ಹೈಪರ್ ಪ್ಯಾರಾಥೈರಾಯ್ಡಿಸಮ್

ಪ್ಯಾರಾಥೈರಾಯ್ಡ್ ಗ್ರಂಥಿಗಳು ನಮ್ಮ ರಕ್ತ ಮತ್ತು ಮೂಳೆಗಳಲ್ಲಿ ಕ್ಯಾಲ್ಷಿಯಂನ ಪ್ರಮಾಣವನ್ನು ನಿಯಂತ್ರಿಸುತ್ತವೆ. 250 ಜನರಲ್ಲಿ ಒಬ್ಬರಿಗೆ (50 ವರ್ಷಗಳಿಗೆ ಮೇಲ್ಪಟ್ಟ ಮಹಿಳೆಯರಲ್ಲಿ 100ರಲ್ಲಿ ಒಬ್ಬರಿಗೆ) ಪ್ಯಾರಾಥೈರಾಯ್ಡ್ ಗ್ರಂಥಿಯ ಗಡ್ಡೆ ಕಾಣಿಸಿಕೊಂಡು ಹೈಪರ್‍ಪ್ಯಾರಾಥೈರಾಯ್ಡಿಸಮ್ ಎಂದು ಕರೆಯಲ್ಪಡುವ ಪ್ಯಾರಾಥೈರಾಯ್ಡ್ ರೋಗಕ್ಕೆ ಕಾರಣವಾಗುತ್ತದೆ. ಹೈಪರ್ ಪ್ಯಾರಾಥೈರಾಯ್ಡಿಸಮ್ ಒಂದು ವಿನಾಶಕಾರಿ ರೋಗವಾಗಿದ್ದು, ಅದು ಅಧಿಕ ಬ್ಲಡ್ ಕ್ಯಾಲ್ಷಿಯಂಗೆ ಕಾರಣವಾಗಿ ಆರೋಗ್ಯ ಸಮಸ್ಯೆಗಳು ಮತ್ತು ವಯಸ್ಸಿಗೆ ಮುನ್ನವೇ ಸಾವಿಗೂ ಎಡೆ ಮಾಡಿಕೊಡುತ್ತದೆ. ಬಹುತೇಕ ರೋಗಿಗಳಲ್ಲಿ ಇದು ಸುಲಭವಾಗಿ ವಾಸಿ ಮಾಡಬಹುದಾದ ರೋಗವಾಗಿದ್ದು, ಪ್ಯಾರಾಥೈರಾಯ್ಡ್ ಗ್ರಂಥಿ ಗಡ್ಡೆಯನ್ನು ತೆಗೆಯುವುದರೊಂದಿಗೆ 20 ನಿಮಿಷಗಳಲ್ಲಿ ಇನ್ನು ನಡೆಸಬಹುದಾಗಿದೆ.
ಪ್ಯಾರಾಥೈರಾಯ್ಡ್ ಗ್ರಂಥಿಗಳು (ನಾಲ್ಕು ಸಂಖ್ಯೆಯಲ್ಲಿರುತ್ತವೆ) ಕುತ್ತಿಗೆಯಲ್ಲಿ ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಯ ಹಿಂದೆ ಎಂಡೋಕ್ರೈನ್ ಸಿಸ್ಟಮ್‍ನ ಪುಟ್ಟ ಗ್ರಂಥಿಗಳಾಗಿರುತ್ತವೆ. ಇದು ಸಾಮಾನ್ಯವಾಗಿ ಭತ್ತದ ಕಾಳಿನ ಗಾತ್ರದಲ್ಲಿರುತ್ತವೆ. ಸಾಂದರ್ಭಿಕವಾಗಿ ಇವು ಬಟಾಣಿ ಕಾಳಿನಷ್ಟು ದೊಡ್ಡದಾಗಿದ್ದರೂ ಅದು ಸಾಧಾರಣವಾಗಿರುತ್ತದೆ. ಸಾಮಾನ್ಯವಾಗಿ ಪ್ಯಾರಾಥೈರಾಯ್ಡ್ ಗ್ರಂಥಿಗಳು ಹಳದಿ ಸಾಸುವೆ ಬಣ್ಣವನ್ನು ಹೊಂದಿದ್ದು, ಗುಲಾಬಿ ವರ್ಣದ ಥೈರಾಯ್ಡ್ ಗ್ರಂಥಿಯ ಹಿಂದೆ ಇರುತ್ತದೆ. ಲಘು ಮಬ್ಬು ಬಣ್ಣದ ನಾಳವು ಶ್ವಾಸನಾಳದ ಮಧ್ಯದಲ್ಲಿರುತ್ತದೆ. ಹೃದಯದಿಂದ ಮೆದುಳಿಗೆ ಸಂಪರ್ಕ ಹೊಂದಿರುವ ಥೈರಾಯ್ಡ್ ಗ್ರಂಥಿಯ ಎರಡು ಭಾಗಗಳ ಮೇಲೆ ಕೊರೊಟಿಡ್ ಆರ್ಟರಿಗಳನ್ನು ಕಾಣಬಹುದು. ಈ ಚಿತ್ರದಲ್ಲಿ ಮೂರು ಸಾಮಾನ್ಯ ಪ್ಯಾರಾಥೈರಾಯ್ಡ್ ಗ್ರಂಥಿಗಳು ಮತ್ತು ಒಂದು ರೋಗಗ್ರಸ್ತ ಹಾಗೂ ದೊಡ್ಡದಾದ ಪ್ಯಾರಾಥೈರಾಯ್ಡ್ ಗಡ್ಡೆಯನ್ನು ತೋರಿಸಲಾಗಿದೆ.
ಪ್ಯಾರಾಥೈರಾಯ್ಡ್ ಗ್ರಂಥಿಗಳ ಕಾರ್ಯವೇನೆಂದರೆ ತುಂಬಾ ಸಂಕುಚಿತ ಶ್ರೇಣಿಯೊಳಗೆ ನಮ್ಮ ದೇಹಗಳಲ್ಲಿ ಕ್ಯಾಲ್ಷಿಯಂ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ನರಗಳು ಮತ್ತು ಮಾಂಸಖಂಡ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ. ಪ್ಯಾರಾಥೈರಾಯ್ಡ್ ಗ್ರಂಥಿಗಳು ರಕ್ತದಲ್ಲಿ ಕಡಿಮೆ ಕ್ಯಾಲ್ಷಿಯಂ ಮಟ್ಟಗಳನ್ನು ಗುರುತಿಸಿ ಹೆಚ್ಚು ಪ್ಯಾರಾಥೈರಾಯ್ಡ್ ಹಾರ್ಮೋನು ಉತ್ಪಾದನೆಯಾಗಲು ನೆರವಾಗುತ್ತದೆ. ಹಾರ್ಮೋನು ಮೂಳೆಗಳ ಮೇಲೆ ಕೆಲಸ ಮಾಡಿ ಅವುಗಳಿಂದ ಕ್ಯಾಲ್ಷಿಯಂನನ್ನು ತೆಗೆದು ರಕ್ತಕ್ಕೆ ಸೇರಿಸುತ್ತದೆ. ರಕ್ತ ಕ್ಯಾಲ್ಷಿಯಂ ಮತ್ತೆ ಸಾಮಾನ್ಯವಾದ ಮೇಲೆ ಗ್ರಂಥಿಗಳು ಹಾರ್ಮೋನು ಉತ್ಪಾದಿಸುವುದನ್ನು ನಿಲ್ಲಿಸುತ್ತವೆ.

