ಕೋಲ್ಡ್ ಲೇಸರ್ ಥೆರಪಿ: ನೈಸರ್ಗಿಕ ನೋವು ನಿವಾರಕ

ಡಾ|| ನಂದನ್‌ರವರ ಕೋಲ್ಡ್ ಲೇಸರ್ ಚಿಕಿತ್ಸಾ ಕೇಂದ್ರ

21ನೇ ಶತಮಾನದ ಉತ್ಕೃಷ್ಟ ತಂತ್ರಜ್ಞಾನದ ಚಿಕಿತ್ಸೆ – ಯವುದೇ ಗುಳಿಗೆಗಳಿಲ್ಲ, ನೋವಿಲ್ಲ, ಭಯವಿಲ್ಲ, ಶಸ್ತ್ರಚಿಕಿತ್ಸೆಯಿಲ್ಲ, ಅಡ್ಡಪರಿಣಾಮಗಳಿಲ್ಲ…! ಪುನಃಶ್ಚೇತನ ಥೆರಪಿಯಿಂದ ಬೆನ್ನುಹುರಿ ಆರೈಕೆ, ಮೂಳೆ ರೋಗ, ಕೀಲು ನೋವು ಮತ್ತಿತರ ದೀರ್ಘಕಾಲದ ನೋವುಗಳಿಗೆ ಪರಿಹಾರ!
ಕೋಲ್ಡ್ ಲೇಸರ್ ಥೆರಪಿಯಲ್ಲಿ ಯಾವುದೇ ನೋವಿಲ್ಲ, ಹಾನಿಯಿಲ್ಲ. ಯಾವುದೇ ಔಷಧಿ, ಗುಳಿಗೆ, ಮದ್ದು, ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಇದಕ್ಕೆ ಬೇಕಾಗಿಲ್ಲ. ಕೇವಲ ನೋವಿರುವ ಅಥವಾ ರೋಗಪೀಡಿತ ಅಂಗದ ಮೇಲೆ ತಂಪಾದ ಲೇಸರ್ ಕಿರಣಗಳು ಹಾಯಿಸಿದಲ್ಲಿ ಆಶ್ಚರ್ಯಕರ ರೀತಿಯಲ್ಲಿ ನೈಸರ್ಗಿಕವಾಗಿ ರೋಗವನ್ನು ಗುಣವಾಗಿಸುತ್ತದೆ.
ಈಗಾಗಲೇ ಹೇಳಿದಂತೆ ಕೋಲ್ಡ್ ಲೇಸರ್ ಥೆರಪಿ ನೀಡುವ ಸಂದರ್ಭದಲ್ಲಾಗಲಿ ಅಥವಾ ನಂತರವಾಗಲಿ ಯಾವುದೇ ನೋವು ಬಾರದು ಹಾಗೂ ಸೈಡ್ ಎಫೆಕ್ಟ್ ಇರುವುದಿಲ್ಲ. ಅದರಲ್ಲೂ ಲೋ ಇಂಟೆನ್ಸಿಟಿ ಕ್ಲಾಸಿಫಿಕೇಷನ್ 3ಬಿ ಕೆಟಗರಿಯ ಲೇಸರ್ ಥೆರಪಿ ಶರೀರದ ಹೊರಭಾಗದಿಂದ ದೇಹದೊಳಗೆ ೪-೫ ರಿಂದ ಇಂಚು ಕಿರಣಗಳು ಹೊಕ್ಕು ಮೂರು ಪದರದ ಚರ್ಮ, ಮೂಳೆ, ಸ್ನಾಯು ಹಾಗೂ ಜೀವಕೋಶಗಳಿಗೆ ಯಾವುದೇ ಹಾನಿ ಉಂಟುಮಾಡದೆ ಶೀಘ್ರವಾಗಿ ಕಾಯಿಲೆ ವಾಸಿ ಮಾಡುತ್ತದೆ.
ಮೈಗ್ರೇನ್, ಟೆನ್ಷನ್, ತಲೆನೋವು, ನರದೌರ್ಬಲ್ಯ, ಅಕ್ಯೂಟ್ ಪೇನ್, ಕ್ರೋನಿಕ್ ಪೇನ್, ಆರ್ಥರೈಟೀಸ್, ಗೌಟ್, ಕಾರ್ಟಿಲೇಜ್ ಸವೆತ, ಸ್ಪಾಂಡಿಲೈಟೀಸ್, ಒಬೆಸಿಟಿ, ವೆರಿಕೋಸ್ ವೆಯಿನ್ಸ್, ಡಯಾಬಿಟೀಸ್, ಸೋರಿಯಾಸಿಸ್, ಇತರ ಚರ್ಮ ಕಾಯಿಲೆ, ಸಣ್ಣ ಪ್ರಮಾಣದ ಮಾನಸಿಕ ರೋಗ, ಕಲೆ, ಮೊಡವೆ, ಕೂದಲು ಉದುರುವಿಕೆ, ಆಸ್ತಮಾ, ಉಸಿರಾಟ ತೊಂದರೆ, ಧೂಮಪಾನ, ಮದ್ಯಪಾನ, ದುಶ್ಚಟಗಳು, ವಯೋಸಂಬಂಧದ ಸುಕ್ಕುಗಳ ನಿವಾರಣೆ (ಕಾಸ್ಮೆಟಿಕ್ ಚಿಕಿತ್ಸೆ), ಗಾಯ ಮತ್ತು ಸ್ಟ್ರೆಚ್ ಮಾರ್ಕ್‌ಗಳು, ಕ್ರೀಡಾ ಗಾಯಗಳು, ಟೆನ್ನಿಸ್ ಎಲ್ಬೊ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇದಾಗಿದೆ.
ಅಕ್ಯೂಟ್ ಮತ್ತು ಕ್ರೋನಿಕ್ ನೋವುಗಳಿಗೆ ಅಲೋಪತಿ ಚಿಕಿತ್ಸೆಯಲ್ಲಿ ತಾತ್ಕಾಲಿಕ ಪರಿಹಾರ ಕಾಣಬಹುದು. ಇಲ್ಲವೆ ಜಾಯಿಂಟ್ ರಿಪ್ಲೆಸ್‌ಮೆಂಟ್‌ನಂತಹ ಭಾರಿ ಖರ್ಚಿನ ಶಸ್ತ್ರಚಿಕಿತ್ಸೆಗೆ ಹೋಗಬಹುದು. ಆದರೆ, ಅದ್ಯಾವುದಕ್ಕೂ ಆಸ್ಪದ ನೀಡದೆ ಕಡಿಮೆ ಖರ್ಚಿನಲ್ಲಿ ಪರಿಣಾಮಕಾರಿಯಾಗಿ ವಾಸಿಮಾಡುತ್ತದೆ. 

