೇ ಸಾಕಷ್ಟು ಆರ್ಥಿಕ ಹಿಂಜರಿತಕ್ಕೊಳಗಾಗಿದೆ. ಮಾನವನ ದುರಾಸೆಗಳ ಪ್ರತಿಫಲವೇ ಈ ಕರೋನ ವೈರಸ್ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಕರೋನ ವೈರಸ್ ಜಾಗತಿಕ ಮಟ್ಟದಲ್ಲಿ ವಿಶೇಷವಾಗಿ ಆರೋಗ್ಯ ಕ್ಷೇತದಲ್ಲಿ ಪ್ರಳಯವನ್ನೆ ಸೃಷ್ಟಿಸಿದೆ. ಅಲ್ಲದೇ ತುರ್ತುಸ್ಥಿತಿಯಿಂದಾಗಿ ಪ್ರಪಂಚದಾದ್ಯಂತ ಆತಂಕವು ಎಲ್ಲರಲ್ಲಿ ಮನೆ ಮಾಡಿದೆ. ಪ್ರಸ್ತುತವಾಗಿ ನಾವೀಗ ಎಲ್ಲ ರೀತಿಯ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೂ, ಸ್ವಯಂಪ್ರೇರಿತರಾಗಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದರಿಂದ ಕೆಲವು ಅಪಾಯಕರ ಸನ್ನಿವೇಶಗಳಿಂದ ದೂರವಿರಲು ಸಹಾಯಕವಾಗಬಲ್ಲುದಲ್ಲದೆ, ಆರೋಗ್ಯಯುತ ಸಮಾಜವನ್ನು ಮರು ಸೃಷ್ಟಿಸಲು ಸಾಧ್ಯವಾಗತ್ತದೆ.

ದೇಶದ ಭವಿಷ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಕೇವಲ ವೈದ್ಯರು, ಆಸ್ಪತ್ರೆ, ಔಷಧಿಗಳು ಹಾಗೂ ಪೊಲೀಸರಿಗೆ ಮಾತ್ರ ಸಿಮೀತಗೊಳಿಸದೆ ದೇಶದ ಪ್ರಜೆಯಾದ ನಾವು ಪ್ರತಿಯೊಬ್ಬರೂ ಸರಕಾರಗಳು ಹೊರಡಿಸುವ ಆದೇಶಗಳಿಗೆ ಬದ್ಧರಾಗಿ ನಮ್ಮ ನಮ್ಮ ಜವಾಬ್ಧಾರಿಯನ್ನು ನಿಭಾಯಿಸುವ ಅನಿವಾರ್ಯತೆ ಬಂದೊದಗಿದೆ.ಹಣ, ಆಸ್ತಿ ಮತ್ತು ಅಧಿಕಾರದ ಅಮಲೀನ ಅಹಂಕಾರದಲ್ಲಿ ಬಿದ್ದು ಒದ್ದಾಡುತ್ತಿರುವ ಮಾನವನಿಗೆ ಆರೋಗ್ಯ, ಪ್ರೀತಿ ಹಾಗೂ ಸಂಬಂಧಗಳಿಗಿಂತ ಅವ್ಯಾವುವು ಮುಖ್ಯವಲ್ಲ ಎಂಬುದು ತಿಳಿಯಬೇಕಾಗಿದೆ. ದುಡ್ಡು ದುಡ್ಡು ಎಂದು ಸಂಬಂಧಗಳನ್ನೆ ಕಿತ್ತೆಸೆದು ದುಡ್ಡಿನ ಬೆನ್ನತ್ತಿ ತಾಯ್ನಾಡನ್ನು ಮರೆತು ಪರದೇಶಕ್ಕೆ ಹೋದವರೆಲ್ಲರನ್ನೂ ಮತ್ತೆ ಮರಳಿ ತಾಯ್ನಾಡನ್ನು ನೆನಪಿಸುವಂತೆ ಮಾಡಿದ್ದೇ ಅನಾರೋಗ್ಯದ ಭೀತಿ. ಪ್ರೀತಿ, ಸಂಬಂಧ, ಆರೋಗ್ಯ ಹಾಗೂ ತಾಯ್ನಾಡಿಗಿಂತ ಆ ಸಂಪತ್ತು ಎಂದಿಗೂ ದೊಡ್ಡದಲ್ಲ ಎಂಬುದು ನಾವು ಈಗಲಾದರೂ ಅರಿಯಬೇಕಾಗಿದೆ ಮತ್ತು ಈ ವೈರಸಗಳಂತಹ ಮಹಾಮಾರಿಗಳ ಕುತಂತ್ರಕ್ಕೆ ವಿದೇಶಗಳೇ ಕಾರಣ ಎಂಬುದನ್ನು ಮನದಟ್ಟು ಮಾಡಲು ಈ ಮೇಲಿನ ಸಾಲುಗಳು ಉಲ್ಲೇಖಿಸಬೇಕಾಗಿದೆ.

