ಪಾಲೆ ಕಷಾಯ ಸೇವನೆ – ತುಳುನಾಡ ಆಟಿ ಅಮಾವಾಸ್ಯೆ  ಸಂಪ್ರದಾಯ

ಪಾಲೆ ಕಷಾಯ ಸೇವನೆ ಸಂಪ್ರದಾಯವಾದರೂ ಇದು ಔಷಧಿ. ತುಳುನಾಡ ಆಟಿ ಅಮಾವಾಸ್ಯೆ  ಸಂಪ್ರದಾಯ ವೈಜ್ಞಾನಿಕವಾಗಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಪಾಲೆ ಕಷಾಯ ಸೇವನೆಯಿಂದ ಉದರ ರೋಗಗಳನ್ನು ನಿಯಂತ್ರಿಸಿಕೊಳ್ಳಬಹುದು.

Ati-Amavasye-Wishesಭಾರತದ ಪ್ರತಿ ಸಂಪ್ರದಾಯ, ಹಬ್ಬ ಹಾಗೂ ಆಚರಣೆಗಳು ತನ್ನದೇ ಆದ ಧಾರ್ಮಿಕ, ಸಾಮಾಜಿಕ, ವೈಚಾರಿಕ ಹಾಗೂ ಆಧ್ಯಾತ್ಮಿಕ ಮಹತ್ವದೊಂದಿಗೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಈ ಆಚರಣೆಗಳನ್ನು ಆಯಾ ಪ್ರದೇಶದ ಹಾಗೂ ಅಲ್ಲಿನ ವಾತಾವರಣದ ಬದಲಾವಣೆಗೆ ತಕ್ಕಹಾಗೆ ರೂಪಿಸಲಾಗಿದೆ.

ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳು ಸಮೃದ್ದವಾದ ತೌಳವ ಸಂಸ್ಕೃತಿಯನ್ನು ತನ್ನ ಒಡಲ್ಲಲ್ಲಿ ಇರಿಸಿಕೊಂಡಿರುವ ತುಳುನಾಡು. ಇಲ್ಲಿಯ ಕಲೆ, ಸಂಸ್ಕೃತಿ, ಆಹಾರ ಹಾಗೂ ನಂಬಿಕೆಗಳು ವಿಶೇಷ ಮತ್ತು ವಿಭಿನ್ನ. ಸ್ಠಳೀಯ ಪೌಷ್ಟಿಕ ಹಾಗೂ ಔಷಧೀಯ ಸಸ್ಯಗಳ ಬಳಕೆ ಇಲ್ಲಿನ ಆಚರಣೆಗಳ ಅವಿಭಾಜ್ಯ ಅಂಗವಾಗಿದೆ. ಇಲ್ಲಿಯ ಜನಾಂಗದವರು ತಮ್ಮ ಆಹಾರ ಹಾಗೂ ಪ್ರಾಥಮಿಕ ಚಿಕಿತ್ಸೆಯನ್ನು ಸ್ಠಳೀಯ ಜೀವವೈವಿಧ್ಯತೆಯಿಂದಲೇ ಹೆಚ್ಚಾಗಿ ಪಡೆಯುತ್ತಾರೆ.

ಪಾಲೆ ಕಷಾಯ ಸೇವನೆ

ಪಾಲೆ ಕಷಾಯ ಸೇವನೆ - ತುಳುನಾಡ ಆಟಿ ಅಮಾವಾಸ್ಯೆ  ಸಂಪ್ರದಾಯಅಂತೆಯೇ ಆಟಿ ಅಥವಾ ಆಷಾಡ ಮಾಸದಲ್ಲಿ ಆಟಿ ಅಮಾವಾಸ್ಯೆಯ ಆಚರಣೆ ಮಾಡಲಾಗುತ್ತದೆ. ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಪಾಲೆ(ತುಳು) ಅಥವಾ ಮದ್ದಾಳೆ (ಕನ್ನಡ) ಕಷಾಯದ ಸೇವನೆಯೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಪಾಲೆ ಮರದ ತೊಗಟೆಯನ್ನು ಶುದ್ದಗೊಳಿಸಿ ಸೂತ್ರವನ್ನು ಕಟ್ಟಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಇದು ಔಷಧೀಯ ಗುಣಗಳನ್ನು ಹೆಚ್ಚಿಸಿ ತನ್ನಲ್ಲಿ ಉಳಿಸಿಕೊಳ್ಳುವುದು ಎಂಬ ನಂಬಿಕೆ. ಮರುದಿನ ಸ್ನಾನಾದಿಕರ್ಮದ ನಂತರ ಸೂರ್ಯೋದಯಕ್ಕೂ ಮುಂಚಿತವಾಗಿ ಕಲ್ಲನ್ನು ಉಪಯೋಗಿಸಿ ಪಾಲೆ ಮರದ ತೊಗಟೆಯನ್ನು ತೆಗೆಯಲಾಗುತ್ತದೆ.