ಪ್ರಶಸ್ತಿ-ಪುರಸ್ಕಾರಗಳು:
ಸಂಸ್ಥೆಯ ಸೇವೆ ಪರಿಗಣಿಸಿ ನ್ಯಾಷನಲ್ ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ರಾಷ್ಟ್ರ ರತ್ನ, ದೆಹಲಿ ರತ್ನ, ಶ್ರೀ ರಾಜೀವ್ ಗಾಂದಿ ಶಿರೋಮಣಿ ಪ್ರಶಸ್ತಿಗಳು ದೊರೆತಿವೆ. ಮುಕುಟಕ್ಕೆ ಮತ್ತೊಂದು ಗರಿ ಎಂಬಂತೆ ಇತ್ತೀಚೆಗೆ ‘ಡಿವೈನ್ ಹೆಲ್ತ್ ಕೇರ್ ಅವಾರ್ಡ್’ ಸಹ ದೊರೆತಿದೆ. ಅಮೆರಿಕದ ಫ್ಲಾರಿಡ ವಿಶ್ವವಿದ್ಯಾಲಯದಿಂದ ಕೋಲ್ಡ್ ಲೇಸರ್ ತಂತ್ರಜ್ಞಾನದಿಂದ ನೀಡಿದ ಪರಿಹಾರ ಮತ್ತು ಸೇವೆಗಾಗಿ ಡಾ: ರಘುನಂದನ್ ರವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗಿದೆ.

