ಸ್ತನ ಹಾಗೂ ಗರ್ಭದ್ವಾರ ಕ್ಯಾನ್ಸರ್ – ಮಹಿಳೆಯರನ್ನು ಕಾಡುವ ಅತ್ಯಂತ ಸಾಮಾನ್ಯ ಕ್ಯಾನ್ಸರ್‌

ಸ್ತನ ಹಾಗೂ ಗರ್ಭದ್ವಾರ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಕ್ಯಾನ್ಸರ್‌ಗಳಲ್ಲಿ ಅತ್ಯಂತ ಸಾಮಾನ್ಯವೆನಿಸಿದೆ. ಜೊತೆಗೆ ಆತಂತಕಾರಿಯೂ ಹೌದು. ಇದರ ಬಗ್ಗೆ ತಿಳಿವಳಿಕೆ, ಕಾಳಜಿಯ ಕೊರತೆಯಿಂದಲೇ ರೋಗಪತ್ತೆ ತಡವಾಗಿ, ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚಿನ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ.

cancer-in-women

ಸ್ತನ ಹಾಗೂ ಗರ್ಭದ್ವಾರ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಕ್ಯಾನ್ಸರ್‌ಗಳಲ್ಲಿ ಅತ್ಯಂತ ಸಾಮಾನ್ಯವೆನಿಸಿದೆ. ಜೊತೆಗೆ ಆತಂತಕಾರಿಯೂ ಹೌದು. ಇದರ ಬಗ್ಗೆ ತಿಳಿವಳಿಕೆ, ಕಾಳಜಿಯ ಕೊರತೆಯಿಂದಲೇ ರೋಗಪತ್ತೆ ತಡವಾಗಿ, ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚಿನ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ‘ಆರೋಗ್ಯವೇ ಭಾಗ್ಯ’ ಎಂಬುದಾಗಿ ನಮ್ಮ ಹಿರಿಯರು ಹೇಳಿರುತ್ತಾರೆ. ಮಹಿಳೆಯರಲ್ಲಿ ಆರೋಗ್ಯದ ಅದರಲ್ಲೂ ತಮ್ಮ ಆರೋಗ್ಯದ ಬಗ್ಗೆ ತಿಳಿವಳಿಕೆಯಾಗಲೀ, ಕಾಳಜಿಯಾಗಲೀ ಬಹಳ ಕಡಿಮೆ. ಹಾಗಾಗಿ ಮಹಿಳೆಯರು ಅದರಲ್ಲೂ ನಲವತ್ತು (40) ವರ್ಷ ಮೀರಿದವರು ಮಾರಕ ರೋಗಗಳಾದ ಸ್ತನ ಹಾಗೂ ಗರ್ಭದ್ವಾರದಲ್ಲಿ ಉಂಟಾಗುವ ಕ್ಯಾನ್ಸರ್ ವ್ಯಾಧಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಇದು ವಿಶ್ವದಾದ್ಯಂತ ಆತಂಕ ತರುವ ಸಂಗತಿಗಳಾಗಿವೆ.

ಅದರಲ್ಲೂ ಭಾರತದಲ್ಲಿ ಸ್ತನದ ಕ್ಯಾನ್ಸರ್ ಸಾವಿನ ಕಾರಣದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಗರ್ಭದ್ವಾರದ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ೧.೭ ದಶಲಕ್ಷ ಮಹಿಳೆಯರು ಸ್ತನದ ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ. ನಮ್ಮ ದೇಶವೊಂದರಲ್ಲೇ ೨೦೧೫ರ ಅಂದಾಜಿನ ಪ್ರಕಾರ 1,55,000  ಜನರಲ್ಲಿ ಹೊಸದಾಗಿ ವ್ಯಾಧಿಯ ಪತ್ತೆಯಾಗಿದ್ದು ೭೬,೦೦೦ ಜನರನ್ನು ಬಲಿ ತೆಗೆದುಕೊಂಡಿದೆ. ಅದರಲ್ಲೂ ಹಳ್ಳಿಯಲ್ಲಿ ನೆಲಸಿರುವವರಲ್ಲಿ ಅತಿ ಹೆಚ್ಚು.

ಗರ್ಭದ್ವಾರದ ಕ್ಯಾನ್ಸರ್ ಸಂಖ್ಯೆಯೂ ನಮ್ಮ ದೇಶದಲ್ಲಿ ಅದರಲ್ಲೂ ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ಮಹಿಳೆಯರ ಸಾವಿಗೆ ಎರಡನೇ ಬಹುಮುಖ್ಯ ಕಾರಣವಾಗಿದೆ. ವಿಶ್ವದಾದ್ಯಂತ 5,10,000 ಹೊಸದಾಗಿ ಪತ್ತೆಯಾಗಿದ್ದು, 2,88,000 ಜನರು ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ ಗರ್ಭದ್ವಾರದ ಕ್ಯಾನ್ಸರ್‌ನಿಂದ ಸಾಯುತ್ತಿರುವವರ ಸಂಖ್ಯೆ ಪ್ರತಿ 8 ನಿಮಿಷಕ್ಕೆ ಒಬ್ಬರಾದರೆ, ಸ್ತನದ ಕ್ಯಾನ್ಸರ್‌ನಿಂದ ಪ್ರತಿ ಮೂವರಲ್ಲಿ (1:3) ಒಬ್ಬರು ಸಾಯುತ್ತಿದ್ದಾರೆ.

ಸ್ತನದ ಕ್ಯಾನ್ಸರ್:

ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಅದರಲ್ಲೂ ಉತ್ತರ ಅಮೆರಿಕಾ, ಬ್ರೆಜಿಲ್, ಬೆಲ್ಜಿಯಂ, ಫ್ರಾನ್ಸ್ ದೇಶಗಳಲ್ಲಿ ಹೆಚ್ಚು. ಆದರೆ ಸೂಕ್ತ ವಿಧಾನಗಳಿಂದ ಆರಂಭದ ಹಂತದಲ್ಲಿ ಈ ವ್ಯಾಧಿಯನ್ನು ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಶೇ.೮೯ ರಷ್ಟು ಜನರನ್ನು ಸಾವಿನ ಬಾಯಿಯಿಂದ ರಕ್ಷಿಸಿದ್ದಾರೆ ಹಾಗೂ ರೋಗ ಪತ್ತೆಯಾದ ಐದು ವರ್ಷದ ನಂತರವೂ ಆರೋಗ್ಯಕರ ಜೀವನ ಮುಂದುವರೆಸುವಂತೆ ಮಾಡಿದ್ದಾರೆ. ಭಾರತದಲ್ಲಿ ಇದು ಮಹಿಳೆಯರಲ್ಲಿ ನಂಬರ್-೧ ಮಾರಕ ರೋಗವಾಗಿರುವುದಕ್ಕೆ ಕಾರಣ ಆರಂಭದ ಹಂತದಲ್ಲಿ ರೋಗವನ್ನು ಪತ್ತೆ ಮಾಡದೇ ಉಲ್ಬಣ ಸ್ಥಿತಿಯಲ್ಲಿ ಗುರುತಿಸುವುದರಿಂದ ಚಿಕಿತ್ಸೆಯ ಫಲಕಾರಿಯಾಗುತ್ತಿಲ್ಲ.

ಸ್ತನದ ಕ್ಯಾನ್ಸರ್ಗೆ ಕಾರಣಗಳು:

1) ಹಾರ್ಮೋನ್‌ಗಳು

2) ಸ್ಥೂಲಕಾಯ ಅದರಲ್ಲೂ ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ಕೊಬ್ಬಿನಂಶದ ಶೇಖರಣೆ

3) ಮಾದಕ ಪದಾರ್ಥ ಅದರಲ್ಲೂ ಮದ್ಯದ ಸೇವನೆ

4) ವಯಸ್ಕರಲ್ಲಿ ಎತ್ತರದ ಹೆಚ್ಚಳ

5) ಮಗುವಿಗೆ ಮೊಲೆಯೂಡಿಸದಿರುವುದು

6) ಅನುವಂಶೀಯ ಕಾರಣಗಳು (15%) ಗಳ ಪರಿವರ್ತನೆ.

ಆರಂಭದ ಹಂತದಲ್ಲಿ ಸ್ತನದ ಕ್ಯಾನ್ಸರ್ ಪತ್ತೆ ಹೆಚ್ಚುವುದು ಹೇಗೆ?

