ಡಾರ್ವಿನ್‍ನ ವಿಕಾಸವಾದ -> ದಶಾವತಾರ

ಜಗತ್ತಿನ ಪ್ರತಿಯೊಂದು ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ವಿದ್ಯಾರ್ಥಿಗಳು ಚಾರ್ಲಸ್‍ಡಾರ್ವಿನ್‍ರ ವಿಕಾಸವಾದವನ್ನು ಓದುತ್ತಾರೆ ಮತ್ತು ಒಪ್ಪುತ್ತಾರೆ. ಡಾರ್ವಿನ್‍ರ ವಿಕಾಸವಾದವು ಸರಳವಾಗಿದೆ.
1830-35ರವರೆಗೆ ಡಾರ್ವಿನ್‍ರು ಲ್ಯಾಟಿನ್ ಅಮೆರಿಕ ದೇಶದ ಗ್ಯಾಲಪೊಗಸ್ ನಡುಗುಡ್ಡೆಯಲ್ಲಿ ಸಂಶೋಧನೆ ಮಾಡಿ ಎಲ್ಲ ಜೀವಿಗಳ ಮೂಲ ನೀರಿನಲ್ಲಿಯೇ ಉತ್ಪನ್ನವಾಗಿವೆ ಮತ್ತು ಎಲ್ಲ ಜೀವಿಗಳ ಮೂಲ ನೀರಿನಲ್ಲಿಯೇ ಹುಟ್ಟಿದ ಒಂದು ಸರಳ ಅಣುಜೀವಿ. ಮೀನಿನಿಂದ ಹೂಗಳವರೆಗೆ, ಹಣ್ಣುಗಳಿಂದ ಪಕ್ಷಿಗಳವರೆಗೆ, ಎಲ್ಲ ಜೀವಿಗಳಿಗೆ ಮೂಲ ಜೀವಿ ಒಂದೇ ಆಗಿರುತ್ತದೆ. ಈ ಮೂಲ ಜೀವಿ ಸತತ ಪ್ರಯತ್ನದಿಂದ ತನ್ನ ವಂಶಾವಳಿ, ಆಕಾರ, ಆಹಾರದಲ್ಲಿ ಬದಲಾವಣೆಯನ್ನು ಹೊಂದಿರುವುದೂ ಅಲ್ಲದೆ, ತನ್ನ ಲೈಂಗಿಕ ಜೊತೆಗಾರನನ್ನು ಹುಡುಕಿಕೊಂಡು ತನ್ನ ಸಂತತಿಯನ್ನು ವೃದ್ಧಿಮಾಡಿಕೊಂಡು ಮುಂದುವರಿಯುವ ಜೀವಿಯಲ್ಲಿ ಸಂಪೂರ್ಣ ಬದಲಾವಣೆ ಬಂದಿರುತ್ತದೆ. ನೀರಿನಲ್ಲಿರುವ ಮೀನು ಸತತ ಪ್ರಯತ್ನದಿಂದ ಉಸಿರಾಟದಲ್ಲಿ ಬದಲಾವಣೆ ಮಾಡಿಕೊಂಡು, ತನ್ನ ರೂಪದಲ್ಲಿ ಬದಲಾವಣೆ ಹೊಂದಿ, ಹೊಸದಾಗಿ ತನ್ನ ದೇಹದಲ್ಲಿ ಕಾಲುಗಳನ್ನು ಬೆಳೆಸಿಕೊಂಡು, ನೀರಿನಿಂದ ಹೊರಗೆ ಭೂಮಿಯ ಮೇಲೆ ವಾಸಿಸಲು ಪ್ರಾರಂಭಿಸಿ ಯಶಸ್ವಿಯಾಗುತ್ತವೆ. ಇದೇ ಮೀನು ಮುಂದೆ ಕಪ್ಪೆ, ಆಮೆ, ಹಲ್ಲಿಯಾಗಿ ಪರಿವರ್ತಿತವಾಗುತ್ತದೆ. ಈ ಪರಿವರ್ತನೆ ಬರಲು 1000 ವರ್ಷಗಳೇ ಆಗಬಹುದು. ಇದೇ ರೀತಿ ಮೂಲ ಅಣು ಜೀವಿಯಲ್ಲಿ ಬದಲಾವಣೆ ಬಂದು ಸಂಕೀರ್ಣವಾದ ಸಸ್ಯಗಳು ಕೂಡ ರೂಪುಗೊಳ್ಳುವವು. ಗ್ಯಾಲಪೊಗಸ್ ಮತ್ತು ಪಾಕಲ್ಯಾಂಡ್ ನಡುಗುಡ್ಡೆಗಳಲ್ಲಿ ಭೂಮಿಯಲ್ಲಿ ಹೂತು ಹೋದ ಸಸ್ಯ, ಪ್ರಾಣಿಗಳ ಪಳಿಯುಳಿಕೆ (Fossil) ಮತ್ತು ಈ ನಡುಗುಡ್ಡೆಗಳಲ್ಲಿ ಸಿಗುವ ಪ್ರತಿಯೊಂದು ಸಸ್ಯಗಳ ಮತ್ತು ಪ್ರಾಣಿಗಳ ಅಧ್ಯಯನ ಮಾಡಿ ವಿವರಗಳನ್ನು ಬರೆದಿಡುತ್ತಿದ್ದರು. 