“ಸಾಮಾನ್ಯವಾಗಿ ಕಾಯಿಲೆ ಬರುತ್ತದೆ, ಹೋಗುತ್ತದೆ. ಆದರೆ, ಇದಕ್ಕೆ ಯಾವ ರೀತಿ ಚಿಕಿತ್ಸೆ, ಶುಶ್ರೂಷೆ ಅಥವಾ ತರಬೇತಿ ನೀಡಿದರೆ ವಾಸಿಯಾಗುತ್ತದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ವ್ಯಕ್ತಿಯ ಆಹಾರಶೈಲಿ, ಒತ್ತಡ, ನಿದ್ರಾಹೀನತೆ, ಕುಡಿತ, ಚಟ, ದುಶ್ಚಟಗಳಿಂದ ಬರುತ್ತವೆ. ಇವು ಮಾತ್ರೆ, ಔಷಧಗಳಿಂದ ಸರಿಹೋಗುವಂತಹವಲ್ಲ. ಇಂತಹ ಸಂದರ್ಭದಲ್ಲಿ ಬೇಕು ಇತರ ರೀತಿಯ ಚಿಕಿತ್ಸೆಗಳು. ಇದಕ್ಕಾಗಿ ನಮ್ಮಲ್ಲಿ ವಿಶೇಷವಾಗಿ ಸಾಂಪ್ರದಾಯಿಕ ಹಾಗೂ ಆಧುನಿಕ ಪದ್ಧತಿಯ ಚಿಕಿತ್ಸಕರಿದ್ದಾರೆ. ನೋವು, ಸಮಸ್ಯೆಯಿಂದ ಮಾನಸಿಕವಾಗಿ ಕುಂದಿರುವ ವ್ಯಕ್ತಿಗೆ ಮೊದಲು ಧೈರ್ಯ ತುಂಬಬೇಕು. ದೇಹದಲ್ಲಿ ನಶಿಸಿ ಹೋಗುತ್ತಿರುವ ಸೆಲ್‌ಗಳನ್ನು ಸರಿಪಡಿಸುವ (ರೀಜನರೆಟ್) ಕ್ರಿಯೆ ಮಾಡಬೇಕು. ಇಂತಹ ಕ್ರಿಯೆಗೆ ಕೊಲ್ಡ್ ಲೇಸರ್ ಥೆರಪಿ ರಾಮಬಾಣವಿದ್ದಂತೆ” ಎಂದೆನ್ನುತ್ತಾರೆ ಡಾ|| ರಘು ನಂದನ್.

ಪ್ರತ್ಯೇಕವಾಗಿ ನೋವಿನ ಸಂಗತಿಗೆ ತೆಗೆದುಕೊಂಡರೆ, ನೋವಿನಲ್ಲಿ ಎರಡು ವಿಧ. ಒಂದು ನರಸಂಬಂಧಿ ನೋವು ನಿವಾರಣೆ ಮತ್ತೊಂದು ನೋವಿರುವ ಭಾಗದ ರಕ್ತನಾಳಗಳ ಸರಿಪಡಿಸುವಿಕೆ. ನೋವಿರುವ ಅಂಗದ ಮೇಲೆ ಕೋಲ್ಡ್ ಲೇಸರ್ ಕಿರಣಗಳು ಹಂತ ಹಂತವಾಗಿ ಬಿಡುವುದರಿಂದ ಮೂರು ತರಹ ಅನುಕೂಲವಾಗುತ್ತದೆ. ಒಂದು ನರಗಳಿಗೆ ಚೇತನಶಕ್ತಿ ತುಂಬುತ್ತದೆ, ರಕ್ತ ಸಂಚಲನೆ ಸರಿಪಡಿಸುತ್ತದೆ ಮತ್ತು ಡಿಜೆನರೆಟ್ ಆಗಿರುವ ಸೆಲ್‌ಗಳಿಗೆ ಪುನಃಶ್ಚೇತನ ತರುತ್ತದೆ. ಉದಾ: ಮೈಗ್ರೇನ್ ಸಮಸ್ಯೆ ಎಂದು ಬರುವವರನ್ನು ಪರೀಕ್ಷಿಸಿ, ಕಾಯಿಲೆಗೆ ಏನು ಕಾರಣ ಎಂಬುದನ್ನು ಪತ್ತೆಹಚ್ಚಿ ಕೋಲ್ಡ್ ಲೇಸರ್ ಥೆರಪಿ ಮತ್ತು ಜೀವನಶೈಲಿ ಬದಲಾವಣೆ ಚಿಕಿತ್ಸೆ ನೀಡುವ ಮೂಲಕ ಪರಿಹಾರ ಕಲ್ಪಿಸಬಹುದು ಎನ್ನುತ್ತಾರೆ ಮೆಡಿಕಲ್ ಡೈರೆಕ್ಟರ್ ರೀಜೆನರೇಟಿವ್ ಮೆಡಿಸನ್ ಸ್ಪೆಷಲಿಸ್ಟ್ ಡಾ. ರವಿ ಪಂಡಿತ್. 

