Health Vision

ದೀಪಾವಳಿ:  ಬೇಡ ಪಟಾಕಿಗಳ ಹಾವಳಿ

ದೀಪಗಳ ಹಬ್ಬ ದೀಪಾವಳಿ ಎಂದಾಕ್ಷಣ ಥಟ್ಟನೆ ನೆನಪಾಗುವುದು ಪಟಾಕಿ-ಸಿಡಿಮದ್ದುಗಳು, ಬಾಣ-ಬಿರುಸುಗಳು. ಈ ಹಬ್ಬದ ವೇಳೆ ಸಾವಿರಾರು ಕೋಟಿ ರೂಪಾಯಿ ಮೌಲ್ಯ ಪಟಾಕಿಗಳು ಸುಡಲ್ಪಡುತ್ತವೆ ಎಂಬುದು ಒಂದು ಅಂದಾಜು. ಇದು ಆಚರಣೆ, ಸಂತೋಷ ಮತ್ತು ಸಂಭ್ರಮದ ಪ್ರತೀಕವಾದರೂ ಈ ಪಟಾಕಿಗಳು ಮತ್ತು ಬಾಣಬಿರುಸುಗಳಿಂದ ಸಂಭವಿಸಿರುವ ಅನಾಹುತ, ದುರಂತಗಳಿಗೆ ಲೆಕ್ಕವಿಲ್ಲ. ಭಾರೀ ಶಬ್ದ ಮಾಡುವ ಅಪಾಯಕಾರಿ ಪಟಾಕಿಗಳನ್ನು ನಿಷೇಧಿಸಲಾಗಿದ್ದು, ಈ ಸಂಬಂಧ ಸ್ಫೋಟಕಗಳ ಕಾಯ್ದೆ ಮತ್ತು ನಿಯಮಗಳು ಎಂಬ ಕಾನೂನೇ ಇದ್ದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ದುರದೃಷ್ಟಕರ. ಉತ್ತಮ ಗುಣಮಟ್ಟದ […]

Read More

ಡಿಪ್ರೆಷನ್…!? ಆತಂಕ ಬೇಡ

ಜೀವನದಲ್ಲಿ ಇಕ್ಕಟ್ಟು, ಕಷ್ಟಗಳು, ಒತ್ತಡಗಳು, ವಿಷಾದ, ಅನಿರೀಕ್ಷಿತ ವಿಪತ್ತುಗಳು ಎದುರಾದಾಗ ‘ಖಿನ್ನತೆ’ ಉಂಟಾಗುವುದು ಸಹಜ. ಇದರಿಂದ ಕೆಲವರು ತಕ್ಷಣದಲ್ಲೇ ಸುಲಭವಾಗಿಯೂ ಎಚ್ಚೆತ್ತುಕೊಳ್ಳುತ್ತಾರೆ. ಆದರೆ, ಇನ್ನೂ ಕೆಲವರಲ್ಲಿ ಗಂಭೀರವಾದ ಸಮಸ್ಯೆಯಾಗಿ ಬೆಳೆಯುತ್ತದೆ. ಇದನ್ನೇ ವೈದ್ಯಕೀಯ ಪರಿಭಾಷೆಯಲ್ಲಿ ‘ಡಿಪ್ರೆಷನ್ ಡಿಸಾರ್ಡರ್ ಎನ್ನುತ್ತಾರೆ. ಇದೇನು ಚಿಕ್ಕ ಸಮಸ್ಯೆಯೆಂದು ಭಾವಿಸಬಾರದು. ಗುಣಮುಖವಾಗದ ವ್ಯಾಧಿ ಕೂಡಾ. ಇದು ಕುಟುಂಬದ ಸಹಕಾರದಿಂದ, ಅಗತ್ಯ ಎನಿಸಿದರೆ ಸೂಕ್ತ ಚಿಕಿತ್ಸೆಯಿಂದ ಮಾತ್ರ ವಿಗುಣರಾಗಬಹುದು. ಆದರೆ ಜೀವನದಲ್ಲಿ ಎಲ್ಲವೂ ಸರಿಯಾಗಿದ್ದರೂ ಡಿಪ್ರೆಷನ್ ಬರಬಹುದು. ಪುರುಷರಿಗಿಂತಲೂ ಮಹಿಳೆಯರಲ್ಲೇ ಹೆಚ್ಚು. ಡಿಪ್ರೆಷನ್ ಮಕ್ಕಳಿಗೂ […]

