ಟಿವಿ ಮೊಬೈಲ್‍ನಿಂದ ಮಕ್ಕಳ ಸ್ಮರಣಶಕ್ತಿಗೆ ತೊಂದರೆ

ಬೆಂಗಳೂರಿನಲ್ಲಿ ಜೂನ್ 25, 2018 ರಂದು ನಡೆದ ಆರೋಗ್ಯ ನಂದನ ಮಾಲಿಕೆ ಕಾರ್ಯಕ್ರಮ

ಡಾ. ಪತ್ತಾರ್ಸ್ ಗೋಲ್ಡ್ ಫಾರ್ಮಾದ ಸಹಯೋಗದೊಂದಿಗೆ, ಬೆಂಗಳೂರಿನ ಮೀಡಿಯಾ ಐಕಾನ್, ಬೆಂಗಳೂರಿನ ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ, ಭಾರತ್ ವಿದ್ಯಾನಿಕೇತನ ಶಾಲೆಯಲ್ಲಿ ಜೂನ್ 25ರಂದು ಆರೋಗ್ಯ ನಂದನ – ಮಾಲಿಕೆಯ ಕಾರ್ಯಕ್ರಮ ಸಂಘಟಿಸಿತ್ತು. ಅಂದಿನ ಕಾರ್ಯಕ್ರಮ ಉದ್ಘಾಟಿಸಿದವರು ಮೈಸೂರಿನ ನಾಟಕ ಕಲಾವಿದೆ ಹಾಗೂ ಪ್ರವಾಸಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಉಮಾ ರಮೇಶ್. ಅಧ್ಯಕ್ಷತೆ ವಹಿಸಿದ್ದವರು ಬೆಂಗಳೂರಿನ ನಿವೃತ್ತ ಜವಳಿ ಅಭಯಂತರ, ಕಾಮಧೇನು ಎಜುಕೇಷನಲ್ ಸೇವಾ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಶಂಕರ್ ಶೆಟ್ಟಿ. ಅಂದಿನ ಸಂವಾದದ ವಿಷಯ `ಮಕ್ಕಳ ಏಕಾಗ್ರತೆ ಹಾಗೂ ಸ್ಮರಣಶಕ್ತಿ ಹೆಚ್ಚಳ’.

ಅಂದು ಭಾಗವಹಿಸಿದ್ದ ತಜ್ಞರು – ಹೋಮಿಯೋಪತಿ ಹಾಗೂ ನ್ಯಾಚುರೋಪತಿ ವೈದ್ಯರು, ಗೋಲ್ಡ್ ಫಾರ್ಮಾ ಔಷಧ ಉತ್ಪಾದಕರು ಹಾಗೂ ಬೆಳಗಾಂ ಜಿಲ್ಲೆ ಗುರ್ಲಾಪುರದ (ಮೂಡಲಗಿ) ಶ್ರೀ ಧನ್ವಂತರಿ ಆರೋಗ್ಯ ಧಾಮ ಹಾಗೂ ಸಂಶೋಧನಾ ಕೇಂದ್ರ ನಿಯಮಿತದ ಅಧ್ಯಕ್ಷರಾಗಿರುವ ಡಾ. ಪಿ.ವಿ ಪತ್ತಾರ್ ಹಾಗೂ ಬನಹಟ್ಟಿ-ಬೆಳಗಾಂಗಳ ಹೋಮಿಯೋಪತಿ ತಜ್ಞ ವೈದ್ಯ ಡಾ. ಪ್ರಮೋದ್ ವಿ.ಪತ್ತಾರ್. ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿ ಹಾಗೂ ವೈದ್ಯಲೋಕ-ಹೆಲ್ತ್ ವಿಷನ್ ಪತ್ರಿಕೆಗಳ ಆರೋಗ್ಯನಂದನ ಯೋಜನೆಯ ಕಾರ್ಯಕ್ರಮ ಸಂಯೋಜಕರಾದ ಎನ್.ವ್ಹಿ. ರಮೇಶ್ ಈ ಸಂವಾದ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಈ ಆರೋಗ್ಯ ಮಾಸಿಕಗಳ ವ್ಯವಸ್ಥಾಪಕ ಸಂಪಾದಕರಾದ ಶ್ರೀಕೃಷ್ಣ ಮಾಯ್ಲೆಂಗಿ, ಆಹಾರ ತಜ್ಞ ಪ್ರತಾಪ್, ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಉಷಾ ಶೇಖರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಪಾಲ್ಗೊಂಡಿದ್ದರು.