ಸಂಸ್ಥೆಯ ಯೋಜನೆಗಳು

ಜೆ.ಪಿ.ನಗರ, ಮಲ್ಲೇಶ್ವರ, ಬಸವನಗುಡಿ ಮತ್ತು ಕೆಜಿಎಫ್‌ನಲ್ಲಿ ನಮ್ಮ ಶಾಖೆಗಳಿವೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಸುತ್ತಮುತ್ತ, ಹೊರ ಜಿಲ್ಲೆಗಳಲ್ಲಿ ಹಾಗೂ ನಂತರ ಹೊರ ರಾಜ್ಯಗಳಲ್ಲೂ ಸ್ಥಾಪಿಸುವ ಉದ್ದೇಶವಿದೆ. ಹಾಗೆಯೇ, ಸಾಮಾನ್ಯ ಜನರಿಗೆ ಆರೋಗ್ಯದ ಬಗ್ಗೆ ಬಹಳ ಸುಲಭ ಹಾಗೂ ಸರಳವಾಗಿ ಅರ್ಥವಾಗುವ ಕಾರ್ಯಕ್ರಮಗಳನ್ನು ಆಯೋಜಿಸುವ ಜಾಗೃತಿ ಮೂಡಿಸುವ ಯೋಜನೆಗಳನ್ನು ಸಂಸ್ಥೆಯಿಂದ ರೂಪಿಸಲಾಗುತ್ತಿದೆ.

ಶರೀರದ ನೋವಿಗೆ ತಕ್ಕಂತೆ ಚಿಕಿತ್ಸೆ: ಸಂಸ್ಥಾಪಕ ಸಿಇಒ ಡಾ|| ಎಸ್. ರಘು ನಂದನ್

ಜೀವನ ಶೈಲಿಯ ಬದಲಾವಣೆಗೆತಕ್ಕಂತೆ ಮನುಷ್ಯನ ಶರೀರ ವಿವಿಧ ವ್ಯಾಯಾಮಗಳನ್ನು ಅಥವಾ ಚಿಕಿತ್ಸೆಯನ್ನು ಬಯಸುತ್ತದೆ. ಉದಾ: ಒಂದು ಶರೀರ ಯೋಗ ಬಯಸಿದರೆ, ಮತ್ತೊಂದು ಶರೀರ ಧ್ಯಾನ ಬಯಸುತ್ತದೆ. ಇನ್ನೊಂದು ವ್ಯಾಯಾಮಕ್ಕೆ ಹೊಂದಿಕೊಂಡರೆ, ಮಗದೊಂದು ಒತ್ತಡ ನಿವಾರಣೆ ತಂತ್ರ ಬಯಸುತ್ತದೆ. ಹೀಗೆ ಇನ್ನೂ ಕೆಲವು ಭಜನೆ, ಕೀರ್ತನೆ ಮೂಲಕ ಮನಸ್ಸು ಹಗುರಾಗಿಸಿಕೊಳ್ಳಬಯಸುತ್ತವೆ. ಕೆಲವು ಶರೀರಗಳು ಇವೆಲ್ಲದಕ್ಕೂ ಸಮಯ ಇಲ್ಲ, ಔಷಽ ಮಾತ್ರೆ, ಇಂಜೆಕ್ಷನ್‌ಗಳ ಚಿಕಿತ್ಸೆಯೇ ಸಾಕು ಎನ್ನುತ್ತದೆ. ಈ ರೀತಿ ನಾನಾ ಶರೀರಗಳಿರಬೇಕಾದರೆ ಅದಕ್ಕನುಸಾರ ಹೋಗಬೇಕಾಗುತ್ತದೆ ಎನ್ನುತ್ತಾರೆ ಡಾ|| ನಂದನ್ಸ್ ಕ್ಲಿನಿಕ್‌ನ ಸಿಇಒ ಡಾ|| ರಘು ನಂದನ್.

