ಮಹಿಳೆಯರಲ್ಲಿ ಹೆಚ್ಚುತ್ತಿರುವ ಶ್ವಾಸಕೋಶ ಕ್ಯಾನ್ಸರ್

 
ಡಾ. ರಮೇಶ್ ಬಿ.
ಆಲ್ಟಿಯಸ್ ಹಾಸ್ಪಿಟಲ್,
# 6/63, 59ನೇ ಅಡ್ಡರಸ್ತೆ, 4ನೇ ಬ್ಲಾಕ್, ರಾಜಾಜಿನಗರ ಪ್ರವೇಶ ದ್ವಾರ, ಎಂಇಐ ಪಾಲಿಟೆಕ್ನಿಕ್ ಎದುರು,
ಬೆಂಗಳೂರು – 560010 ಫೋನ್ : 080-23151873, ಮೊಬೈಲ್ : 9900031842, 9844291777
ಇ-mಚಿiಟ : eಟಿಜoಡಿಚಿm2006@ಥಿಚಿhoo.ಛಿo.iಟಿ
ಜಡಿ.ಡಿಚಿmeshb@ಥಿಚಿhoo.ಛಿom
ತಿತಿತಿ.ಟಚಿಠಿಚಿಡಿosಛಿoಠಿiಛಿsuಡಿgeಡಿies.ಛಿom
ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುತ್ತಿರುವ ಮಹಾಮಾರಿ ಕ್ಯಾನ್ಸರ್ ವಿವಿಧ ರೂಪದಲ್ಲಿ ರೋಗಿಗಳನ್ನು ಕಾಡುತ್ತಿದೆ. ಕ್ಯಾನ್ಸರ್‍ನ ವಿವಿಧ ಪ್ರಕಾರಗಳಲ್ಲಿ ಶ್ವಾಸಕೋಶ ಅರ್ಬುದ ರೋಗ ಅಥವಾ ಲಂಗ್ಸ್ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ  ಮೇಲುಗೈ ಸಾಧಿಸಿದೆ. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಹಲವಾರು ರೀತಿಯ ಕ್ಯಾನ್ಸರ್ ರೋಗಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಶ್ವಾಸಕೋಶ ಕ್ಯಾನ್ಸರ್‍ಗೆ ಪ್ರಥಮ ಸ್ಥಾನ ದೊರೆತಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ.
ಶ್ವಾಸಕೋಶ ಕ್ಯಾನ್ಸರ್‍ಗೆ ತುತ್ತಾಗುತ್ತಿರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟರಿ ನೀಡಿರುವ ಅಂಕಿ-ಅಂಶಗಳ ಪ್ರಕಾರ ನವದೆಹಲಿ, ಮುಂಬೈ, ಚೆನ್ನೈ ಹಾಗೂ ಬೆಂಗಳೂರು ನಗರಗಳಲ್ಲಿ ಲಂಗ್ಸ್ ಕ್ಯಾನ್ಸರ್‍ನಿಂದ ಬಳಲುತ್ತಿರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಇದಕ್ಕೆ ಕಾರಣಗಳು ಹಲವಾರು. ಹೆಚ್ಚುತ್ತಿರುವ ನಗರೀಕರಣ, ಪರಿವರ್ತನೆಯಾಗುತ್ತಿರುವ ಜೀವನ ಶೈಲಿ, ಪರಿಸರ ಮಾಲಿನ್ಯ, ಮಾನಸಿಕ ಒತ್ತಡ, ಧೂಮಪಾನ, ತಂಬಾಕು ಸೇವನೆ ಮೊದಲಾದ ಕಾರಣಗಳಿಂದ ಶ್ವಾಸಕೋಶ ಕ್ಯಾನ್ಸರ್ ಹತೋಟಿ ಇಲ್ಲದೇ ವೃದ್ದಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರಲ್ಲಿ ಧೂಮಪಾನ ವ್ಯಸನ ಹೆಚ್ಚಾಗುತ್ತಿರುವುದರಿಂದ ಶ್ವಾಸಕೋಶದ ಕ್ಯಾನ್ಸರ್‍ಗೆ ತುತ್ತಾಗುತ್ತಿರುವ ಮಹಿಳೆಯರ ಸಂಖ್ಯೆಯು ವೃದ್ದಿಯಾಗುತ್ತಿರುವುದು ದುರಂತದ ವಿಚಾರ.
