Vydyaloka

ವೈದ್ಯರಿಂದ ಮತದಾನ ಜಾಗೃತಿ

ಬೆಂಗಳೂರು : ಮೇ 12, ಶನಿವಾರದಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ವೈದ್ಯರೊಬ್ಬರು ಪ್ರತಿಯೊಬ್ಬರೂ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ.

ವೈದ್ಯಲೋಕ ಪತ್ರಿಕೆಯ ಲೇಖಕರೂ ಆಗಿರುವ ಬೆಂಗಳೂರಿನ ಡಾ. ಶಾಂತಗಿರಿ ಮಲ್ಲಪ್ಪ ಅವರು ಚುನಾವಣೆ ಘೋಷಣೆಯಾದಾಗಿನಂದಲೂ ಈ ಮತದಾನದ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ತಮ್ಮ `ಶಾಂತಗಿರಿ ಹೆಲ್ತ್ ಕೇರ್’ ಆಸ್ಪತ್ರೆಗೆ ಬರುವ ರೋಗಿಗಳಿಗೆ ನೀಡುವ ಔಷಧ ಚೀಟಿಯಲ್ಲಿ “ದಿನಾಂಕ 12.05.2015ರಂದು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ” ಎಂದು ಮುದ್ರಿಸುವ ಮೂಲಕ ಮತದಾನದ ಮಹತ್ವ ಸಾರಿದ್ದಾರೆ.

ಚುನಾವಣೆ ಘೋಷಣೆಯಾದಾಗಿನಿಂದ ಪ್ರತಿನಿತ್ಯ ಸುಮಾರು 90 ರಿಂದ 100 ರಷ್ಟು ರೋಗಿಗಳಿಗೆ ಮತದಾನದ ಜಾಗೃತಿ ಕುರಿತು ತಿಳುವಳಿಕೆ ನೀಡಿರುವ ಡಾ. ಶಾಂತಗಿರಿ ಮಲ್ಲಪ್ಪ ಅವರು, ಸೋಶಿಯಲ್ ಮೀಡಿಯಾ ಹಾಗೂ ಕರಪತ್ರಗಳ ಮೂಲಕವೂ ಮತದಾನದ ಬಗ್ಗೆ ಅರಿವು ಮೂಡಿಸಿರುವುದು ಪ್ರಶಂಸನೀಯ.

ರಾಜ್ಯ ವೈದ್ಯರ ಕೈ ಬರಹ ಸುಧಾರಕರ ಸಂಘದ ಅಧ್ಯಕ್ಷರೂ ಆಗಿರುವ ಡಾ. ಶಾಂತಗಿರಿ ಮಲ್ಲಪ್ಪ ಅವರು ವಿವಿಧ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವ ಮೂಲಕವೂ ಆರೋಗ್ಯ ತಿಳುವಳಿಕೆ ಮೂಡಿಸುತ್ತಿದ್ದಾರೆ.

Share this: