Health Vision

ವೈದ್ಯರತ್ನ ಪ್ರಕಾಶ್ ಬಾಗಡೆಯವರಿಗೆ ಸನ್ಮಾನ

 

ಹಾಸನ: ಹಾಸನದಲ್ಲಿ ಪಾರಂಪರಿಕ ವೈದ್ಯರ ಸಭೆ ಕಳೆದ ಭಾನುವಾರ, ಫೆಬ್ರವರಿ 11 ರಂದು ನಡೆಯಿತು.
40 ವರ್ಷಗಳಿಂದ ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯ ರತ್ನ ಪ್ರಕಾಶ್ ಬಾಗಡೆಯವರನ್ನು ಸನ್ಮಾನಿಸಲಾಯಿತು. ಸಿ.ಟಿ. ಸ್ಕ್ಯಾನಿಂಗ್ ಸಾಲಗಮೆ ರಸ್ತೆ ಹಾಸನದಲ್ಲಿ ನಡೆದ ಸಭೆಯಲ್ಲಿ ಪಾರಂಪರಿಕ ವೈದ್ಯರ ಸಂಘಟನೆ ಮತ್ತು ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಜನರಲ್ಲಿ ಆರೋಗ್ಯದ ಅರಿವು ಮೂಡಿಸುವ ಜನಪರ ಕಾರ್ಯಕ್ರಮಗಳನ್ನು ಸಂಘಟಿಸುವುದರ ಬಗ್ಗೆಯೂ ಪ್ರಸ್ತಾಪವಾಯಿತು. ವೈದ್ಯ ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಸನ ಪಾರಂಪರಿಕ ವೈದ್ಯ ಪರಿಷತ್ತಿನ ಅಧ್ಯಕ್ಷರಾದ ವೈದ್ಯ ವಿಶ್ವನಾಥ್, ವೈದ್ಯ ಯೋಗೇಶ್ ಪಂಡಿತ್ ಸೇರಿದಂತೆ ಹಲವಾರು ವೈದ್ಯರು ಪಾಲ್ಗೊಂಡಿದ್ದರು.

Back To Top