5 ವರ್ಷಗಳಲ್ಲಿ ಸತತವಾಗಿ ಅಧ್ಯಯನ ನಡೆಸಿ ಸಸ್ಯ ಮತ್ತು ಪ್ರಾಣಿಗಳಲ್ಲಿ ಆಗುವ ಬದಲಾವಣೆಗಳನ್ನು ಬರೆದಿಡುತ್ತಾ 5 ವರ್ಷಗಳ ನಂತರ ಇಂಗ್ಲೆಂಡ್‍ಗೆ ಬಂದು ತನ್ನ ಗೆಳೆಯರಾದ ಪ್ರಾಣಿಶಾಸ್ತ್ರಜ್ಷರು (Zoologist) ಸಸ್ಯಶಾಸ್ತ್ರಜ್ಞರು (Botany), ನಿಸರ್ಗ ತಜ್ಞರು(Naturalist)ಗಳ ಜೊತೆ ಪರಾಮರ್ಶಿಸಿ ಕೆಲವು ತೀರ್ಮಾನಕ್ಕೆ ಬಂದರು.
ಪ್ರತಿಯೊಂದು ಜೀವಿಯ ಉಗಮವು ನೀರಿನಲ್ಲಿಯೇ ಆಗಿದೆ. ಪ್ರತಿಯೊಂದು ಜೀವಿಯ ಪೂರ್ವಜರು ಒಂದೇ ಅಣು ಜೀವಿಯಾಗಿರುತ್ತದೆ. ಒಂದ ಜೀವಿಯು ಜೀವಂತವಾಗಿರಲು ಸತತವಾಗಿ ಪರಿಶ್ರಮ ಮಾಡುತ್ತಲೇ ಇರಬೇಕು. ತನ್ನ ಸುತ್ತಲಿನ ಪ್ರದೇಶದಲ್ಲಿ ಹೊಂದಿಕೊಳ್ಳಲು ತನ್ನ ದೇಹದ ಆಕಾರ ಮತ್ತು ರೀತಿ ನೀತಿಗಳನ್ನು ಬದಲಾಯಿಸಿಕೊಳ್ಳುವುದಲ್ಲದೇ, ವಂಶಾವಳಿಯಲ್ಲಿಯೂ ಬದಲಾವಣೆಯನ್ನು ತಂದುಕೊಂಡು, ಹೊಸಜೀವಿಯಾಗಿ ಉಗಮವಾಗುತ್ತದೆ. ಆಡು, ಕುರಿಗಳು ಸತತವಾಗಿ ತಮ್ಮ ಕತ್ತನ್ನು ಎತ್ತರಿಸುತ್ತ ಎತ್ತರನೆಯ ಗಿಡಗಳಲ್ಲಿರುವ ಹಸಿರು ಎಲೆಗಳನ್ನು ತನ್ನಲು ಸಾವಿರಾರು ವರುಷಗಳ ಪ್ರಯತ್ನಮಾಡಿ ಈ ಪ್ರಯತ್ನದಲ್ಲಿ ಯಶಸ್ವಿಹೊಂದಿ ಜಿರಾಫೆಯಾಗಿ ಮಾರ್ಪಟ್ಟಿವೆ. ಈ ಎಲ್ಲ ಬದಲಾವಣೆಗಳಿಗೆ ಆ ಪ್ರಾಣಿಯ ಮೂಲ ಪ್ರವೃತ್ತಿಯಲ್ಲಿ ಆಗುವ ಬದಲಾವಣೆಯೇ ಕಾರಣ.
“Life evolved in water
for fish and flower, for birds and
banana, there is a lommon ancestor
strugle for existence and ssuvival
gfittese – natural selection.”