ರಮೇಶ್ :- ಹೋಮಿಯೋಪತಿ ಅಂದರೆ ಏನು? ಅದು ಇತರ ಆರೋಗ್ಯ ವಿಧಾನಗಳಿಂದ ಹೇಗೆ ಭಿನ್ನವಾಗಿದೆ?.

ಡಾ. ಪಿ.ವಿ. ಪತ್ತಾರ್:- ಆಯುರ್ವೇದದಲ್ಲಿ ಎಲೆ-ನಾರು-ಬೇರುಗಳನ್ನು ಬಳಸಿ ಔಷಧಿ ತಯಾರಿಸ್ತಾರೆ. ಹೋಮಿಯೋಪತಿಯಲ್ಲಿ ರೆಕ್ಟಿಫೈಡ್ ಸ್ಪಿರಿಟ್‍ನಲ್ಲಿ ಇವುಗಳನ್ನು 40-50 ದಿನ ನೆನೆಸ್ತೀವಿ. ಅವುಗಳಿಗೆ ಬೇರೆ ಬೇರೆ ಔಷಧಿಗಳ ಸಾರ ಅಂದರೆ ಎಕ್ಟ್ರ್‍ಕ್ಟಾ ಹಾಕಿ ಬಳಸ್ತೀವಿ.

ರಮೇಶ್:- ಸಾಮಾನ್ಯ ಜನ ಹೇಳೋ ಹಾಗೆ, ಹೋಮಿಯೋಪತಿ ಪದ್ಧತೀಲಿ, ಎಲ್ಲರಿಗೂ-ಎಲ್ಲದಕ್ಕೂ ಚಿಕ್ಕ ಗುಂಡಾದ ಸಕ್ಕರೆ ಗುಳಿಗೇನೇ ಕೊಡ್ತೀರಿ. ಎಲ್ಲಾ ಒಂದೇ ತರಹ ಕಾಣುತ್ತವಲ್ಲ?

ಡಾ. ಪಿ.ವಿ. ಪತ್ತಾರ್:- ಸಕ್ಕರೆ ಜೊತೆಗೆ ಹಾಲಿನಪುಡಿ ಹಾಕಿ ಗುಳಿಗೆ ಮಾಡಿಟ್ಟಾಗ, ಏನೂ ಔಷಧಿ ಅದರೊಳಗೆ ಇರೊಲ.್ಲ ಬೇರೆ ಬೇರೆ ಔಷಧಗಳ ದ್ರವದೊಳಗೆ ಈ ಗುಳಿಗೆಗಳನ್ನು ಅದ್ದಿದಾಗ, ಅವು ಆ ಔಷÀಧಿ ಹೀರಿಕೊಳ್ಳುತ್ತವೆ. ರೋಗಿಯ ರೋಗದ ಲಕ್ಷಣಗಳನ್ನ ವಿವರವಾಗಿ ಕೇಳಿ ರೋಗಕ್ಕೆ ಔಷÀಧಿ ಕೊಡ್ತೀವಿ.
ರಮೇಶ್ ಕೇಳಿದ ಆರೋಗ್ಯ ಎಂದರೇನು ಎಂಬ ಮೂಲಭೂತ ಪ್ರಶ್ನೆಗೆ ಅಲ್ಲಿದ್ದವರು ಉತ್ತರಿಸಿದ್ದು ಹೀಗೆ

ಉಷಾಶೇಖರ್:- ಆರೋಗ್ಯವೇ ಆಸ್ತಿ-ಭಾಗ್ಯ. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಇದು ಅವಶ್ಯ.
ಪಾಲಕರಾದ ಅಂಬಿಕಾ:- ದೇಹದ ಶಕ್ತಿಗೆ ಆರೋಗ್ಯ ಬೇಕು.

ಶಿಕ್ಷಕಿ ಸೌಂದರ್ಯ:- ಪ್ರತಿನಿತ್ಯದ ಚಟುವಟಿಕೆ ಗಳಿಗೆ ಬೇಕಾದ ಶಕ್ತಿಯೇ ಆರೋಗ್ಯ.

ನಿರ್ಮಲಾ ಶಂಕರಶೆಟ್ಟೆ:- ಆರೋಗ್ಯದ ಮೂಲ, ನಾವು ಸೇವಿಸಬೇಕಾದ ಆಹಾರ, ಮುಖ್ಯವಾಗಿ ಹಾಲು- ಹಣ್ಣು, ಸೊಪ್ಪು.

ರವಿಶಂಕರ್:- ನಿವೃತ್ತ ಹಾಗೂ ಹಿರಿಯ ನಾಗರಿಕನಾಗಿ ನನ್ನ ಅನುಭವದಲ್ಲಿ, ಸಮತೋಲನ ಆಹಾರವೇ ಆರೋಗ್ಯ ರಕ್ಷಿಸುತ್ತದೆ.

