ನಿಮ್ಮ ಮಕ್ಕಳೊಂದಿಗೆ ಸ್ನೇಹದಿಂದಿರಿ

ನಿಮ್ಮ ಮಕ್ಕಳೊಂದಿಗೆ ಸ್ನೇಹದಿಂದಿರಿ. ಪುಟ್ಟ ಮಕ್ಕಳಿಗೆ ಉತ್ತಮ ಗುಣಮಟ್ಟದ ಆರಂಭಿಕ ಶಿಕ್ಷಣ ಮತ್ತು ಮಕ್ಕಳ ಆರೈಕೆ ಅವರ ಆರೋಗ್ಯವನ್ನು ಸುಧಾರಿಸುತ್ತದೆ ಹಾಗೂ ಅವರ ಪ್ರಗತಿ ಮತ್ತು ಕಲಿಕೆಯನ್ನು ಪ್ರವರ್ತನಗೊಳಿಸುತ್ತದೆ.

ನಿಮ್ಮ ಮಕ್ಕಳೊಂದಿಗೆ ಸ್ನೇಹದಿಂದಿರಿ

1. ಮಕ್ಕಳು ಭವಿಷ್ಯದ ಜೀವನದಲ್ಲಿ ಕಷ್ಟಗಳನ್ನು ಎದುರಿಸಲು ಸಮರ್ಥರಾಗುವಂತೆ ಹಾಗೂ ಅತ್ಯಂತ ಬುದ್ದಿವಂತಿಕೆಯಿಂದ ಸಂಕಷ್ಟ ಸನ್ನಿವೇಶಗಳನ್ನು ನಿಭಾಯಿಸಲು ಸಾಧ್ಯವಾಗುವಂತೆ ಮಕ್ಕಳನ್ನು ಪೋಷಕರು ಸಜ್ಜುಗೊಳಿಸಬೇಕು.

2. ಮಕ್ಕಳಲ್ಲಿ ಭಾವನಾತ್ಮಕ, ಶೈಕ್ಷಣಿಕ, ಸಾಮಾಜಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ದಿಗೊಳಿಸುವ ಪ್ರಮುಖ ಜವಾಬ್ದಾರಿ ಪ್ರತಿಯೊಬ್ಬ ಪೋಷಕರದ್ದಾಗಿರುತ್ತದೆ.

3. ತಮ್ಮ ಸಕ್ರಿಯ ಪೋಷಕರ ಅಶೋತ್ತರಗಳಂತೆ ಮಕ್ಕಳು ಕಾಲಕ್ರಮೇಣ ತಮಗೆ ತಾವೇ ಸಜ್ಜುಗೊಳ್ಳುತ್ತಾರೆ.

4. ತಮ್ಮ ಮಕ್ಕಳು ಬುದ್ಧಿವಂತ, ಉಜ್ವಲ, ಚುರುಕು ಮತ್ತು ಕ್ರಿಯಾಶೀಲರಾಗಿರಬೇಕು ಎಂಬುದು ಈ ಜಗತ್ತಿನ ಪ್ರತಿಯೊಬ್ಬ ತಂದೆ-ತಾಯಿಯ ಇಚ್ಚೆಯಾಗಿರುತ್ತದೆ. ನಮ್ಮ ಮಕ್ಕಳು ಕ್ರೀಡಾ, ಹಾಡು-ನೃತ್ಯ ಅಥವಾ ಇತರ ಚಟುವಟಿಕೆಗಳಲ್ಲಿ ಅತ್ಯುತ್ತಮರಾಗಿದ್ದರೂ ಕೂಡ, ಓದಿನಲ್ಲೂ ಮುಂದಿರಬೇಕೆಂದು ನಾವೆಲ್ಲರೂ ಸಾಮಾನ್ಯವಾಗಿ ಬಯಸುತ್ತೇವೆ.

