ಬಾಯಿಹುಣ್ಣು ಬಂದ್ರೆ ಚಿಂತೆ ಮಾಡಬೇಡಿ – ಈ ಮನೆಮದ್ದುಗಳನ್ನು ಬಳಸಿ..!

ಬಾಯಿಹುಣ್ಣು ಕಂಡುಬಂದ್ರೆ ಈ ಕೆಳಗಿನ ಮನೆಮದ್ದುಗಳನ್ನು ಸೇವನೆ ಮಾಡಿನೋಡಿ. ನಿಮ್ಮ ಬಾಯಿಹುಣ್ಣು ಒಂದೇ ದಿನದಲ್ಲಿ ಹೋಗುತ್ತದೆ. ಬಾಯಿಹುಣ್ಣು ಇದು ಮಳೆಗಾಲ ಅಥವಾ ಬೇಸಿಗೆ ಕಾಲಕ್ಕೆ ಬರುವಂತಹ ಖಾಯಿಲೆ ಅಲ್ಲ. ನಿಮ್ಮ ದೇಹದಲ್ಲಿ ಹೆಚ್ಚಾಗುವಂತಹ ಉಷ್ಣಾಂಶದಿಂದ ಬರುತ್ತದೆ. ಇದಕ್ಕೆ ನಿಮ್ಮ ಮನೆಯಲ್ಲಿಯೇ ಪರಿಹಾರವಿದೆ.
ಒಣಕೊಬ್ಬರಿ ಮತ್ತು ಗಸಗಸೆ:
ಇದು ನಿಮ್ಮ ಮನೆಯಲ್ಲಿಯೇ ಸಿಗುವಂತದ್ದು. ನಿಮ್ಮ ಬಾಯಿಯಲ್ಲಿ ಬಾಯಿಹುಣ್ಣು ಕಂಡುಬಂದ್ರೆ. ಒಂದು ಚಮಚ ಗಸಗಸೆ ಮತ್ತು ಸ್ವಲ್ಪ ಒಣಕೊಬ್ಬರಿಯನ್ನು ತೆಗೆದುಕೊಂಡು ಬಾಯಿಯಲ್ಲಿ ಹಾಕಿ ಜಗಿದು ಜಗಿದು ರಸವನ್ನು ಹೀರಿಕೊಂಡು ತಿಂದು ನೋಡಿ. ನಿಮ್ಮ ಬಾಯಿಹುಣ್ಣು ಒಂದೇ ದಿನದಲ್ಲಿ ಕಡಿಮೆಯಾಗುತ್ತದೆ.
ತುಳಸಿ ಎಲೆಗಳು:
ಇದು ಸಹ ನಿಮ್ಮ ಬಾಯಿಹುಣ್ಣು ಕಡಿಮೆ ಮಾಡುತ್ತದೆ. ನಿಮ್ಮ ಮನೆಯ ಮುಂದಿರುವ ತುಳಸಿ ಗಿಡದಲ್ಲಿ ಒಂದು ೫ ಎಲೆಗಳನ್ನು ತೆಗೆದುಕೊಂಡು, ನಿಮ್ಮ ಬಾಯಿಯಲ್ಲಿ ರಸ ಬರುವರೆಗೆ ಅಗಿದು ಅದರ ಜೊತೆ ನೀರು ಕುಡಿದರೆ ನಿಮ್ಮ ಬಾಯಿಹುಣ್ಣು ಕಡಿಮೆಯಾಗುತ್ತದೆ.
ಜೇನುತುಪ್ಪ:
ನಿಮ್ಮ ಮನೆಯಲ್ಲಿ ಸಿಗುವಂತಹ ಜೇನುತುಪ್ಪವನ್ನು ಸೇವನೆ ಮಾಡಿ. ಇದರಿಂದ ಈ ಜೇನು ತುಪ್ಪ ನಿಮ್ಮ ಬಾಯಿಹುಣ್ಣನ್ನು ಕಡಿಮೆ ಮಾಡುತ್ತದೆ.
ಮಜ್ಜಿಗೆ ಕುಡಿಯುವುದು:
ನಿಮ್ಮ ಬಾಯಿಯಲ್ಲಿ ಹುಣ್ಣು ಕಂಡುಬಂದತಹ ಸಮಯದಲ್ಲಿ ಆದೊಷ್ಟು ಮಜ್ಜಿಗೆ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ಬಾಯಿಹುಣ್ಣು ಕಡಿಮೆಯಾಗುತ್ತದೆ. ಈ ಮಜ್ಜಿಗೆಯು ನಿಮ್ಮ ದೇಹವನ್ನು ತಂಪು ಮಾಡುತ್ತದೆ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!