ಕತ್ತಲಲ್ಲಿ ಮೊಬೈಲ್ ನೋಡಿದರೆ ದೃಷ್ಟಿ ನಾಶವಾದೀತು ಎಚ್ಚರ..!

ಕತ್ತಲಲ್ಲಿ ಮೊಬೈಲ್ ಬಳಸಿದರೆ ನೇತ್ರ ದೃಷ್ಟಿ ನಾಶವಾಗಬಹುದು..! ಮಲಗಿದ ನಂತರ ಕತ್ತಲಲ್ಲಿ ಸ್ಮಾರ್ಟ್‍ಫೋನ್‍ಗಳನ್ನು ಬಳಸುತ್ತಿರುವವರು ಹಲವು ಗಂಭೀರ ಸ್ವರೂಪದ ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿದ್ದು, ಮೊಬೈಲ್ ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕತ್ತಲಲ್ಲಿ ಮೊಬೈಲ್ ನೋಡಿದರೆ ದೃಷ್ಟಿ ನಾಶವಾದೀತು ಎಚ್ಚರ..!

ಕತ್ತಲಲ್ಲಿ ಮೊಬೈಲ್ ಬಳಕೆ ಮಾಡುವುದರಿಂದ ಕಣ್ಣಿನ ರೆಟಿನಾ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ರೆಟಿನ ಅಥವಾ ಅಕ್ಷಿಪಟಲವು ನರ ಸಂವೇದಿ ಜೀವಕೋಶವಾಗಿದೆ. ಕಣ್ಣಿನ ಗೋಡೆಯ ಒಳಗೆ ರೆಟಿನಾ ಅಥವಾ ಕಣ್ಣಿನ ಬೆಳಕು ಸಂವೇದಿ ಅಂಗಾಂಶವಾಗಿದ್ದು, ಬಂಡೆಯ ಗೋಡೆಯ ಮೇಲೆ ವಾಲ್ ಪೇಪರ್‍ನಂತೆ ಇರುತ್ತದೆ. ಕ್ಯಾಮೆರಾದಲ್ಲಿನ ಫಿಲ್ಮ್‍ನಂತೆ, ನಿಮ್ಮ ಕಣ್ಣಿನ ಒಳಗೆ ಬರುವ ಬೆಳಕನ್ನು ರೆಟಿನ ದೃಷ್ಟಿಯಾಗಿ ಪರಿವರ್ತಿಸುತ್ತದೆ. ರೆಟಿನ ಮಧ್ಯಭಾಗವನ್ನು ಮ್ಯಾಕುಲಾ ಎನ್ನುವರು.

ಅಕ್ಷಿಪಟಲ ಅಥವಾ ಮ್ಯಾಕುಲಾ, ರೆಟಿನಾದ ಭಾಗವಾಗಿದ್ದು, ಅದು ನಿಮ್ಮ ಸ್ಪಷ್ಟ ದೃಷ್ಟಿಗೆ ನೆರವಾಗಿ, ನೀವು ದೃಶ್ಯವನ್ನು ಹೆಚ್ಚು ಸ್ಪಷ್ಟವಾಗಿ ನೋಡಲು ಅವಕಾಶ ಮಾಡಿಕೊಡುತ್ತದೆ. ಮ್ಯಾಕುಲಾದ ಒಂದು ಭಾಗವು ದೃಷ್ಟಿ ಗ್ರಹಿಸುವ ಮತ್ತು ಮುಖವನ್ನು ಗುರುತಿಸುವ ಇತ್ಯಾದಿಯಂಥ ಉತ್ತಮ ಸವಿವರ ದೃಷ್ಟಿ ಸಾಮಥ್ರ್ಯವನ್ನು ಹೊಂದಿರುತ್ತದೆ. ರೆಟಿನದ ಉಳಿದ ಭಾಗವು ಸಮಾನಾಂತರ ರೆಟಿನಾವಾಗಿದ್ದು, ಪಾಶ್ರ್ವ ದೃಷ್ಟಿಗೆ ಸಹಕಾರಿಯಾಗಿದೆ.

ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ

ಆದರೆ ಕತ್ತಲಲ್ಲಿ ಮೊಬೈಲ್/ಸೆಲ್ ಫೋನ್‍ನಿಂದ ಹೊರಹೊಮ್ಮುವ ಬೆಳಕಿನಿಂದ ರೆಟಿನಾ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಇದರಿಂದ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಖ್ಯಾತ ವೈದ್ಯರು ಮತ್ತು ನೇತ್ರತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಂಡನ್‍ನ ಮೋರ್‍ಫೀಲ್ಡ್ ನೇತ್ರ ಆಸ್ಪತ್ರೆಯಲ್ಲಿ ಇಂಥ ಪ್ರಕರಣಗಳು ವರದಿಯಾಗಿವೆ. ಈ ರೀತಿಯ ರೋಗಿಗಳಲ್ಲಿ  ಇಬ್ಬರು ಸ್ಮಾರ್ಟ್ ಫೋನ್‍ಗಳನ್ನು ಕತ್ತಲಿನಲ್ಲಿ ನೋಡಿರುವುದರಿಂದ ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ. ಒಂದು ಕಣ್ಣು ದಿಂಬಿನ ಕಾರಣದಿಂದ ಮುಚ್ಚಲ್ಪಡುತ್ತಿದ್ದರಿಂದ ಬಲಗಣ್ಣಿನ ಮೇಲೆ ಫೋನ್ ಬೆಳಕು ಪ್ರಭಾವ ಬೀರಿದ್ದು, ಆ ಇಬ್ಬರಲ್ಲೂ ಬಲಗಣ್ಣಿನ ದೃಷ್ಟಿ ನಶಿಸಿ ಹೋಗಿದೆ.

Also Read: ಮೊಬೈಲ್ ಅತಿಹೆಚ್ಚು ಬಳಕೆ – ಮೆದಳು ಮಂಕಾಗಿಸುವ ಮಂತ್ರ 

ಮಲಗಿದ ನಂತರ ಕತ್ತಲಲ್ಲಿ ಸ್ಮಾರ್ಟ್‍ಫೋನ್‍ಗಳನ್ನು ಬಳಸುತ್ತಿರುವವರು ಹಲವು ಗಂಭೀರ ಸ್ವರೂಪದ ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಬೆಳಕಿನಿಂದ ಕತ್ತಲೆಗೆ ಹೋದಾಗ ರೆಟಿನಾ ಹೊಂದಾಣಿಕೆಗೆ ಕೆಲವು ಸಮಯ ಬೇಕಾಗುತ್ತದೆ. ಹೀಗಾಗಿ ಕತ್ತಲಲ್ಲಿ ಅಗಾಗ ಮೊಬೈಲ್ ಫೋನ್ ನೋಡುವುದರಿಂದ ರೆಟಿನಾ ಮೇಲೆ ಪ್ರಭಾವ ಬೀರಿ, ಅದು ಕಣ್ಣಿನ ದೃಷ್ಟಿಯ ಮೇಲೆ ಅದು ಗಂಭೀರ ದುಷ್ಪರಿಣಾಮ ಉಂಟು ಮಾಡುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

Dr-Bhujanga-Shetty.

ಡಾ. ಕೆ.ಭುಜಂಗ ಶೆಟ್ಟಿ
ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ
121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್, ಬೆಂಗಳೂರು-10,

ದೂ:080- 66974000/01/02/03
Email : info@narayananethralaya.com ; info@nnmail.org

Website : www.narayananethralaya.org

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!