“ಡಾರ್ವಿನ್‍ನ ವಿಕಾಸವಾದ ಮತ್ತು ದಶಾವತಾರ”
ನಾವು ವಿಷ್ಣುವಿನ ದಶಾವತಾರಗಳನ್ನು ಸೂಕ್ಷ್ಮವಾಗಿ ವೈಜ್ಞಾನಿಕ ತಳಹದಿಯ ಮೇಲೆ ವಿಮರ್ಷಿಸಿದಾಗ ಸಂಪೂರ್ಣ ಸಾಮ್ಯತೆ, ಹೋಲಿಕೆ ಕಂಡಬರುತ್ತದೆ. ವಿಷ್ಣುವಿನ ಮೊದಲನೆಯ ಅವತಾರ ಮತ್ಸ್ಯಾವತಾರ. ಡಾರ್ವಿನ್‍ನ ವಿಕಾಸವಾದದ ಪ್ರಕಾರ ಜೀವ ಅಂಕುರಿಸಿದ್ದು ನೀರಿನಲ್ಲಿ, ವಿಷ್ಣುವಿನ ಎರಡನೇ ಅವತಾರ ಕೂರ್ಮಾವತಾರ. ಸದಾಕಾಲ ನೀರಿನಲ್ಲಿರುವ ಮೀನು ಸತತ ಪ್ರರಿಶ್ರಮಪಟ್ಟು ನೀರಿನಲ್ಲಿ ಮತ್ತು ನೆಲದ ಮೇಲೂ ವಾಸಿಸುವ ಉಭಯಚರಗಳಾಗಿ ಕಪ್ಪೆ, ಕೂರ್ಮ (ಆಮೆ)ಗಳಾಗಿ ವಿಕಾಸಹೊಂದಿದವು. ಎರಡನೆಯ ಅವತಾರದಲ್ಲಿ ಹೋಲಿಕೆ ಇದೆ. ಉಭಯಚರಗಳು ಕೂಡ ವಿಕಾಸಹೊಂದಿ ಭೂಮಿಯ ಮೆಲೆ ವಾಸಿಸುವ ಪ್ರಾಣಿಗಳಾಗಿ ವಿಕಾಸ ಹೊಂದಿದವು. ವಿಷ್ಣುವಿನ ಮೂರನೆಯ ಅವತಾರ ವರಾಹ ಅವತಾರ, ಪೂರ್ಣವಾಗಿ ಭೂಮಿಯ ಮೇಲೆ ವಾಸಿಸುವ ಪ್ರಾಣಿಯಾಗಿ ರೂಪುಗೊಂಡಿತು. ಭೂಮಿಯ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಸತತವಾಗಿ ವಿಕಾಸ ಹೊಂದುತ್ತಾ, ಹೆಚ್ಚು ಸಶಕ್ತವುಳ್ಳ ಮತ್ತು ಹೆಚ್ಚು ಜ್ಞಾನವುಳ್ಳ ಪ್ರಾಣಿಗಳಾಗಿ ಬದಲಾವಣೆ ಹೊಂದುತ್ತಲೇ ಇರುತ್ತವೆ. ವಿಷ್ಣುವಿನ ನಾಲ್ಕನೆಯ, ಐದನೆಯ, ಆರನೆಯ, ಏಳನೆಯ ಮತ್ತು ಎಂಟನೆಯ ಅವತಾರಗಳನ್ನು ವಿಮರ್ಶಿಸಿದಾಗ ಈ ಎಲ್ಲಾ ಅವತಾರಗಳಲ್ಲಿ ಸತತವಾಗಿ ವಿಕಾಸ ಹೊಂದುತ್ತ ಇವತ್ತು ಅತಿ ಬುದ್ಧಿವಂತ ಮನುಷ್ಯನ ರೂಪವನ್ನು ನೋಡುತ್ತೇವೆ.
ನಾಲ್ಕನೆಯ ಅವತಾರ – ನರಸಿಂಹ ಅವತಾರ
ಐದನೆಯ ಅವತಾರ – ವಾಮನ ಅವತಾರ
ಆರನೆಯ ಅವತಾರ – ಪರಶುರಾಮ ಅವತಾರ
ಏಳನೆಯ ಅವತಾರ – ಶ್ರೀ ರಾಮಚಂದ್ರ ಅವತಾರ
ಎಂಟನೆಯ ಅವತಾರ – ಶ್ರೀ ಕೃಷ್ಣ ಅವತಾರ
ಈ ಎಲ್ಲಾ ಅವತಾರಗಳಲ್ಲಿ ಪರಿಪೂರ್ಣತೆಯ ವಿಕಾಸವನ್ನು ಕಾಣುತ್ತೇವೆ. ಒಂಬತ್ತನೆಯ ಅವತಾರ ಬುದ್ಧ ಅವತಾರ. ಸದಾಕಾಲ ಹಸನ್ಮುಖಿ, ಸಂತೋಷ, ಪ್ರೇಮ ಮತ್ತು ತ್ಯಾಗಗಳ ನಿರ್ಮೋಹಿ ರೂಪವನ್ನು ಬುದ್ಧ ಅವತಾರದಲ್ಲಿ ಕಾಣುತ್ತೇವೆ. ವಿಷ್ಣುವಿನ ಒಂಬತ್ತು ಅವತಾರಗಳು ಪೂರ್ಣವಾಗಿವೆ. ಈಗ ಉಳಿದಿರುವುದು ಹತ್ತನೆಯ ಅವತಾರ – ಕಲ್ಕಿ ಅವತಾರ.
