ಹಾಲಿನೊಂದಿಗೆ ಬೆಳ್ಳುಳ್ಳಿ ಹಾಕಿ ಕಾಯಿಸಿ ಕುಡಿದರೆ ಏನಾಗುತ್ತದೆ ಅಂತ ನಿಮಗೆ ಗೊತ್ತಾ?

ಹಾಲಿನೊಂದಿಗೆ ಬೆಳ್ಳುಳ್ಳಿ ಹಾಕಿ ಕಾಯಿಸಿ ಕುಡಿದರೆ ಸಾಕಷ್ಟು ಪ್ರಯೋಜನಗಳಿವೆ. ಜ್ವರ ಕಾರಣ ಪ್ಲೇಟ್‍ಲೆಟ್‍ಗಳು ಕಡಿಮೆಯಾಗುತ್ತಿರುವವರಿಗೆ ಇದು ಒಳ್ಳೆಯ ಔಷಧ. ಪ್ಲೇಟ್‍ಲೆಟ್‍ಗಳು ವೇಗವಾಗಿ ಹೆಚ್ಚಾಗುತ್ತವೆ. ಇನ್‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ. ಹಾಲಿನಲ್ಲಿ ಬೆಳ್ಳುಳ್ಳಿ ಎಸಳನ್ನು ಹಾಕಿ ಕುದಿಸಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಲಭಿಸುತ್ತವೆ.

ಹಾಲಿನೊಂದಿಗೆ ಬೆಳ್ಳುಳ್ಳಿ ಹಾಕಿ ಕಾಯಿಸಿ ಕುಡಿದರೆ ಏನಾಗುತ್ತದೆ ಅಂತ ನಿಮಗೆ ಗೊತ್ತಾ?

ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ.

1. ಹಾಲಿನಲ್ಲಿ ಬೆಳ್ಳುಳ್ಳಿ ಎಸಳನ್ನು ಹಾಕಿ ಕುದಿಸಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಲಭಿಸುತ್ತವೆ. ಫ್ಲೇವನಾಡ್ಸ್, ಎಂಜೈಮ್‍ಗಳು, ಆಂಟಿ ಆಕ್ಸಿಡೆಂಟ್‍ಗಳು, ಮಿನರಲ್‍ಗಳು, ವಿಟಮಿನ್‍ಗಳು ಲಭ್ಯವಾಗುತ್ತವೆ. ವಿಟಮಿನ್ ಎ, ಬಿ1, ಬಿ2, ಬಿ6, ಸಿ ವಿಟಮಿನ್, ಪೊಟ್ಯಾಷಿಯಂ, ಪ್ರೋಟೀನ್, ಕಾಪರ್, ಮ್ಯಾಂಗನೀಸ್, ಫಾಸ್ಪರಸ್, ಜಿಂಕ್, ಸೆಲೇನಿಯಂ, ಕ್ಯಾಲ್ಸಿಯಂನಂತಹ ಅನೇಕ ಪೋಷಕಾಂಶಗಳು ಈ ಮಿಶ್ರಣದ ಮೂಲಕ ನಮಗೆ ದೊರೆಯುತ್ತವೆ.

2, ಜ್ವರ ಕಾರಣ ಪ್ಲೇಟ್‍ಲೆಟ್‍ಗಳು ಕಡಿಮೆಯಾಗುತ್ತಿರುವವರಿಗೆ ಇದು ಒಳ್ಳೆಯ ಔಷಧ. ಪ್ಲೇಟ್‍ಲೆಟ್‍ಗಳು ವೇಗವಾಗಿ ಹೆಚ್ಚಾಗುತ್ತವೆ. ಇನ್‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ.

3. ಕೆಟ್ಟ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ಒಳ್ಳೆಯ ಕೊಲೆಸ್ಟಾರಾಲ್ ಹೆಚ್ಚಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳು ಗುಣವಾಗುತ್ತವೆ. ಅದೇನು ಇಲ್ಲದವರಿಗೆ ಭವಿಷ್ಯದಲ್ಲಿ ಬರುವುದಿಲ್ಲ.

