ಮಧುಮೇಹಕ್ಕೆ ಮನೆ ಔಷಧ

ಮಧುಮೇಹಕ್ಕೆ ಮನೆ ಔಷಧ ಉತ್ತಮ ಫಲಿತಾಂಶ ಕಾಣಲು ಹಲವು ತಿಂಗಳು ಕಟ್ಟುನಿಟ್ಟಿನ ಪಾಲನೆ ಅತ್ಯಗತ್ಯ.

Madhumehakke-Mane-Oshadhi. ಮಧುಮೇಹಕ್ಕೆ ಮನೆ ಔಷಧ1. ಒಂದು ಲೋಟ ನೀರಿಗೆ ಒಂದು ಚಮಚ ನೇರಳೆ ಹಣ್ಣಿನ ಬೀಜದ ಪುಡಿಯನ್ನು ಹಾಕಿ ಪ್ರತಿದಿನ ಬೆಳಿಗ್ಗೆ ತಿಂಡಿ ತಿನ್ನುವ ಮೊದಲು ಕುಡಿದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಮತೋಲನದಲ್ಲಿ ಇರುತ್ತದೆ.

2. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಹಾಗಲಕಾಯಿ ರಸ ಸೇವಿಸಿದರೂ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿ ಇರುತ್ತದೆ.

3. ಮೆಂತ್ಯೆ ಕಾಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು . ಇಲ್ಲವೇ ಮೆಂತ್ಯದ ಹಿಟ್ಟನ್ನು ಒಂದು ಲೋಟ ಹಾಲಿಗೆ ಹಾಕಿ ಕಲಸಿ ಕುಡಿಯಬಹುದು.

4. ಪ್ರತಿದಿನ ಒಂದು ಸೀಬೆಹಣ್ಣನ್ನು ಸಿಪ್ಪೆ ಸಮೇತ ತಿನ್ನಬಹುದು , ಮಧುಮೇಹಿಗಳ ನಿಶ್ಯಕ್ತಿಯನ್ನು ಕಡಿಮೆ ಮಾಡುತ್ತದೆ.

5. ಎಳೆ ಮಾವಿನೆಲೆಯ ಚಿಗುರನ್ನು ರಾತ್ರಿ ನೀರಿನಲ್ಲಿ ನೆನೆಸಿ , ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಬೇಕು ಅಥವಾ ಮಾವಿನ ಚಿಗುರನ್ನು ನೆರಳಿನಲ್ಲಿ ಒಣಗಿಸಿ , ಪುಡಿ ಮಾಡಿ . ಆ ಪುಡಿಯನ್ನು ಅರ್ಧ ಚಮಚ ದಿನಕ್ಕೆ ಎರಡು ಬಾರಿ ಪ್ರತಿದಿನ ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿ ಇರುತ್ತದೆ.

ಇವುಗಳಲ್ಲಿ ಯಾವ ವಿಧಾನವನ್ನು ಆಯ್ದುಕೊಂಡರು ಉತ್ತಮ ಫಲಿತಾಂಶ ಕಾಣಲು ಹಲವು ತಿಂಗಳು ಕಟ್ಟುನಿಟ್ಟಿನ ಪಾಲನೆ ಅತ್ಯಗತ್ಯ.

Dr-Shantagiri-Mallappa

ಡಾ .ಶಾಂತಗಿರಿ ಮಲ್ಲಪ್ಪ – ತಜ್ಞವೈದ್ಯರು 
 ಶಾಂತಗಿರಿ ಹೆಲ್ತ್ ಕೇರ್, ಬಾಣಸವಾಡಿ , ಬೆಂಗಳೂರು
ಮೊಬೈಲ್ ಸಂಖ್ಯೆ : 9449662344 , 9482565654.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!