ವಚನದಲ್ಲಿ ಮಹಾಮಾರಿ ಕರೋನ ವೈರಸ್:

vachana-allama-prabhudevaಮಹಾಮಾರಿ ಕರೋನ ವೈರಸ್ ಬಗ್ಗೆ ಸುಮಾರು ಒಂದು ಸಾವಿರ ವರ್ಷಗಳ ಹಿಂದೆಯೆ ಅಂದರೆ ಸರಿ ಸುಮಾರು 11 ಮತ್ತು 12ನೇ ಶತಮಾನದಲ್ಲಿ ಶರಣರಿಗೆ (ಬಸವಾದಿ ಪ್ರಮಥರಿಗೆ) ಸಾಕಷ್ಟು ಜ್ಞಾನ ಇತ್ತೇಂಬುದು ಅಲ್ಲಮ್ಮಪ್ರಭುದೇವರ ಈ ಕೆಳಗಿನ ವಚನದಿಂದ ತಿಳಿದುಬರುತ್ತದೆ.

“ಕಂಡು ಕಂಡುದನೆಲ್ಲವ ಕೊಂಡು
ಅಟ್ಟಹಾಸದಿ ಮೆರೆವ ಜನಕೆ,
ಕಾಣದ ಜೀವಿಯು ಬಂದು,
ತಲ್ಲಣಿಸುವುದು ಜಗವು ನೋಡಾ ಗುಹೇಶ್ವರ.”
– ಅಲ್ಲಮ್ಮಪ್ರಭುದೇವರು

ಅಲ್ಲಮ್ಮಪ್ರಭುದೇವರು ಈ ಮೇಲಿನ ವಚನದಲ್ಲಿ ಮಹಾಮಾರಿ ವೈರಸಗಳ ಬಗ್ಗೆ ಅಷ್ಟೇ ಅಲ್ಲದೇ, ಆ ವೈರಸ್ ಹುಟ್ಟಿಗೆ ಮಾನವನ ದುರಾಸೆಯೇ ಮೂಲ ಕಾರಣ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ನಮ್ಮ ನಾಡಿನ ಶರಣರು, ದಾರ್ಶನಿಕರು, ಸೂಫಿಗಳು, ಸಂತರು ಮುಂತಾದವರು ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಚಿಂತನೆಗಳೊಂದಿಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ.

ಉಸಿರಾಟದ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ:

ಕರೋನಾ ವೈರಸ್  ಒಂದು ಬಗೆಯ ಪ್ರಾಣಹಾನಿಯನ್ನುಂಟು ಮಾಡುವ ವೈರಸ್ ಆಗಿದ್ದು, ಇದು ಮನುಷ್ಯನ ಉಸಿರಾಟದ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಈ ವೈರಸ್ ನಿಂದಾಗಿ ಸಾಮಾನ್ಯ ಕೆಮ್ಮು ಮತ್ತು ಸೀನುಗಳು (ಶೀತ) ಕಾಣಿಸಿಕೊಳ್ಳುವುದರೊಂದಿಗೆ ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಕೆಟ್ಟ ಪರಿಣಾಮ ಬೀರುವುದು. ಈಗಾಗಲೇ ಈ ಕರೋನ ವೈರಸ್ಗೆ  ಕಾರಣಗಳು, ಲಕ್ಷಣಗಳು ಹಾಗೂ ವಹಿಸಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಸಾಕಷ್ಟು ಜನ ವೈದ್ಯರು ಮತ್ತು ಮಾಧ್ಯಮಗಳು ತಿಳಿಸುತ್ತಲೇ ಇವೆ. ಇದರ ಜೊತೆ ಜೊತೆಗೆ ಉಸಿರಾಟದ ಸರಿಯಾದ ಕ್ರಿಯೇಗಳನ್ನು ಅಭ್ಯಾಸಿಸುವುದರಿಂದ ತಪ್ಪಿಸಿಕೊಳ್ಳಬಹುದಾದ ದೈನಂದಿನ ಅನಾಹುತಗಳ ಬಗ್ಗೆ ತಿಳಿದುಕೊಳ್ಳೊಣ.