ಜನಸಂಖ್ಯೆ ಆಧರಿತ ಸಮೀಕ್ಷೆ ಪ್ರಕಾರ ಬೆಂಗಳೂರಿನ 1 ಲಕ್ಷ ಜನರ ಪೈಕಿ ಸುಮಾರು 12 ಪುರುಷರು ಮತ್ತು 5 ಮಹಿಳೆಯರು ಶ್ವಾಸಕೋಶ ಕ್ಯಾನ್ಸರ್‍ನಿಂದ ನರಳುತ್ತಿದ್ದಾರೆ. ಇದು ಗಂಡಾಂತರ ಸನ್ನಿವೇಶಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಹೆಚ್ಚುತ್ತಿರುವ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳಿಗೆ ಧೂಮಪಾನವೇ ಪ್ರಮುಖ ಕಾರಣ. ಬಿಡುವಿಲ್ಲದ ಬದುಕು ಮತ್ತು ಕೆಲಸದ ಒತ್ತಡಗಳಿಂದ ತಾತ್ಕಾಲಿಕವಾಗಿ ಹೊರಬರಲು ಜನರು ಮಾರಕ ಧೂಮಪಾನ ವ್ಯಸನದ ಮೊರೆ ಹೋಗುತ್ತಿದ್ದಾರೆ. ಇನ್ನು ಯುವ ಜನರಲ್ಲಂತೂ ಧೂಮಪಾನ ಫ್ಯಾಷನ್ ಆಗಿದ್ದು ತೀರಾ ಸಾಮಾನ್ಯ ಸಂಗತಿಯಾಗಿದೆ. ಹಾಗೆಂದ ಮಾತ್ರಕ್ಕೆ ಲಂಗ್ಸ್ ಕ್ಯಾನ್ಸರ್ ಕೇವಲ ಧೂಮಪಾನಿಗಳಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಧೂಮಪಾನಿಗಳು ಹೊರ ಬಿಡುವ ಹೊಗೆ ಸೇವಿಸಿದ ಧೂಮಪಾನ ವ್ಯಸನಿಗಳಲ್ಲದ ಪ್ಯಾಸಿವ್ ಸ್ಮೋಕರ್‍ಗಳೂ ಕೂಡ ಈ ಪಟ್ಟಿಯಲ್ಲಿರುವುದು ಅಪಾಯದ ಎಚ್ಚರಿಕೆ ಗಂಟೆಯಾಗಿದೆ.
ವೈಜ್ಞಾನಿಕ ಅಂಕಿ-ಅಂಶಗಳ ಪ್ರಕಾರ, ಸಿಗರೇಟ್, ಬೀಡಿ, ಚುಟ್ಟಾ, ಪೈಪ್ ಸೇವನೆ ಮಾಡುವವರು ಸ್ಟ್ಯಾಮೋಸೆಲ್ ಕಾರ್ಸಿನೋಮಾ ಎಂಬ ಕ್ಯಾನ್ಸರ್‍ಗೆ ತುತ್ತಾಗಲಿದ್ದು, ಇವರು ಶೇ.20ಕ್ಕಿಂತ ಹೆಚ್ಚು ಪ್ರಮಾಣದ ಹಾನಿಕಾರಕ ಅಂಶವನ್ನು ವಿಷವಸ್ತುವಿನ ರೂಪದಲ್ಲಿ ಶ್ವಾಸಕೋಶದ ಒಳಗೆ ತೆಗೆದುಕೊಳ್ಳುತ್ತಾರೆ.
ಇನ್ನೊಂದು ಗಂಡಾಂತರದ ಸಂಗತಿ ಎಂದರೆ, ಉಳಿದ ಶೇ.80ರಷ್ಟು ಹಾನಿಕಾರಕ ಅಂಶ ಧೂಮಪಾನಿಗಳು ಹೊರ ಬಿಡುವ ಹೊಗೆಯ ಮೂಲಕ ಧೂಮಪಾನ ಮಾಡದೇ ಇರುವವವರ ಪಾಲಿಗೆ ಸೇರುತ್ತದೆ. ಇಂಥ ಪ್ಯಾಸಿವ್ ಸ್ಮೋಕರ್‍ಗಳು ಅಡಿನೋ ಕ್ಯಾರ್ಸಿನೋಮಾ ಎಂಬ ಸಮಸ್ಯೆಯಿಂದ ಬಳಲುತ್ತಾರೆ. ಇದರೊಂದಿಗೆ ತಂಬಾಕು ಸೇವನೆಯೂ ಇಂಥ ಕ್ಯಾನ್ಸರ್‍ಗೆ ತನ್ನ ಕೊಡುಗೆಯನ್ನು ನೀಡಲಿದ್ದು, ರಕ್ತನಾಳಗಳನ್ನು ಸಂಕುಚಿತಗೊಳಿಸುವ ಮೂಲಕ ಉಸಿರಾಟದ ಸಮಸ್ಯೆಗೂ ಕಾರಣವಾಗುತ್ತದೆ.