ಪಾಲಕರಾದ ಕೆ. ಮೊಹನ್:- ಆರೋಗ್ಯವೇ ಆಸ್ತಿ. ಇದು ಬಹಳ ಮುಖ್ಯ. ಶಾರೀರಿಕ ವ್ಯಾಯಾಮ, ಶಾರೀರಿಕ ಶಕ್ತಿ, ಓಟ ಇವುಗಳಿಂದ ಆರೋಗ್ಯ ಬರುತ್ತೆ. ಸುಮ್ಮನೆ ಬರೋಲ್ಲ. ಆರೋಗ್ಯಕ್ಕೆ ಯೋಗ ಒಳ್ಳೆಯದು. ಸಂಪಾದನೆಗಾಗಿ ಆರೋಗ್ಯ ಬೇಕು

ರಮೇಶ್:- ಶಾರೀರಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಚೆನ್ನಾಗಿರುವುದೇ ಆರೋಗ್ಯ.

ಡಾ. ಪಿ.ವಿ. ಪತ್ತಾರ್:- ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಪೂರಕ.

ಡಾ. ಪ್ರಮೋದ:- ಯೋಗ ಆರೋಗ್ಯದ ಸಮತೋಲನ ಮಾಡುತ್ತೆ .

ಶ್ರೀ ಕೃಷ್ಣ ಮಾಯ್ಲೆಂಗಿ:- ಉತ್ತಮ ಆಹಾರ, ಆರೋಗ್ಯಕರ ದೇಹ ಮತ್ತು ಮನಸು ಬಹಳಮುಖ್ಯ. ಇದಕ್ಕಾಗಿ ಮಕ್ಕಳು ಪ್ರತಿನಿತ್ಯ ಆಡಬೇಕು. ನಂತರ ಹೋಂವರ್ಕ್ ಮಾಡಬೇಕು.
ಮಕ್ಕಳ ಬುದ್ಧಿಶಕ್ತಿ ಸ್ಮರಣೆಯ ಬಗ್ಗೆ ಪಾಲಕರು ತಮ್ಮ ಸಮಸ್ಯೆಗಳ ಬಗ್ಗೆ ನಿವೇದಿಸಿದರು.

ಮೋಹನ:- ನನ್ನ ಮಗ 3ನೇ ತರಗತಿ. ಆತನಿಗೆ ಪ್ರಶ್ನೆ ಕೇಳಿದರೆ ಅದೇ ಪ್ರಶ್ನೆಯನ್ನೇ ಮತ್ತೆ ಮತ್ತೆ ಆತ ಹೇಳುತ್ತಾನೆ. ಉತ್ತರ ಹೇಳುವುದಿಲ್ಲ.

ಪತ್ತಾರ್:- ನೀವು ಮಕ್ಕಳಿಗೆ ಮತ್ತೆ ಮತ್ತೆ ಓದಿ, ಓದಿ, ಎಂದು ಹೇಳಬೇಡಿ. ನೀವು ಟಿ.ವಿ ನೋಡುತ್ತ, ಬೇರೆ ಕೋಣೆಯಲ್ಲಿ ಕುಳಿತು, ಆತನಿಗೆ ಬೇರೆ ಕೋಣೆಯಲ್ಲಿ ಓದು ಎಂದು ಹೇಳಿದರೆ ಆತ ಹೇಗೆ ಓದುತ್ತಾನೆ?

ಶಿಕ್ಷಕಿ ರತ್ನ:- ಈ ವಿದ್ಯಾರ್ಥಿ ಚೆನ್ನಾಗಿ ಮಾತಾಡಬಲ್ಲ. ಆದರೆ ಆತ ಸುಮ್ಮನೆ ಕೂತಿರ್ತಾನೆ. ಕಾಪಿ ಮಾಡ್ತಾನೆ. ಬೇರೆ ಮಕ್ಕಳ ಜೊತೆ ಬೆರೆಯಲ್ಲ. ಹೇಳಿದ್ದನ್ನೇ ರಿಪಿಟ್ ಮಾಡ್ತಾನೆ. ಆದರೆ ಫೋನ್ ನಂಬರ್ಸ್ ಹೇಳ್ತಾನೆ.

ಪಾಲಕಿ ಮಮತಾ:- ನನ್ನ ಮಗ ಹೋಂವರ್ಕ್ ಕೊಟ್ಟರೂ ಬರೆಯೋಲ್ಲ. ಹಟ ಮಾಡ್ತಾನೆ. ಬಾರೋ ಓದು ಅಂದ್ರೆ ಟಿ.ವಿ. ನೋಡೋಣ ಅಂತಾನೆ.