5. ಶಾಲೆಗಳ ತರಗತಿಯಲ್ಲಿ ತಮ್ಮ ಮಕ್ಕಳು ಪ್ರಥಮ ಶ್ರೇಣಿ ಗಳಿಸಲು ಯಾವುದೇ ರೀತಿಯ ಸಹಾಯ ಮಾಡಲು ಪೋಷಕರು ತಯಾರಿರುತ್ತಾರೆ. ಆದರೆ ಕೆಲವು ತಂದೆ-ತಾಯಿಗಳು ತಮ್ಮ ಮಕ್ಕಳು ಚೆನ್ನಾಗಿ ಓದದಿದ್ದರೆ ಅವರನ್ನು ಶಿಕ್ಷಿಸುತ್ತಾರೆ, ಇದು ಸರಿಯಲ್ಲ ಮತ್ತು ದೋಷಪೂರ್ಣ ಧೋರಣೆಯಾಗಿರುತ್ತದೆ. ಮಕ್ಕಳನ್ನು ತಿದ್ದಲು ದಂಡವನ್ನು ಕೈಗೆತ್ತಿಕೊಳ್ಳುವುದು ಸರಿಯಾದ ಮಾರ್ಗವಲ್ಲ. ಮಕ್ಕಳು ದೀರ್ಘಕಾಲದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಅವರನ್ನು ಶಿಕ್ಷಿಸುವುದಕ್ಕಿಂತ, ಉತ್ತಮ ಮಾರ್ಗದಲ್ಲಿ ಪ್ರೇರೇಪಿಸುವುದು ಒಳ್ಳೆಯದು.

6. ನಿಮ್ಮ ಮಕ್ಕಳ ಸಾಮಥ್ರ್ಯ, ಸಮರ್ಥತೆ ಮತ್ತು ದೌರ್ಬಲ್ಯಗಳನ್ನು ಗುರುತಿಸುವುದಕ್ಕಾಗಿ ನೀವು ಅವರಿಗೆ ಪ್ರೋತ್ಸಾಹ ನೀಡಬೇಕು.

7. ನೀನು ಖಂಡಿತಾ ಮಾಡಬಲ್ಲೆ, ಮಾಡಲು ನೀನು ಸಮರ್ಥನಾಗಿರುವೆ ಎಂಬ ನಿಮ್ಮ ಪ್ರೋತ್ಸಾಹದ ನುಡಿಗಳು ಖಂಡಿತಾ ಮ್ಯಾಜಿಕ್ ಮಾಡುತ್ತವೆ. ಮುಂದಿನ ಪರೀಕ್ಷೆಗಳಲ್ಲಿ ನಿಮ್ಮ ಮಕ್ಕಳು ಉತ್ತಮ ಸಾಧನೆ ತೋರುವಂತೆ ನೀವು ಪ್ರೇರೇಪಿಸಬೇಕು. ಅತ್ಯುತ್ತಮ ಸಂಗತಿ ಎಂದರೆ ಆತ್ಮ ವಿಶ್ವಾಸ.

8. ನಿಮ್ಮ ಮಕ್ಕಳು ಶಾಲೆಯಲ್ಲಿ ಏನು ಮಾಡುತ್ತಿದ್ಧಾರೆ ಎಂಬುದನ್ನು ತಿಳಿಯಲು ನೀವು ಆತ/ಆಕೆಯ ನೋಟ್‍ಬುಕ್‍ಗಳು ಮತ್ತು ಡೈರಿಯನ್ನು ಪರಾಮರ್ಶಿಸಬೇಕು. ನಿಮ್ಮ ಮಕ್ಕಳು ಹೋಂವರ್ಕ್ ಮಾಡುವಂತೆ ಪ್ರೇರೇಪಿಸುವಾಗ ನೀವು ಶಾಂತಚಿತ್ತರಾಗಿರಬೇಕು.

9. ನಿಮ್ಮ ಮಕ್ಕಳು ಚೆನ್ನಾಗಿ ಓದದಿದ್ದರೆ ಅವರನ್ನು ಅಧೈರ್ಯಗೊಳಿಸಬಾರದು. ಅವರಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕು. ನಿಮ್ಮ ಎಲ್ಲ ಪ್ರಯತ್ನಗಳ ನಂತರವೂ ನಿಮ್ಮ ಮಕ್ಕಳು ನಿರಾಸಕ್ತಿ ಪ್ರದರ್ಶಿಸಿದರೆ, ನೀವು ತಜ್ಞರು ಮತ್ತು ಶಿಕ್ಷಕರ ನೆರವು ಪಡೆಯಬೇಕು. ಕೊಂಚಮಟ್ಟಿಗೆ ಕಟ್ಟುನಿಟ್ಟಾಗಿ ಹೋಂವರ್ಕ್‍ನನ್ನು ಪೂರ್ಣಗೊಳಿಸುವಂತೆ ನಿಮ್ಮ ಮಕ್ಕಳಿಗೆ ದೃಢವಾಗಿ ಹೇಳಬೇಕು. ಆತ/ಆಕೆ ಕ್ಷಮೆ ಕೇಳಲು ಅಥವಾ ವಾದ ಮಾಡಲು ಅವಕಾಶ ನೀಡಬಾರದು.