ಉಸಿರಾಟದ ಕ್ರಿಯೆಗಳು ನಮಗೆಲ್ಲರಿಗೂ ಅತ್ಯವಶ್ಯಕ. ಇದು ನಮ್ಮ ದೇಹವನ್ನಷ್ಟೇ ಅಲ್ಲದೇ, ಇಡೀ ಜೀವನವನ್ನೆ ತುಂಬಾ ಚೈತನ್ಯದಿಂದ, ಆರೋಗ್ಯದಿಂದ ಬದುಕುವಂತೆ ಮಾಡುತ್ತದೆ. ನಮ್ಮ ದೇಹದಲ್ಲಿನ ಅಂಗಾಂಗಗಳು ಸರಿಯಾಗಿ ಕೆಲಸ ಮಾಡಲು ಜೀವಕೋಶಗಳು ಸರಿಯಾಗಿರಬೇಕು. ಜೀವಕೋಶಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದರೆ ರಕ್ತದ ಮೂಲಕ ಆಮ್ಲಜನಕ ಸರಿಯಾಗಿ ಎಲ್ಲಕಡೆ ಹರಿಯಬೇಕು. ಹಾಗಾಗಿ ಉಸಿರಾಟದ ಮೂಲಕ ಲಭ್ಯವಾಗುವ ಆಮ್ಲಜನಕ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದೇಹಕ್ಕೆ ಸರಿಯಾಗಿ ಆಮ್ಲಜನಕ ದೊರೆಯಬೇಕಾದರೆ ನಮ್ಮ ಉಸಿರಾಟದ ಪ್ರಕ್ರಿಯೆಗಳು ಚೆನ್ನಾಗಿರಲೇಬೇಕು. ಉಸಿರಾಟದ ಈ ಪ್ರಕ್ರಿಯೆಗಳಿಗೆ ತನ್ನದೇ ಆದ ಕೆಲವು ನಿಯಮಗಳಿವೆ. ಅವುಗಳನ್ನು ಗಮನಿಸೋಣ.

ಉಸಿರಾಟದ ಕ್ರಿಯೆ

ಉಸಿರಾಟದ ಕ್ರಿಯೆಗಳನ್ನು ಯಾರು ಅಭ್ಯಾಸಿಸಬಹುದು?

ಕನಿಷ್ಠ 5 ವರ್ಷದ ತಿಳುವಳಿಕೆಯುಳ್ಳ ಮಗುವಿನಿಂದ 100 ವರ್ಷದ ಆರೋಗ್ಯಯುತ ವ್ಯಕ್ತಿಗಳು ಉಸಿರಾಟದ ಕ್ರಿಯೆಗಳ ಅಭ್ಯಾದಲ್ಲಿ ತೊಡಗಬಹುದಾಗಿದೆ. ಅತಿಚಿಕ್ಕ ಮಕ್ಕಳು, ಮಾನಸಿಕ ಅಶ್ವಸ್ಥರು ಅಭ್ಯಾಸದಲ್ಲಿ ತೊಡಗದಿರುವುದೇ ಸೂಕ್ತ. ಮತ್ತು ಗರ್ಭಿಣಿಯರು ಹಾಗೂ ಶಸ್ತ್ರ ಚಿಕಿತ್ಸೆಗೆ ಒಳಪಟ್ಟವರು ವೈದ್ಯರ ಅಥವಾ ಯೋಗ ಶಿಕ್ಷಕರ ಸಲಹೆ ಮೇರೆಗೆ ಉಸಿರಾಟದ  ಕ್ರಿಯೆಗಳನ್ನುಅಭ್ಯಾಸಿಸುವುದು ಒಳ್ಳೆಯದು.

ಉಸಿರಾಟದ ಕ್ರಿಯೆಗಳ ಅಭ್ಯಾಸಕ್ರಮ:

ಇಲ್ಲಿ ಉಸಿರಾಟವನ್ನು ಸಮತೋಲಿತ ರೀತಿಯಲ್ಲಿ ವಿಸ್ತರಿಸಬೇಕು. ಪ್ರತಿ ಉಸಿರಾಟವನ್ನೂ ಹಿಡಿತಕ್ಕೆ ತೆಗೆದುಕೊಂಡು ಅದನ್ನು ಹೇಗೆ ದೀರ್ಘಗೊಳಿಸುವುದೆಂದು ನೋಡೋಣ.

