ತಕ್ಷಣ ಆಯುರ್ವೇದ ಸಂಸ್ಥೆ – ಆಯುರ್ವೇದ ಕ್ಷೇತ್ರದಲ್ಲಿ ಹೊಸ ಪರಿಕಲ್ಪನೆ

ತಕ್ಷಣ ಆಯುರ್ವೇದ ಸಂಸ್ಥೆ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪರಿಕಲ್ಪನೆಯ ಚಿಕಿತ್ಸೆ ರೂಪಿಸಿ  ಈಗಾಗಲೇ ಸಹಸ್ರಾರು ರೋಗಿಗಳ ಬಾಳಲ್ಲಿ ಆಶಾಕಿರಣ ಮೂಡಿಸಿದೆ. ಆದಷ್ಟು ಔಷಧಿಗಳನ್ನು ರೋಗಿಗಳಿಗೆ ಬೇಕಾದಾಗ ತಯಾರಿಸಿ ನೀಡುವುದರಿಂದ ಆಯರ್ವೇದ ತುಂಬಾ ಸ್ಲೋ ಎನ್ನುವ  ಸ್ಥಿತಿಯನ್ನು ಬದಲಾಯಿಸಿ ಆಯುರ್ವೇದಕ್ಕೆ ಹೊಸ ಜೀವ ತರುವುದೇ ತಕ್ಷಣ ಆಯರ್ವೇದದ ಗುರಿ.

ಆಯುರ್ವೇದ ಚಿಕಿತ್ಸೆ ಪಡೆದು ರೋಗಗಳು ಗುಣವಾಗುವುದು ನಿಜವಾದರೂ ಅದಕ್ಕೆ ತುಂಬಾ ಕಾಲ ತಾಳ್ಮೆಯಿಂದ ಇರಬೇಕಾಗುತ್ತದೆ.ಎನ್ನುವುದು ನಮ್ಮಲ್ಲಿ ರೂಢಿಯಾಗಿರುವ ವಿಚಾರ. ಇದಕ್ಕೆ ಕಾರಣಗಳನ್ನು ಹುಡುಕಿ ಮಾಡಿದಂಥ ವರುಷಗಳ ಸಂಶೋಧನೆಯ ಫಲವೇ ತಕ್ಷಣ ಆಯರ್ವೇದ! ರೋಗವು ಶೀಘ್ರದಲ್ಲಿ ಗುಣವಾಗ ಬೇಕೆಂದಲ್ಲಿ ನಾಲ್ಕು ವಿಷಯಗಳು ಸರಿಯಾಗಿ ಹೊಂದಿರಬೇಕೆಂಬದು ಆಯುರ್ವೇದ ಋಷಿಗಳ ಮತ. ಅವುಗಳು, ವೈದ್ಯ, ರೋಗಿ, ಪರಿಚಾರಕ ಮತ್ತು ಔಷಧಿ. ವೈದ್ಯನು ಸಿದ್ಧಾಂತದಲ್ಲಿ ಜ್ಞಾನಿಯಾಗಿದ್ದು ಯೋಗಿಯಂತೆ ರೋಗಿಯ ಸಮಸ್ಯೆಯನ್ನು ತಿಳಿದಿರಬೇಕು, ರೋಗಿಯು ತಜ್ಞರ ಮಾತನ್ನು ಅನುಸರಿಸಬೇಕು, ಪರಿಚಾರಕರೆಂದರೆ ಬಂಧು ಮಿತ್ರರು, ಅವರು ರೋಗಿಗೆ ಸಹಾಯವನ್ನು ಮಾಡಿಕೊಡುವುದು ಮತ್ತು ಸಂತೋಷದ ವಾತಾವರಣವನ್ನು ಒದಗಿಸಿ ಕೊಡಬೇಕು. ಇವುಗಳ ಜೊತೆಗೆ ಔಷಧವು ಅತಿ ಫಲಕಾರಿಯಾಗಿರಬೇಕು.