ನೋವಿಗೆ ಚಿಕಿತ್ಸೆ ಹೇಗೆ?
ನೋವು ಅಥವಾ ಕಾಯಿಲೆ ಎಂದು ನಮ್ಮಲ್ಲಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಗೂ ಚಿಕಿತ್ಸೆ ನೀಡುವ ಮುನ್ನ ಕಾಯಿಲೆಗೆ ಮೂಲ ಕಾರಣವೇನು, ಅದು ಯಾವ ಹಂತದಲ್ಲಿದೆ, ಯಾವ ಮಟ್ಟದ ಚಿಕಿತ್ಸೆ ನೀಡಬೇಕಾಗುತ್ತದೆ ಎಂಬುದನ್ನು ಪತ್ತೆ ಹಚ್ಚುವುದಾಗಿದೆ. ಯಾವುದೇ ನೋವು ಅಥವಾ ರೋಗ ಪ್ರಾಥಮಿಕ ಹಂತದಲ್ಲಿದ್ದರೆ ಅದನ್ನು ವಾಸಿ ಮಾಡುವುದು ಸುಲಭ. ಆದರೆ, ಎರಡನೇ ಹಂತದಲ್ಲಿದ್ದಾಗ ಚಿಕಿತ್ಸೆ ದಿನಗಳು ಹೆಚ್ಚುತ್ತವೆ. ಇನ್ನೂ ಮೂರನೇ ಹಂತವೆಂದರೆ ಅದಕ್ಕೆ ಸೂಕ್ತ ವೈದ್ಯಕೀಯ ತಪಾಸಣೆ, ಚಿಕಿತ್ಸೆ- ಶಸ್ತ್ರಚಿಕಿತ್ಸೆ ಅಗತ್ಯವಾಗಿರುತ್ತದೆ. ಮೂರನೇ ಹಂತದ ರೋಗಿಗಳಿಗೆ ನಮ್ಮಲ್ಲಿ ಪರಿಹಾರವಿಲ್ಲ.
ಉದಾ: ಬೆನ್ನುಹುರಿಯಲ್ಲಿ ಒಂದು ಸಣ್ಣ ತೊಂದರೆ ಕಾಣಿಸಿಕೊಂಡರೂ ನರಗಳ ಸಮಸ್ಯೆಯುಂಟಾಗುತ್ತದೆ. ನರಮಂಡಲದ ಮೂಲಕ ಮಿದುಳಿನ ಸಮಸ್ಯೆ ಇಲ್ಲವೆ ಪಾರ್ಶ್ವವಾಯು ಪೀಡಿತರಾಗುವ ಸಾಧ್ಯತೆಯಿದೆ. ಬೆನ್ನುಹುರಿಯ ಡಿಸ್ಕ್ ಅಥವಾ ಇನ್ನಿತರ ತೊಂದರೆಯಿಂದ ಒಂದೊಂದು ನರಕ್ಕೂ ಒಂದೊಂದು ರೀತಿ ಸಮಸ್ಯೆ ಬರುವ ಸಾಧ್ಯತೆ ಇದ್ದು, ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿದ್ದಲ್ಲಿ ಚಿಕಿತ್ಸೆ ನೀಡುವುದು ಸುಲಭವಾಗುತ್ತದೆ.
ಆದರೆ, ನಮ್ಮ ಪ್ರಾಮುಖ್ಯತೆ ಏನೆಂದರೆ, ನಮ್ಮ ಯುವಪೀಳಿಗೆಯಲ್ಲಿ ಹಾಗೂ ವಿದ್ಯಾವಂತರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಪ್ರಾಥಮಿಕ ಹಂತದಲ್ಲಿ ಅಥವಾ ಅದಕ್ಕೂ ಮುನ್ನ ಎಚ್ಚರಿಕೆ ವಹಿಸುವುದರ ಬಗ್ಗೆ ತಿಳಿಹೇಳುವುದು ಹಾಗೂ ಶಿಕ್ಷಿತರನ್ನಾಗಿಸುವುದು. ಅದಕ್ಕನುಸಾರ ಅನುಸರಿಸಬೇಕಾದ ಕ್ರಮಗಳು, ಪದ್ಧತಿಗಳನ್ನು ಅಳವಡಿಸಿಕೊಂಡರೆ ಇಂತಹ ನೋವು, ಕಾಯಿಲೆಗಳು ತಮ್ಮ ಬಳಿಗೆ ಸುಳಿಯುವುದಿಲ್ಲ ಎಂಬುದನ್ನು ತಿಳಿಸುವುದೇ ನಮ್ಮ ಕೆಲಸ.