ಕುಳಿತಲ್ಲೇ ಕಣ್ಣುಗಳನ್ನು ಮುಚ್ಚಿ ಕೆಳಗೆ ತಿಳಿಸಿದ ರೀತಿಯಲ್ಲಿ ಉಸಿರಾಟವನ್ನು ಅಭ್ಯಾಸಿಸಬಹುದು.
ಉಚ್ವಾಸ (ಪೂರಕ) : 8 ರಿಂದ 10 ಸೆಕೆಂಡುಗಳ ಕಾಲ.
(ಪ್ರಾರಂಭದಲ್ಲಿ 5 ರಿಂದ 8 ಸೆಕೆಂಡುಗಳ ಕಾಲ)

ನಿಶ್ವಾಸ (ರೇಚಕ) : 8 ರಿಂದ 10 ಸೆಕೆಂಡುಗಳ ಕಾಲ.
(ಪ್ರಾರಂಭದಲ್ಲಿ 5 ರಿಂದ 8 ಸೆಕೆಂಡುಗಳ ಕಾಲ)

ಅಂದರೆ, ಒಂದು ಉಸಿರಾಟವು ಸುಮಾರು 8 ರಿಂದ 10 ಸೆಕೆಂಡುಗಳ ಕಾಲ ತೆಗೆದುಕೊಳ್ಳುವಂತೆ ಗಮನವಹಿಸಬೇಕು. ಇದರರ್ಥ 60 ಸೆಕೆಂಡುಗಳ ಕಾಲ ಅಂದರೆ 1 ನಿಮಿಷದಲ್ಲಿ ಕೇವಲ 6 ಬಾರಿ ದೀರ್ಘವಾದ ಉಸಿರಾಟಗಳು ನಡೆಯಬೇಕು. ಹೀಗೆ ಮಾಡುವಾಗ ನಿಮಿಷಕ್ಕೆ ಸರಾಸರಿ 16 ಬಾರಿ ನಡೆಯುವ ಉಸಿರಾಟ ಕೇವಲ 6 ಕ್ಕೆ ಇಳಿಸಬೇಕು.

ಮನಸ್ಸಿನಲ್ಲೆ 1..2..3..4..5..6..7..8..9..10. ಹೀಗೆ ಒಂದೊಂದು ಸೆಕೆಂಡುಗಳ ಅಂತರದಲ್ಲಿ ಸಂಖ್ಯೆಗಳನ್ನು ಎಣಿಸುತ್ತಾ ಪೂರಕ ಮತ್ತು ರೇಚಕಗಳನ್ನು ನಿಧಾನವಾಗಿ ಅಭ್ಯಾಸ ಮಾಡಿ ಉಸಿರಾಟವನ್ನು ಹದಗೊಳಿಸಬೇಕು. ಉಸಿರಾಟದ ಗತಿಯನ್ನು ಒತ್ತಡ ಪೂರ್ವಕವಾಗಿ ಹೆಚ್ಚಿಸಬಾರದು. ನಿಧಾನವಾಗಿ ಅಭ್ಯಾಸ ಮಾಡುತ್ತಾ ಆರಾಮದಾಯಕವೆನಿಸುವಷ್ಟು ಮಾತ್ರ ದೀರ್ಘಗೊಳಿಸುತ್ತಾ ಹೋಗಬೇಕು. ಆರಂಭದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಕೆಲವರಿಗೆ ಕಷ್ಟವೆನಿಸಿದರು ಏಕಾಗ್ರತೆಯಿಂದ, ಸಮಚಿತ್ತದಿಂದ ನಿಧಾನವಾಗಿ ಅಭ್ಯಾಸ ಮಾಡುತ್ತಾ ಬಂದಾಗ ಉಸಿರಾಟದ ಮೇಲೆ ಪೂರ್ಣ ಹಿಡಿತ ಸಿಗುವುದು.