ಡಾ. ಪಿ.ವಿ. ಪತ್ತಾರ್:- ನೀವು ತಂದೆ ತಾಯಂದಿರು ಮನೆಯಲ್ಲಿ ಓದುವ ವಾತಾವರಣ ಸೃಷ್ಟಿಸಬೇಕು. ಓದಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕು. ನೀವು ಅಂದರೆ ಪಾಲಕರು, ಮನೆಯ ಹಿರಿಯರು, ಬೆಳಗಿನಿಂದ ರಾತ್ರಿವರೆಗೆ ಟಿ.ವಿ ನೋಡ್ತಾ ಇದ್ದು, ಅದೇ ಮನೇಲಿರೋ ಮಕ್ಕಳನ್ನು, ನೀವು ಮಾತ್ರ ಟಿ.ವಿ ನೋಡಬಾರದು ಅಂದ್ರೆ, ಆ ಮಕ್ಕಳಿಗೆ ಓದಲು ಹೇಗೆ ಪ್ರೇರೇಪಣೆ ಬರಬೇಕು? ಓದೋದು ಹೊರೆ ಅಲ್ಲ. ದಿನಾ ಮಕ್ಕಳು ಊಟ- ನಿದ್ರೆ ಮಾಡುವಂತೆ ಅದಕ್ಕೊಂದು ದಿನಚರಿ ಇರಬೇಕು.

ಶಂಕರಶೆಟ್ಟಿ:- ಮಕ್ಕಳು ಓದಲು ಪಾಲಕರ ಸಮರ್ಪಣೆ ಬೇಕು. ಮಕ್ಕಳಿಗೆ ಏಕಾಗ್ರತೆ ಬರಲು, ಅವರು ಓದಲು ಅವರನ್ನ ಮೊದಲು ಸ್ವಲ್ಪ ಫ್ರೀ ಬಿಡಿ. ಆಮೇಲೆ ಅವರೇನು ಮಾಡ್ತಿದಾರೆ ಗಮನಿಸಿ. ಮಕ್ಕಳು ಓದಬೇಕೂಂತ ಬಯಸೋ ತಂದೆ-ತಾಯಿ, ಅವರ ಓದಿಗೇ ಮಹತ್ವ ಕೊಟ್ಟು, ನಿಮ್ಮ ಟಿ.ವಿ ನೋಡೋ ಆಸೆ ನಿಯಂತ್ರಿಸಬೇಕು.

ಡಾ. ಪ್ರಮೋದ:- ಟಿ.ವಿ.ಲಿ ಏನು ನೋಡ್ತೀರಿ?

ಹುಡುಗ:- ಕಾರ್ಟೂನ್.

ಡಾ. ಪ್ರಮೋದ್:- ಅದರಿಂದ ಏನು ಸಿಗುತ್ತೆ?

ವಿದ್ಯಾರ್ಥಿ ಕಿಶೋರ್:- ಏನೂ ಸಿಗೋಲ್ಲ.

ತಾಯಿ ಅನಿತಾ:- ಮೊಬೈಲ್, ಟಿ.ವಿ ಆಫ್ ಆನ್ ಚೆನ್ನಾಗಿ ಮಾಡ್ತಾನೆ

ಡಾ ಪ್ರಮೋದ್:- ಹಾಗಾದ್ರೆ ಬುದ್ಧಿ ಇದೆ ಎಂದು ತಿಳಿಯಿರಿ. ಸರಿಯಾಗಿ ಉಪಯೋಗಿಸ್ತಿಲ್ಲ ಅಷ್ಟೆ. ಗದರಿಸಬೇಡಿ. ಸ್ವಲ್ಪ ಫ್ರೀಡಂ ಕೊಡಿ. ಮಿತಿ ಇರ್ಲಿ. ಗೊತ್ತಿಲ್ಲದೇ ಮಾಡಿದ್ರೆ ಮೃದುವಾಗಿ ತಿದ್ದಿ ಹೇಳಿ. ಗೊತ್ತಿದ್ದೂ ಅದೇ ತಪ್ಪು ಮತ್ತೆ ಮಾಡಿದರೆ, ಬೈದು ಹೇಳಿ. ಶಾಲೆಯಿಂದ ಬಂದ ಕೂಡಲೇ ಟಿ.ವಿ. ಮುಂದೆ ಕೂರಲು ಬಿಡಬೇಡಿ. ಮೊಬೈಲ್ ಕೊಡಿಸಬೇಡಿ. ಅವರಿಗೆ ಶಾರೀರಿಕ ಚಟುವಟಿಕೆಗಳನ್ನೇ ಮಾಡಲು ಪ್ರೇರೇಪಿಸಿ. ಅವರು ಮನೆ ಹೊರಗೆ ಆಡಲಿ ಓಡಲಿ.

ಆರೋಗ್ಯ ತಜ್ಞರಾದ ಪ್ರತಾಪ್:- ದೇಹಕ್ಕೆ ಶಕ್ತಿ ಬರಲು ವ್ಯಾಯಾಮ ಮಾಡಿ. ಎರಡೂ ಕೈ ಸೇರಿಸಿ ಜೋರಾಗಿ ಚಪ್ಪಾಳೆ ಹೊಡೆಯಿರಿ. ಇದರಿಂದ ದೇಹದಲ್ಲಿ ಶಕ್ತಿ ಬರುತ್ತೆ. ತಾಯಂದಿರು ನಿರ್ಧರಿಸಿದರೆ ಮಕ್ಕಳಿಗಾಗಿ ಟಿ.ವಿ ಬಿಡಿ. ಸಣ್ಣ ವಯಸ್ಸಿನಲ್ಲಿ ಕಲಿತಿದ್ದು ಕೊನೇತನಕ ಉಳಿಯುತ್ತೆ. ಊಟ, ನಿದ್ದೆ, ಓದಿಗೆ ಸರಿಯಾದ ಸಮಯ ನಿಗದಿಪಡಿಸಿ. ಆರೋಗ್ಯಕರ ಆಹಾರವೇ ಎಲ್ಲದಕ್ಕೂ ಮೂಲ.

ಜೊತೆಗೆ ತಾಯಂದಿರು, ಪಾಲಕರು ಮಕ್ಕಳಿಗೆ ಹಾಲು, ತರಕಾರಿ ರಸ, ಗಜ್ಜರಿ ಕೊಡಿ. ಹಸಿ ತೆಂಗಿನಕಾಯಿ ಹಾಲು, ಗೋಡಂಬಿ, ದ್ರಾಕ್ಷಿ, ಏಲಕ್ಕಿ, ಖರ್ಜೂರ ಕೊಡಿ. ತೆಂಗು ಒಳ್ಳೆಯ ಕೊಬ್ಬು. ಎಷ್ಟು ತಿಂತೀರಾ? ಮಕ್ಕಳಿಗೆ ಎಷ್ಟು ತಿನ್ನಿಸಬೇಕು? ನಮ್ಮ ಶಾರೀರಿಕ ಚಟುವಟಿಕೆಗಳೆಷ್ಟು? ನಾವು ತಿಂದು ಕೂತರೆ ಆಗೋಲ್ಲ. ಅಷ್ಟನ್ನೂ ಕರಗಿಸಬೇಕು. ಒಂದು ದಿನಕ್ಕೆ ಪ್ರಯತ್ನಪಟ್ಟು 10 ಹನಿ ಬೆವರು ಸುರಿಸಿ.

ರಮೇಶ:- ಇತ್ತೀಚೆಗೆ ನಾನು ಎಲ್ಲೋ ಓದಿ, ಆ ಬಗ್ಗೆ ಅನೇಕ ಮೂಲಗಳಿಂದ ಹುಡುಕಿ, ತಜ್ಞರೊಂದಿಗೆ ಚರ್ಚಿಸಿ, ತಿಳಿದುಕೊಂಡ ಪ್ರಕಾರ ಹಾಗು ಇತ್ತೀಚೆಗೆ ಕರ್ಮವೀರದಲ್ಲಿ ನಾನು ಬರೆದ ಲೇಖನದಂತೆ, ಜಪಾನೀಯರ ದೀರ್ಘ ಆಯುಷ್ಯದ ಗುಟ್ಟೇನು ಬಲ್ಲಿರಾ? ಅವರ ಆಹಾರ ಪದ್ಧತಿ. ಹಾಲು, ಮೊಸರು, ಬೆಣ್ಣೆ, ತುಪ್ಪ ಇರದ ಆಹಾರ. ಅಂದರೆ ಹಾಲು ಹಾಗೂ ಹಾಲಿನ ವಸ್ತುಗಳು, ಡೈರಿ ಉತ್ಪಾದನೆಗಳು ಅಲ್ಲಿಲ್ಲ. ಬೇಕರಿ ಉತ್ಪಾದನೆಗಳು ಅಲ್ಲಿಲ್ಲ. ಜಂಕ್ ಫುಡ್ ಆಹಾರ ಅಲ್ಲಿಲ್ಲ. ಅವರು ಹೆಚ್ಚು ಹೆಚ್ಚು ಅಣಬೆಗಳನ್ನು ತಿಂತಾರೆ. ಒಂದು ರೀತಿಯ ಅಣಬೆಯಿಂದ ಮೊಸರು ತಯಾರಿಸಿ ತಿಂತಾರೆ.