ಸಂಸ್ಥೆಯ ವಿಶೇಷತೆ ಏನು?
ಡಾ|| ನಂದನ್ ಕೋಲ್ಡ್ ಲೇಸರ್ ಥೆರಪಿ ಸೆಂಟರ್‌ನ ವಿಶೇಷತೆ ಏನೆಂದರೆ, ಒಂದೇ ಸೂರಿನಡಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಸಮಾನ ಮನಸ್ಕರು, ತಜ್ಞರು, ನುರಿತ ವೈದ್ಯರು ಹಾಗೂ ಸಿಬ್ಬಂದಿಗಳಿದ್ದಾರೆ. ಇಲ್ಲಿಗೆ ಬರುವ ರೋಗಿಗಳಲ್ಲಿ ಯಾವುದೇ ರೀತಿ ನೋವಿದ್ದರೂ ಅಥವಾ ಸಮಸ್ಯೆಯಿದ್ದರೂ ಪರಿಹಾರ ಕಂಡುಕೊಳ್ಳುವುದು ಬಹಳ ಸುಲಭ.
ಒಬ್ಬ ರೈತ ಇರಬಹುದು, ಒಬ್ಬ ಕಾರ್ಮಿಕ ಇರಬಹುದು ಅವನಲ್ಲಿರುವ ಕನಿಷ್ಟ ಹಣಕ್ಕೆ ಉತ್ತಮ ಚಿಕಿತ್ಸಾ ಸೌಲಭ್ಯ ಕೊಡುವ ಉದ್ದೇಶ ನಮ್ಮದು. ಸಾಮಾನ್ಯ ವ್ಯಕ್ತಿಗೂ, ರೈತನಿಗೂ, ಕಾರ್ಮಿಕನಿಗೂ, ಕಾರ್ಪೋರೇಟ್ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೂ ಒಂದೇ ರೀತಿಯ ಚಿಕಿತ್ಸೆ.
ಶಾರೀರಿಕ, ಮಾನಸಿಕ, ಜೀವನಶೈಲಿ, ಯೋಚನಾಶಕ್ತಿ, ನಿದ್ರಾಹೀನತೆ, ಆಹಾರ ಸೇವನೆಯಲ್ಲಿ ಸಮಸ್ಯೆಯಿದೆಯೇ ಎಂಬುದನ್ನು ಮೊದಲು ನಿರ್ಧರಿಸುತ್ತೇವೆ. ನೋವು ಯಾವಾಗ ಶುರುವಾಗಿದೆ, ಎಲ್ಲಿಂದ ಶುರುವಾಗಿದೆ, ಯಾಕೆ ಶುರುವಾಗಿದೆ ಮುಂತಾದವನ್ನು ಕಂಡುಹಿಡಿಯಲು ಸಮಯ ಬೇಕಾಗುತ್ತದೆ. ಒಟ್ಟಾರೆ, ನೋವು, ಕಾಯಿಲೆ ಯಾವ ಹಂತದಲ್ಲಿದೆ ಎಂಬುದನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುತ್ತೇವೆ.
ಇಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಪಾರ ಅನುಭವ ಪಡೆದು ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆ, ನುರಿತ ವೈದ್ಯರು, ತಂತ್ರ ಟೆಕ್ನಿಕ್ ತಜ್ಞರು, ಲೈಫ್‌ಸ್ಟೈಲ್ ಕೋಚ್, ಆರ್ಥಿಕ ತಜ್ಞರು, ನ್ಯೂಟ್ರಿಷಿನ್, ಡಯಟಿಷಿಯನ್ ಎಲ್ಲರೂ ಒಂದೇ ಸೂರಿನಡಿಗೆ ಬಂದಿರುವುದು ಇಲ್ಲಿನ ವಿಶೇಷ.

ಪಂಚಭೂತಗಳಿಂದ ಆಗಿರುವ ಶರೀರ
ಪಂಚಭೂತಗಳಿಂದ ಆಗಿರುವಂತ ಈ ಶರೀರದಲ್ಲಿ ಭಗವಂತ ರೋಗ ನಿರೋಧಕ ಶಕ್ತಿ, ರಕ್ತಸಂಚಲನೆ, ಉಸಿರಾಟ, ಚಲನೆ ಎಲ್ಲವನ್ನೂ ಕೊಟ್ಟಿದ್ದಾನೆ. ಇದಕ್ಕೆ ಬೇಕಾದ ಅಗ್ನಿ, ವಾಯು, ನೀರು, ಆಹಾರ, ಬೆಳಕು ಎಲ್ಲವನ್ನೂ ಕೊಟ್ಟಿದ್ದಾನೆ. ಜೊತೆಗೆ ಶರೀರಕ್ಕೆ ನೂರು ವರ್ಷಗಳ ಗ್ಯಾರಂಟಿಯನ್ನೂ ಕೊಟ್ಟಿದ್ದಾನೆ. ಆದರೆ, ಅದನ್ನು ಸಮಯಕ್ಕೆ ಸರಿಯಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿಲ್ಲ. ಇದರೊಟ್ಟಿಗೆ ಕುಡಿತ, ಚಟ-ದುಶ್ಚಟ ಇರುವುದರಿಂದ ನಾನಾ ರೀತಿ ಸಮಸ್ಯೆಗಳು ಆವರಿಸಿಕೊಳ್ಳುತ್ತ್ತಿವೆ. ದೇಹದೊಳಗಿನ ರಕ್ಷಣಾತ್ಮಕಶಕ್ತಿ ಕಾರ್ಯ ನಿರ್ವಹಿಸುವುದಂತಾಗುತ್ತದೆ. ಈ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ದೇವರು ಶರೀರದಲ್ಲಿ ನ್ಯಾಚುರಲ್ ಹೀಲಿಂಗ್ ಸಿಸ್ಟಂ, ನ್ಯಾಚುರಲ್ ರಿಪೇರ್ ಸಿಸ್ಟಂ ಕೊಟ್ಟಿದ್ದಾನೆ. ಕೆಲವೊಮ್ಮೆ ಕೆಲವು ಜೀವಕೋಶಗಳು ನಿದ್ದೆ ಮಾಡುತ್ತಿರುತ್ತವೆ. ಅವುಗಳನ್ನು ನೈಸರ್ಗಿಕ ಚಿಕಿತ್ಸೆ ಮೂಲಕ ಜಾಗೃತಗೊಳಿಸಬೇಕು ಅಥವಾ ಸರಿಪಡಿಸಬೇಕಾಗುತ್ತದೆ. ಅದಕ್ಕೆ ಬೇಕಾಗುವ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ಆ ಕಾರ್ಯ ನಾವು ಮಾಡುತ್ತಿದ್ದೇವೆ.