ಔಷಧವು ಫಲಕಾರಿಯಾಗಬೇಕೆಂದರೆ ಯುಕ್ತವಾದ ಗಿಡಮೂಲಿಕೆಗಳು ಯುಕ್ತ ಪ್ರಮಾಣದಲ್ಲಿ ಸೇರಿಸಿ ಸರಿಯಾದ ಪಾಕವನ್ನು ಹೊಂದಿರಬೇಕು. ಇದರ ಜೊತೆಗೆ ತುಂಬಾ ಮುಖ್ಯವಾದ ವಿಷಯವೇನೆಂದರೆ ಔಷಧಿಯು ತಯಾರಿಸಿ ಆದಷ್ಟು ಕಡಿಮೆ ಸಮಯದಲ್ಲಿ ಅದನ್ನು ಸೇವಿಸಿದರೆ ಅಧಿಕ ಫಲ ಎನ್ನುವುದು. ನಾವು ಕಾಫಿ ಮತ್ತು ಟೀಯನ್ನು ಬೇಕಾದಾಗ ತಯಾರಿಸಿ ಬಳಸುವುದು ಕ್ರಮ, ಯಾಕೆ ? ಅವುಗಳ ರುಚಿ ಮತ್ತು ಶಕ್ತಿ ಅವುಗಳನ್ನು ಆವಾಗಾವಾಗ ತಯಾರಿಸಿ ಕುಡಿಯುವದರಲ್ಲಿದೆ. ಇದೇ ಸಂಗತಿ ಗಿಡಮೂಲಿಕೆಗಳಿಂದ ತಯಾರಿಸಲಾದ ಆಯುರ್ವೇದ ಔಷಧಿಗಳಿಗೂ ಸೇರಿದೆ.

ನಮ್ಮ ಹಳೇ ಕಾಲದಲ್ಲಿ ಋಷಿಮುನಿಯರಾಗಿದ್ದ ವೈದ್ಯರು ರೋಗಿಯನ್ನು ಪರಿಶೀಲಿಸಿದ ನಂತರ ಕಾಡಿನಲ್ಲಿ ಲಭ್ಯವಾದ ಗಿಡಮೂಲಿಕೆಗಳಿಂದ ಔಷಧವನ್ನು ತಯಾರಿಸಿ ಕೊಡುತಿದ್ದರು. ಅದರಿಂದ ರೋಗಿಯ ಸಮಸ್ಯೆಗಳು ಶೀಘ್ರದಲ್ಲಿಯೇ ಗುಣವುಖವಾಗುತ್ತಿತ್ತು. ಕಾಲ ಮುಂದುವರಿದಾಗ ಹಲವು ರೀತಿಯು ಬದಲಾವಣೆಯಾಗಿ ಕಾಷ್ಟೌಷಧಿಗಳನ್ನು ತಯಾರಿಸಿ ಇಟ್ಟು ಮಾಸಗಳು ಮತ್ತು ವರುಷಗಳು ಕಳೆದ ನಂತರ ಉಪಯೋಗಿಸುವ ಸಂಪ್ರದಾಯ ಉಂಟಾಯಿತು, ಜೊತೆಗೆ ಆಯರ್ವೇದ ತುಂಬಾ ಸ್ಲೋ ಎನ್ನುವ ದುಖಕರವಾದ ಖ್ಯಾತಿಯೂ ಜನರ ಮನಸ್ಸಿನಲ್ಲಿ ರೂಢಿಯಾಯಿತು. ಈ ಸ್ಥಿತಿಯನ್ನು ಬದಲಾಯಿಸಿ ಆಯುರ್ವೇದಕ್ಕೆ ಹೊಸ ಜೀವ ತರುವುದೇ ತಕ್ಷಣ ಆಯರ್ವೇದದ ಗುರಿ.

Also Watch : ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಲಹೆಗಳು | How to increase your immunity? 

