ಸುಖ ನಿದ್ರೆಗೆ 12 ಸೂತ್ರಗಳು

ಸುಖ ನಿದ್ರೆಗೆ 12 ಸೂತ್ರಗಳು ಇಲ್ಲಿ ನೀಡಲಾಗಿದೆ.ಮನುಷ್ಯ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡದಿದ್ದರೆ ಅನೇಕ ವಿಧವಾದ ಅನಾರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ರಾತ್ರಿಯ ವೇಳೆ ಮಲಗಿದ ತಕ್ಷಣ ನಿದ್ರೆ ಬರುವುದು ನಿಜಕ್ಕೂ ಒಂದು ವರ.

ಮನುಷ್ಯ ಜೀವನ ಒಂದು ಕ್ರಮದಲ್ಲಿ ನಡೆಯುವಂತೆ ಪ್ರಕೃತಿಯಿಂದ ನಿರ್ದೇಶಿತಗೊಂಡಿದೆ. ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಕೆಲಸಗಳನ್ನು ಮಾಡಬೇಕು. ಅದೇ ರೀತಿಯಲ್ಲಿ ನಿದ್ರೆಗೆ ಕೂಡ ಸಮಯವನ್ನು ನಿರ್ದಿಷ್ಟಪಡಿಸಬೇಕು. ಪ್ರತಿನಿತ್ಯ ಮಲಗುವ ಸಮಯ, ಎಚ್ಚರಗೊಳ್ಳುವ ಸಮಯವನ್ನು ಒಂದೇ ರೀತಿಯಲ್ಲಿ ಪಾಲಿಸಬೇಕು. ಇದರಿಂದ ಶರೀರಕ್ಕೆ ಅಗತ್ಯವಾದಷ್ಟು ವಿಶ್ರಾಂತಿ ಲಭಿಸುತ್ತದೆ.

world sleep day ಸುಖ ನಿದ್ರೆಗೆ 12 ಸೂತ್ರಗಳು

1. ನಿದ್ರೆಗೆ ತಪ್ಪದೆ ಪ್ರತಿನಿತ್ಯ ಆರರಿಂದ – ಎಂಟು ಗಂಟೆಗಳ ಸಮಯವನ್ನು ಮೀಸಲಿಡಬೇಕು. ಆರು ಗಂಟೆಗಳಿಗಿಂತ ಕಡಿಮೆ ಅವಧಿಗೆ ನಿದ್ರೆ ಮಾಡುವುದೆಂದರೆ ಶರೀರಕ್ಕೆ ಕಷ್ಟವನ್ನು ನೀಡಿದಂತೆಯೇ. ಆ ನಿದ್ರಾವಧಿಯನ್ನು ಒಂದು ಕ್ರಮಬದ್ಧವಾದ ರೀತಿಯಲ್ಲಿ ಕೊಡದಿದ್ದರೂ ತೊಂದರೆ ತಪ್ಪಿದ್ದಲ್ಲ. ದೊಡ್ಡವರಿಗಿಂತ ಚಿಕ್ಕ ಮಕ್ಕಳಿಗೆ ಹೆಚ್ಚಿನ ನಿದ್ರೆ ಅವಶ್ಯಕ. ಅವರಿಗೆ ಹತ್ತು ಗಂಟೆಗಳವರೆಗೂ ನಿದ್ರೆ ಅವಶ್ಯಕವಿರುತ್ತದೆ.

2. ಅವಶ್ಯಕತೆಗೂ ಮೀರಿ ಹೆಚ್ಚು ನಿದ್ದೆ ಹೋಗುತ್ತಿರುವುದಾಗಿ ಅನಿಸಿದರೆ ಆ ನಿದ್ರೆಯನ್ನು ನಿಯಂತ್ರಿಸಲು ಅಲಾರ್ಮ್‍  ಕ್ಲಾಕ್ ಅನ್ನು ಆಶ್ರಯಿಸಬಹುದು.

3. ಮಲಗುವ ಕೋಣೆಯಲ್ಲಿ ಅಲಾರ್ಮ್‍  ಕ್ಲಾಕ್  ಅಥವಾ ವಾಲ್ ಕ್ಲಾಕ್ ಇರುವುದರಿಂದ ತೊಂದರೆ ಆಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆಗಾಗ್ಗೆ ಗಡಿಯಾರದ ಕಡೆ ನೋಡಬೇಕೆನಿಸುತ್ತದೆ. ಹಾಗೆ ನೋಡುವುದರಿಂದ ನಿದ್ರೆಗೆ ಭಂಗ ಬರುತ್ತದೆ. ಇಂತಹ ಸಂದೇಹಗಳು ಮನಸ್ಸಿನಲ್ಲಿ ಇದ್ದರೆ ಗಡಿಯಾರವನ್ನು ಎದುರಿಗೆ ಇಡುವ ಬದಲು ಶಬ್ದ ಕೇಳಿಸುವ ಹಾಗೆ ದೂರದಲ್ಲಿ ಇಡಬೇಕು.

