ಹೊನಗೊನ್ನೆಸೊಪ್ಪು- ಬಹುರೋಗಗಳಿಗೆ ಮದ್ದು

ಹೊನಗೊನ್ನೆಸೊಪ್ಪು ಬಹುರೋಗಗಳಿಗೆ ಮದ್ದು. ಸಾಮಾನ್ಯವಾಗಿ ರೈತಾಪಿ ವರ್ಗಕ್ಕೆ ತಿಳಿದಿರುವ, ಹೊಲಗಳಲ್ಲಿ ಹೇರಳವಾಗಿ ಬೆಳದಿರುವ ಈ ಸೊಪ್ಪು, ವಿಶೇಷವಾಗಿ ಕಣ್ಣಿನ ರೋಗಗಳಿಗೆ ದಿವ್ಯೌಷಧಿ.

Honagonne-soppuದೇಹದ ಸ್ವಾಸ್ಥ್ಯವು ನಾವು ಸೇವಿಸುವ ಆಹಾರದ ಮೇಲೆ ಬಹಳಷ್ಟು ನಿರ್ಭರವಾಗಿರುತ್ತದೆ. ರುಚಿಕರ-ಹಿತಕರ ಮಾತ್ರವಲ್ಲದೆ ಪೌಷ್ಟಿಕ ಹಾಗೂ ಸಮತೋಲಿತ ಆಹಾರದ ಸೇವನೆ ಅತಿ ಮುಖ್ಯ. ದೇಹಕ್ಕೆ ಅಗತ್ಯವಾದ ಕಾರ್ಬೋಹೈಡ್ರೇಟ್ ಅಂಶವನ್ನು ಅಕ್ಕಿ ಮೊದಲಾದಂತಹ ಏಕದಳ ಧಾನ್ಯಗಳು ನೀಡುತ್ತವೆ, ಪ್ರೊಟೀನ್ ಅಂಶವನ್ನು ತೊಗರಿಬೇಳೆ ಇತ್ಯಾದಿ ದ್ವಿದಳಧಾನ್ಯಗಳು ನೀಡುತ್ತವೆ ಹಾಗೂ ವಿಟಮಿನ್-ಖನಿಜಗಳನ್ನು ತರಕಾರಿಗಳು ಹಾಗೂ ಸೊಪ್ಪುಗಳು ಹೇರಳವಾಗಿ ಹೊಂದಿರುತ್ತವೆ.

ಕಣ್ಣಿನ ರೋಗಗಳಿಗೆ ದಿವ್ಯೌಷಧಿ:

ಸತ್ತ್ವಯುತ, ಪೌಷ್ಟಿಕ, ಬಹು ಉಪಯೋಗಿ, ಸಾಮಾನ್ಯವಾಗಿ ದೊರಕುವಂತಹ, ವಿಶೇಷವಾಗಿ ಕಣ್ಣಿನ ರೋಗಗಳಿಗೆ ದಿವ್ಯೌಷಧಿ ಮತ್ಸ್ಯಾಕ್ಷಿ ಅಥವಾ ಹೊನಗೊನ್ನೆಸೊಪ್ಪು. ಸಾಮಾನ್ಯವಾಗಿ ರೈತಾಪಿ ವರ್ಗಕ್ಕೆ ತಿಳಿದಿರುವ, ಹೊಲಗಳಲ್ಲಿ ಹೇರಳವಾಗಿ ಬೆಳದಿರುವ ಈ ಸೊಪ್ಪು, ಆಯುರ್ವೇದಶಾಸ್ತ್ರದಲ್ಲೂ ಉಲ್ಲೇಖಿತವಾಗಿದೆ. ಹಲವು ಔಷಧೀಯ ಗುಣಗಳನ್ನೊಳಗೊಂಡ ಈ ಸೊಪ್ಪು ಆಹಾರದ ರೂಪದಲ್ಲಿ ಬಹಳವಾಗಿ ಉಪಯೋಗಿಸಲಾಗುತ್ತದೆ.

ಮತ್ಸ್ಯಾಕ್ಷಿ ಅಥವಾ ಮತ್ಸ್ಯಾದನಿ ಎಂಬುದು ಸಂಸ್ಕೃತದ ಹೆಸರು. ಕಹಿ ಮತ್ತು ಕಷಾಯರಸವನ್ನು ಹೊಂದಿರುವ ಈ ಸೊಪ್ಪು, ಪಿತ್ತ, ಕಫದೋಷವನ್ನು ನಿವಾರಿಸುತ್ತದೆ. ಹೊನಗೊನ್ನೆಸೊಪ್ಪನ್ನು ಹಲವು ರೋಗಗಳಲ್ಲಿ ಔಷಧಿಯಾಗಿ ಉಪಯೋಗಿಸಬಹುದು. ಇದು ರೋಗವನ್ನು ನಿಯಂತ್ರಿಸುವುದರೊಂದಿಗೆ ದೇಹದ ವ್ಯಾಧಿಕ್ಷಮತೆಯನ್ನು ವೃದ್ಧಿಸಲು ಬಹಳ ಉಪಯುಕ್ತ.

