Vydyaloka

ಆಂಬ್ಯುಲೆನ್ಸ್ ಸೇವೆ – ವಿಮೆಡೋ ಸಂಸ್ಥೆಯೊಂದಿಗೆ ಜೀವ ರಕ್ಷಕ್ ಫೌಂಡೇಷನ್ ಒಪ್ಪಂದ

ಆಂಬ್ಯುಲೆನ್ಸ್ ಸೇವೆ ಪರಿಣಾಮಕಾರಿಯಾಗಿ ತಲುಪಿಸುವ ಆಶಯದಿಂದ ಇದೀಗ ವಿಮೆಡೋ ಸಂಸ್ಥೆಯೊಂದಿಗೆ ಜೀವ ರಕ್ಷಕ್ ಫೌಂಡೇಷನ್ ಕೈಜೋಡಿಸಿದೆ. ತುರ್ತು ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ನಗರಗಳಿಗೆ ವಿಸ್ತರಿಸುವ ಉದ್ದೇಶವಿದೆ. 

ಬೆಂಗಳೂರು ಏಪ್ರಿಲ್ 24: ತುರ್ತು ವೈದ್ಯಕೀಯ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಆಶಯದಿಂದ ಇದೀಗ ವಿಮೆಡೋ ಸಂಸ್ಥೆಯೊಂದಿಗೆ ಜೀವ ರಕ್ಷಕ್ ಫೌಂಡೇಷನ್ ಕೈಜೋಡಿಸಿದೆ. ವಿಮೆಡೋ ಸಂಸ್ಥೆಯು ಪ್ರಸ್ತುತ ತುರ್ತು ವೈದ್ಯಕೀಯ ಸೇವೆ ಒದಗಿಸುತ್ತಿರುವ ಪರಿಣಿತ ಸಂಸ್ಥೆಯಾಗಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕೆಂಬ ಆಶಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಜೀವ ರಕ್ಷಕ್ ಫೌಂಡೇಷನ್, ಲಾಭದ ಉದ್ದೇಶವಿಲ್ಲದೇ ಸಂಘಟನಾತ್ಮಕವಾಗಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ.

ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ, ದೇಶಾದ್ಯಂತ ಆಂಬುಲೆನ್ಸ್ ಸೇವೆಗಳ ಲಭ್ಯತೆ ಗಮನಿಸಿದಾಗ ಆಂಬುಲೆನ್ಸ್ ಪೂರೈಕೆದಾರರು ಅತಿಯಾದ ದರ ವಿಧಿಸುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ಅನ್ಯಾಯ ಆಗುತ್ತಿದೆ ಎನ್ನುತ್ತಾರೆ ಜೀವ ರಕ್ಷಕ್ ಫೌಂಡೇಷನ್ ಟ್ರಸ್ಟಿ ಡಾ. ಅನಿಲ್. ವಿಮೆಡೋ ಸಂಸ್ಥೆ ಹಾಗೂ ಜೀವ ರಕ್ಷಕ್ ಸಂಸ್ಥೆಯ ಆಶಯ ಹಾಗೂ ಉದ್ದೇಶ ಒಂದೇ ಆಗಿದ್ದು, ತುರ್ತು ವೈದ್ಯಕೀಯ ಸೇವೆಗಳನ್ನು ಸಾಮಾನ್ಯ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಒದಗಿಸಲು ವಿಮೆಡೋ ಸೂಕ್ತ ಸಂಸ್ಥೆಯಾಗಿದೆ ಎಂದು ಡಾ. ಅನಿಲ್ ಅಭಿಪ್ರಾಯಪಟ್ಟಿದ್ದಾರೆ.

ಮೂರು ಸಾವಿರ ಆಂಬುಲೆನ್ಸ್ ನೆಟ್‌ವರ್ಕ್ ಲಭ್ಯತೆ ಇದ್ದು, ಈವರೆಗೂ ತುರ್ತು ವೈದ್ಯಕೀಯ ಸೇವೆ ಅವಶ್ಯವಿರುವ 45 ಸಾವಿರಕ್ಕೂ ಹೆಚ್ಚು ಜನರಿಗೆ ಅಗತ್ಯ ನೆರವು ನೀಡಿರುವ ಸಂಸ್ಥೆ ವಿಮೆಡೋ ಆಗಿದೆ ಎನ್ನುತ್ತಾರೆ ವಿಮೆಡೋ ಸಂಸ್ಥೆ ನಿರ್ದೇಶಕ ಎಂ.ಕೆ.ದರ್ಶನ್. ಆಂಬ್ಯುಲೆನ್ಸ್ ಸೇವೆಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವುದು ನಮ್ಮ ಆಶಯ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಸಹಾಯ ಮಾಡುವ ನೈತಿಕ ಹೊಣೆಗಾರಿಕೆ ನಮ್ಮ ಮೇಲಿದೆ. ಜೀವ ರಕ್ಷಕ್ ಫೌಂಡೇಷನ್‌ನೊಂದಿಗೆ ಕೈಜೋಡಿಸುವ ಮೂಲಕ ವಿಮೆಡೋ ಸಂಸ್ಥೆಯು ತುರ್ತು ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಪರಿಣಾಮಕಾರಿ ಕೆಲಸ ಮಾಡಲಿದೆ.

ಪ್ರಸ್ತುತ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಹೈದರಾಬಾದ್, ಚೆನ್ನೈ, ಮುಂಬೈ, ದೆಹಲಿ, ರಾಂಚಿ, ಕೊಲ್ಕತ್ತಾ ನಗರಗಳಲ್ಲಿ ವಿಮೆಡೋ ಸೇವೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ನಗರಗಳಿಗೆ ವಿಸ್ತರಿಸುವ ಉದ್ದೇಶವಿದೆ. ತುರ್ತು ವೈದ್ಯಕೀಯ ಸೇವೆ ಅವಶ್ಯವಿದ್ದಲ್ಲಿ ಕರೆ ಮಾಡಿ ವಿಮೆಡೋ ಸಂಸ್ಥೆ ಸಹಾಯವಾಣಿ: 93431 80000.

Share this: