Call Us / WhatsApp  :  +91 8197554373      Email Id  :  mediaicon@ymail.com

Health Vision

We Care for Your Health

Health Vision

ಆರೋಗ್ಯ - ಆಹಾರ - ಆಯುರ್ವೇದ

ವೆಲ್ ನೆಸ್ ಮತ್ತು ಆರ್ಗನಿಕ್ ಎಕ್ಸ್‌ಪೋ-2018

ಬೆಂಗಳೂರಿನಲ್ಲಿ ಮೇ 25ರಿಂದ ಸಾವಯವ ಪ್ರದರ್ಶನ ಮೇಳ

ಸರ್ವೇಜನೋ ಸುಖಿನೋ ಭವಂತು ಎನ್ನುವ ಹಾಗೆ ಈ ಮೇಳ ಪ್ರತಿಯೊಬ್ಬರಿಗೂ ಉಪಯೋಗವಾಗುವಂತದ್ದು. ಮಾನಸಿಕವಾಗಿ, ದೈಹಿಕವಾಗಿ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಆದ್ದರಿಂದಲೇ ಈ ಮೇಳವು ದೇಹ, ಆತ್ಮ, ಮನಸ್ಸಿಗೆ ಸಂಬಂಧಿಸಿದ್ದು.
-ಗಗನ್ ತೇಜ, ಮೇಳದ ನಿರ್ದೇಶಕ

ಹಿಂದಿನಿಂದಲೂ ಆಯುರ್ವೇದಕ್ಕೆ ಅಗ್ರಸ್ಥಾನ. ಎರಡು ಸಾವಿರ ವರ್ಷಗಳಿಗೂ ಹೆಚ್ಚು ಹಳೆಯದಾದ ಈ ವೈದ್ಯ ಪದ್ಧತಿಯಲ್ಲಿ ಸರ್ವ ರೋಗಗಳಿಗೂ ಔಷಧ ಮತ್ತು ಪರಿಹಾರಗಳಿವೆ ಎಂಬುದು ತಜ್ಞರ ಅಭಿಮತ. ನಮ್ಮ ನೆಲ ಮೂಲದ ಆಯುರ್ವೇದ ಹಾಗೂ ಹೋಮಿಯೋಪಥಿಗೆ ಹೆಚ್ಚು ಪ್ರಾಮುಖ್ಯ ನೀಡಬೇಕೆಂಬ ಕೂಗು ಎದ್ದಿದೆ. ಅಲ್ಲದೆ ಆಧುನಿಕ ಜೀವನ ಶೈಲಿಗೆ ಹೊಂದಿಕೊಂಡಂತೆ ಆಹಾರದಲ್ಲೂ ರಾಸಾಯನಿಕ ಪದಾರ್ಥಗಳು ಯಥೇಚ್ಛವಾಗ ತೊಡಗಿರುವಾಗ ಸಾವಯವ ಆಹಾರ ಪದ್ಧತಿಯೆಡೆಗೆ ಜನರ ಒಲವು ತಂತಾನೆ ಮರಳುತ್ತಿದೆ.
ಇಂಥ ಸನ್ನಿವೇಶದಲ್ಲಿ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಜೀವನಕ್ಕೆ ಒತ್ತು ನೀಡುವ ದೃಷ್ಟಿಯಿಂದ ವೆಲ್‍ನೆಸ್ ಮತ್ತು ಆರ್ಗಾನಿಕ್‍ ಎಕ್ಸ್‌ಪೋ ನಡೆಯುತ್ತಿದೆ. ಸಾವಯವ ಉತ್ಪನ್ನಗಳು, ನೈಸರ್ಗಿಕ ಹಾಗೂ ಸಿರಿಧಾನ್ಯಗಳು, ಸಮಗ್ರ ಆರೋಗ್ಯ ಮತ್ತು ಸಾವಯವ ಉತ್ಪನ್ನಗಳ ಬೃಹತ್ ಪ್ರದರ್ಶನ ಮೇಳವನ್ನು ಬೆಂಗಳೂರಿನಲ್ಲಿ ಮೇ 25 ರಿಂದ 27ರವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿದೆ.

ಮೇಳದ ವಿಶೇಷವೇನು?

ಮೇಳದ ಆಕರ್ಷಣೆಯ ಕೇಂದ್ರಬಿಂದುವೆಂದರೆ ಅಧ್ಯಾತ್ಮಿಕ, ನೈಸರ್ಗಿಕ, ಸಂಪೂರ್ಣ ಸಾವಯವಕ್ಕೆ ಸಂಬಂಧಪಟ್ಟಂತಹ ಜೀವನ ಶೈಲಿಗೆ ಪೂರಕವಾಗಬಲ್ಲ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ.
ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದ ವ್ಯಾಪಾರಿಗಳೂ ತಮ್ಮ ಮಳಿಗೆಗಳನ್ನು ಹಾಕಲಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಮಳಿಗೆಗಳ ಮಾಲೀಕರು ಹಾಗೂ 32 ಪ್ರಾಯೋಜಕರು ಇಲ್ಲಿ ಸಮಾವೇಶ ಗೊಳ್ಳಲಿದ್ದಾರೆ. ನಾಡಿನಾದ್ಯಂತದ 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಗೊಳ್ಳಲಿದ್ದಾರೆ.

ಸಾವಯವ, ಸಿರಿಧಾನ್ಯ

ಆಹಾರ ಪದಾರ್ಥ ಹಾಗೂ ತರಕಾರಿ ಕೃಷಿಯಲ್ಲಿ ರೋಗ ತಡೆಗೆ ಕ್ರಿಮಿನಾಶಕ, ರಾಸಾಯನಿಕ ಬಳಕೆ ಯಥೇಚ್ಚವಾಗಿದೆ. ಇದು ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಾಗಾಗಿ ರಾಸಾಯನಿಕ ಬಳಕೆ ರಹಿತ ಸಾವಯವ ಕೃಷಿ ಪದ್ಧತಿಯ ಕಡೆಗೆ ನಮ್ಮ ಗಮನ ಅತ್ಯಗತ್ಯವಾಗಿದೆ. ರೈತರಿಗೆ ಸಾವಯವದ ಬಗ್ಗೆ ಅರಿವು ಮೂಡಿಸುವುದು ಮುಖ್ಯ. ಅದೇ ಸಂದರ್ಭದಲ್ಲಿ ಅಂಥ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಯೋಗ್ಯ ಬೆಲೆಯನ್ನೂ ದೊರಕಿಸಿಕೊಡಬೇಕಿದೆ. ಈ ನಿಟ್ಟಿನಲ್ಲಿ ಒಂದು ಪ್ರಯತ್ನ ಈ ಪ್ರದರ್ಶನ. ಪೌಷ್ಟಿಕಾಂಶವುಳ್ಳ ಸಿರಿಧಾನ್ಯಗಳ ಬಳಕೆಯನ್ನು ಪ್ರೇರೇಪಿಸುವುದು ಮತ್ತು ಅದನ್ನು ಜನಪ್ರಿಯಗೊಳಿಸುವುದು ಅತಿ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಸಾವಯವ ಹಾಗೂ ಸಿರಿಧಾನ್ಯದಿಂದ ತಯಾರಿಸಿರುವ ಆಹಾರ ಪದಾರ್ಥಗಳು ಸವಿಯುವುದಕ್ಕೂ ಮೇಳದಲ್ಲಿ ಅವಕಾಶವುಂಟು.
ಹಲವು ವರ್ಷಗಳಿಂದ ಸಾವಯವ-ಸಹಜ ಕೃಷಿಯಲ್ಲಿ ತೊಡಗಿರುವ ರೈತರು, ರೈತರ ಗುಂಪುಗಳು ಮತ್ತು ಉತ್ಪಾದಕರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಉತ್ಪಾದಕರು ಮತ್ತು ರೈತರೊಡನೆ ನೇರ ಸಂಪರ್ಕ-ಸಂವಾದವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರ
ಭಾರತದ ಸನಾತನ ಪರಂಪರೆಯಾಗಿರುವ ಯೋಗ, ಧ್ಯಾನ, ಅಧ್ಯಾತ್ಮ ಇತ್ಯಾದಿ ಅತ್ಯಮೂಲ್ಯ ವಿಷಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಸಹ ಇದೇ ಸಂದರ್ಭದಲ್ಲಿ ನಡೆಯಲಿದೆ. ಇದರಲ್ಲಿ ಆಯಾ ವಿಷಯಕ್ಕೆ ಸಂಬಂಧಿಸಿದ ತಜ್ಞರುಗಳಿಂದಲೇ ಉಪನ್ಯಾಸಗಳು ಜರುಗಲಿವೆ. ಇದರೊಂದಿಗೆ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ನಡೆಯಲಿದೆ. ದೇಹ, ಮನಸ್ಸು ಮತ್ತು ಆತ್ಮಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾಹಿತಿ ವಿನಿಮಯ ನಡೆಸುವುದಕ್ಕು ಇಲ್ಲಿ ಅವಕಾಶವುಂಟು ಎಂದು ವೆಲ್‍ನೆಸ್ ಮತ್ತು ಆರ್ಗನಿಕ್ ಎಕ್ಸ್‌ಪೋದ ನಿರ್ದೇಶಕರಾದ ಗಗನ್ ತೇಜ ತಿಳಿಸಿದ್ದಾರೆ.
ಸ್ಥಳ: ಬೆಂಗಳೂರಿನ ಡಾ. ಪ್ರಭಾಕರ್ ಕೋರೆ ಕನ್ವೆನ್ಷನ್ ಸೆಂಟರ್, ಯಶವಂತಪುರ. ಪ್ರವೇಶ: ಉಚಿತ.
ಮಾಹಿತಿಗಾಗಿ:9886416665/ 9886926665/ 98863 26665

ದಿನಾಂಕ : ಮೇ 25, 26, 27

http://wellnessorganicex po.com/ 

Back To Top