ಮತ್ಸಾಕ್ಷಿಯು ಶೀತಗುಣ ಹೊಂದಿದ್ದು, ದೇಹದ ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ. ವೈಜ್ಞಾನಿಕವಾಗಿ 5% ಪ್ರೋಟೀನ್ ಹಾಗೂ 16.7 ಮಿ.ಗ್ರಾ ನಷ್ಟು ಕಬ್ಬಿಣಾಂಶವನ್ನು ಹೊಂದಿದ್ದು, ಕಣ್ಣಿನ, ಕೂದಲಿನ ಹಾಗೂ ಚರ್ಮದ ಸ್ವಾಸ್ಥ್ಯಕ್ಕೆ ಹಿತಕರ. ಅಲ್ಲದೆ ಕೆಮ್ಮು, ದಮ್ಮು, ಸಕ್ಕರೆಖಾಯಿಲೆ ಹಾಗೂ ಮೂಲವ್ಯಾಧಿಗೆ ವಿಶೇಷವಾಗಿ ಉಪಯುಕ್ತ.

ವಿಶೇಷ ಉಪಯೋಗಗಳು:
1. ಪ್ರಮುಖವಾಗಿ ಕಣ್ಣಿನ ರೋಗಗಳಾದ ಕೆಟರಾಕ್ಟ್, ಕಣ್ಣಿನ ಉರಿ, ಕಣ್ಣಿನಲ್ಲಿ ನೀರುಸೋರುವಿಕೆ, ದೃಷ್ಟಿದೋಷಕ್ಕೆ ಪರಮೌಷಧ.

2. ಎರಡು ಚಮಚ ಬೇಯಿಸಿದ ಸೊಪ್ಪಿನ ರಸವನ್ನು 45 ದಿನಗಳ ಕಾಲ ಉಪಯೋಗಿಸುವುದರಿಂದ ದೃಷ್ಟಿದೋಷವು ನಿವಾರಣೆಯಾಗುತ್ತದೆ.

3. ಸೊಪ್ಪಿನ ಹೂವುಗಳನ್ನು ಉಪಯೋಗಿಸುವುದರಿಂದ ಕತ್ತಲೆ ಕುರುಡುತನ ನಿವಾರಣೆಯಾಗುತ್ತದೆ.

4. ಸೊಪ್ಪಿನ ರಸವನ್ನು ಎಳ್ಳೆಣ್ಣೆಯಲ್ಲಿ ಸಂಸ್ಕರಿಸಿ ತಲೆಗೆ ಹಚ್ಚಿಕೊಂಡು ನಿತ್ಯ ಅಭ್ಯಂಜನ ಮಾಡುವುದರಿಂದ ಕಣ್ಣಿನ ದೃಷ್ಟಿ ಹಾಗೂ ನೆನಪಿನ ಶಕ್ತಿ ವೃದ್ದಿಗೊಳ್ಳುತ್ತವೆ.

5. ಸೊಪ್ಪಿನ ಪ್ರತಿಯೊಂದು ಭಾಗವೂ ವಿಶೇಷಗುಣವನ್ನು ಹೊಂದಿದ್ದು, ಹಲವು ರೋಗಗಳಿಗೆ ಉಪಯುಕ್ತವಾಗಿದೆ:
ಬೇರುಗಳು – ವಿಶೇಷವಾಗಿ ಉದರವಿಕಾರಗಳಾದ ಹುಳಿತೇಗು, ರಕ್ತವಮನಗಳಲ್ಲಿ ಉಪಯುಕ್ತ.
ಎಲೆಗಳು – ಎಲೆಗಳಿಂದ ತಯಾರಿಸಿದ ಕಷಾಯವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಚರ್ಮದ ತುರಿಕೆಯನ್ನು ನಿವಾರಿಸುತ್ತದೆ ಹಾಗೂ ಚರ್ಮದ ಕಾಂತಿಯನ್ನು ವೃದ್ಧಿಸುತ್ತದೆ.

6. ಸೊಪ್ಪಿನಲ್ಲಿ ನಾರಿನ ಅಂಶವು ಪ್ರಧಾನವಾಗಿದ್ದು, ಸುಮಾರು 75 ಗ್ರಾಮಿನಷ್ಟು ಸೊಪ್ಪನ್ನು ಪ್ರತಿನಿತ್ಯ ಸೇವಿಸುವುದರಿಂದ ರಕ್ತದಲ್ಲಿನ ಶರ್ಕರಾಂಶವನ್ನು ನಿಯಂತ್ರಿಸಬಹುದು.

ಡಾ. ಮಹೇಶ್ ಶರ್ಮಾ ಎಂ.
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
9964022654
email : drsharmamysr@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!