ಡಾ ಪಿ.ವಿ ಪತ್ತಾರ್ :- ನಿಮ್ಮ ಆರೋಗ್ಯಕ್ಕೆ ಕೆಲವು ಕಿವಿ ಮಾತು ಹೇಳ್ತೀನಿ. ಬೆಳಗ್ಗೆ ಎದ್ದ ತಕ್ಷಣ 100 ಮಿ.ಲಿ. ಬಿಸಿ ನೀರು ಕುಡಿಯಿರಿ. ಬೇಕರಿ, ಡೈರಿ, ಫಾಸ್ಟ್ ಫುಡ್ ಬೇಡ. ಹಸಿ ಮೊಳಕೆಕಾಳು ತಿನ್ನಿ. ಎಲ್ಲಾ ಪ್ರತಿದಿನ ಓಂ ಎಂದು ನಿಗದಿತ ರಾಗ, ಧ್ವನಿಯಲ್ಲಿ ಹೇಳಿ. ಆಗ ಪ್ರಾಣಾಯಾಮದಂತೆ ಆರೋಗ್ಯ ಚೆನ್ನಾಗಿ ಉಳಿಯುತ್ತದೆ.

ಡಾ. ಪ್ರಮೋದ್:- ಚಿಕ್ಕ ಮಕ್ಕಳು ನಾವು ಹೇಳಿದ್ದು ಕೇಳೋಲ್ಲ. ನಾವು ಹೇಗೆ ಇರ್ತಿವೋ, ಏನನ್ನು ಮಾಡ್ತೀವೋ, ಹಾಗೇ ನೋಡಿ ಮಾಡ್ತಾರೆ. ನಮ್ಮಿಂದ ನಮ್ಮ ಕ್ರಿಯೆಗಳಿಂದ ಪ್ರಭಾವಿತರಾಗಿರ್ತಾರೆ. ನೀವು ಶೇಕಡಾ 10 ಮಾಡಿದರೆ, ಅವರು ಅದನ್ನೇ ಶೇಕಡಾ 50 ಮಾಡ್ತಾರೆ. ಆದ್ದರಿಂದ ಪಾಲಕರು ಈ ಬಗ್ಗೆ ಯೋಚಿಸಬೇಕು.

ಉಮಾ ರಮೇಶ:- ಆರೋಗ್ಯವನ್ನು ಎಲ್ಲರೂ ಕಾಪಾಡಿಕೊಳ್ಳಬೇಕು. ಗೃಹಿಣಿಯರು ಮನೆಯಲ್ಲಿ ಇರುವ ತಾಜಾ ತರಕಾರಿ, ಪದಾರ್ಥಗಳಿಂದಲೇ ಪೌಷ್ಠಿಕ ಆಹಾರ ತಯಾರಿಸಿ. ಪ್ರತಿ ದಿನ ವಿಭಿನ್ನ ರುಚಿ ಕೊಡಿ. ಅದೇ ತಿಂಡಿ, ಊಟ ತಯಾರಿಸಿ ಕೊಡಬೇಡಿ, ವಿಭಿನ್ನ ರುಚಿಗಳನ್ನು ಮಕ್ಕಳು ಮೆಚ್ಚುತ್ತಾರೆ.

ರಮೇಶ:- ಅಡಿಗೆ ಮನೆಯೇ ಹಿಂದೆ ಒಂದು ಕುಟುಂಬದ, ಒಂದು ಮನೆಯ ಆರೋಗ್ಯ ಕೇಂದ್ರವಾಗಿತ್ತು. ಅದು ಸದಾ ಬಿಸಿಯಾಗಿ, ಬಿಝಿ ಆಗಿ ಇರ್ತಿತ್ತು. ಒಟ್ಟೂ ಕುಟುಂಬದಲ್ಲಿದ್ದ ಪತ್ನಿ, ಅಕ್ಕತಂಗಿಯರು ಎಲ್ಲರ ಬಯಕೆ, ಕುಟುಂಬದಲ್ಲಿರುವ ಎಲ್ಲರಿಗೂ ತಾಜಾ-ಸ್ವಚ್ಛ-ಆರೋಗ್ಯಕರ ಆಹಾರ ತಯಾರಿಸಿ, ಪ್ರತಿಯೊಬ್ಬರಿಗೂ ಸಂತಸ-ಸಮಾಧಾನ-ಖುಷಿ ನೀಡುವುದಾಗಿತ್ತು. ಬೆಳಗಿನ ಜಾವದಿಂದ ರಾತ್ರಿವರೆಗೆ, ಮನೆ ಮಹಿಳೆಯರಿಗೆ ಅದೇ ಧ್ಯಾನ, ಟಿ.ವಿ ಚಾನೆಲ್, ಅಂತರ್ಜಾಲ, ಮೊಬೈಲ್, ಫೇಸ್ ಬುಕ್ ಈ ತರಹ ಬೇರೆ ಆಕರ್ಷಣೆಗಳು ಇರಲಿಲ್ಲ. ಹೀಗಾಗಿ ಎಲ್ಲ ಮನೇಲೆ ಊಟ ಮಾಡ್ತಿದ್ರು ರುಚಿಕಟ್ಟಾದ ತಾಜಾ ಊಟ, ತಿಂಡಿ ಮಾಡಿ, ಮನೆಯವರೆಲ್ಲರ ಆರೋಗ್ಯ ಚೆನ್ನಾಗಿರ್ತಿತ್ತು.