ಹೈಪರ್ ಪ್ಯಾರಾಥೈರಾಯ್ಡಿಸಂ ಚಿಹ್ನೆಗಳು ಮತ್ತು ಲಕ್ಷಣಗಳು

  • ಶಕ್ತಿ ನಶಿಸುವಿಕೆ.  ಸುಸ್ತು, ಆಯಾಸ ಎಲ್ಲ ಸಮಯದಲ್ಲೂ ಇರುತ್ತದೆ. ಯಾವ ಕೆಲಸ ಮಾಡಲು ಅಸಕ್ತಿ ಇರುವುದಿಲ್ಲ.
  • ಅಸೌಖ್ಯತೆಗ ಸಾಮಾನ್ಯ ಅನುಭವ.
  • ಏಕಾಗ್ರತೆ ಕೊರತೆ.
  • ಹತಾಶೆ, ಖಿನ್ನತೆ.
  • ಮುಂಗೋಪ.
  • ಮೂಳೆ ನೋವು-ವಿಶೇಷವಾಗಿ ಕಾಲುಗಳು ಮತ್ತು ತೋಳುಗಳಲ್ಲಿನ ಮೂಳೆಗಳಿಗೆ ಘಾಸಿಯಾಗುವಿಕೆ.
  • ನಿದ್ರಾಭಂಗ-ಕಡಿಮೆ ನಿದ್ರೆ. ರಾತ್ರಿ ವೇಳೆ ಎಚ್ಚರವಾಗುವಿಕೆ. ಮತ್ತೆ ನಿದ್ರೆ ಮಾಡಲು ಕಷ್ಟವಾಗುವಿಕೆ.
  • ಹಗಲು ವೇಳೆ ನಿದ್ರಿಸುವಿಕೆ (ಆದರೆ ನಿದ್ರೆಯಿಂದ ಪ್ರಯೋಜನವಾಗದು).
  • ಜ್ಞಾಪಕ ಶಕ್ತಿ ನಶಿಸುವಿಕೆ-ನೀವು ಸಾಮಾನ್ಯವಾಗಿ ನೆನಪಿನಲ್ಲಿ ಇಟ್ಟುಕೊಂಡ ಸಂಗತಿಗಳು ಮರೆತು ಹೋಗುವಿಕೆ.
  • ಜಿಇಆರ್‍ಡಿ ಮತ್ತು ಆಮ್ಲ ಹಿಂಪ್ರವಾಹ
  • ಲೈಂಗಿಕ ಚಟುವಟಿಕೆ ಕುಂಠಿತ
  • ಕೂದಲು ತೆಳುವಾಗುವಿಕೆ (ಬಹುತೇಕ ಮಧ್ಯ ವಯಸ್ಸಿನ ಮಹಿಳೆಯರಲ್ಲಿ ತಲೆಯ ಮುಂಭಾಗದಲ್ಲಿ).
  • ತಲೆನೋವುಗಳು ಆಗಾಗ ಮರುಕಳಿಸುವಿಕೆ
  • ಹೃದಯ ಬಡಿತ ಹೆಚ್ಚಾಗುವಿಕೆ
  • ಅಧಿಕ ರಕ್ತದೊತ್ತಡ
  • ಮೂತ್ರಪಿಂಡ ಕಲ್ಲುಗಳು (ಮತ್ತು ಇದು ಕೆಲವೊಮ್ಮೆ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ).
  • ಪಾಶ್ರ್ವವಾಯುವಿನ ಅಧಿಕ ಸಾಧ್ಯತೆ
  • ಕ್ಯಾನ್ಸರ್ ರೋಗಗಳ (ಸ್ತನ, ಪ್ರೋಸ್ಟೆಟ್ ಮತ್ತು ಕರುಳು) ಅಧಿಕ ಸಾಧ್ಯತೆ.

ಪ್ರಾಥಮಿಕ ಹಂತದ ಹೈಪರ್‍ಪ್ಯಾರಾಥೈರಾಯ್ಡಿಸಂಗೆ ಶಸ್ತ್ರಕ್ರಿಯೆಯು ತೀರಾ ಸಾಮಾನ್ಯವಾದ ಚಿಕಿತ್ಸೆಯಾಗಿರುತ್ತದೆ ಮತ್ತು ಎಲ್ಲ ಪ್ರಕರಣಗಳಲ್ಲಿ ಕನಿಷ್ಠ 98ರಷ್ಟು ಗುಣಮುಖವಾಗುತ್ತದೆ. ದೊಡ್ಡದಾದ ಅಥವಾ ಗಡ್ಡೆ ಹೊಂದಿರುವ ಗ್ರಂಥಿಗಳನ್ನು ಮಾತ್ರ ಸರ್ಜನ್ ತೆಗೆದು ಹಾಕುತ್ತಾರೆ. ಎಲ್ಲ ನಾಲ್ಕು ಗ್ರಂಥಿಗಳು ಹಾನಿಗೀಡಾಗಿದ್ದರೆ, ಮೂರು ಗ್ರಂಥಿಗಳು ಮತ್ತು ಪ್ಯಾರಾಥೈರಾಯ್ಡ್ ಅಂಗಾಂಶದ ಕೆಲವು ಕಾರ್ಯಗಳನ್ನು ಬಿಟ್ಟು ನಾಲ್ಕನೇ ಗ್ರಂಥಿಯ ಒಂದು ಭಾಗವನ್ನು ಮಾತ್ರ ತೆಗೆದು ಹಾಕುವ ಸಾಧ್ಯತೆ ಇರುತ್ತದೆ.

ಡಾ.ಸಬರೆಥಮ್ ಎಂ.                              
ಕನ್ಸಲ್‍ಟೆಂಟ್ ಎಂಡೋಕ್ರೈನ್, ಅಂಡ್ ಬ್ರೆಸ್ಟ್ ಸರ್ಜನ್
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್‍ವೈಟ್‍ಫೀಲ್ಡ್, ಬೆಂಗಳೂರು – 560066
ದೂ.: 080-28413384/82/83. www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!