ವಾಯು ಮಾಲಿನ್ಯದ ಪರಿಣಾಮ
ಮಹಾನಗರಗಳು ಸೇರಿದಂತೆ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ದ್ವಿಗುಣಗೊಳ್ಳಲು ಪ್ರಮುಖ ಕಾರಣವಾಗಿದೆ. ವಿವಿಧ ರೂಪದ ಮಾಲಿನ್ಯದ ಪರಿಣಾಮವಾಗಿ ಪರಿಸರದಲ್ಲಿ ಸಲ್ಫರ್ ಡೈ ಆಕ್ಸೈಡ್, ಆಕ್ಸೈಡ್ ಆಫ್ ನೈಟ್ರೋಜೆನ್, ರೆಸಿಸ್ಟೆಬಲ್ ಪರ್ಟಿಕೈಲೇಟೆಡ್ ಮ್ಯಾಟರ್, ಕಾರ್ಬನ್ ಮೊನೊಕ್ಸೈಡ್ ಮೊದಲಾದ ವಿಷಕಾರಿ ಅನಿಲಗಳು ಯಥೇಚ್ಚವಾಗಿ ಸೇರಿಕೊಂಡಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯೂ ಈ ವಿಷಾನಿಲಗಳ ವೃದ್ದಿಗೆ ತನ್ನ ಉಡುಗೊರೆ ನೀಡಿದೆ. ಇಂಥ ವಿಷಾನಿಲಗಳ ಸೇವನೆಯಿಂದ ಅರಂಭದಲ್ಲಿ ಕೆಮ್ಮು, ಉಬ್ಬಸ, ಆಸ್ತಮಾ, ಚರ್ಮರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಂತರ ಉಸಿರಾಟಕ್ಕೆ ತೊಂದರೆಯಾಗಿ ಶ್ವಾಸಕೋಶದ ಕ್ಯಾನ್ಸರ್‍ಗೆ ಎಡೆ ಮಾಡಿಕೊಡುತ್ತದೆ.
ಮಹಿಳೆಯರಲ್ಲಿ ಹೆಚ್ಚುತ್ತಿರುವ ಧೂಮಪಾನ
ಮಹಿಳೆಯರೂ ಧೂಮಪಾನ ವ್ಯಸನಕ್ಕೆ ಒಳಗಾಗುತ್ತಿರುವುದರಿಂದ ಶ್ವಾಸಕೋಶ ಕ್ಯಾನ್ಸರ್‍ಗೆ ತುತ್ತಾಗುವ ಮಹಿಳೆಯರ ಸಂಖ್ಯೆಯಲ್ಲೂ ತೀವ್ರ ಏರಿಕೆ ಕಂಡು ಬರುತ್ತಿದೆ. ಈ ಮುನ್ನ 1 ಲಕ್ಷ ಮಹಿಳೆಯರಲ್ಲಿ ಇಬ್ಬರಿಗೆ ಮಾತ್ರ ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗುತ್ತಿತ್ತು. ಆದರೆ, ಈಗ ಈ ಸಂಖ್ಯೆ ಐದಕ್ಕಿಂತ ಹೆಚ್ಚಾಗಿರುವುದು ಆಘಾತಕರ ಸುದ್ದಿಯಾಗಿದೆ.
ಮಹಿಳೆಯರಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಡಯಟ್ ಮನೋಭಾವ ಧೂಮಪಾನಕ್ಕೆ ಮತ್ತೊಂದು ಕಾರಣ. ಧೂಮಪಾನ ಮಾಡುವ ಮೂಲಕ ಹಸಿವನ್ನು ನಿಯಂತ್ರಿಸುವ ಮೂಲಕ ದೇಹವನ್ನು ದಂಡಿಸುವ ಪ್ರಕ್ರಿಯೆಗೆ ಮಹಿಳೆಯರು ಅಂಟಿಕೊಂಡಿದ್ದಾರೆ. ಇದು ಶ್ವಾಸಕೋಶದ ಕ್ಯಾನ್ಸರ್‍ಗೆ ಮಾತ್ರವಲ್ಲ, ಮುಂದೆ ಹುಟ್ಟುವ ಮಕ್ಕಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದ್ದು, ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗಿದೆ.
ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಬಳಕೆ ಕೇವಲ ಲಂಗ್ಸ್ ಕ್ಯಾನ್ಸರ್‍ಗಷ್ಟೇ ಮೀಸಲಾಗಿಲ್ಲ. ಬದಲಾಗಿ ಸಿಗರೇಟ್ ಮತ್ತು ಬೀಡಿಯಲ್ಲಿರುವ ಹಾನಿಕಾರಕ ಅಂಶಗಳು ಶ್ವಾಸಕೋಶದೊಳಗೆ ಇಳಿಯುವ ಮೂಲಕ ರಕ್ತ ನಾಳಗಳ ಮೇಲೂ ದುಷ್ಪರಿಣಾಮ ಬೀರುತ್ತವೆ.
ರಕ್ತ ವಾಹಿನಿಗಳು ಸಂಕುಚಿತಗೊಂಡಾಗ ಹೃದಯಕ್ಕೆ ಪೂರೈಕೆಯಾಗುವ ರಕ್ತ ಸಂಚಾರಕ್ಕೂ ಹಾನಿಯುಂಟಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್‍ಗೆ ತುತ್ತಾದ ರೋಗಿಯ ಮೆದುಳು, ಬೆನ್ನುಹುರಿ, ಪಿತ್ತ ಜನಕಾಂಗ ಮತ್ತಿತರ ಅಂಗಾಂಶಗಳ ಮೇಲೆ ಅಡ್ಡ ಪರಿಣಾಮ ಬೀರುವುದು ಸಾಮಾನ್ಯ ಸಂಗತಿಯಾಗಿದೆ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!