10. ತಮ್ಮ ಮಕ್ಕಳು ಹೋಂವರ್ಕ್ ಮಾಡುವಾಗ ಅವರೊಂದಿಗೆ ಕುಳಿತುಕೊಳ್ಳಲು ತಮಗೆ ಸಮಯವೇ ಇರುವುದಿಲ್ಲ ಎಂದು ಅನೇಕ ಪೋಷಕರು ಹೇಳುತ್ತಾರೆ. ನೀವು ಅಡುಗೆ ಮಾಡುವಾಗ ಅಥವಾ ಇತರ ಕೆಲಸ ಮಾಡುವಾಗ ಮಧ್ಯದಲ್ಲಿ ಬಿಡುವು ಮಾಡಿಕೊಂಡು ನಿಮ್ಮ ಮಕ್ಕಳ ಮೇಲ್ವಿಚಾರಣೆ ಮಾಡಬಹುದು. ಆತ/ಆಕೆಯೊಂದಿಗೆ ಪೂರ್ಣವಾಗಿ ಕಾಲ ಕಳೆಯಬೇಕಾದ ಅಗತ್ಯವಿಲ್ಲ, ಅವರು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ನಿಗಾ ವಹಿಸಿದರೆ ಸಾಕು. ಆತ/ಆಕೆಯ ಕೊಠಡಿಯಲ್ಲಿ ಹೋಂವರ್ಕ್ ಮಾಡಲು ಅವಕಾಶ ನೀಡಬೇಡಿ. ನಿಮ್ಮ ಕೊಠಡಿಯಲ್ಲೇ ಒಂದು ಉತ್ತಮ ಅಧ್ಯಯನ ಮೇಜನ್ನು ವ್ಯವಸ್ಥೆಗೊಳಿಸಿ.

11. ತಮ್ಮ ಮಕ್ಕಳ ಅಧ್ಯಯನದಲ್ಲಿ ಪೋಷಕರು ಆಸಕ್ತಿ ತೋರಿದಾಗ ಮಕ್ಕಳಲ್ಲಿ ಕಳಪೆ ಸಾಮಥ್ರ್ಯಕ್ಕೆ ಆಸ್ಪದ ಇರುವುದಿಲ್ಲ. ನಿಮ್ಮ ಮಕ್ಕಳೊಂದಿಗೆ ಓದಿನ ವಿಷಯದಲ್ಲಿ ವ್ಯವಹರಿಸುವಾಗ ಬುದ್ದಿವಂತಿಕೆಯಿಂದ ವರ್ತಿಸಬೇಕು. ಮಕ್ಕಳು ಓದಲು ಗಂಟೆಗಳನ್ನು ನಿಗದಿಗೊಳಿಸಬಾರದು. ಮಕ್ಕಳ ಇಚ್ಚೆಯಂತೆ ಬಿಡಬೇಕು. ಮಕ್ಕಳು ಆರಾಮವಾಗಿದ್ದಾಗ, ಓದಲು ತಿಳಿಸಬೇಕು. ನಿಮ್ಮ ಮಕ್ಕಳೊಂದಿಗೆ ಸ್ನೇಹದಿಂದಿರಿ.

ಡಾ. ದಿನಕರ್- ಮಕ್ಕಳ ತಜ್ಞ  ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ 82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066 ಫೋನ್ : 49069000 Extn: 1147/1366     ಮೊ.: 97422 74849 http://www.vims.ac.in/

ಡಾ. ದಿನಕರ್- ಮಕ್ಕಳ ತಜ್ಞ 

ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 49069000 Extn: 1147/1366     ಮೊ.: 97422 74849
http://www.vims.ac.in/

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!