Health Vision

ನಮ್ಮ ಶರೀರಕ್ಕೆ ರಕ್ಷಣೆ ನೀಡುವ 1,00,000 ಪ್ರೋಟಿನ್‍ಗಳು

ನಮ್ಮ ದೇಹದಲ್ಲಿ ಪ್ರೊಟೀನ್ ನಿರ್ವಹಿಸುವ ಕಾರ್ಯವೇನು ಎಂದು ಯಾರನ್ನಾದರೂ ಪ್ರಶ್ನಿಸಿ ನೋಡಿ, ಅವರಿಗೆ ನಿಮಗೆ ಬರುವ ಉತ್ತರವೆಂದರೆ – ಮಾಂಸಖಂಡಗಳ ನಿರ್ಮಾಣಕ್ಕೆ ಅದು ಅಗತ್ಯವಾಗುತ್ತದೆ. ಆದರೆ, ನಿಮಗೆ ತಿಳಿದಿರಬೇಕಾದ ಸಂಗತಿ ಎಂದರೆ ಪ್ರೊಟೀನ್‍ಗಳು ಅಥವಾ ಜೀವಸತ್ವಗಳು ಬಲಿಷ್ಠ ಮಾಂಸಖಂಡಗಳ ನಿರ್ಮಾಣಕ್ಕೆ ಅಗತ್ಯವಾದ ಪ್ರಮುಖ ಪೋಷಕಾಂಶವಾಗಿದ್ದು, ದೇಹದಲ್ಲಿ ಅದರ ಪಾತ್ರವು ಈ ಕಾರ್ಯಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ನಮ್ಮ ದೇಹದಲ್ಲಿ ಶತಕೋಟಿಗಟ್ಟಲೆ ಕೋಶಗಳಲ್ಲಿ ಪ್ರತಿಯೊಂದರಲ್ಲೂ ಪ್ರೊಟೀನ್‍ಗಳು ಇರುತ್ತವೆ ಹಾಗೂ 1,00,000 ವಿವಿಧ ಪ್ರೊಟೀನ್‍ಗಳಲ್ಲಿ ಪ್ರತಿಯೊಂದು ನಿರ್ವಹಿಸುವ ಕಾರ್ಯವೂ ವಿಭಿನ್ನವಾಗಿರುತ್ತವೆ. ಪ್ರೊಟೀನ್ ಸಮೃದ್ಧ ಆಹಾರ ಸೇವನೆಯಿಂದ ನಿಮಗೆ ಆಗುವ ಉನ್ನತ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ.
ಸದೃಢ ರೋಗ ಪ್ರತಿರೋಧಕ ವ್ಯವಸ್ಥೆ ನಿರ್ಮಾಣ
ನಮ್ಮ ದೇಹವನ್ನು ಹೊರಗಿನ ಆಂಟಿಜೆನ್‍ಗಳು (ಪ್ರತಿಜನಕಗಳು) ಪ್ರವೇಶಿಸುವುದಕ್ಕೆ ಪ್ರತಿಕ್ರಿಯೆಯಾಗಿ ದೇಹದಲ್ಲಿ ಉತ್ಪತ್ತಿಯಾಗುವ ಎಲ್ಲ ಆಂಟಿಬಾಡಿಗಳು (ಪ್ರತಿಕಾಯಗಳು-ಇಮ್ಯೂನೋಗ್ಲೋಬುಲಿನ್‍ಗಳು) ವಿವಿಧ ನಮೂನೆಗಳಲ್ಲಿ ಮಡಿಕೆಯಾಗಿರುವ ಪ್ರೊಟೀನ್‍ಗಳೇ ಆಗಿರುತ್ತವೆ. ಇವುಗಳಿಲ್ಲದೇ ನಿಮ್ಮ ದೇಹದ ರೋಗ ಪ್ರತಿರೋಧಕ ಮತ್ತು ರಕ್ಷಣಾ ವ್ಯವಸ್ಥೆಯು ಕಾರ್ಯನಿರ್ವಹಿಸುವುದೇ ಇಲ್ಲ. ಇವುಗಳು ಸೋಂಕುಗಳು, ರೋಗಗಳಿಂದ ನಿಮ್ಮನ್ನು ದೂರವಿಡುತ್ತವೆ ಹಾಗೂ ರೋಗರುಜಿನಗಳಿಂದ ದೇಹ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಆರೋಗ್ಯಕರ ತೂಕ ನಿರ್ವಹಣೆಗೆ ನೆರವು