ತೊಗಟೆಯ ಒಳ ಪದರವನ್ನು ಬಿಡಿಸಿ ಕಾಳುಮೆಣಸು, ಜೀರಿಗೆ ಹಾಗೂ ಬೆಳ್ಳುಳ್ಳಿಯೊಂದಿಗೆ ಅರೆದು ಹಾಲಿನಂತಹ ಸಾರವನ್ನು ತಯಾರಿಸಲಾಗುವುದು. ಈ ಕಷಾಯವನ್ನು ಶೋಧಿಸಿ ಸುಮಾರು 30 ಮಿಲಿ ಅಷ್ಟು ಖಾಲಿ ಹೊಟ್ಟೆಯಲ್ಲಿ ಸೇವಿಸಲಾಗುತ್ತದೆ. ವಯಸ್ಸಿಗೆ ಅನುಗುಣವಾಗಿ ಅರ್ಧ ಅಥವಾ ಶೇಕಡ ಕಾಲು ಭಾಗದಷ್ಟು ಮಕ್ಕಳಿಗೆ ನೀಡಲಾಗುತ್ತದೆ. ತದನಂತರ ಅಕ್ಕಿ ಹಾಗೂ ಮೆಂಥ್ಯೆಯಿಂದ ತಯಾರಿಸಿದ ಗಂಜಿಯನ್ನು ಸೇವಿಸಲಾಗುತ್ತದೆ.

ಪಾಲೆ ಕಷಾಯದ ಸೇವನೆ ಸಂಪ್ರದಾಯವಾದರೂ ವೈಜ್ಞಾನಿಕವಾಗಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಕರಾವಳಿಯಲ್ಲಿ ಮಳೆಯ ಪ್ರಾರಂಭದೊಂದಿಗೆ ಹಲವು ಸಾಂಕ್ರಾಮಿಕ ರೋಗಗಳು, ಚರ್ಮರೋಗಗಳು ಕಂಡುಬರುತ್ತದೆ ಅಷ್ಟೇ ಅಲ್ಲದೆ ವಿಪರೀತ ಮಳೆ,ಅಧಿಕ ತೇವಾಂಶ ಹಾಗು ಜೀರ್ಣ ಶಕ್ತಿಯ ಕೊರತೆಯಿಂದಾಗಿ ಈ ಮಾಸದಲ್ಲಿ ದೈಹಿಕ ಶಕ್ತಿ ಹಾಗೂ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಆದುದರಿಂದ ವ್ಯಾಧಿಕ್ಷಮತೆಯನ್ನು ವೃದ್ದಿಸುವ ವಿಶೇಷ ಗುಣವನ್ನು ಹೊಂದಿರುವ ಪಾಲೆ ಕಷಾಯವನ್ನು ವಾರ್ಷಿಕವಾಗಿ ಒಂದು ಸಂಪ್ರದಾಯವಾಗಿ ಸೇವಿಸಲಾಗುತ್ತದೆ. ಅಲ್ಲದೆ ಆಟಿ ಅಮಾವಾಸ್ಯೆಯ ನಂತರದ ದಿನಗಳಲ್ಲಿ ಸಾಲು ಸಾಲಾಗಿ ಬರುವ ಹಬ್ಬ ಆಚರಣೆಗಳಲ್ಲಿ ಅತಿಯಾದ ರುಚಿಕರ ತಿನಿಸುಗಳ ಸೇವನೆಯಿಂದಾಗಿ ಉದರರೋಗಗಳು ಬರುವ ಸಾಧ್ಯತೆ ಇರುತ್ತದೆ. ಅದ್ದರಿಂದ ಮುಂಜಾಗ್ರತೆಯಾಗಿ ಪಾಲೆ ಕಷಾಯ ಸೇವನೆಯಿಂದ ಉದರ ರೋಗಗಳನ್ನು ನಿಯಂತ್ರಿಸಿಕೊಳ್ಳಬಹುದು.

ಔಷಧಿಯ ಗುಣಗಳಿಂದ ಸಮೃದ್ಧ

paale-tree-alstonia-scholaris-ಪಾಲೆ ಕಷಾಯ ಸೇವನೆ - ತುಳುನಾಡ ಆಟಿ ಅಮಾವಾಸ್ಯೆ  ಸಂಪ್ರದಾಯಪಾಲೆ ಅಥವಾ ಮದ್ದಾಳೆ ಕೇವಲ ಜಾನಪದ ಅಥವಾ ಮನೆಮದ್ದಲ್ಲ. ಇದರ ಸಮಸ್ತ ಗುಣ ಉಪಯೋಗದ ಉಲ್ಲೇಖನವನ್ನು ಆಯುರ್ವೇದದಲ್ಲಿ ಕಾಣಬಹುದು. ಏಳು ದಳದ ಎಲೆಯಾಗಿರುವುದರಿಂದ ಸಫ್ತಪರ್ಣ ಎಂದು ಕರೆಯಲಾಗುತ್ತದೆ. ಕಹಿ ಹಾಗೂ ಒಗರು ರಸವನ್ನು ಹೊಂದಿರುವ ಸಪ್ತಪರ್ಣದ ಬೇರು ಹಾಗೂ ತೊಗಟೆ ಔಷಧೀಯ ಗುಣಗಳಿಂದ ಸಮೃದ್ದವಾಗಿದೆ.