ಆದಷ್ಟು ಔಷಧಿಗಳನ್ನು ರೋಗಿಗಳಿಗೆ ಬೇಕಾದಾಗ ತಯಾರಿಸಿ ನೀಡುವುದರಿಂದ ರೋಗಗಳು ಬೇಗ ಗುಣವುಖವಾಗುತ್ತದೆ ಮತ್ತು ಚಿಕಿತ್ಸೆಯ ಸಕ್ಸಸ್ ರೇಟ್ ಕೂಡಾ ಹೆಚ್ಚುತ್ತದೆ. ಇದಕ್ಕಾಗಿ ಬೆಂಗಳೂರಿನ ಯಶವಂತಪುರದಲ್ಲಿರುವ ಪೂರ್ಣಾಯು ಬಯೋಸೈನ್ಸ್ ಸಂಸ್ಥೆ ಸರಕಾರದ ಅನುಮತಿಯನ್ನು ಪಡೆದಿದ್ದು, ಹಲವು ಔಷಧಿಗಳನ್ನು ತಯಾರಿಸುತ್ತಿದೆ. ಹಾಗೆಯೇ ತಕ್ಷಣ ಆಯರ್ವೇದ ಎನ್ನುವ ಹೆಸರಿನಲ್ಲಿ ಚಿಕಿತ್ಸಾಲಯವನ್ನೂ ಆರಂಭಿಸಲಾಗಿದ್ದು, ಇಲ್ಲಿ ಅನೇಕ ರೋಗಿಗಳಿಗೆ ತಮ್ಮ ರೋಗಗಳಿಂದ ಶೀಘ್ರ ಹೊರಬರಲು ಸಹಾಯನೀಡಲಾಗುತ್ತಿದೆ. ಸ್ವರಸ, ಕಷಾಯ, ಚೂರ್ಣ, ತೈಲ, ಘೃತ ಮತ್ತು ಲೇಹ್ಯ ರೂಪಗಳಲ್ಲಿ ಔಷಧಗಳನ್ನು ನೀಡಲಾಗುತ್ತದೆ.

ಯಾವುದೇ ಕಾಯಿಲೆ ಉಳ್ಳವರು ತಕ್ಷಣ ಆಯುರ್ವೇದ ಸಂಸ್ಥೆಗೆ ಬಂದು ವೈದ್ಯರನ್ನು ಬೇಟಿ ನೀಡಿ ತಮ್ಮ ನಾಡೀ ಪರೀಕ್ಷೆ ಮತ್ತಿತರ ಪರೀಕ್ಷೆಗಳನ್ನು ಮಾಡಿಸಿದ ನಂತರ ಚಿಕಿತ್ಸೆ ನಿಶ್ಚಯಿಸಲಾಗುತ್ತದೆ. ಮರು ದಿವಸ ಬೇಕಾದ ಔಷಧಗಳನ್ನು ತಯಾರಿಸಿ ಅವರವರ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಇದರಿಂದ ಎಷ್ಟೋ ಜನರು ಈಗಾಗಳೇ ತಮ್ಮ ಹಲವಾರೂ ರೋಗಸಮಸ್ಯೆಗಳಿಂದ ಗುಣವುಖರಾಗಿದ್ದಾರೆ. ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪರಿಕಲ್ಪನೆಯ ಚಿಕಿತ್ಸೆ ರೂಪಿಸಿರುವ ತಕ್ಷಣ ಆಯುರ್ವೇದ ಸಂಸ್ಥೆ ಈಗಾಗಲೇ ಸಹಸ್ರಾರು ರೋಗಿಗಳ ಬಾಳಲ್ಲಿ ಆಶಾಕಿರಣ ಮೂಡಿಸಿದೆ.

Also Watch video: ತಕ್ಷಣ ಆಯುರ್ವೇದ ಆಸ್ಪತ್ರೆ- ನಿಮ್ಮೆಲ್ಲಾ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ 

ತಕ್ಷಣ ಆಯುರ್ವೇದ ಸಂಸ್ಥೆ - ಆಯುರ್ವೇದ ಕ್ಷೇತ್ರದಲ್ಲಿ ಹೊಸ ಪರಿಕಲ್ಪನೆ
ಡಾ. ಆಶಾಕಿರಣ್ &  ಡಾ. ಮಾನಸ ಭಟ್

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ತಕ್ಷಣ ಆಯುರ್ವೇದ
#45, ಇಂಡಸ್ಟ್ರಿಯಲ್ ಸಬ್‍ಅರ್ಬ್,ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಹತ್ತಿರ

ಯಶವಂತಪುರ, ಬೆಂಗಳೂರು-560022
ದೂ.: 87220 34900 / 70266 19822

http://www.tatkshana.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!