ಸದೃಢ ಮಾಂಸಖಂಡ ಸಮೂಹ ನಿರ್ಮಾಣಕ್ಕೆ ಅಗತ್ಯವಾಗಿದ್ದರೂ, ಪ್ರೊಟೀನ್ ಸಮೃದ್ಧ ಆಹಾರವು ಆರೋಗ್ಯಕರ ತೂಕ ಹೊಂದಲು ನೆರವಾಗುತ್ತದೆ. ಇಂಗ್ಲೆಂಡ್‍ನ ಹಾರ್ವಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‍ನ ಸಂಶೋಧಕರಿಂದ ನಡೆಸಲಾದ ಅಧ್ಯಯನ ಪ್ರಕಾರ, ದುರ್ಬಲ ಪ್ರೊಟೀನ್ ಆಹಾರ ಸೇವಿಸುವವರಿಗೆ ಹೋಲಿಸಿದಲ್ಲಿ ಅಧಿಕ ಪ್ರೊಟೀನ್ ಆಹಾರ ಸೇವಿಸುವ ಮಂದಿ ಉತ್ತಮ ರೀತಿಯಲ್ಲಿ ತಮ್ಮ ತೂಕವನ್ನು ನಿರ್ವಹಣೆ ಮಾಡುತ್ತಾರೆ. ಇದಕ್ಕೆ ಕಾರಣ ಏನೆಂದರೆ, ಪ್ರೊಟೀನ್ ಸಮೃದ್ಧ ಆಹಾರಗಳು ಪೂರ್ಣ ಸಂತೃಪ್ತಿಯನ್ನು ಹೆಚ್ಚಿಸಿ ನಿಮ್ಮ ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ. ಆರೋಗ್ಯಕರ ರೀತಿಯಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ತುಂಬಾ ಅಗತ್ಯವಾದ ತೇಳು ಸಮೂಹ ನಿರ್ಮಾಣಕ್ಕೂ ಸಹ ಇದು ನೆರವಾಗುತ್ತದೆ. ನಿಮ್ಮ ಹಸಿವನ್ನು ತಣಿಸುವ ಜೊತೆಗೆ ಆರೋಗ್ಯಕರ ಪ್ರಯೋಜನಗಳನ್ನು ನೀಡುವ ಹಲವು ಪ್ರೊಟೀನ್‍ಗಳು ದೇಹದಲ್ಲಿವೆ.
ಗಾಯ ವಾಸಿಯಾಗಲು ಬೇಕಾಗುವ ಜೀವಸತ್ವಗಳು
ನೀವು ಗಾಯಗೊಂಡಾಗ ಅಥವಾ ದೇಹದ ಯಾವುದೇ ಭಾಗಕ್ಕೆ ಕತ್ತರಿಸಿದಂತೆ ಗಾಯಗಳಾದಾಗ ಎಲ್ಲ ಅಂಟಿಕೊಗುಲೆಂಟ್‍ಗಳು ಆ ಜಾಗಕ್ಕೆ ನುಗ್ಗುತ್ತವೆ. ಇವು ಪ್ರೊಟೀನ್ ಮಾಲಿಕ್ಯುಲ್ (ಜೀವಸತ್ವ ಕಣಗಳು) ಅಲ್ಲದೇ ಮತ್ತೇನೂ ಅಲ್ಲ. ಈ ರೀತಿ ಪ್ರೊಟೀನ್‍ಗಳು ಮುಖ್ಯವಾಗಿ ಅಂಗಾಂಶ ಮತ್ತು ಜೀವಕೋಶಗಳ ದುರಸ್ತಿ ಮತ್ತು ಮರುಬೆಳವಣಿಗೆಗೆ ಸಹಾಯ ಮಾಡುತ್ತವೆ. ಈ ಪ್ರೊಟೀನ್‍ಗಳ ತಯಾರಿಕೆಗೆ ಅಗತ್ಯವಾದ ಅಮೈನೋ ಆಮ್ಲಗಳ ಕೊರತೆ ನಿಮ್ಮ ದೇಹದಲ್ಲಿದ್ದರೆ, ಗಾಯಗಳು ಮತ್ತು ಪೆಟ್ಟುಗಳು ಗುಣಮುಖವಾಗಲು ದೀರ್ಘಕಾಲ ಬೇಕಾಗಲಿದ್ದು, ಸೋಂಕು ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಶಕ್ತಿಗೆ ಬೇಕಾಗುವ ಜೀವಸತ್ವಗಳು
ಶರೀರಕ್ಕೆ ಶಕ್ತಿ ಪೂರೈಸಲು ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿರುವ (ಶರ್ಕರ ಪಿಷ್ಟಗಳು ಮತ್ತು ಕೊಬ್ಬುಗಳು) ಪ್ರೊಟೀನ್‍ಗಳು ಅಗತ್ಯವಾಗಿ ಬೇಕಾಗುತ್ತವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಅಂಕಿ ಅಂಶಗಳ ಪ್ರಕಾರ, ಪ್ರತಿದಿನ ನೀವು ಸೇವಿಸುವ ಆಹಾರದಲ್ಲಿನ ಕ್ಯಾಲೋರಿಗಳಲ್ಲಿ ಪ್ರೊಟೀನ್‍ಗಳ ಪಾಲು ಶೇಕಡ 10 ರಿಂದ 15ರಷ್ಟಿರುತ್ತದೆ. ನೀವು