Health Vision

ಸುಖ ನಿದ್ರೆಯೇ ಆರೋಗ್ಯದ ಟಾನಿಕ್

ಊಟ, ನಿದ್ರೆ, ಕೆಲಸ – ಈ ಮೂರು ಮನುಷ್ಯನ ದೈನಂದಿನ ಚಟುವಟಿಕೆಗಳಲ್ಲಿ ಪ್ರಮುಖವಾದವು. ವಿರಾಮ, ವಿಶ್ರಾಂತಿ ಎಲ್ಲರಿಗೂ ಅತ್ಯವಶ್ಯಕವಾದದ್ದೇ. ಪ್ರತಿಯೊಬ್ಬರಿಗೂ ನಿದ್ರೆ ಬೇಕೇಬೇಕು. ನಿದ್ರೆ ಇದ್ದರೆ ಮಾತ್ರ ಮನುಷ್ಯ ತನ್ನ ಜೀವನವನ್ನು ಸುಖವಾಗಿ, ಆರೋಗ್ಯಕರವಾಗಿ, ಆಹ್ಲಾದಕರವಾಗಿರಿಸಿಕೊಳ್ಳಲು ಸಾಧ್ಯ. ಪ್ರತಿನಿತ್ಯವೂ ಮನುಷ್ಯ ನಿದ್ರೆ ಮಾಡದಿದ್ದರೆ ಕುಶಾಗ್ರತೆ, ಚುರುಕು, ಉತ್ಸಾಹ ಕುಂದುತ್ತದೆ. ನಿದ್ರೆಯಿಂದ ಹೃದಯದ ಕಾರ್ಯವೈಖರಿ, ಹಾರ್ಮೋನ್ ನಿಯಂತ್ರಣ ಸುಧಾರಿಸುತ್ತದೆ. ಜೊತೆಗೆ ಆರೋಗ್ಯವೂ ಕುದುರುತ್ತದೆ. ನಿದ್ರೆ ಇಲ್ಲದಿದ್ದರೆ ದಿನದ ಕೆಲಸಕಾರ್ಯಗಳನ್ನು ಮನಸ್ಸು ಕೊಟ್ಟು ಮಾಡಲು ಸಾಧ್ಯವಾಗುವುದೇ ಇಲ್ಲ. ಸಾಕಷ್ಟು ನಿದ್ರೆ […]

Read More

ಚರ್ಮ ಸುಕ್ಕು..!! ಮತ್ತು ಕಣ್ಣಿನ ಕಪ್ಪು ವರ್ತುಲ – ಕಾರಣಗಳೇನು?

ವಯಸ್ಸಾಗುವಿಕೆಯ ಸ್ಪಷ್ಟ ಲಕ್ಷಣ ಚರ್ಮಗಳಲ್ಲಿ ಸುಕ್ಕಾಗುವುದು ಮತ್ತು ಕಣ್ಣಿನ ಸುತ್ತಲೂ ಕಪ್ಪಾಗುವುದು. ಇದು ಮನುಷ್ಯ ಜೀವನದ ಸಹಜ ಪ್ರಕ್ರಿಯೆ. ದೇಹದ ಎಲ್ಲ ಅವಯವಗಳೂ ವಯಸ್ಸಾಗುವುದನ್ನು ವ್ಯಕ್ತಪಡಿಸುವಂತೆ ಚರ್ಮವು ಏಜಿಂಗ್‍ಗೆ ಒಳಗಾಗುತ್ತದೆ, ಹೀಗಾಗಿ ಚರ್ಮವು ಸುಕ್ಕುಗಟ್ಟುತ್ತದೆ. ಕಣ್ಣುಗಳ ಕೆಳಗೆ ಊದಿಕೊಂಡಂತಾಗುವುದು, ಗೆರೆಗಳು, ಕಪ್ಪುಗಟ್ಟುವುದು. ಒರಟಾಗುವುದು ಇತ್ಯಾದಿ ಚರ್ಮ ಸುಕ್ಕಿಗೆ ಸಂಬಂಧಿಸಿದ ವ್ಯತ್ಯಾಸಗಳು ಮೊದಲು ಮುಖದ ಮೇಲೆ ಮೂಡುತ್ತವೆ. ಚರ್ಮದ ಕಾಂತಿಯನ್ನು ಮರಳಿ ಪಡೆಯಲಾಗದಿದ್ದರೂ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ತಕ್ಕ ಮಟ್ಟಿಗಾದರೂ ಪಡೆಯಬಹುದು. ವಯಸ್ಸು ಏರಿದಂತೆಲ್ಲಾ ಚರ್ಮವು ಸುಕ್ಕುಗಟ್ಟುವುದು […]

Read More

ವೃದ್ಧಾಪ್ಯ `ಶಾಪ’ವಲ್ಲ! – ಕಾಯಿಲೆಗೆ ಕಾಯಬೇಡಿ…..

ದೀರ್ಘಾಯುಷಿಗಳಾಗಬೇಕೆಂದು ಬಯಸುವವರೆಲ್ಲ ವೃದ್ಯಾಪ್ಯವನ್ನು ಸಂತೋಷದಾಯಕವನ್ನಾಗಿ ಮಾಡಿಕೊಂಡು ಆರೋಗ್ಯಕರವಾದ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು. ಎಂದಿಗೂ ವೃದ್ಧಾಪ್ಯವನ್ನು `ಶಾಪ’ ವೆಂದು ಭಾವಿಸದೆ `ವರ’ ಎಂದುಕೊಂಡಲ್ಲಿ ನಿಭಾಯಿಸುವುದು ಖಂಡಿತ ಕಷ್ಟವಾಗಲಾರದು. ಮಧ್ಯ ವಯಸ್ಸಿನಲ್ಲೇ ಪೀಠಿಕೆ ಹಾಕಿ ಆರೋಗ್ಯಕರ ಸೂತ್ರಗಳನ್ನು ಪಾಲಿಸಿದಲ್ಲಿ ವೃದ್ಧಾಪ್ಯ ಸುಖಕರವಾಗಿರುತ್ತದೆ. ಯಾವುದೇ ದುಶ್ಚಟಗಳಿಗೆ ದಾಸರಾಗದಂತೆ ಜೀವನ ನಡೆಸಿದಲ್ಲಿ ಅನಾರೋಗ್ಯ ಹತ್ತಿರ ಸುಳಿಯಲಾರದು. ಮಕ್ಕಳು, ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಸಮಯ ಕಳೆದರೆ ನೆಮ್ಮದಿಯ ಬದುಕು ಸಾಧ್ಯವಿದೆ. ಅದಕ್ಕೆ ಆತ್ಮವಿಶ್ವಾಸವೇ ದಿವ್ಯ ಔಷಧಿ. ಹೊರೆ ಎನ್ನುವುದು ಬೇಡ ಒತ್ತಡದ ನಡುವೆ ಬದುಕುತ್ತಿರುವ ಮಕ್ಕಳು […]

Read More

Back To Top