Health Vision

ಸ್ತ್ರೀ ಪುರುಷರ ಲೈಂಗಿಕ ಸಮಸ್ಯೆಗಳು ಮತ್ತು ಹೋಮಿಯೋಪಥಿ ಚಿಕಿತ್ಸೆ

ಈ ಆಧುನಿಕ ಜಗತ್ತಿನಲ್ಲೂ ನಮ್ಮ ದೇಶದಲ್ಲಿ ಅನೇಕರು ಲೈಂಗಿಕತೆ ಮತ್ತು ಲೈಂಗಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಿಂಜರಿಯುತ್ತಾರೆ,ಲೈಂಗಿಕ ಸಮಸ್ಯೆಗಳನ್ನು ಗೌಪ್ಯವಾಗಿಡಲು ಯತ್ನಿಸುತ್ತಾರೆ. ಸಮಸ್ಯೆಗಳು ಉಲ್ಬಣಗೊಂಡಾಗ ಮಾತ್ರ ವೈದ್ಯರನ್ನು ಸಂದರ್ಶಿಸುತ್ತಾರೆ, ಕೆಲವೊಮ್ಮೆ ಸಂಪೂರ್ಣ ಮಾಹಿತಿಯನ್ನೂ ನೀಡುವುದಿಲ್ಲ. ಈ ಮನೋಭಾವ ಪುರುಷರಿಗೆ ಹೋಲಿಸಿದರೆ ಸ್ತ್ರೀಯರಲ್ಲೇ ಜಾಸ್ತಿ ಕಂಡುಬರುತ್ತದೆ.  ಕೆಲವೊಮ್ಮೆ ಪುರುಷರು ತಮ್ಮ ನ್ಯೂನ್ಯತೆಗಳನ್ನು ಮರೆಮಾಚಿ ಸಂಗಾತಿಯನ್ನೇ ದೂಷಿಸುವುದುಂಟು.  ಲೈಂಗಿಕತೆ, ಜನನೇಂದ್ರಿಯಗಳು ಮತ್ತು ಲೈಂಗಿಕ ಕ್ರಿಯೆಗಳ ಬಗ್ಗೆ ಅಪೂರ್ಣ ಮಾಹಿತಿ ಅಥವಾ ಸಮರ್ಪಕ ಜ್ಞಾನ ಇಲ್ಲದಿರುವುದು ಮತ್ತು ಕೆಲಬಗೆಯ ಅಪನಂಬಿಕೆಗಳಿಂದಲೂ ಲೈಂಗಿಕ ಸಮಸ್ಯೆಗಳು ಉಧ್ಭವಿಸುತ್ತವೆ. […]

Read More

ಗರ್ಭಗೊರಳು (ಸೆರ್ವಿಕ್ಸ್) ಕ್ಯಾನ್ಸರ್‍ಗೆ ವಿದಾಯ

ಗರ್ಭಗೊರಳು ಮಹಿಳೆಯ ಪುನರುತ್ಪತ್ತಿ ಅಂಗಾಂಗಗಳಲ್ಲಿ ಒಂದಾಗಿದ್ದು ಗರ್ಭಕೋಶದ ಕೆಳಗಿನ ಸಂಕುಚಿತ ಭಾಗ. ಗರ್ಭಗೊರಳು ಗರ್ಭಕೋಶವನ್ನು ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಯೋನಿ ದೇಹದ ಹೊರಭಾಗದ ಅಂಗಾಂಗ. ಮಹಿಳೆಯ ಋತುಸ್ರಾವದ ಸಮಯದಲ್ಲಿ, ರಕ್ತವು ಗರ್ಭಕೋಶದಿಂದ ಗರ್ಭಗೊರಳಿನ ಮೂಲಕ ಹೊರಗೆ ಹರಿದುಬರುತ್ತದೆ. ಸಂಭೋಗ ಸಮಯದಲ್ಲಿ ವೀರ್ಯಾಣು ಯೋನಿಯಿಂದ ಗರ್ಭಕೋಶಕ್ಕೆ ಹರಿಯುವಂತೆ ಮಾಡುವುದು ಈ ಗರ್ಭಗೊರಳಿನಲ್ಲಿರುವ ಲೋಳೆ ರಸ. ಗರ್ಭಧಾರಣೆಯಾದಾಗ, ಮಗು ಹೊರಗೆ ಬೀಳದಂತೆ ಅದನ್ನು ಗರ್ಭಕೋಶದಲ್ಲೇ ಹಿಡಿದಿಡುವುದು ಕೂಡ ಈ ಗರ್ಭಗೊರಳೇ. ಹೆರಿಗೆಯ ಸಮಯದಲ್ಲಿ ಈ ಗರ್ಭಗೊರಳು ಅಗಲಗೊಂಡು ಮಗು ಯೋನಿಯ ಮೂಲಕ […]

Read More

ಸಿಫಿಲಿಸ್

(SYPHILIS) ಸಿಫಿಲಿಸ್ ಕಾಯಿಲೆಯು ಲೈಂಗಿಕ ಕಾಯಿಲೆಗಳಲ್ಲಿ ಪ್ರಮುಖವಾದುದು. ಲೈಂಗಿಕ ಕಾಯಿಲೆಗಳು ಹಲವಾರು. ಇವುಗಳು ಸಾಮಾನ್ಯವಾಗಿ ಸಂಭೋಗ ಅಥವಾ ಬೇರೆ ರೀತಿಯ ಲೈಂಗಿಕ ಕ್ರಿಯೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಇವುಗಳನ್ನು ಲೈಂಗಿಕವಾಗಿ ಹರಡುವ ಕಾಯಿಲೆಗಳು (Sexually Transmited Disease STD) ಎಂದು ಕರೆಯುತ್ತಾರೆ. ಇವುಗಳಲ್ಲಿ ಸಿಫಿಲಿಸ್ ಅತ್ಯಂತ ಪ್ರಮುಖವಾದದ್ದು ಹಾಗೂ ತುಂಬಾ ಹಳೆಯ ಕಾಯಿಲೆ. ಅಂಕಿ ಅಂಶಗಳು: ವಿಶ್ವದಾದ್ಯಂತ 1.2 ಕೋಟಿ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳು ಹೇಳುತ್ತವೆ. […]

Read More

Back To Top