1. ಪ್ರತಿಯೊಬ್ಬ ಮಹಿಳೆಯೂ ತನ್ನ ಸ್ತನವನ್ನು ತಾನೇ ತಿಂಗಳಿಗೊಮ್ಮೆ ಪರೀಕ್ಷಸಿಕೊಳ್ಳಬೇಕು. ಇದಕ್ಕೆ ಸ್ವಸ್ತನ ಪರೀಕ್ಷೆ ಎಂದು ಹೇಳುತ್ತಾರೆ. ಇದರ ಸೂಕ್ತ ವಿಧಾನವನ್ನು ವೈದ್ಯರಿಂದ / ಆರೋಗ್ಯ ಕಾರ್ಯಕರ್ತರಿಂದ / ಇಂಟರ್‌ನೆಟ್ ಮುಖಾಂತರ ತಿಳಿಯಬಹುದು.

2. ಪರೀಕ್ಷಾ ಸಮಯದಲ್ಲಿ ಸ್ತನಗಳಲ್ಲಾಗಲೀ, ಕಂಕುಳಲ್ಲಾಗಲೀ ಗಂಟುಗಳು ಕಂಡುಬಂದಲ್ಲಿ ವೈದ್ಯರಿಂದ ತಡಮಾಡದೇ ಪರೀಕ್ಷೆ ಮಾಡಿಸಿಕೊಳ್ಳಬೇಕು.

3. ವೈದ್ಯರಿಂದ ವರ್ಷಕ್ಕೊಮ್ಮೆ ಸ್ತನ ಹಾಗೂ ಗರ್ಭದ್ವಾರಗಳ ಪರೀಕ್ಷೆ ಮಾಡಿಸಿಕೊಳ್ಳಬೇಕು.

4. Mammography ಎಂಬ ಕ್ಷಕಿರಣ ಪರೀಕ್ಷೆಯಿಂದ ಸ್ತನದ ಕ್ಯಾನ್ಸರ್ ಆರಂಭದಲ್ಲಿ ಗುರುತಿಸಲ್ಪಡುತ್ತದೆ. 40 ವರ್ಷ ಮೀರಿದ ಮಹಿಳೆಯರು ಅಗತ್ಯವಾಗಿ ಮಾಡಿಸಬೇಕಾದ ಪರೀಕ್ಷೆ ಇದು.

Also Read: ಸ್ತನ್ಯಪಾನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ

ಗರ್ಭದ್ವಾರದ ಕ್ಯಾನ್ಸರ್:

ಕಾರಣ: HPV ಎಂಬ ವೈರಾಣುವಿನ ಸಂಪರ್ಕದಿಂದ ಗರ್ಭದ್ವಾರದಲ್ಲಿರುವ ಜೀವಕೋಶಗಳ ಬದಲಾವಣೆಯಿಂದ ಉಂಟಾಗುವ ತೊಂದರೆ ಇದು. ಸಂಭೋಗದ ಸಮಯದಲ್ಲಿ ವೈರಾಣು ಗರ್ಭದ್ವಾರದ ಪ್ರವೇಶ ಪಡೆಯುತ್ತದೆ. HPV ವೈರಸ್‌ನಲ್ಲಿ ನೂರಕ್ಕೂ ಹೆಚ್ಚು ತಳಿಗಳಿದ್ದು ಎಲ್ಲವೂ ಕ್ಯಾನ್ಸರ್ ರೋಗಕ್ಕೆ ಕಾರಣವೆಂದು ಕಂಡುಹಿಡಿಯಲ್ಪಟ್ಟಿದೆ.

ಪರಿಹಾರ: ವರ್ಷಕ್ಕೆ ಒಮ್ಮೆಯಾದರೂ, 30 ವರ್ಷ ಮೇಲ್ಪಟ್ಟ ಮಹಿಳೆಯರು PAP test  ವೈದ್ಯರಿಂದ ಮಾಡಿಸಿಕೊಳ್ಳಬೇಕು. ಆರಂಭದಲ್ಲಿ ರೋಗ ಪತ್ತೆ ಮಾಡಲು ಹಾಗೂ ಕ್ಯಾನ್ಸರ್ ಹಂತಕ್ಕೆ ತಲುಪದಂತೆ ಚಿಕಿತ್ಸೆ ನೀಡಲು ಇದು ಸಹಕಾರಿ. PAP test  ಸಾಧಾರಣ ಪರೀಕ್ಷೆಯಾಗಿದ್ದು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ.

HPV Vaccine  ಈಚೆಗೆ ಬಂದಿರುವುದರಿಂದ ೯ ರಿಂದ ೪೫ ವರ್ಷದವರೆಗಿನವರು ಈ ಲಸಿಕೆಯನ್ನಿ ಹಾಕಿಸಿಕೊಳ್ಳುವುದರಿಂದ ಕ್ಯಾನ್ಸರ್ ರೋಗವನ್ನು ಬಹುಮಟ್ಟಿಗೆ ತಡೆಗಟ್ಟಲು ಸಾಧ್ಯ. ವಿಶ್ವ ಆರೋಗ್ಯ ಸಂಸ್ಥೆಯು ಗರ್ಭದ್ವಾರದ ಕ್ಯಾನ್ಸರ್ ಹೆಚ್ಚಾಗಿರುವ ಹಿಂದುಳಿದ ದೇಶಗಳಾದ ಆಫ್ರಿಕಾ, ಕೆನ್ಯಾ, ಫಿಲಿಪೈನ್ಸ್‌ಗಳಲ್ಲಿ ಲಸಿಕೆಯ ಉಪಯೋಗವನ್ನು ಸಮರ್ಥಿಸಿದೆ.

ಕಿರಿಪ್ರಾಯದಲ್ಲಿ ಮದುವೆ ಮಾಡುವುದು, ಒಂದಕ್ಕಿಂತ ಹೆಚ್ಚು ಪುರುಷರ ಸಂಪರ್ಕ ಇಟ್ಟುಕೊಳ್ಳುವುದು, ’ಕಾಂಡಮ್ ಅನ್ನು ಬಳಸದಿರುವುದು, ಲೈಂಗಿಕ ಆರೋಗ್ಯದ ಬಗ್ಗೆ ಎಚ್ಚರ ವಹಿಸದಿರುವುದು ಇವುಗಳಿಂದ HPV ವೈರಾಣುವು ಗರ್ಭದ್ವಾರದ ಕ್ಯಾನ್ಸರ್‌ಗೆ ಕಾರಣವಾಗುವುದರಲ್ಲಿ ಸಹಕಾರಿಯಾಗುತ್ತದೆ. ಇದು ಮಾರಕ ರೋಗವಾಗಿದ್ದು, ಅಪೌಷ್ಟಿಕತೆ, ವೈದ್ಯಕೀಯ ಸೌಲಭ್ಯದ ಕೊರತೆ ಇವುಗಳಿಂದ ಉಲ್ಬಣವಾಗುತ್ತದೆ.

ಈ ಎರಡು ಮಾರಕ ರೋಗಗಳ ಬಗ್ಗೆ ಸಂಪರ್ಕ ಸಾಧನಗಳ ಸಹಾಯದಿಂದ ತಿಳಿವಳಿ ನೀಡುವುದು, ಸೂಕ್ತ ಕ್ರಮಗಳನ್ನು ತುರ್ತಾಗಿ ತೆಗೆದುಕೊಂಡು ಜನರಿಗೆ ವೈದ್ಯಕೀಯ ಸೌಲಭ್ಯ ನೀಡುವುದು ಸರ್ಕಾರದ ಹೊಣೆಯಾಗಿರುತ್ತದೆ. ಈ ಪರಿಸ್ಥಿತಿಯನ್ನು ಹೀಗೆಯೇ ಬಿಟ್ಟಲ್ಲಿ ಬರುವ ವರ್ಷಗಳಲ್ಲಿ ಇದರ ಪರಿಣಾಮ ಅತಿ ಭೀಕರವಾಗುವುದು ಖಂಡಿತ. ಇದರ ಬಗ್ಗೆ ತಿಳಿವಳಿಕೆ ಪಡೆದವರು. ತಿಳಿಯದವರಿಗೆ ತಿಳಿ ಹೇಳಿ ಆರೋಗ್ಯವಂತ ಮಹಿಳೆಯರು ಈ ತೊಂದರೆಗೆ ಸಿಲುಕದಂತೆ ಎಚ್ಚರ ವಹಿಸಬೇಕು.

Also Read: ಮಹಿಳೆಯರಲ್ಲಿ ಕ್ಯಾನ್ಸರ್ – ಆರಂಭಿಕ ಪತ್ತೆಯು ತಡೆಗಟ್ಟುವಿಕೆಗೆ ಸಹಕಾರಿ

Dr-Geethanarayan

ಢಾ. ಗೀತಾನಾರಾಯಣ್
ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥರು,
ರೇಡಿಯೇಷನ್‍ಆಂಕೋಲಾಜಿ ವಿಭಾಗ ,ವೈದೇಹಿ ಕ್ಯಾನ್ಸರ್ ಸೆಂಟರ್

www.vydehicancercenter.com

 Ph:080-41663864, 080-28413381-85

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!