4. ರಾತ್ರಿಯ ವೇಳೆ ನಿದ್ರೆಯನ್ನು ಅಗತ್ಯವಿರುವಷ್ಟು ಮಾಡಬೇಕಾದರೆ ಹಗಲಿನ ವೇಳೆ ನಿದ್ರೆಗೆ ದೂರವಿರಬೇಕು. ಹಗಲಿನ ವೇಳೆ ಒಂದು ಗಂಟೆಯಷ್ಟು ಮಲಗಿದರೂ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರುವುದಿಲ್ಲ.

5. ಹಗಲಿನ ವೇಳೆ ಸ್ವಲ್ಪ ಸಮಯ ಮಲಗಿ ಏಳಬೇಕೆಂದು ಕೆಲವರು ಆ ನಿದ್ದೆಯನ್ನು ಗಂಟೆಗಳವರೆಗೂ ಮುಂದುವರೆಸುತ್ತಾರೆ. ಫಲಿತವಾಗಿ ನಿದ್ರೆ ಹೋಗಬೇಕಾದ ರಾತ್ರಿ ಸಮಯದಲ್ಲಿ ಕಣ್ಣು ತೆರೆದುಕೊಂಡು ಕೂರಬೇಕಾಗುತ್ತದೆ.

6. ಇಂತಹ ಸಮಸ್ಯೆಗಳಿಗೆ ಪರಿಹಾರ ವ್ಯಾಯಾಯ. ಸಂಜೆ ವೇಳೆ ನಡಿಗೆ ಇಲ್ಲವೆ ಯೋಗಾಸನವನ್ನು ಮಾಡುವುದರಿಂದ ಸುಲಭವಾಗಿ ನಿದ್ರೆ ಬರುತ್ತದೆ. ಮಲಗುವ ಮುಂಚೆ ದೀರ್ಘವಾಗಿ ಗಾಳಿಯನ್ನು ಎಳೆದು ಬಿಡುವುದರಿಂದ ಶರೀರ ಹಗುರೆನಿಸುತ್ತದೆ. ಇದು ನಿದ್ರೆಗೆ ಪ್ರಯೋಜನಕಾರಿ. ಒಳ್ಳೆಯ ಸಂಗೀತವನ್ನು ಕೇಳುತ್ತ ನಿದ್ರೆಗೆ ಸುಲಭವಾಗಿ ಜಾರಬಹುದು.

7. ನಿದ್ರೆ ಸರಿಯಾಗಿ ಬಾರದಿರುವುದಕ್ಕೆ ಅನೇಕ ಕಾರಣಗಳಿರುತ್ತವೆ. ಇದರಲ್ಲಿ ಒಂದು ಮಾನಸಿಕ ತುಮುಲ. ಒತ್ತಡಕ್ಕೆ ಗುರಿಯಾಗುವವರು ಕೂಡ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಅತಿ ಆಲೋಚನೆ ಅನಾರೋಗ್ಯಕ್ಕೆ ಮೂಲ. ಹೆಚ್ಚಿನ ದೇಹ ತೂಕದಿಂದ ಸಹ ಸರಿಯಾಗಿ ನಿದ್ರೆ ಬರುವುದಿಲ್ಲ.

8. ಜೀರ್ಣಕ್ರಿಯೆಯು ಸರಿಯಾಗಿ ಆಗದೆ ಹೋದರೂ ನಿದ್ರೆ ಬರದು. ಜೀರ್ಣಕ್ರಿಯೆಯು ತೀವ್ರ ಸ್ಥಾಯಿಯಲ್ಲಿ ನಡೆಯುತ್ತಿದ್ದಾಗ ನಿದ್ರೆ ಬರುವುದು ಕಷ್ಟ. ಆದ್ದರಿಂದ ರಾತ್ರಿಯ ವೇಳೆ ತೆಗೆದುಕೊಳ್ಳುವ ಆಹಾರದ ವಿಷಯದಲ್ಲಿ ಕೆಲವು ನಿಬಂಧನೆಗಳನ್ನು ಪಾಲಿಸಬೇಕು. ಕೊಬ್ಬು, ಮಸಾಲ ಪದಾರ್ಥಗಳು ಕಡಿಮೆ ಇರುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ರಾತ್ರಿಯ ವೇಳೆ ಊಟವನ್ನು ಮಿತವಾಗಿ ಸೇವಿಸಬೇಕು. ಊಟದ ತರುವಾಯ ಸ್ವಲ್ಪ ನಡಿಗೆ ಒಳ್ಳೆಯದು. ನಡಿಗೆಯ ನಂತರ ಒಂದು ಗ್ಲಾಸು ಉಗುರು ಬೆಚ್ಚಗಿನ ಹಾಲು ಕುಡಿದರೆ ರಾತ್ರಿಯ ವೇಳೆ ಚೆನ್ನಾಗಿ ನಿದ್ರೆ ಬರುತ್ತದೆ.