Read More

ಕುಟುಂಬ ಆರೋಗ್ಯಕರ ಬದುಕಿನ ತಳಹದಿ

ಜನವರಿ 1 ವಿಶ್ವ ಕುಟುಂಬ ದಿನ ಆರೋಗ್ಯ ಪೂರಕ ನೆಮ್ಮದಿಯ ಜೀವನಕ್ಕೆ ಕೌಟುಂಬಿಕ ನೆಮ್ಮದಿಯೂ ಅತ್ಯಗತ್ಯ. ಮನೆಯಲ್ಲಿ ಯಾವುದೇ ಒತ್ತಡ ಇಲ್ಲದೆ, ಉತ್ತಮ ಸಂಬಂಧ ಇದ್ದರೆ ಬದುಕು ನಿರಾಳವಾಗುತ್ತದೆ. ಬಹುತೇಕ ಮಂದಿ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಕೊರಗುತ್ತಿರುತ್ತಾರೆ. `ತಾವು ಕುಟುಂಬದ ಕಡೆ ಗಮನ ನೀಡಲಿಲ್ಲ. ನೀಡಿದ್ದರೆ ಕೊರಗುಗಳನ್ನು ತಪ್ಪಿಸಿಕೊಳ್ಳಬಹುದಿತ್ತು’ ಎಂದು ಮರುಗುತ್ತಾರೆ. ಆದರೆ ಕಳೆದುಹೋದ ಸಂಗತಿ ಬಗ್ಗೆ ಚಿಂತಿಸಿ ಫಲವಾದರೂ ಏನು?. ಆಯಾ ಕಾಲಘಟ್ಟದಲ್ಲಿ ಮಹತ್ವವಿರುವ ಎಲ್ಲ ಸಂಗತಿಗಳ ಬಗ್ಗೆಯೂ ಗಮನಹರಿಸುವುದು ಅಗತ್ಯ. ಈ ರೀತಿ ಮಾಡಿಲ್ಲವೆಂದಾಗ […]

Read More

ಮಳೆ ಮತ್ತು ಆರೋಗ್ಯ

ಸಂಪಾದಕೀಯ ಡಿ.ಎ. ಕಲ್ಪಜ ಪ್ರಧಾನ ಸಂಪಾದಕರು ಮುಂಗಾರು ಋತುವಿನ ವೇಳೆ ಆರೋಗ್ಯಕರವಾಗಿ ಇರಬೇಕಾದರೆ ವಿಶೇಷ ಆರೈಕೆ ಅಗತ್ಯ. ಆರೋಗ್ಯ ದೃಷ್ಟಿಯಿಂದ ಹೇಳುವುದಾದರೆ ಮಳೆಗಾಲ ಆರೋಗ್ಯಕ್ಕೆ ಹಿತಕರವೆಂದು ಪರಿಗಣಿಸಲಾಗಿಲ್ಲ. ವರ್ಷಋತುವಿನಲ್ಲಿ ಮಳೆ ಮತ್ತು ನೀರಿನಿಂದಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ಸುಲಭವಾಗುತ್ತದೆ. ಮಳೆಯೊಂದಿಗೆ ಹಲವಾರು ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಸರಿಯಾದ ಮುನ್ನೆಚ್ಚರಿಕೆ ಕ್ರಮಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೇ ಆರೋಗ್ಯ ರಕ್ಷಣೆಗೆ ಸೂಕ್ತ ಮಾರ್ಗ. ಮಳೆಗಾಲದ ಆತಂಕಗಳು ಮಳೆಗಾಲದಲ್ಲಿ ಕಂಡುಬರುವ ಅನೇಕ ಅನಾರೋಗ್ಯ ಸಮಸ್ಯೆಗಳು ಆತಂಕ ಸೃಷ್ಟಿಸುತ್ತವೆ. ಕೆಮ್ಮು, ನೆಗಡಿ, ಮತ್ತು ವಿಷಮಶೀತ […]

Read More

Back To Top