Vydyaloka

ಸಾಮೂಹಿಕ ಗೋಪೂಜೆ ಮತ್ತು ಪಂಚಗವ್ಯ ಸೇವನೆ

ಬೆಂಗಳೂರು: ಬೆಂಗಳೂರಿನ ಪ್ರಮುಖ ಆಯುರ್ವೇದ ಕೇಂದ್ರವಾಗಿ ಗಮನ ಸೆಳೆಯುತ್ತಿರುವ ತಕ್ಷಣ ಆಯುರ್ವೇದ ಆಸ್ಪತ್ರೆಯಲ್ಲಿ ಸಾಮೂಹಿಕ ಗೋ ಪೂಜೆ ಮತ್ತು ಪಂಚಗವ್ಯ ಸೇವನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೇ 7, ಸೋಮವಾರದಂದು ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಆಯುರ್ವೇದ ಚಿಕಿತ್ಸೆಯಲ್ಲಿ ನಾವು ನಿತ್ಯ ಗೋ ಉತ್ಪನ್ನಗಳನ್ನು (ಹಾಲು, ತುಪ್ಪ, ಬೆಣ್ಣೆ ಇತ್ಯಾದಿ) ಉಪಯೋಗಿಸುತ್ತೇವೆ. ಆದ್ದರಿಂದ ಗೋ ಮಾತೆಗೆ ಕೃತಜ್ಞತೆ ಸಲ್ಲಿಸಲು ಹಾಗೂ ಗೋ ಮಾತೆಯ ಆಶೀರ್ವಾದ ಪಡೆಯಲು ಸಾಮೂಹಿಕ ಗೋ ಪೂಜೆ ಏರ್ಪಡಿಸಲಾಯಿತು. ಜೊತೆಗೆ ಪಂಚಗವ್ಯ ಸೇವನೆ ಆರೋಗ್ಯಕ್ಕೂ ಹಿತಕರ ಎನ್ನುತ್ತಾರೆ ತಕ್ಷಣ ಆಯುರ್ವೇದ ಸಂಸ್ಥೆಯ ಮುಖ್ಯಸ್ಥರಾದ ಡಾ. ಆಶಾಕಿರಣ್.
ಗುಣಮಟ್ಟದ ಆರೋಗ್ಯಕ್ಕಾಗಿ ತಕ್ಷಣವೇ ಔಷಧಿಯನ್ನು ತಯಾರಿಸುವ ಮೂಲಕ ಆಯುರ್ವೇದ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ಮೂಡಿಸಿರುವ ತಕ್ಷಣ ಆಯುರ್ವೇದ ಸಂಸ್ಥೆ, ಪ್ರತಿ ತಿಂಗಳ ಮೊದಲನೆ ಸೋಮವಾರ ಇಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಹೆಚ್ಚಿನ ವಿವರಗಳಿಗೆ: ತಕ್ಷಣ ಆಯುರ್ವೇದ, ಗೋವರ್ಧನ ಬಸ್‍ನಿಲ್ದಾಣದ ಬಳಿ, ತುಮಕೂರು ರಸ್ತೆ, 45/13, ಮಾರಪ್ಪನ ಪಾಳ್ಯ, ಯಶವಂತಪುರ-560022 ದೂ.: 7760104333, 776057533

Share this: