ಅಂಡಾಶಯದ ನೀರ್ಗುಳ್ಳೆಗಳು (ಪಿ ಸಿ ಓ ಡಿ)

ಸುಮ ಇಪ್ಪತ್ತರ ಸುಂದರ ಹುಡುಗಿ, ಸದಾ ಹಸನ್ಮುಖಿಯಾಗಿ ಸ್ಪೂರ್ತಿಯ ಸೆಲೆಯಂತಿದ್ದಳು, ಇಂಜಿನಿಯರಿಂಗ್ ಓದುತ್ತಿರುವ ಅವಳಿಗೆ, ಸುಮಾರು ಆರು ತಿಂಗಳಿಂದ  ಅವಳ ಸುಂದರ ಮುಖದಲ್ಲಿ ಮೊಡವೆಗಳು ಶುರುವಾದವು, ಮೊದಲು ಚಿಕ್ಕ ಗಾತ್ರದಲ್ಲಿ ಬರುತ್ತಿದ್ದ  ಮೊಡವೆಗಳು, ನಂತರ ದೊಡ್ಡ ಗಾತ್ರದವು ಉಂಟಾಗಿ ಮುಖ ಅಂದಗೆಡತೊಡಗಿತು, ಇದರ ಜೊತೆಯೇ ಮಾಸಿಕ ಋತುಚಕ್ರದಲ್ಲಿ ವ್ಯತ್ಯಯವುಂಟಾಯಿತು, ದೇಹದ ತೂಕ ಹೆಚ್ಚಾಯಿತು, ಮುಖದ  ಗಲ್ಲ, ಗದ್ದ ಇತರೆಡೆ ಪುರುಷರ ತರಹ ಕೂದಲು ಬೆಳೆಯಲು ಶುರುವಾಯಿತು, ಅವಳು ವಾರಕ್ಕೊಮ್ಮೆ ಥ್ರೆಡ್ಡಿಂಗ್ ಮಾಡಿಸಬೇಕಾದ ಪರಿಸ್ಥಿತಿ ಉಂಟಾಯ್ತು.

ಆಗಲೇ ಸುಮ ತನ್ನ ತಾಯಿಯೊಂದಿಗೆ ನನ್ನಲ್ಲಿಗೆ ಬಂದಳು, ಅವಳ ತೊಂದರೆಯ ಲಕ್ಷಣಗಳನ್ನು ಕ್ರೋಢೀಕರಿಸಿ ಯೋಚಿಸಿದಾಗ ಇದು ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ಅಥವಾ ಅಂಡಾಶಯದ ನೀರ್ಗುಳ್ಳೆಗಳಿರಬೇಕೆಂದು ಊಹಿಸಿ ಕೆಲವು ಬಗೆಯ ರಕ್ತಗತ ಹಾರ್ಮೋನುಗಳ ಪರೀಕ್ಷೆ ಮತ್ತು ಸ್ಕ್ಯಾನ್ ಮಾಡಿಸಿದಾಗ ಅಂದುಕೊಂಡದ್ದು ನಿಜವಾಯಿತು. ಪಲ್ಸತಿಲ್ಲ (Pulsatilla) ಮತ್ತು ತುಜಾ (Thuja) ಎಂಬ ಹೋಮಿಯೋ ಔಷಧಿಗಳಿಂದ ಚಿಕಿತ್ಸೆ ಆರಂಭಿಸಿದ  ನಂತರ  ಕ್ರಮೇಣವಾಗಿ ಸುಮಾಳ ತೊಂದರೆಗಳು ಪರಿಹಾರವಾಗುತ್ತಾ ಬಂದವು, ಮುಖದ ಮೊಡವೆಗಳು, ಅತಿರೋಮ ಬಳವಣಿಗೆ ನಿಂತಿತು, ನಂತರ ಮಾಸಿಕ ಋತುಚಕ್ರವೂ ನಿಯಮಿತವಾಯಿತು. ಆಹಾರದಲ್ಲಿ  ಪಥ್ಯೆ, ನಿಯಮಿತ ವ್ಯಾಯಾಮ ಮತ್ತು ಜೀವನಶೈಲಿಯಲ್ಲಿ ಕೆಲವು ಸುಧಾರಣೆಗಳೂ ಸುಮಾಳಿಗೆ ಸಹಕಾರಿಯೆನಿಸಿದವು.

ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಸುಮಾರು ಹತ್ತು ಹೆಣ್ಣುಮಕ್ಕಳಿಗೆ ಒಬ್ಬರಲ್ಲಿ ಈ ಅಂಡಾಶಯದ ನೀರ್ಗುಳ್ಳೆಗಳಿಂದುಂಟಾಗುವ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (ಪಿ ಸಿ ಓ ಡಿ) ಕಂಡುಬರುತ್ತದೆ.

ವಿವಾಹಿತ ಸ್ತ್ರೀಯರಲ್ಲಿ ಪಿ ಸಿ ಓ ಡಿ ತೊಂದರೆ ಬಂಜೆತನವುಂಟುಮಾಡುವ ಪ್ರಮುಖ ಕಾರಣವೆನಿಸಿದೆ

ಅಂಡಾಶಯದ ನೀರ್ಗುಳ್ಳೆಗಳು ಹೇಗೆ ಉಂಟಾಗುತ್ತವೆ ?

ಇದಕ್ಕೆ ನಿಖರವಾದ ಕಾರಣಗಳು ಇನ್ನೂ ತಿಳಿದಿಲ್ಲ, ಅಂಡಾಶಯಗಳಲ್ಲಿ ನೀರಿನಂತಹ ಅಂಶವುಳ್ಳ ನೀರ್ಗುಳ್ಳೆಗಳು ಉಂಟಾಗಿ, ಈ ನೀರ್ಗುಳ್ಳೆಗಳು ಕೆಲ ಅಸಹಜ ಪುರುಷ  ಪ್ರಧಾನವಾದ  ಆಂಡ್ರೋಜೆನ್ ಹಾರ್ಮೋನುಗಳನ್ನು

ಸ್ರವಿಸುತ್ತವೆ, ಈ ಆಂಡ್ರೋಜೆನ್ ಹಾರ್ಮೊನುಗಳು, ಸ್ತ್ರೀಯರ ಅಂಡಾಶಗಳಿಂದ ಸಹಜವಾಗಿ ಉತ್ಪತ್ತಿಯಾಗುವ ಇತರೇ ಹಾರ್ಮೋನುಗಳ ಕಾರ್ಯಕ್ಕೆ ಅಡಚಣೆಯುಂಟುಮಾಡುತ್ತವೆ. ಈ ಆಂಡ್ರೋಜೆನ್ ಹಾರ್ಮೋನುಗಳ ಪರಿಣಾಮವಾಗಿಯೇ ಪಿ ಸಿ ಓ ಡಿ ತೊಂದರೆಯುಳ್ಳ ಸ್ತ್ರೀಯರಲ್ಲಿ ಪುರುಷರ ತರಹ ಮುಖದಲ್ಲಿ ಮೀಸೆ ಗಡ್ಡ (beard) ಬಂದಂತೆ ಕೂದಲುಗಳು ಮೂಡುತ್ತವೆ. 

ಪಿ ಸಿ ಡಿ ಗೆ ಕೆಲವು ಸಂಭವನೀಯ ಕಾರಣಗಳು ಇಂತಿವೆ 

  1. ದೇಹದಲ್ಲಿ ಇನ್ಸುಲಿನ್ ಹಾರ್ಮೋನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರುವಿಕೆ
  2. ದೇಹದಲ್ಲಿ  ಪುರುಷ ಪ್ರಧಾನ ಹಾರ್ಮೋನುಗಳ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆ
  3. ಅನುವಂಶೀಯತೆ (Heredity)
  4. ಅಂಡಾಶಗಳ (ovaries) ಉರಿಯೂತ

ಪಿ ಸಿ ಡಿ ಲಕ್ಷಣಗಳು 

  1. ಋತುಚಕ್ರದಲ್ಲಿ ವ್ಯತ್ಯಾಸ :  ಇದು ಋತುಚಕ್ರ ಮೊದಲ ಬಾರಿಗೆ ಶುರುವಾದ  ಕೆಲವು ತಿಂಗಳಲ್ಲೇ ಮಾಸಿಕ ಋತುಚಕ್ರ ಅನಿಯಮಿತ  ಗೊಳ್ಳಬಹುದು  (Irregular Menses)  ಅಥವಾ ಕೆಲವರಲ್ಲಿ ಹಲವು ವರ್ಷಗಳು ನಿಯಮಿತ ಋತುಚಕ್ರ ಇದ್ದು ನಂತರ ಸಮಸ್ಯೆ ಕಾಣಿಸಬಹುದು. ಕೆಲವರಲ್ಲಿ 3-4 ತಿಂಗಳಿಗೊಮ್ಮೆ ಮುಟ್ಟಾಗುವುದು, ಇನ್ನು ಕೆಲವರಲ್ಲಿ ನಿರಂತರ ಋತುಸ್ರಾವ ಅಥವಾ ಅಗಾಧ ಪ್ರಮಾಣದಲ್ಲಿ ಋತುಸ್ರಾವ (Bleeding) ಉಂಟಾಗಬಹುದು.
  2. ದೇಹದ ತೂಕ ಹೆಚ್ಚುವಿಕೆ (Obesity)
  3. ಅಧಿಕ ಆಂಡ್ರೋಜೆನ್ ಹಾರ್ಮೋನ್ ಪರಿಣಾಮಗಳು :  ಸ್ತ್ರೀಯರ  ಮುಖ, ಗಲ್ಲ, ಗಡ್ಡ, ಎದೆ ಮತ್ತು ದೇಹದ ಇತರೆಡೆ ಪುರುಷರಂತೆ  ಹೆಚ್ಚು ಕೂದಲು ಬೆಳೆಯುವಿಕೆ, ಚರ್ಮದಲ್ಲಿ ಎಣ್ಣೆಯಂಶ ಅಧಿಕ ವಾಗುವುದು, ತಲೆಯಲ್ಲಿ ಹೊಟ್ಟು (Dandruff)
  4. ಅಂಡಾಶಯ, ಪಿಟ್ಯುಟರಿ ಮತ್ತು ಅಡ್ರಿನಲ್ ಗ್ರಂಥಿಗಳಿಂದ ಉತ್ಪತ್ತಿಯಾಗುವ ಹಾರ್ಮೋನುಗಳಲ್ಲಿ ಏರುಪೇರಾಗುವುದು
  5. ಅಂಡಾಣು ಉತ್ಪಾದನೆಯಲ್ಲಿ ಕೊರತೆ ಉಂಟಾಗಿ ಗರ್ಭದಾರಣೆಗೆ ತೊಂದರೆಯಾಗಿ ಸಕಾಲದಲ್ಲಿ ಮಕ್ಕಳಾಗದಿರುವುದು (ಬಂಜೆತನ)
  6. ಮುಖದ ಅಂದಗೆಡಿಸುವ ದೊಡ್ಡ ದೊಡ್ಡ ಮೊಡವೆ ಕಾಣಿಸುವುದು
  7. ಕುತ್ತಿಗೆ, ಎದೆ, ತೋಳುಗಳ ಚರ್ಮದ ಬಣ್ಣ ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗುವುದು (Pigmentation)
  8. ಮಧುಮೇಹ ಮತ್ತು ರಕ್ತದೊತ್ತಡ ಬರುವ ಸಂಭವ ಹೆಚ್ಚು
  9. ಕೆಲವರಲ್ಲಿ ಭಾವನೆಗಳಲ್ಲಿ ಏರುಪೇರಾಗುವಿಕೆ (Mood swings)
  10. ಅತಿಯಾದ ಕೂದಲುದುರುವಿಕೆ (Excessive hair loss)

ಅಂಡಾಶಯದ ನೀರ್ಗುಳ್ಳೆಗಳು ಮತ್ತು ಪಿ ಸಿ  ಡಿ ನಿಯಂತ್ರಣ ಹೇಗೆ ?

ಈ ಸಮಸ್ಯೆಗೆ, ಅತಿಯಾದ ಮಾನಸಿಕ ಒತ್ತಡ, ಆರೋಗ್ಯಕರವಲ್ಲದ ಆಹಾರ ಕ್ರಮ, ವ್ಯಾಯಾಮ ವಿಲ್ಲದಿರುವುದು ಮತ್ತಿತರೇ ಅನಿಯಮಿತ ಮತ್ತು ಅನಾರೋಗ್ಯಕರ ಜೀವನ ಪದ್ದತಿಗಳು (unhealthy life style) ಪರೋಕ್ಷವಾಗಿ ಕಾರಣಗಳೆನಿಸಿವೆ.

  • ಆರೋಗ್ಯಕರ ದೇಹದ ತೂಕದ ನಿರ್ವಹಣೆ :  ಪಿ ಸಿ ಓ ಡಿ ಸಮಸ್ಯೆಯುಳ್ಳ ಸ್ತ್ರೀಯರು, ಹೆಚ್ಚುವರಿ ದೇಹದ ತೂಕವನ್ನು ವ್ಯಾಯಾಮ, ಯೋಗ, ಆಹಾರದಲ್ಲಿ ಪಥ್ಯೆ ಇತ್ಯಾದಿಗಳಿಂದ ನಿಯಂತ್ರಿಸಿದರೆ ಅರ್ಧ ಸಮಸ್ಯೆ ಬಗೆಹರಿದಂತೆ.
  •  ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳು, ಜಂಕ್ ಫುಡ್ಸ್, ಅತೀ ಸಿಹಿ ಪದಾರ್ಥ, ಹೆಚ್ಚು ಜಿಡ್ಡು, ಕೊಬ್ಬಿನಂಶವುಳ್ಳ ಆಹಾರವನ್ನು ಆದಷ್ಟು ಸೇವಿಸದಿರುವುದು. ಡಯಟ್ ಮತ್ತು ವ್ಯಾಯಾಮಗಳ ಬಗ್ಗೆ ನಿಮ್ಮ ವೈದ್ಯರಿಂದ ಸಲಹೆ ಪಡೆಯಿರಿ.
  • ಹೆಚ್ಚು ನಾರಿನಂಶವುಳ್ಳ (Fiber rich) ಆಹಾರ, ಕಾಯಿ ಪಲ್ಯೆ ಇತ್ಯಾದಿ ಸೇವನೆ ಹಿತಕರ
  • ಅಗಸೆ ಬೀಜಗಳ (Flax seeds) ನಿಯಮಿತ ಸೇವನೆ ಒಳ್ಳೆಯದು
  • ಕಾಫಿ ಮತ್ತು ಮದ್ಯ (alcohol) ಸೇವನೆ ಕೆಟ್ಟದ್ದು
  •  ಕ್ರಿಯಾಶೀಲರಾಗಿ ಮತ್ತು ಆಕ್ಟಿವ್ ಆಗಿ ಇರಲು ಯತ್ನಿಸಿ
  • ಇವೆಲ್ಲವುಗಳನ್ನುಸಾಧಿಸಲು ದೃಢ ಸಂಕಲ್ಪ ಅತ್ಯಗತ್ಯ, ನಿರಾಶರಾಗದಿರಿ

ಪಿ ಸಿ ಡಿ ತೊಂದರೆಗೆ ಹೋಮಿಯೋಪಥಿಯಲ್ಲಿ ಏನು ಪರಿಹಾರ

ಹೋಮಿಯೋಪಥಿಯಲ್ಲಿ ಪಿ ಸಿ ಓ ಡಿ ಅಥವಾ ಅಂಡಾಶಯದ ನೀರ್ಗುಳ್ಳೆಗಳ  ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆಇದೆ. ಇಲ್ಲಿ ಬರೀ ರೋಗದ ಹೆಸರ ಮೇಲೆ ಔಷಧಿ ನೀಡುವುದಕ್ಕಿಂತ, ವ್ಯಕ್ತಿಗತ, ಹೋಲಿಸ್ಟಿಕ್ ತಳಹದಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಎಪಿಸ್, ಆರಂ ಮೆಟ್, ಕಲ್ಕೇರಿಯ ಕಾರ್ಬ್, ಅಯೊಡಾಂ, ಲಖಸಿಸ್,  ಪಲ್ಸತಿಲ್ಲ, ಪಲ್ಲಡಿಯಂ,  ತುಜಾ ಹೀಗೆ ಹಲವಾರು ಹೋಮಿಯೋ ಔಷಧಿಗಳು  ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬಲ್ಲವು. ಹೋಮಿಯೋ ಔಷಧಿಗಳು ಅಡ್ಡಪರಿಣಾಮ ರಹಿತ ಮತ್ತು ನೈಸರ್ಗಿಕ ವಸ್ತುಗಳಿಂದ ತಯಾರಿಸಲ್ಪಟ್ಟಿರುತ್ತವೆ.

ಡಾ. ತೇಜಸ್ವಿ ಕೆ.ಪಿ.
ಸಹ ಪ್ರಾಧ್ಯಾಪಕರು, ಭಗವಾನ್ ಬುದ್ಧ ಹೋಮಿಯೋಪತಿ ವೈದ್ಯಕೀಯ ಕಾಲೇಜು
ಸುರಭಿ ಹೋಮಿಯೋ ಕ್ಲಿನಿಕ್, ನಂದಾವತ್ ಕಾಂಪ್ಲೆಕ್ಸ್, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ ಮುಖ್ಯರಸ್ತೆ, ಬೆಂಗಳೂರು-97 ಮೊ: 9731133819

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!