ಮಕ್ಕಳೇ ದೇವರು ಅಂತ ಚೆನ್ನಾಗಿ ಲಾಲನೆ ಪಾಲನೆ ಮಾಡ್ತಿದ್ರು ಈಗ ಇವರೆಲ್ಲರಿಗೂ ಟಿ.ವಿ- ಮೊಬೈಲ್ ಹುಚ್ಚು. ಸೀರಿಯಲ್ ಸಮಯಕ್ಕೆ ತಮ್ಮ ದಿನಚರಿಯನ್ನು ಹೊಂದಿಸಿಕೊಂಡಿದ್ದಾರೆ. ಅವುಗಳ ಬ್ರೇಕ್‍ಲ್ಲಿ ಮಾತ್ರ ಅಡಿಗೆ ಮನೆಗೆ ವಿಸಿಟ್. ಫ್ರಿಜ್‍ನಲ್ಲಿ ತಂಗಳ ಆಹಾರ. ಇಲ್ಲದಿದ್ದರೆ ಬೇಕರಿ, ಫಾಸ್ಟ್ ಫುಡ್ ಆಹಾರ. ಅಲ್ಲಿ ಕಾಳಜಿಯೂ ಇಲ್ಲ ಆರೋಗ್ಯವೂ ಇಲ್ಲ. ಮಕ್ಕಳಿಗೆ ಅವೆಲ್ಲ ತಿನ್ನುವ ಚಟ. ಟಿ.ವಿ ನೋಡ್ತಾ ಮಕ್ಕಳಿದ್ದಾಗಲೇ ಬೊಜ್ಜು ಬರುತ್ತೆ. ಹೆಚ್ಚು ತಿಂತಿದ್ರೆ ಟಿ.ವಿ ನೋಡ್ತಾ ತಿಂದ್ರೆ, ಮೈಗೆ ಆರೋಗ್ಯ ಹತ್ತದೇ, ಅನಾರೋಗ್ಯ ಡಿಕ್ಕಿ ಹೊಡೆಯುತ್ತೆ. ದೇಹ ಸಶಕ್ತ ಆಗದೇ, ಮನಸ್ಸು ದುರ್ಬಲ ಆದ್ರೆ, ಓದು ತಲೆಗೆ ಹತ್ತೊಲ್ಲ. ಇದ್ದ ಬುದ್ಧೀನೂ ಬಳಕೆ ಆಗೋಲ್ಲ. ಬೇಡದ್ದನ್ನೆಲ್ಲ ತಲೇಲಿ ತುಂಬಿಕೊಂಡ್ರೆ, ಬೇಕಾದ ಓದಿನ ಕಡೆ ಮನಸ್ಸಿನ ಗಮನ ಕೇಂದ್ರೀಕರಣವಾಗೋಲ್ಲ. ಸಮಯವನ್ನು ಸರಿಯಾಗಿ ಬಳಸದಿದ್ರೆ, ಮನಸ್ಸು ಚುರುಕಾಗದೇ ಮಂಕಾಗುತ್ತೆ.

ಶಂಕರ್ ಶೆಟ್ಟಿ:- ದೊಡ್ಡವರು ಒಳ್ಳೇ ಪದ್ಧತಿಯನ್ನು ಅಳವಡಿಸಿಕೊಂಡರೆ ಮಕ್ಕಳು ನಿಮ್ಮ ಪದ್ಧತಿ, ಜೀವನ ಶೈಲಿ ಅನುಕರಿಸ್ತವೆ. ಓದಲು, ಮನಸ್ಸು ಕೇಂದ್ರೀಕರಿಸಲು, ಮತ್ತೆ ಮತ್ತೆ ಮನನ ಮಾಡಲು, ಮನಸ್ಸು ಒಂದೆಡೆ ಗಟ್ಟಿಯಾಗಬೇಕು. ಅಲ್ಲಿ ಮನಸ್ಸು ಚಂಚಲತೆ ಮಾಡೋ, ಬೇರೆ ಆಕರ್ಷಣೆಗಳು ಇರಲೇಬಾರದು. ಪಾಲಕರು ಅವುಗಳನ್ನು ದೂರ ಓಡಿಸಬೇಕು.