ಕಲ್ಕಿಯ ಅವತಾರವು ನಾಳಿನ ಮಾನವ, ಅತಿ ಬುದ್ಧಿವಂತ, ಯುದ್ಧಪ್ರಿಯ, ಸುಧಾರಿತ ಮತ್ತು ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ. ಪುರಾಣಗಳಲ್ಲಿ ಕಲ್ಕಿಯ ವಾಹನ ಬಿಳಿ ಕುದುರೆ. ಈ ಕುದುರೆಗೆ ರೆಕ್ಕೆಗಳಿರುವವು. ಈ ಕುದುರೆಯು ಕಲ್ಕಿಯನ್ನು ಕರೆದುಕೊಂಡು ಆಕಾಶಮಾರ್ಗದಲ್ಲಿ ಸಂಚರಿಸುವದು ಎಂದು ಬರೆದಿದ್ದಾರೆ. ಬಳಿ ರೆಕ್ಕೆಗಳು ಇರುವ ಕುದುರೆ ಎಂದರೆ ಇವತ್ತಿನ ಯುದ್ಧ ವಿಮಾನಗಳಿರಬಹುದು.
ಗೆಳೆಯರೆ ಈಗ ಹೇಳಿ, ಡಾರ್ವಿನ್‍ನ ವಿಕಾಸವಾದ ಮತ್ತು ವಿಷ್ಣುವಿನ ದಶಾವತಾರಗಳಲ್ಲಿ ಇರುವ ಸಾಮ್ಯತೆ.
ಈ ಚಿತ್ರವನ್ನು ನೋಡಿರಿ, ಡಾರ್ವಿನ್‍ರ ವಿಕಾಸವಾದದಲ್ಲಿ ಪ್ರಾಣಿ ಮತ್ತು ಮನುಷ್ಯರಲ್ಲಿ ಕಂಡುಬಂದ ಬದಲಾವಣೆ ಮತ್ತು ದಶಾವತಾರದಲ್ಲಿ ಬರುವ ಅವತಾರಗಳಲ್ಲಿಯ ಸಾಮ್ಯತೆ.
(1) ಮತ್ಸ್ಯಾವತಾರವು ವಿಷ್ಣುವಿನ ಮೊದಲನೆಯ ಅವತಾರ, ನೀರಿನಲ್ಲಿ ಪ್ರಕಟವಾಗಿದ್ದು, ಮನು ಮಹಾರಾಜನಿಗೆ ಚೆರವಿ ನದಿದಂಡೆಯಲ್ಲಿ ಸೂರ್ಯದೇವನಿಗೆ ಪೂಜೆ ಸಲ್ಲಿಸುತ್ತ ಬೊಗಸೆಯಲ್ಲಿ (ಕೈಗಳಲ್ಲಿ) ನೀರನ್ನು ತೆಗೆದುಕೊಂಡಾಗ, ಆ ನೀರಿನಲ್ಲಿ ವಿಷ್ಣುವು ಒಂದು ಸಣ್ಣ ಮೀನಾಗಿ ಮನುವಿಗೆ ಕಾಣಿಸಿಕೊಳ್ಳುತ್ತಾನೆ. ಸದ್ಯದಲ್ಲಿಯೆ ಜಲಪ್ರಳಯವಾಗುವುದು, ನೀನು ನಿನ್ನ ಜನರು ಪ್ರಾಣಿ, ಪಶು, ಪಕ್ಷಿಗಳು ಮತ್ತು ಎಲ್ಲ ತರಹದ ಆಹಾರ ಧಾನ್ಯಗಳನ್ನು ತೆಗೆದುಕೊಂಡು ಒಂದು ನಾವೆಯಲ್ಲಿ ಕುಳಿತುಕೊಳ್ಳಿರಿ. ನಾನು ನಿಮ್ಮನ್ನು ಒಂದು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ, ಅಲ್ಲಿ ಹೊಸದಾಗಿ ನಿಮ್ಮ ಜೀವನವನ್ನು ಪ್ರಾರಂಭಿಸಿರಿ ಎಂದು ಹೇಳಿದನು. ಹಯಗ್ರೀವ ರಾಕ್ಷಸನು ವೇದಗಳನ್ನು ಕದ್ದುಕೊಂಡು ಹೋಗಿ, ನೀರಿನ ಆಳದಲ್ಲಿ ಅಡಗಿಕೊಂಡಿದ್ದನು. ಮತ್ಸ್ಯಾವತಾರಿ ವಿಷ್ಣು ಹಯಗ್ರೀವನನ್ನು ಸಂಹರಿಸಿ ಆ ವೇದಗಳನ್ನು ಸತ್ಯಾವೃತ ಋಷಿ ಮತ್ತು ಸಪ್ತಋಷಿಗಳಿಗೆ ಕೊಟ್ಟು ಅವರನ್ನು ಕೂಡ ಮನುವಿನ ಜೊತೆ ಸುರಕ್ಷಿತ ಸ್ಥಳ ತಲುಪಿಸುತ್ತಾನೆ. ಆ ಹೊಸ ಸ್ಥಳದಿಂದ ಮನುವಿನ ಸಂತತಿ ಬೆಳೆಯುತ್ತದೆ.