ಉಸಿರಾಟದ ಪ್ರಕ್ರಿಯೆ  ಮೂಗಿನ ಹೊಳ್ಳೆಗಳ ಮೂಲಕ ನಡೆಯುವಂತೆ ಗಮನವಹಿಸಬೇಕು. ಉಸಿರನ್ನು ದೀರ್ಘವಾಗಿ ಒಳಗೆ ಎಳೆದುಕೊಳ್ಳಲು ಹಾಗೂ ಉಸಿರನ್ನು ಹೊರಗೆ ಬಿಡಲು ನಿಮಗೆ ಸಾಧ್ಯವಾದಷ್ಟು ದೀರ್ಘ ಸಮಯವನ್ನು ತೆಗೆದುಕೊಳ್ಳಬಹುದು. ಇದನ್ನು ಮಾಡುವಾಗ ಶ್ವಾಸಕೋಶಗಳು ಏರು ಪೇರಾಗುವವು. ಅದರ ಬದಲಿಗೆ ನಿಮ್ಮ ಹೊಟ್ಟೆಯ ಭಾಗವು ಇದಕ್ಕೆ ಪ್ರತಿಕ್ರಿಯಿಸುವುದು ಬೇಡ. ಅಂದರೆ ಗಾಳಿಯನ್ನು ಹೊಟ್ಟೆಗೆ ತೆಗೆದುಕೊಂದು ಹಿಡಿದಿಡುವ ಪ್ರಯತ್ನ ಮಾಡಬೇಡಿ. ನೀವು ಉಸಿರನ್ನು ಎಳೆದುಕೊಳ್ಳುವಾಗ ಮತ್ತು ಬಿಡುವಾಗ ಎಷ್ಟು ಸೆಕೆಂಡುಗಳ ಕಾಲ ಹಿಡಿದುಕೊಳ್ಳಬಹುದು ಎಂಬುದನ್ನು ಲೆಕ್ಕಹಾಕಿ. ನಿಧಾನವಾಗಿ ಉಸಿರನ್ನು ಬಿಡಿ. ಈಗ ನಿಮ್ಮ ಉಸಿರನ್ನು ಕೆಲ ಕ್ಷಣಗಳ ಕಾಲ ಹಿಡಿದಿಟ್ಟುಕೊಳ್ಳಿ.ನಿಧಾನವಾಗಿ ಉಸಿರನ್ನು ಬಿಡಿ, ಉಸಿರನ್ನು ಎಳೆದುಕೊಳ್ಳುವಾಗ ಎಷ್ಟು ಸೆಕೆಂಡಗಳ ಕಾಲ ತೆಗೆದುಕೊಂಡಿದಿರೋ, ಆ ಸಂಖ್ಯೆಗೆ ಹೊಂದಾಣಿಕೆ ಮಾಡಿಕೊಂಡು ಉಸಿರನ್ನು ಬಿಡಿ.

ಉಸಿರಾಟದ  ಕ್ರಿಯೆಗಳ ಅಭ್ಯಾಸದಿಂದ ದೊರೆಯುವ ಪ್ರಯೋಜನಗಳು:

pranayama-builds-immunityವೈದ್ಯರ ಹಾಗೂ ಸಂಶೋಧಕರ ಅಭಿಪ್ರಾಯದ ಪ್ರಕಾರ: ಉಸಿರಾಟದ ಕ್ರಿಯೆಗಳ ಅಭ್ಯಾಸದಿಂದ ಒತ್ತಡದಿಂದಾಗಿ ಹುಟ್ಟುವ ಅವ್ಯವಸ್ಥೆಯ ಖಾಯಿಲೆಯ ಚಿಕಿತ್ಸೆಗಳಿಗೆ ಸೂಕ್ತ ಎಂದು ಹೇಳುತ್ತಾರೆ. ಸ್ವಯಂ ಕ್ರಿಯೆಯ ಕಾರ್ಯವನ್ನು ಉಪಯುಕ್ತವಾಗಿಸುವುದು, ಅಸ್ತಮಾ ಖಾಯಿಲೆಯಿಂದ ಬಿಡುಗಡೆ ಮತ್ತು ಆಮ್ಲಜನಕದ ಒತ್ತಡದ ಸ್ಥಿತಿಯ ಬಿಡುಗಡೆಗೆ ಫಲಕಾರಿ ಎನ್ನುತ್ತಾರೆ. ಯೋಗ ನಿರತ ಉಸಿರಾಟದ  ಕ್ರಿಯೆಗಳ ಅಭ್ಯಾಸಿಗಳು ಹೇಳುವ ಹಾಗೆ, ಉಸಿರಾಟದ ಕ್ರಿಯೆಗಳಿಂದಾಗಿ ಮನಸ್ಸು ಹೆಚ್ಚು ಕ್ರಿಯಾಶೀಲವಾಗಿರುವುದಲ್ಲದೇ, ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ನಿರಂತರ ದೀರ್ಘಕಾಲದ ಉಸಿರಾಟದ ಕ್ರಿಯೆಗಳ  ಅಭ್ಯಾಸದಿಂದ ಜೀವನದ ಆಯಸ್ಸನ್ನು ಹೆಚ್ಚಿಸುವುದಲ್ಲದೆ, ಗ್ರಹಿಕೆಯ ಶಕ್ತಿಯ ವೃದ್ಧಿಯಾಗುತ್ತದೆ ಎನ್ನುತ್ತಾರೆ.