ಆರೋಗ್ಯ ತಪಾಸಣೆ

ಈ ಸಂವಾದದ ಸಂದರ್ಭದಲ್ಲಿ ಹಾಗೂ ನಂತರ, ಅಲ್ಲಿಗೆ ಬಂದಿದ್ದ ಅನೇಕ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಯಿತು. ಆ ವಿದ್ಯಾರ್ಥಿಗಳೊಂದಿಗೆ ಡಾ. ಪಿ.ವಿ. ಪತ್ತಾರ್ ಹಾಗೂ ಡಾ. ಪ್ರಮೋದ ಪತ್ತಾರ ವಿವರವಾಗಿ ಮಾತನಾಡಿ, ಅವರ ಆರೋಗ್ಯ ತಪಾಸಣೆ ಮಾಡಿ, ಅವರ ಸಮಸ್ಯೆಗಳನ್ನ ವಿಶ್ಲೇಷಿಸಿದರು. ಬಂದಿದ್ದ ಅನೇಕ ಪಾಲಕರು ತಮ್ಮ ಮಕ್ಕಳ ಓದು- ಸ್ಮರಣ ಶಕ್ತಿ ಬಗ್ಗೆ ಪ್ರಶ್ನಿಸಿ ಉತ್ತರ ಪಡೆದರು. ಈ ಸಂದರ್ಭದಲ್ಲಿ ಗೋಲ್ಡ್ ಫಾರ್ಮಾ ಹೋಮಿಯೋಪತಿ ಔಷಧಿ ಉತ್ಪನ್ನಗಳಲ್ಲಿ, ಮಕ್ಕಳ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಬಗೆಗಿರುವ ಔಷಧಿಗಳನ್ನು ಈ ಮಕ್ಕಳಿಗೆ ಉಚಿತವಾಗಿ ಕೊಟ್ಟು ಈ ಬಗ್ಗೆ ಪಾಲಕರಿಗೆ ಉಚಿತ ಆರೋಗ್ಯ ಸಲಹೆಗಳನ್ನು ನೀಡಿದರು.

ರಮೇಶ್:- ಇಂದು ನೀವು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಟ್ಟಿರೋ ಔಷಧಿಗಳು ಯಾವುವು?

ಡಾ. ಪಿ.ವಿ. ಪತ್ತಾರ್:- ಮೆಮರಿ ಪ್ಲಸ್ ಹಾಗೂ ಬ್ರೈನ್ ಟೋನ್ – 3 ತಿಂಗಳು ಸಂಶೋಧನೆ ಮಾಡಿ ತಯಾರಿಸಿದ ಔಷಧಿಗಳಿವು. ಸರಕಾರದ ಅನುಮತಿ ಪಡೆದೇ ತಯಾರಿಸಿರುವ ಇವುಗಳನ್ನು 25 ವರ್ಷಗಳಿಂದ ತಯಾರಿಸಿ ಜನರಿಗೆ ಕೊಡ್ತಿದೀವಿ

ರಮೇಶ್:- ಇವುಗಳಿಂದ ಯಾವ ರೀತಿ ವಿದ್ಯಾರ್ಥಿಗಳಿಗೆ ಉಪಯೋಗ ಆಗುತ್ತೇಂತೀರಿ?

ಡಾ. ಪಿ.ವಿ. ಪತ್ತಾರ್:- ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಹೆದರಿಕೆ, ಜ್ವರ ಬಂದು, ತಕ್ಷಣ ಓದಿದ್ದು ರೀಕಾಲ್ ಆಗೋಲ್ಲ. ಓದಿದ್ದು ಜ್ಞಾಪಕ ಬರೋಲ್ಲ. ಭಯ ಬಂದಿರುತ್ತೆ. ಇಂತಹ ವಿದ್ಯಾರ್ಥಿಗಳಿಗೆ ಇವು ಉಪಯುಕ್ತ. 25 ವರ್ಷಗಳಿಂದ ಇವುಗಳನ್ನು ಲಕ್ಷಗಟ್ಟಲೆ ವಿದ್ಯಾರ್ಥಿಗಳಿಗೆ ಕೊಟ್ಟಿದೀವಿ.

 

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!