2) ವಿಷ್ಣುವಿನ ಎರಡನೆಯ ಅವತಾರ – ಕೂರ್ಮಾವತಾರ. ದೂರ್ವಾಸ ಋಷಿಯ ಶಾಪದಿಂದ ದೇವತೆಗಳು ತಮ್ಮ ಶಕ್ತಿಗಳನ್ನು ಕಳೆದುಕೊಂಡಿದ್ದರಿಂದ, ಆ ಶಕ್ತಿಯನ್ನು ಮರಳಿ ಪಡೆಯಲು ರಾಕ್ಷಸರ ಜೊತೆ ಒಪ್ಪಂದ ಮಾಡಿಕೊಂಡು ಸಮುದ್ರ ಮಂಥನ ಮಾಡಲು ನಿಶ್ಚಯಿಸಿದರು. ಮಂದಾರ ಪರ್ವತವನ್ನು ಕಡಗೋಲು ಮಾಡಿಕೊಂಡು, ವಾಸುಕಿ ಸರ್ಪವನ್ನು ಹಗ್ಗದಂತೆ ಮಂದಾರ ಪರ್ವತಕ್ಕೆ ಸುತ್ತಿ, ಸಮುದ್ರ ಮಂಥನ ಪ್ರಾರಂಭಿಸಿದರು. ಮಂದಾರ ಪರ್ವತವು ನೀರಿನಲ್ಲಿ ಮುಳುಗಲು, ದೇವತೆಗಳು ವಿಷ್ಣುವನ್ನು ಬೇಡಿಕೊಂಡರು. ವಿಷ್ಣುವು ಆಮೆಯ ರೂಪ ತಾಳಿ ಸಮುದ್ರದೊಳಗಡೆ ಹೋಗಿ ತನ್ನ ಬೆನ್ನಮೇಲೆ ಮಂದಾರ ಪರ್ವತವನ್ನು ಎತ್ತಿ ಹಿಡಿದುಕೊಂಡನು. ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡಿ ಅದರಲ್ಲಿ ಹುಟ್ಟಿ ಬಂದ ಅಮೃತದಿಂದ ತಮ್ಮ ಶಕ್ತಿಯನ್ನು ಮರಳಿ ಸಂಪಾದಿಸಿಕೊಂಡರು.
3) ವಿಷ್ಣುವಿನ ಮೂರನೆ ಅವತಾರ – ವರಾಹ ಅವತಾರ. ಹಿರಣ್ಯಾಕ್ಷನೆಂಬ ರಾಕ್ಷಸನು ಭೂದೇವಿಗೆ ಸತತವಾಗಿ ತೊಂದರೆಕೊಡುತ್ತಾ, ಭೂದೇವಿಯನ್ನು ಹೊತ್ತುಕೊಂಡು ಸಮುದ್ರದ ಆಳದಲ್ಲಿ ಸೆರೆಯಲ್ಲಿಟ್ಟನು. ವರಾಹ ರೂಪಿ ವಿಷ್ಣುವು ಹಿರಣ್ಯಾಕ್ಷನನ್ನು ಸಂಹರಿಸಿ, ಭೂದೇವಿಯನ್ನು ಬಂಧನದಿಂದ ಮುಕ್ತಿಗೊಳಿಸಿದನು.
4) ವಿಷ್ಣುವಿನ ನಾಲ್ಕನೆಯ ಅವತಾರ – ನರಸಿಂಹ ಅವತಾರ. ದೈತ್ಯ ಹಿರಣ್ಯಕಶ್ಯಪನ ಕ್ರೂರ ಆಡಳಿತವನ್ನು ದಮನಿಸಿ ಭಕ್ತ ಪ್ರಹ್ಲಾದನನ್ನು ಕಾಪಾಡಲು ವಿಷ್ಣುವು ನರಸಿಂಹ ಅವತಾರವನ್ನು ತಾಳಿದನು. ಸಿಂಹದ ಮುಖ ಮತ್ತು ಕೈ ಹಾಗೂ ದೇಹ, ಕಾಲುಗಳು ಮನುಷ್ಯನ ಆಕಾರವಾಗಿ, ಹಿರಣ್ಯಕಶ್ಯಪನನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ತನ್ನನ ಉಗುರುಗಳಿಂದ ರಾಕ್ಷಸನ ಹೊಟ್ಟೆಯನ್ನು ಸೀಳಿ ಸಂಹರಿಸಿದನು ಮತ್ತು ಪ್ರಹ್ಲಾದನಿಗೆ ರಾಜ್ಯಾಭಿಷೇಕ ಮಾಡಿದನು.
5) ವಿಷ್ಣುವಿನ ಐದನೆಯ ಅವತಾರ – ವಾಮನ ಅವತಾರ. ರಾಕ್ಷಸ ಬಲಿ ಚಕ್ರವರ್ತಿ (ಮಹಾಬಲಿ) ತನ್ನ ಶಕ್ತಿಯನ್ನು ವೃದ್ಧಿಮಾಡಿಕೊಳ್ಳಲು ಮಹಾಯಜ್ಞವನ್ನು ಮಾಡುತ್ತಿರುತ್ತಾನೆ. ಆ ಯಜ್ಞದ ಒಂದ ವಿಧಿಯಲ್ಲಿ ಬೇಡಿ ಬಂದವರಿಗೆಲ್ಲ ಅವರು ಸಂತೃಪ್ತಿಯಾಗುಷ್ಟು ಅವರು ಕೇಳಿದ ವಸ್ತುಗಳನ್ನು ಕೊಡಬೇಕೆಂಬ ನಿಯಮ ಇರುತ್ತದೆ. ವಿಷ್ಣುವು ವಾಮನ ರೂಪ (ಕುಬ್ಜ ಮನುಷ್ಯನ ರೂಪ) ತಾಳಿ ಬಲಿ ಚಕ್ರವರ್ತಿಯ ಬಳಿ ಬಂದು ತನ್ನ ಪಾದದ 3 ಪಾದದಷ್ಟು ಭೂಮಿಯನ್ನು ದಾನಮಾಡು ಎಂದು ಕೇಳುತ್ತಾನೆ. ಬಲಿ ಚಕ್ರವರ್ತಿ ಮಾತು ಕೊಟ್ಟ ಕೂಡಲೇ ವಿಷ್ಣುವು ತನ್ನ ವಾಮನ ರೂಪವನ್ನು ತ್ಯಜಿಸಿ ವಿರಾಟ ರೂಪಿಯಾಗಿ ಆಕಾಶದೆತ್ತರಕ್ಕೆ ಬೆಳೆದು ಒಂದು ಪಾದದಿಂದ ಭೂಮಂಡಲವನ್ನು, ಎರಡನೇ ಪಾದದಿಂದ ಸ್ವರ್ಗವನ್ನು ಆಕ್ರಮಿಸಿ ಬಿಡುತ್ತಾನೆ. ಮೂರನೆಯ ಪಾದಕ್ಕ ಸ್ಥಳ ಕೇಳಲು ಬಲಿಚಕ್ರವರ್ತಿಯು ತನ್ನ ತಲೆಯನ್ನು ತೋರಿಸುತ್ತಾನೆ. ವಿಷ್ಣುವು ಮಹಾಬಲಿಯ ತಲೆಯ ಮೇಲೆ ಕಾಲು ಇಟ್ಟು ಮಹಾಬಲಿಯನ್ನು ಪಾತಾಳಕ್ಕೆ ತಳ್ಳಿ ಭೂಮಿಯನ್ನು ಮಹಾಬಲಿಯಿಂದ ಮುಕ್ತ ಮಾಡುತ್ತಾನೆ.
6) ವಿಷ್ಣುವಿನ ಆರನೆಯ ಅವತಾರ ಪರಶುರಾಮ ಅವತಾರ. ವಿಷ್ಣುವು ಜಮದಗ್ನಿ ಮತ್ತು ರೇಣುಕಾ ಎಲ್ಲಮ್ಮ ಇವರ ಪುತ್ರನಾಗಿ ಪರಶುರಾಮನೆಂದು ಪ್ರಸಿದ್ಧಿ ಪಡೆದನು. ಕಾತ್ರ್ಯವೀರ ಅರ್ಜುನನು ಇವರ ಬಳಿ ಇದ್ದ ಸುರಭಿ ಎಂಬ ಕಾಮಧೇನುವನ್ನು ಅಪಹರಿಸಿಕೊಂಡು ಹೋದನು. ಪರಶುರಾಮನು ಕಾತ್ರ್ಯವೀರಾರ್ಜುನನ್ನು ಸಂಹರಿಸಿ, ಸುರಭಿಯನ್ನು ಮರಳಿ ಆಶ್ರಮಕ್ಕೆ ತಂದನು. ದುಷ್ಟ ಕ್ಷತ್ರೀಯರನ್ನು ಕೂಡ ಸಂಹರಿಸಿದನು.