1.ಶ್ವಾಸಕೋಶದ ಕಾರ್ಯ ಚಟುವಟಿಕೆ ಹೆಚ್ಚುಸುತ್ತದೆ.

2. ಉಸಿರಾಟದ ಕ್ರಿಯೆಯಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಆಯಾಮಗಳು ಇರುವುದರಿಂದ ಅದು ಶ್ವಾಸಕೋಶವನ್ನು ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಉಸಿರಾಟದ ಸಮಸ್ಯೆ ಮತ್ತು ಅಸ್ತಮಾ ಇರುವವರಿಗೆ ಇದು ತುಂಬಾ ಲಾಭಕಾರಿ.

3. ದೇಹದಿಂದ ವಿಷಕಾರಿ ಅಂಶ ಹೊರಹಾಕುತ್ತದೆ.

4.ಉಸಿರಾಟದ ಕ್ರಿಯೆಯು ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ  ಸಹಾಯಕವಾಗಬಲ್ಲುದು.

5. ಪ್ರತಿರೋಧಕ ವ್ಯವಸ್ಥೆ ಬಲಪಡಿಸುತ್ತದೆ.

6. ಉಸಿರಾಟದ ಕ್ರಿಯೆಯು ನಮ್ಮ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.

7. ಸರಿಯಾದ ಉಸಿರಾಟದ ಕ್ರಿಯೆಗಳ ಅಭ್ಯಾಸದಿಂದ ಆರೋಗ್ಯ ಸುಧಾರಿಸುತ್ತದೆ.

8. ರಕ್ತವನ್ನು ಶುದ್ಧಿಗೊಳಿಸುತ್ತದೆ.

9. ಹೃದಯದ ಆರೋಗ್ಯ ಸುಧಾರಿಸುತ್ತದೆ.

10. ಮಾನಸಿಕ ಏಕಾಗ್ರತೆ ಹೆಚ್ಚಿಸುತ್ತದೆ.

11. ಸೈನುಟಿಸ್ ವಿರುದ್ಧ ಹೋರಾಡುತ್ತದೆ,ಶೀತವನ್ನು ತಡೆಯುತ್ತದೆ.

12. ನಕರಾತ್ಮಕ ಆಲೋಚನೆಗಳನ್ನು ದೂರಗೊಳಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ.

13.  ಖಿನ್ನತೆ ಮತ್ತು ಆತಂಕ ನಿವಾರಿಸುತ್ತದೆ.

14. ಮೂಗಿನ ಭಾಗದಲ್ಲಿನ ಸಮಸ್ಯೆಗಳನ್ನು ದೂರಗೊಳಿಸುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು:

ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ, ಗರ್ಭಿಣಿಯರು, ಶಸ್ತ್ರಚಿಕಿತ್ಸೆಗೆ ಒಳಪಟ್ಟವರು ಹಾಗೂ ಇನ್ನಿತರ ಖಾಯಿಲೆಗಳಿಗೆ ಬಳಲುತ್ತಿರುವವರು ವೈದ್ಯರ ಹಾಗೂ ಯೋಗತಜ್ಞರ ಸಲಹೆಯನ್ನು ಪಡೆದು ಈ ಉಸಿರಾಟದ ಕ್ರಿಯೇಗಳನ್ನು ಅಭ್ಯಾಸಿಸುವುದು ಸೂಕ್ತ.

ನಾಗರಾಜ್ ಆರ್. ಸಾಲೋಳ್ಳಿ - ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ (ರಿ.)

ನಾಗರಾಜ್ ಆರ್. ಸಾಲೋಳ್ಳಿ
ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ (ರಿ.)
#57, ಗುರುಕುಲ ಶಾಲೆ ಸಮೀಪ, ಓಂ ನಗರ,
ಸೇಡಂ ರಸ್ತೆ, ಕಲಬುರಗಿ-585 105
ದೂ. : 9972776062
ಇಮೇಲ್ : bhoomiyogafoundation2016@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!