1. ಪ್ರಮುಖವಾಗಿ ಸಾಂಕ್ರಾಮಿಕ ರೋಗಗಳಾದ ಜ್ವರ, ಮಲೇರಿಯಾ, ಚರ್ಮರೋಗಗಳು, ಫಂಗಸ್ನ ಸೋಂಕು, ಅರ್ಟಿಕೇರಿಯಾ, ಬೇದಿ ಹಾಗೂ ಅಸ್ತಮಾ ರೋಗಗಳಿಗೆ ದಿವ್ಯ ಔಷಧಿ.

2. ಪಾಲೆ ಕಷಾಯ ರಕ್ತ ಶುದ್ದಿಸುವ ಗುಣಹೊಂದಿದ್ದು ತುರಿಕೆ, ಉರಿ ಇತ್ಯಾದಿ ಚರ್ಮ ರೋಗಗಳಲ್ಲಿ ಉಪಯುಕ್ತ. ಹಾವು ಕಚ್ಚಿದ್ದಲ್ಲಿ ಇದರ ಕಷಾಯವು ಪ್ರತಿ ವಿಷ ಅಥವಾ ಆಂಟಿಡೊಟ್ ಆಗಿ ನೀಡಲಾಗುತ್ತದೆ.

3. ಇದರ ಸೇವನೆಯು ಎದೆಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ.

4. ಪಾಲೆ ಕಷಾಯದ ಕಹಿ ಗುಣದಿಂದಾಗಿ ಜೀರ್ಣಾಂಗವ್ಯೂಹದಲ್ಲಿನ ಜಂತುಗಳನ್ನು ನಾಶಪಡಿಸಿ ಜಠರವನ್ನು ಶುದ್ದಗೊಳಿಸುತ್ತದೆ.

5. ಮಧುಮೇಹದ ಪರಿಣಾಮವಾಗಿ ಉದ್ಭವಿಸುವ ಅತಿ ಮೂತ್ರದ ತೊಂದರೆಗೆ ಇದು ಉಪಯುಕ್ತ.

6. ತೆರೆದ ಗಾಯಗಳಲ್ಲಿ ಇದರ ತೊಗಟೆಯಸಾರವನ್ನು ಹಾಕುವುದರಿಂದ ಗಾಯ ಬೇಗ ಗುಣವಾಗುತ್ತದೆ.

7. ತೊಗಟೆಯನ್ನು ನೀರಿನಲ್ಲಿ ಅರೆದು ಸಂಧುಗಳಲ್ಲಿ ಲೇಪಿಸುವುದರಿಂದ ಸಂಧಿವಾತ ಮುಂತಾದ ವಾಯು ವಿಕಾರಗಳು ಕಡಿಮೆಯಾಗುತ್ತದೆ.

8. ಇತ್ತೀಚಿನ ಸಂಶೋಧನೆಯ ಪ್ರಕಾರ ಕರುಳಿನ ಕಾನ್ಸರ್ ಹಾಗೂ ಕುಷ್ಠರೋಗದಲ್ಲಿ ಇದು ಪರಿಣಾಮಕಾರಿ ಔಷಧಿ.

ಹೀಗೆ ಉತ್ತಮ ಔಷಧ ಗುಣಗಳಿಂದ ಕೂಡಿರುವ ಪಾಲೆ ಅಥವಾ ಸಪ್ತಪರ್ಣ ಕಷಾಯವನ್ನು ಕರಾವಳಿಯಲ್ಲಿ ಮಳೆಗಾಲದ ಪರಿಣಾಮ ಉದ್ಭವಿಸಬಹುದಾದಂತಹ ರೋಗಗಳಿಗೆ ಚಿಕಿತ್ಸೆಯಾಗಿ, ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಹಾಗೂ ದೇಹದ ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಆಟಿ ಅಮಾವಾಸ್ಯೆಯ ಆಚರಣೆಯೊಂದಿಗೆ ಸೇವಿಸಲಾಗುತ್ತದೆ. ಹೀಗೆ ಕಾಲಕ್ಕೆ ಅನುಗುಣವಾದ ಆಹಾರ ಹಾಗೂ ಜೀವನಶೈಲಿಯನ್ನು ಸಾಂಪ್ರದಾಯಿಕ ಆಚರಣೆಗಳ ಮೂಲಕ ಅಳವಡಿಸಲಾಗಿದೆ.

ಡಾ|| ಮಹೇಶ್ ಶರ್ಮ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೆಪಾಳ್ಯ, ಮೈಸೂರು ರಸ್ತೆ, ಬೆಂಗಳೂರು-74
ಮೊ. : 9964022654,  ದೂ. : 080-22718025
ಇಮೇಲ್: drsharmamysr@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!