7) ವಿಷ್ಣುವಿನ ಏಳನೆಯ ಅವತಾರ ಶ್ರೀ ರಾಮ ಅವತಾರ. ಶ್ರೀ ರಾಮನು ದಶರಥ ಮಹಾರಾಜನಿಗೆ ಪುತ್ರನಾಗಿ ಜನಿಸಿ, ಜನಕ ಮಹಾರಾಜನ ಪುತ್ರಿ ಸೀತಾದೇವಿಯನ್ನು ಮದುವೆಯಾಗುತ್ತಾನೆ. ಲಂಕೆಯ ರಾವಣಾಸುರನು ಸೀತಾದೇವಿಯನ್ನು ಅಪಹರಿಸಲು ಶ್ರೀ ರಾಮನು ವಾನರ ಸೇನೆಯ ಜೊತೆ ಲಂಕೆಯನ್ನು ತಲುಪಿ ರಾವಣಾಸುರನನ್ನು ಸಂಹರಿಸಿ, ಸೀತೆಯನ್ನು ಮರಳಿ ಅಯೋಧ್ಯೆಗೆ ಕರೆದುಕೊಂಡು ಬರುತ್ತಾನೆ. ಶ್ರೀ ರಾಮನು ರಾಜ್ಯವನ್ನು ಆಳಿದ ರೀತಿ, ಪಾಲಿಸಿದ ನೀತಿ, ಗುರುಹಿರಿಯರಿಗೆ ಕೊಟ್ಟ ಗೌರವ, 14 ವರುಷ ಸೀತಾದೇವಿ ಬರುವುದನ್ನು ಕಾತುರದಿಂದ ನಿರೀಕ್ಷಿಸಿ ಸೀತಾದೇವಿಯ ಜೊತೆ ಸಂಸಾರ ಮಾಡಿದ ಶ್ರೀರಾಮನನ್ನು “ಮರ್ಯಾದ ಪುರುಷೋತ್ತಮ ದೈವಂ ಮನುಷ್ಯ ರೂಪೇಣಾ” ಎಂದು ವರ್ಣಿಸಿರುವರು. ಶ್ರೀರಾಮ ಮತ್ತು ಸೀತಾದೇವಿ ಏಕಪತ್ನಿ ವೃತಸ್ತ ಮತ್ತು ಏಕ ಪತಿ ವೃತಸ್ತೆ ನಿಯವನ್ನು ಪಾಲನೆ ಮಾಡಿದ ಸಜ್ಜನರು.
8) ವಿಷ್ಣುವಿನ ಎಂಟನೆಯ ಅವತಾರ ಶ್ರೀ ಕೃಷ್ಣ ಅವತಾರ. ಶ್ರೀ ಕೃಷ್ಣನು ಚತುರ ರಾಜಕಾರಣಿ, ತನ್ನ ಬುದ್ಧಿವಂತಿಕೆಯ ಮಾತಿನಿಂದ ಎದುರಾಳಿಗಳ ಮನಸ್ಸಿನ ಮೇಲೆ ಪರಿಣಾಮ ಬೀರಿ, ಅವರ ವಿಚಾರಧಾರೆಗಳನ್ನು ಬದಲಾಯಿಸಬಲ್ಲ ಚತುರ. ಅರ್ಜುನನು ಮಹಾಭಾರತದ ಯುದ್ಧದಲ್ಲಿ ಯುದ್ಧ ಮಾಡುವುದಿಲ್ಲ ಎಂದು ಬಿಲ್ಲು ಬಾಣಗಳನ್ನು ಕೆಳಗೆ ಹಾಕಿದಾಗ ಗೀತೋಪದೇಶವನ್ನು ಮಾಡಿ ಅರ್ಜುನನು ಪುನಃ ಯುದ್ಧ ಮಾಡುವಂತೆ ಮಾಡಿದನು.
9) ವಿಷ್ಣುವಿನ ಒಂಬತ್ತನೆಯ ಅವತಾರ ಗೌತಮ ಬುದ್ಧ ಅವತಾರ. ಬುದ್ಧನ ವಿಗ್ರಹ ನೋಡಿದ ಕೂಡಲೆ ಬುದ್ಧನ ಮಂದಹಾಸ, ಶಾಂತ ಮತ್ತು ಸಂತೋಷದಿಂದ ಕೂಡಿದ ಮುಖವು ಕಾಣುತ್ತದೆ. ಜೀವನವು ದುಃಖದಿಂದ ಕೂಡಿದೆ, ದುಃಖದ ಮೂಲ ಆಸೆ, ದುರಾಸೆ, ಹೊಟ್ಟೆಕಿಚ್ಚು ಮತ್ತು ಸ್ವಾರ್ಥ ಇವುಗಳನ್ನು ಬಿಟ್ಟಾಗ ದುಃಖವೇ ಇಲ್ಲವಾಗುತ್ತದೆ ಮತ್ತು ನಮಗೆ ಮೋಕ್ಷವು ಲಭಿಸುತ್ತದೆ ಎಂದು ಬೋಧಿಸಿದನು.
10) ವಿಷ್ಣುವಿನ ಹತ್ತನೆಯ ಅವತಾರ ಕಲ್ಕಿ ಅವತಾರ. ಕಲ್ಕಿಯು ಇನ್ನೂ ಅವತರಿಸಿಲ್ಲ. ಕಲ್ಕಿಯು ನಾಳೆ ಹುಟ್ಟುವ ಮನುಷ್ಯ, ಯುದ್ಧ ಪ್ರಿಯ ಸುಧಾರಿತ ಮತ್ತು ಭಯಂಕರವಾದ ಮಾರಣಾಸ್ತ್ರಗಳನ್ನು ಹೊಂದಿದ ಯುದ್ಧ ಪ್ರಿಯ. ಇವತ್ತು ಕಲಿಯುಗದ ಕೊನೆಯ ದಿನಗಳು, ಒಬ್ಬರನ್ನೊಬ್ಬರು ಮೋಸ ಮಾಡುತ್ತಾ ದುಷ್ಟ ವಿಚಾರಗಳನ್ನು ಇಟ್ಟುಕೊಂಡು ಕಲಹ ಪ್ರಿಯರಾಗಿರುವರು. ಕಲ್ಕಿಯ ಮಾರಣಾಂತಿಕ ಅಸ್ತ್ರಗಳು ದುಷ್ಟರನ್ನೆಲ್ಲ ಸಂಹರಿಸಿ ಈ ಜಗತ್ತಿನಲ್ಲಿ ಪ್ರಳಯ ತಂದು ಹೊಸ ಯುಗ-ನವಯುಗ ಸತ್ಯ ಯುಗ ಪ್ರಾರಂಭವಾಗಲು ಕಾರಣನಾಗುತ್ತಾನೆ. ಜಗತ್ತು ಮತ್ತೊಮ್ಮೆ ಉದಯವಾಗಿ ಒಳ್ಳೆಯ ಜನರು, ಒಳ್ಳೆಯ ಸಂಸ್ಕøತಿ ಮತ್ತು ಒಳ್ಳೆಯ ವಾತಾವರಣದಿಂದ ಸತ್ಯಯುಗ ಆರಂಭವಾಗುತ್ತದೆ.
ಕೊನೆಯ ಮಾತು : ಸಾವಿರಾರು ವರ್ಷಗಳ ಮೊದಲು ನಮ್ಮ ಋಷಿ ಮುನಿಗಳು ವಿಷ್ಣುವಿನ ದಶಾವತಾರವನ್ನು ಸವಿಸ್ತಾರವಾಗಿ ಸಣ್ಣ ಮಕ್ಕಳೂ ಅರ್ಥವಾಗುವಂತೆ ಪುರಾಣ ಕಥೆಯಾಗಿ ಬರೆದಿದ್ದಾರೆ. 180 ವರ್ಷಗಳ ಹಿಂದೆ ಚಾರ್ಲಸ್ ಡಾರ್ವಿನ್‍ನು ತಮ್ಮ ವಿಕಾಸವಾದದಲ್ಲಿ ತಮ್ಮ ಸಂಶೋಧನೆಗಳ ಮೂಲಕ ಈ ವಿಚಾರವನ್ನು ಮಂಡಿಸಿದ್ದಾರೆ. ಇದರರ್ಥ ಈ ಎಲ್ಲ ವಿಷಯಗಳು ಸಾವಿರಾರು ವರ್ಷಗಳ ಮೊದಲೇ ನಮ್ಮ ಋಷಿ ಮುನಿಗಳಿಗೆ ತಿಳಿದಿತ್ತು. ಆದ್ದರಿಂದ ನಮ್ಮ ಋಷಿಮುನಿಗಳನ್ನು, ಪುರಾಣಗಳನ್ನು, ಗುರುಹಿರಿಯರನ್ನು, ತಂದೆತಾಯಿಯನ್ನು, ಸಂಬಂಧಿಕರನ್ನು, ಗೆಳೆಯರನ್ನು ಮತ್ತು ಪ್ರತಿಯೊಬ್ಬರನ್ನು ಪ್ರೀತಿ, ಗೌರವದಿಂದ ಕಂಡರೆ, ಕಲ್ಕಿ ಅವತಾರದಿಂದಾಗುವ ಅನಾಹುತಗಳು ಮುಂದೂಡಬಹುದು.

                          

ಡಾ. ಕೆ. ಹನುಮಂತಯ್ಯ        ಡಾ. ಮೇನಕಾ ಮೋಹನ್

ಚರ್ಮರೋಗ ವಿಭಾಗ, ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, # 82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066.
ಫೋನ್ : 080-28413381/1/2/3/4/5.   Email: info@vims.ac.in         www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!