4. ಹಲವು ವಿಧದ ಕ್ಯಾನ್ಸರ್‍ಗಳನ್ನು ಗುಣಪಡಿಸುವ ಶಕ್ತಿ ಈ ಮಿಶ್ರಣಕ್ಕಿದೆ. ಆಂಟಿ ಆಕ್ಸಿಡೆಂಟ್‍ಗಳು ಹೆಚ್ಚಾಗಿ ಲಭ್ಯವಾಗುವ ಕಾಅಣ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ. ಕ್ಯಾನ್ಸರ್ ಕಣಗಳ ವೃದ್ಧಿ ಕಡಿಮೆಯಾಗುತ್ತದೆ.

5. ವಯಸ್ಸು ಹೆಚ್ಚಾದಂತೆ ಕಾಣಿಸಿಕೊಳ್ಳುವ ವೃದ್ದಾಪ್ಯ ಕುರುಹುಗಳು ಬರುವುದಿಲ್ಲ. ಆಂಟಿ ಏಜಿಂಗ್ ಲಕ್ಷಣಗಳು ಧಾರಾಳವಾಗಿ ಇರುವ ಕಾರಣ, ಯೌವ್ವನವಾಗಿ ಕಾಣಿಸುತ್ತಾರೆ.

6. ರಕ್ತದೊತ್ತಡ, ಮಧುಮೇಹ ಹಿಡಿತದಲ್ಲಿರುತ್ತದೆ. ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಲಿವರ್ ಶುದ್ಧವಾಗುತ್ತದೆ.

7. ಗಾಯಗಳಾಗಿರುವವರು ಈ ಮಿಶ್ರಣವನ್ನು ಕುಡಿದರೆ ಅವು ಶೀಘ್ರದಲ್ಲಿ ಗುಣಮುಖವಾಗುವ ಸಾಧ್ಯತೆಗಳಿವೆ. ಏಕೆಂದರೆ ಈ ಮಿಶ್ರಣದಲ್ಲಿ ಎರಡು ಪಟ್ಟು ಆಂಟಿ ಬಯೋಟಿಕ್ ಲಕ್ಷಣಗಳಿರುತ್ತವೆ.

8. ರಕ್ತ ಗಡ್ಡೆ ಕಟ್ಟದಂತೆ ನೋಡಿಕೊಳ್ಳುತ್ತದೆ. ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ.

9. ಚಯಾಪಚಯ ಪ್ರಕ್ರಿಯೆ ಚುರುಕಾಗುತ್ತದೆ. ಅಧಿಕ ತೂಕ ಇರುವವರಿಗೆ ತೂಕ ಕಡಿಮೆಯಾಗುತ್ತಾರೆ.

10. ಕೆಮ್ಮು, ಜ್ವರದಂತಹ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಗುಣವಾಗುತ್ತವೆ. ದಂತ ಸಂಬಂಧಿ ಸಮಸ್ಯೆಗಳು ಇದ್ದರೆ ದೂರವಾಗುತ್ತವೆ.

11. ಚರ್ಮಕ್ಕೆ ಆಗಿರುವ ಫಂಗಸ್ ಇನ್‍ಫೆಕ್ಷನ್ ಗುಣವಾಗುತ್ತದೆ. ಚರ್ಮ ಸೌಂದರ್ಯ ಉತ್ತಮಗೊಳ್ಳುತ್ತದೆ. ಮೊಡವೆಗಳು ಬರುವುದಿಲ್ಲ.

12. ಮೂಳೆಗಳು ದೃಢವಾಗುತ್ತವೆ. ಮೂಳೆ ಮುರಿದವರಿಗೆ ಈ ಮಿಶ್ರಣ ಕುಡಿಸಿದರೆ ಅವು ಕೂಡಿಕೊಳ್ಳುವ ಅವಕಾಶ ಇದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!