ಕೋಲ್ಡ್ ಲೇಸರ್ ಕಿರಣಗಳು ಮೂಳೆ ಮತ್ತು ಕೀಲುನೋವಿಗೆ ಹೇಗೆ ಉಪಯುಕ್ತ?
ಶರೀರದಲ್ಲಿ 170 ಜಾಯಿಂಟ್ ಮತ್ತು ಸುಮಾರು 700 ಸ್ನಾಯುಗಳಿವೆ. ಎಲ್ಲ ಕೀಲು, ಸಂಧು ಮತ್ತು ಸ್ನಾಯುಗಳಿಗೆ ಬೇಕಾದ ಕನಿಷ್ಟ ವ್ಯಾಯಾಮ ಸಿಗುತ್ತಿಲ್ಲ. ಹೀಗಾಗಿ ಕೆಲವೊಮ್ಮ ಕೀಲು, ಸಂಧು ಮತ್ತು ಸ್ನಾಯುಗಳು ಸವೆಯಲು ಶುರುವಾಗುತ್ತವೆ. ದೈಹಿಕವಾಗಿ ಹೆಚ್ಚು ಶ್ರಮಪಡುವವರಿಗೆ ಹಾಗೂ ವಯಸ್ಸಾದ ಹಿರಿಯರಿಗೆ ಈ ಸಮಸ್ಯೆಗಳು ಕಾಡುತ್ತಿರುತ್ತವೆ. ಈ ಎಲ್ಲ ಭಾಗಗಳು ಸವೆಯುತ್ತಿದ್ದರೂ ಅದನ್ನು ಪುನಃಶ್ಚೇತನಗೊಳಿಸುವ ಶಕ್ತಿ ದೇವರು ಕೊಟ್ಟಿರುತ್ತಾನೆ. ಆದರೆ, ಅತಿ ಹೆಚ್ಚಾಗಿ ಸವೆದ ಅಥವಾ ಅಪಘಾತಗಳಿಂದುಂಟಾಗುವ ನೋವುಗಳಿಗೆ ಕೋಲ್ಡ್ ಲೇಸರ್ ಕಿರಣಗಳ ಮೂಲಕ ಪುನರುತ್ಪತ್ತಿ ಮಾಡಲು ಸಹಕರಿಸುತ್ತದೆ.
ವೈಜ್ಞಾನಿಕ ಪ್ರಯೋಗ ಮತ್ತು ಸಂಶೋಧನೆಯಲ್ಲಿ ಎಳೆಯ ಬಿಸಿಲು, ಸೂರ್ಯ ಕಿರಣಗಳು ಹಾಗೂ ಕೋಲ್ಡ್ ಲೇಸರ್ ಕಿರಣಗಳು , ಜೀವಕೋಶಗಳು, ಅಂಗಾಂಶಗಳು ಮತ್ತು ನರನಾಡಿಗಳ ಪುನಃಶ್ಚೇತನಕ್ಕೆ ಬಹಳಷ್ಟು ಪರಿಣಾಮಕಾರಿಯಾಗಿ ಸಹಾಯ ಮಾಡುವುದನ್ನು ಗಮನಿಸಿದ್ದಾರೆ. ಕೋಲ್ಡ್ ಲೇಸರ್ ಚಿಕಿತ್ಸೆಯ ಮೂಲಕ ಶರೀರದಲ್ಲಿರುವ ರಾಸಾಯನಿಕ ವಸ್ತುಗಳನ್ನು ಹೊರಹಾಕಿ ಎಲ್ಲ ಅಂಗಾಂಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ತುಂಬಾ ಸಹಕಾರಿಯಾಗಿದೆ. ಮಧುಮೇಹಿಗಳು ಹಾಗೂ ದೀರ್ಘಕಾಲದ ಔಷಧ-ಚಿಕಿತ್ಸೆ ಪಡೆಯುವವರ ಶರೀರಕ್ಕೆ ಸ್ವಲ್ಪ ಹೆಚ್ಚು ಲೇಸರ್ ಕಿರಣಗಳ ಚಿಕಿತ್ಸೆ ಬೇಕಾಗುತ್ತದೆ. ಅಲ್ಲದೆ, ಹೆಚ್ಚು ಆರೋಗ್ಯಕರ ಜೀವಕೋಶ ಮತ್ತು ಅಂಗಾಂಶಗಳ ಕೊರತೆಯಿದ್ದಾಗ ಹೆಚ್ಚಿನ ಚಿಕಿತ್ಸೆ ಬೇಕಾಗುತ್ತದೆ.
ಕೋಲ್ಡ್ ಲೇಸರ್ ಚಿಕಿತ್ಸೆಯಿಂದ ದೀರ್ಘಕಾಲದ ನೋವುಗಳನ್ನು 10 ದಿನಗಳಿಂದ 30 ದಿನಗಳಲ್ಲಿ ನೋವುಗಳನ್ನು ಉಪಶಮನ ಮಾಡಬಹುದು. ಕೋಲ್ಡ್ ಲೇಸರ್ ತಂತ್ರಜ್ಞಾನ ವಿಶ್ವದ ಉತ್ಕೃಷ್ಟ ಚಿಕಿತ್ಸೆಯಾಗಿದ್ದು ಶರೀರದ ಎಲ್ಲ ಮೂಳೆನೋವು, ಸಂಧಿವಾತ ಹಾಗೂ ಕೀಲು ನೋವುಗಳಿಗೆ ರಾಮಬಾಣವಾಗಿದೆ.

ಡಾ|| ನಂದನ್‌ರವರ ಕೋಲ್ಡ್ ಲೇಸರ್ ಚಿಕಿತ್ಸಾ ಕೇಂದ್ರ
ನಂ. 55/1, ಈಸ್ಟ್ ಪಾರ್ಕ್ ರಸ್ತೆ, 15ನೇ ಅಡ್ಡರಸ್ತೆ, ಬೀಗೆಲ್ಸ್ ಬಾಸ್ಕೆಟ್ ಕೋರ್ಟ್ ಎದುರು, ಮಲ್ಲೇಶ್ವರಂ, ಬೆಂಗಳೂರು-560055

Phone: 08040983273 ,

E- mail: info@sreesanjeevini.com

www.sreesanjeevini.com

1) ಮಲ್ಲೇಶ್ವರಂ – 8884493275/080-411272201
2) ಬಸವನಗುಡಿ – 8884493270/080-41206912
3) ಜೆ.ಪಿ. ನಗರ – 8884493280
4) ಕೆಜಿಎಫ್– 9632242414
5) ಮಧುಮೇಹ ನಿಯಂತ್ರಣ ಕೇಂದ್ರ, ಬಸವನಗುಡಿ – 8762406657
6) ಧೂಮಪಾನ, ಮದ್ಯಪಾನ, ಮಾದಕ ವ್ಯಸನ ಮುಕ್ತಿ ಕೇಂದ್ರ – 8884493273

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!