9. ಶ್ರಾವ್ಯವಾದ ಕರ್ಣಾಟಕ ಸಂಗೀತ ಅಥವಾ ವಾದ್ಯ ಸಂಗೀತ ಮಾನಸಿಕ ಪ್ರಶಾಂತತೆಯನ್ನು ನೀಡುತ್ತದೆ. ಪುಸ್ತಕದ ಓದು ನಿದ್ರೆಗೆ ಜಾರಿಕೊಳ್ಳಲು ಸಹಾಯಕಾರಿ.

10. ರಾತ್ರಿಯ ವೇಳೆ ನಿದ್ರೆ ಬರದಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ಗಮನಿಸಬೇಕು. ಸಂಜೆ ವೇಳೆ ತೆಗೆದುಕೊಳ್ಳುವ ಕಾಫಿ, ಟೀ, ಮಾದಕ ಪಾನೀಯಗಳು ನಿದ್ರೆಗೆ ಭಂಗವನ್ನುಂಟು ಮಾಡುತ್ತವೆ. ಹೆಚ್ಚಾಗಿ ಧೂಮಪಾನ ಮಾಡುವವರಿಗೆ ನಿದ್ರೆಗೆ ಮುಂಚೆ ಎರಡು ಮೂರು ಗಂಟೆ ಟೆಲಿವಿಜ್ ಕಾರ್ಯಕ್ರಮಗಳನ್ನು ನೋಡುವವರಿಗೆ ನಿದ್ರೆಯ ಸಮಸ್ಯೆ ತಲೆದೋರುತ್ತದೆ.

11. ನಿದ್ರೆಯ ಸಮಸ್ಯೆಗೆ ಮಲಗುವ ಕೋಣೆಯ ವಾತಾವರಣವು ಸಹ ಕಾರಣವಾಗಬಹುದು. ಕೋಣೆಯಲ್ಲಿ ಉಷ್ಣಾಂಶದ ಮಟ್ಟ ಅನುಕೂಲಕರವಾಗಿ ಇರಬೇಕು. ಅಧಿಕ ಬಿಸಿ ಅಥವಾ ಅಧಿಕ ತಂಪಿದ್ದರೂ ನಿದ್ರೆ ಬರುವುದರಲ್ಲಿ ಸಮಸ್ಯೆ ಬರುತ್ತದೆ. ಬೆಳಕು ಕೂಡಾ ಅನುಕೂಲಕರವಾಗಿ ಇರಬೇಕು. ತೀರ ಕತ್ತಲಿರಬಾರದು. ಹಾಗೆಯೇ ಕಣ್ಣಿನ ಮೇಲೆ ಬೆಳಕು ಬೀಳುವಂತಿರಬಾರದು. ಕೋಣೆಯ ಒಂದು ಮೂಲೆಯಲ್ಲಿ ಬೆಡ್‍ಲ್ಯಾಂಪ್ ಇದ್ದರೆ ಒಳ್ಳೆಯದು.

12. ಚೆನ್ನಾಗಿ ನಿದ್ರೆ ಬರಲು ಹಾಸಿಗೆ ಸೌಕರ್ಯ ಉತ್ತಮವಾಗಿರುವುದು ತುಂಬಾ ಅಗತ್ಯ. ಮಲಗುವ ಮುಂಚೆ ಹಾಸಿಗೆಯನ್ನು ಚೆನ್ನಾಗಿ ಕೊಡವಬೇಕು. ಸುಕ್ಕುಗಳಿಲ್ಲದಂತೆ ಬೆಡ್‍ಶೀಟ್‍ನ್ನು ಹಾಸಬೇಕು. ತಲೆದಿಂಬು ತುಂಬಾ ಎತ್ತರವಾಗಿ ಅಥವಾ ಆಳವಾಗಿ ಇರಬಾರದು. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ ಅಥವಾ ಮಸ್ಕಿಟೋ ಲಿಕ್ವಿಡೇಟರನ್ನು ಬಳಸಬೇಕು.

ಡಾ.ಶಾಂತಗಿರಿ ಮಲ್ಲಪ್ಪ ಶಾಂತಗಿರಿ ಹೆಲ್ತ್  ಸೆಂಟರ್ - ಬಾಣಸವಾಡಿ ಬೆಂಗಳೂರು. ಮೊ: 9449662344.

ಡಾ.ಶಾಂತಗಿರಿ ಮಲ್ಲಪ್ಪ
ಶಾಂತಗಿರಿ ಹೆಲ್ತ್ ಸೆಂಟರ್
ಬಾಣಸವಾಡಿ, ಬೆಂಗಳೂರು.
ಮೊ: 94496 62344.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!