ಸೇವಿಸುವ ಆಹಾರದಲ್ಲಿರುವ ಪ್ರೊಟೀನ್‍ಗಳು ಅಮೈನೋ ಆಮ್ಲಗಳಾಗಿ ವಿಭಜನೆ ಹೊಂದಿ, ಕೋಶಗಳಿಂದ ಅಗತ್ಯವಾಗಿರುವಂತೆ ವಿವಿಧ ರೀತಿಯ ಪ್ರೊಟೀನ್‍ಗಳ ನಿರ್ಮಾಣಕ್ಕೆ ಅಂತಿಮವಾಗಿ ಬಳಕೆಯಾಗುತ್ತವೆ. ಆದರೆ, ಈ ಪ್ರೊಟೀನ್‍ಗಳಲ್ಲಿ ಶೇಕಡ ಹತ್ತರಷ್ಟು ಜೀವಸತ್ವಗಳು ದೇಹದ ವಿವಿಧ ಕಾರ್ಯಗಳಿಗೆ ಶಕ್ತಿ ಸಂಚಯಕ್ಕಾಗಿ ಉಪಯೋಗಿಸಲ್ಪಡುತ್ತದೆ.
ಆರೋಗ್ಯಕರ ಕೂದಲು ಮತ್ತು ಚರ್ಮಕ್ಕಾಗಿ
ನಮ್ಮ ಕೂದಲು ಕೆರಾಟಿನ್ ಎಂದು ಕರೆಯಲ್ಪಡುವ ಪ್ರೊಟೀನ್‍ಗಳ ಸುರುಳಿಯಾಕಾರದ ಎಳೆಗಳ ಕಂತೆಗಳಿಂದ ನಿರ್ಮಾಣವಾಗಿರುತ್ತದೆ. ನೀವು ಸೇವಿಸುವ ಪ್ರೊಟೀನ್ ಸಮರ್ಪಕವಾಗಿಲ್ಲದ್ದಿದ್ದರೆ ಕೂದಲು ಉದುರುವಿಕೆ, ಸ್ಥಿರವಲ್ಲದ ಕೂದಲು, ಕುಂಠಿತ ಕೂದಲು ಬೆಳವಣಿಗೆ ಮತ್ತು ಸೀಳು ಕೂದಲಿನಂಥ ಎಲ್ಲ ರೀತಿಯ ಕೂದಲು ಸಮಸ್ಯೆಗಳನ್ನು ನೀವು ಅನುಭವಿಸಬೇಕಾಗುತ್ತದೆ. ನಿಮ್ಮ ಕೂದಲಿನಂತೆಯೇ ನಿಮ್ಮ ಚರ್ಮದ ಜೀವಕೋಶಗಳೂ ಕೂಡ ಕೊಲಾಜಿನ್ ಎಂದು ಕರೆಯುವ ಫ್ರೈಬೋಸ್ ಪ್ರೋಟಿನ್‍ನಿಂದ ನಿರ್ಮಾಣವಾಗಿರುತ್ತದೆ. ಚರ್ಮ ಜೀವಕೋಶಗಳನ್ನು ಒಟ್ಟಿಗೆ ಹಿಡಿದಿಡಲು ಹಾಗೂ ಅವುಗಳಿಗೆ ದೃಢತೆ ನೀಡಲು ಕೊಲಾಜಿನ್ ಅಗತ್ಯವಾಗಿರುತ್ತದೆ.
ಹೃದಯ ಆರೋಗ್ಯ ರಕ್ಷಣೆ
ಹೃದಯ ಆರೋಗ್ಯ ನಿರ್ವಹಣೆಯಲ್ಲಿ ಪ್ರೊಟೀನ್ ಸಮೃದ್ಧ ಆಹಾರಗಳ ನಿಖರ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದರೂ, ಜಾನ್ ಹಾಪ್‍ಕಿನ್ಸ್ ಮೆಡಿಸಿನ್‍ನಿಂದ ನಡೆಸಲಾದ ಅಧ್ಯಯನವೊಂದರಲ್ಲಿ ಜೀವಸತ್ವ ಸಮೃದ್ಧ ಆಹಾರಗಳು ಹೃದಯ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಎಂದು ತಿಳಿಸಿದೆ. ಅಧಿಕ ಕಾರ್ಬೋಹೈಡ್ರೆಟ್ ಆಹಾರದಿಂದ ಒಂದು ಪ್ರೊಟೀನ್ ಸಮೃದ್ಧ ಆಹಾರಕ್ಕೆ ಪರಿವರ್ತಿತವಾದ ಮಂದಿಯಲ್ಲಿ ಹೃದ್ರೋಗದ ಸಾಧ್ಯತೆಯು ಶೇಕಡ 21ರಷ್ಟು ಕಡಿಮೆಯಾಗಿರುವುದು ಕಂಡುಬಂದಿತು. ಅವರ ಲಿಪಿಡ್ ಪ್ರೊಫೈಲ್ ವಿವರಗಳು ಸಾಕಷ್ಟು ಸುಧಾರಿಸಿ, ರಕ್ತದೊತ್ತಡವೂ ಕಡಿಮೆಯಾಗಿರುವುದು ಪತ್ತೆಯಾಯಿತು.

 

ಡಾ.ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849

Back To Top