Vydyaloka

ಪೌರಕಾರ್ಮಿಕರಿಗಾಗಿ ಕ್ಯಾನ್ಸರ್ ಸ್ಕ್ರೀನಿಂಗ್ ಹಾಗೂ ವಾಕಥಾನ್‌ ಆಯೋಜನೆ

ಬೆಂಗಳೂರು: ಕ್ಯಾನ್ಸರ್ ರೋಗಗಳ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಂಕಲ್ಪಚೇಸ್‌ಕ್ಯಾನ್ಸರ್ ಫೌಂಡೇಶನ್ ಮತ್ತುಜವಾಹರ್ ನವೋದಯ ವಿದ್ಯಾಲಯ ಅಲುಮಿನಿ ಅಸೋಸಿಯೇ?ನ್, ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಬೆಂಗಳೂರಿನ ಕಾರ್ಪೊರೇ?ನ್ ಸರ್ಕಲ್‌ನ ಬಿಬಿಎಂಪಿ ಕಚೇರಿಯಲ್ಲಿ ವಾಕಥಾನ್ ಕ್ಯಾನ್‌ವಾಲ್ಕ್ 2020 ಆಯೋಜಿಸಿತ್ತು.

 ಉಪ ಮುಖ್ಯಮಂತ್ರಿ ಡಾ. ಸಿ ಎನ್‌ಅಶ್ವತ್ ನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವ ಶ್ರೀ ಕೆ. ಸುಧಾಕರ್, ಕನ್ನಡ ಬಿಗ್ ಬಾಸ್ ಸೀಸನ್ ೭ ವಿಜೇತ ಶೈನ್ ಶೆಟ್ಟಿ ಮತ್ತು ಮಿಸ್‌ಇಂಡಿಯಾಇಂಟರ್ನ್ಯಾ?ನಲ್ ವಿಜೇತೆ ನಿಶಾ ತಲಮಪಲ್ಲಿಅವರು ಪಾಲ್ಗೊಂಡು 2019 ವಾಕಥಾನ್‌ಅನ್ನು ಉದ್ಘಾಟಿಸಿದರು. ಕ್ಯಾನ್‌ವಾಲ್ಕ್ 2020 ಕ್ಯಾನ್ಸರ್‌ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾದ ಕಾರ್ಯಕ್ರಮವಾಗಿದೆ.

ಪೌರಕರ್ಮಿಕರು ಮತ್ತು ಸಾರ್ವಜನಿಕರಿಗೆ ಮೌಖಿಕ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ ತಪಾಸಣೆ ಮತ್ತು ಸಾಮಾನ್ಯ ತಪಾಸಣೆ ನಡೆಸಲಾಯಿತು, ಅಲ್ಲಿ ಸಂಕಲ್ಪ ಮತ್ತು ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಉಚಿತ ಅಲ್ಟ್ರಾಸೌಂಡ್, ಮ್ಯಾಮೊಗ್ರಾಮ್, ಪ್ಯಾಪ್ ಸ್ಮೀಯರ್ ಪರೀಕ್ಷೆಗಳು, ರೋಗ ನಿರ್ಣಯ ಪರೀಕ್ಷೆಗಳನ್ನು ಒದಗಿಸಿತು. ಹೆಚ್ಚಿನ ಪರೀಕ್ಷೆಗಳು ಮತ್ತು ಚಿಕಿತ್ಸೆಗಳ ಅಗತ್ಯವಿರುವ ರೋಗಿಗಳನ್ನು ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಗೆಚಿಕಿತ್ಸೆಗೆ ಆಗಮಿಸಲು ಸಲಹೆ ನೀಡಲಾಯಿತು.
ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವಅಗತ್ಯತೆಯ ಬಗ್ಗೆ ಮಾತನಾಡಿದ ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಯ ಸರ್ಜಿಕಲ್‌ಆಂಕೊಲಾಜಿಸ್ಟ್ ಮತ್ತು ಸಂಕಲ್ಪಚೇಸ್‌ಕ್ಯಾನ್ಸರ್ ಫೌಂಡೇಶನ್‌ನ ಸ್ಥಾಪಕ ಡಾ. ರಾಜಶೇಖರ್‌ಜಕಾಅವರು, ಡಬ್ಲ್ಯುಎಚ್‌ಒಇತ್ತೀಚಿನ ವರದಿಯಲ್ಲಿ ಪ್ರತಿ 10 ಭಾರತೀಯರಲ್ಲಿಒಬ್ಬರುಕ್ಯಾನ್ಸರ್‌ರೋಗವನ್ನು ಹೊಂದುತ್ತಾರೆ. ಮತ್ತು ಪ್ರತಿ 15 ಮಂದಿ ಕ್ಯಾನ್ಸರ್‌ರೋಗದಿಂದ ಬಳಲುತ್ತಿರುವವರಲ್ಲಿ ಸರಾಸರಿಒಬ್ಬರು ಸಾಯುತ್ತಾರೆ. 2018 ರಲ್ಲಿ ಭಾರತದಲ್ಲಿ 1.16 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 7,84,800 ಕ್ಯಾನ್ಸರ್ ಸಾವುಗಳು ಸಂಭವಿಸಿವೆ. ಜಡ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ, ಬೊಜ್ಜು ಮತ್ತು ಅಜ್ಞಾನವು ಯುವ ಪೀಳಿಗೆಯಲ್ಲಿ ಕ್ಯಾನ್ಸರ್ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಅರಿವಿನ ಕೊರತೆ ಮತ್ತು ಅಜ್ಞಾನವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ವಿಪರ್ಯಾಸವೆಂದರೆ ಇದು ಚಿಕಿತ್ಸೆಯನ್ನು ವಿಳಂಬಗೊಳಿಸುತ್ತದೆ ಮತ್ತು  ಸಾವು ಹೆಚ್ಚುವಂತೆ ಮಡುತ್ತಿದೆ’ ಎಂದರು.
ಉಚಿತ ಸ್ಕ್ರೀನಿಂಗ್ ಕುರಿತು ಬಿಆರ್ ಲೈಫ್‌ನ ಸಮೂಹ ಸಿಇಒ ಕರ್ನಲ್ ಹೇಮರಾಜ್ ಸಿಂಗ್ ಪರ್ಮಾರ್‌ಅವರು ಮಾತನಾಡಿ, ಕ್ಯಾನ್ಸರ್‌ಚಿಕಿತ್ಸೆಯಲ್ಲಿತಡೆಗಟ್ಟುವಿಕೆ ಮತ್ತು ಮುಂಚಿನ ಪತ್ತೆ ಮುಖ್ಯವಾಗಿದೆ. ಆದ್ದರಿಂದ, ಪೌರಕರ್ಮಿಕರಿಗೆಉಚಿತ ಸ್ಕ್ರೀನಿಂಗ್ ಒದಗಿಸಲು ನಾವು ಸಂಕಲ ಹೊಂದಿ ನಮ್ಮ ಸಹಕಾರದ ಹಸ್ತ ಚಾಚಿದ್ದೇವೆ. ಈ ವಾಕಥಾನ್ ಮೂಲಕ ಕ್ಯಾನ್ಸರ್ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಲು ನಾವು ಬಯಸುತ್ತೇವೆ ಮತ್ತುಅವುಗಳನ್ನು ತಡೆಗಟ್ಟುವ ಕಾರಣಗಳು ಮತ್ತು ಮಾರ್ಗಗಳು. ಆಲ್ಕೊಹಾಲ್ ಸೇವನೆ ಮತ್ತು ತಂಬಾಕು ಸೇವನೆಯ ದು?ರಿಣಾಮಗಳ ಬಗ್ಗೆ ಜನರಿಗೆ ತಿಳಿಸಲು ಇದು ಉತ್ತಮ ವೇದಿಕೆಯಾಗಿ ಬಳಸಿಕೊಂಡಿದ್ದೇವೆ’ ಎಂದರು.

Share this: