Call Us / WhatsApp  :  +91 8197554373      Email Id  :  mediaicon@ymail.com

Health Vision

ಆರೋಗ್ಯ - ಆಹಾರ - ಆಯುರ್ವೇದ

Health Vision

We Care for Your Health

ವೈದ್ಯಲೋಕ ನಿಯತಕಾಲಿಕೆಗಳು

ಚಂದಾದಾರರಾಗಿ

Health Vision

SUBSCRIBE

Magazine

Click Here

ಆರೋಗ್ಯದಾಯಕ ಕಬ್ಬಿನ ರಸ

ಶೇಕಡ ಹದಿನೈದರಷ್ಟು ನೈಸರ್ಗಿಕ ಸಕ್ಕರೆಯಿರುವ ಕಬ್ಬಿನ ರಸ ಅತ್ಯಂತ ಆರೋಗ್ಯಕರ ಪಾನೀಯ. ಬೇಸಗೆಯಲ್ಲಿ ಅದರ ಸೇವನೆ ದೇಹದ ನಿರ್ಜಲೀಕರಣವನ್ನು ತಡೆಯುತ್ತದೆ. ತಾಮ್ರ, ಕಬ್ಬಿಣ, ಕೋಬಾಲ್ಟ್, ಸತು, ಕ್ರೋಮಿಯಂ, ಸುಣ್ಣ, ರಂಜಕ, ಪೊಟಾಷಿಯಂ, ಮೆಗ್ನೇಷಿಯಂ, ಪ್ರೊಟೀನ್, ಬಿ ಜೀವಸತ್ವಗಳಿಂದ ಸಮೃದ್ಧವಾಗಿರುವ ಅದರಲ್ಲಿ ಮೂವತ್ತು ವಿಧದ ಪೋಷಕಾಂಶಗಳಿವೆ. • ಗರ್ಭಧಾರಣೆಯ ಆರಂಭದಿಂದಲೇ ಗರ್ಭಿಣಿಯರು ಕಬ್ಬಿನ ರಸ ಕುಡಿಯಬಹುದು. ಅದು ಪ್ರೊಟೀನ್ ನಷ್ಟವನ್ನು ತಡೆದು ರಕ್ತದಲ್ಲಿ ಕೆಂಪು ಕಣಗಳನ್ನು ವರ್ಧಿಸುತ್ತದೆ. ಅದರೊಡನೆ ಶುಂಠಿ ರಸ ಬೆರೆತರೆ ವಾಕರಿಕೆ, ಉರಿಮೂತ್ರ ನಿಲ್ಲಿಸುತ್ತದೆ. ಶಿಶುವಿಗೂ […]

Read More

ಹಿರಿ ಗುಣಗಳ ಕರಿಬೇವು

ಕರಿಬೇವು ಭಾರತೀಯ ಕುಟುಂಬಗಳಲ್ಲಿ ದಿನ ನಿತ್ಯದ ಅಡುಗೆಗೆ ಬೇಕಾದ ಅತೀ ಮುಖ್ಯ ಸಾಂಬಾರ ಪದಾರ್ಥ. ಅದರಲ್ಲೂ ದಕ್ಷಿಣ ಭಾರತೀಯ ಅಡುಗೆಗಳಲ್ಲಿ ಕರಿಬೇವು ಇರಲೇಬೇಕು. ಆದರೂ ಇದ್ದೂ ಇಲ್ಲದಂತಿರುವುದು ಇದಕ್ಕೆ ಒದಗಿರುವ ಶೋಚನೀಯ ಸ್ಥಿತಿ. ಏಕೆಂದರೆ ನಮ್ಮಲ್ಲಿ ಬಹು ಮಂದಿ ಆಹಾರದಲ್ಲಿನ ಕರಿಬೇವಿನ ಎಲೆಯನ್ನು ಪಕ್ಕಕ್ಕೆ ಸರಿಸುವುದುಂಟು. ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧೀಯ ಗುಣಗಳ ಆಗರ. ಕರಿಬೇವಿನ ಎಲೆಗಳಲ್ಲಿ ವಿಟಾಮಿನ್-ಎ ಹೇರಳವಾಗಿದೆ ಅಲ್ಲದೇ ವಿಟಾಮಿನ್-ಸಿ, ಪ್ರೊಟೀನ್, ಕಾರ್ಬೊಹೈಡ್ರೇಟ್ಸ್ ಸಹ ಅಧಿಕ […]

Read More

ಹುಣಸೆ : ಭಾರತೀಯ ಕರ್ಜೂರ

ಹುಣಸೆಹಣ್ಣು (ಟ್ಯಾಮರಿಂಡಸ್ ಇಂಡಿಕಾ) ಭಾರತದ ಖರ್ಜೂರವೆಂತಲೂ ಕರೆಯಲ್ಪಡುತ್ತಿದ್ದು, ಇದು ದೊಡ್ಡದಾದ, ಅಗಲ ಕೊಂಬೆಗಳಿರುವ ಉಷ್ಣವಲಯದಲ್ಲಿ ಬೆಳೆಯುವ ಮರದಲ್ಲಿ ಬೆಳೆಯುತ್ತದೆ. ಅಡುಗೆಯಲ್ಲಿ ಬಳಕೆಗಳು ಭಾರತದ ಹಲವಾರು ಅಡುಗೆಗಳಲ್ಲಿ ಹುಣಸೇಹಣ್ಣಿನ ರಸ ಬಹಳ ಪ್ರಮುಖ ಪದಾರ್ಥ ಎಂದೆನಿಸಿದೆ. ಇದನ್ನು ಚಟ್ನಿ, ಜಾಮ್, ಸಕ್ಕರೆ ಪಾನೀಯ, ಶರಬತ್ತು, ಐಸ್‍ಕ್ರೀಮ್ ಮತ್ತು ಇತರೆ ತಿಂಡಿಗಳಲ್ಲೂ ಬಳಸಲಾಗುತ್ತದೆ. ಪಾಶ್ಚಾತ್ಯ ಅಡುಗೆಗಲ್ಲೂ ಇದು ತನ್ನ ಸ್ಥಾನವನ್ನೂ ಪಡೆದಿದೆ. ವೋರ್ಚೆಸ್ಟರ್‍ಶೈರ್ ಮತ್ತು ಹೆಚ್.ಪಿ.ಗಳಂತಹ ಸಾಸ್‍ಗಳಲ್ಲೂ ಹುಣಸೇ ತಿರುಳನ್ನು ಬಳಸಲಾಗುತ್ತದೆ. ಮಧ್ಯ-ಪ್ರಾಚ್ಯ ರಾಷ್ಟ್ರಗಳಲ್ಲಿ ಇದನ್ನು ಸಿಹಿಯಲ್ಲದ ಖಾದ್ಯಗಳಲ್ಲೂ ಬಳಸಲಾಗುತ್ತದೆ. […]

Read More

ಅಗಸೆ – ಆರೋಗ್ಯಕಾರಿ ಆಹಾರ

ಅಗಸೆಯನ್ನು ಇಂಗ್ಲೀಷನಲ್ಲಿ ‘ಫ್ಲಾಕ್ಸ’ ಅಥವಾ ಲಿನ್‍ಸೀಡ್ ಎಂದು ಕರೆಯುತ್ತಾರೆ. ಮೂಲತಃ ಇಂಗ್ಲೀಷ ಪದಗಳಲ್ಲಿ ಅರ್ಥೈಸಿದಂತೆ ಅಗಸೆಯು ಫ್ಲಾಕ್ಸ ಎಂಬ ಗಿಡದಿಂದ ಬೀಜಗಳ ರೂಪದಲ್ಲಿ ಸಿಗುವ ಆಹಾರವಾಗಿದೆ. ಅಗಸೆಯ ವೈಜ್ಞಾನಿಕ ಹೆಸರು ‘ಲಿನಮ್ ಯುಸಿಟಾಟಿಸಿಮಮ್’ (Linum usitatissimum). ಫ್ಲಾಕ್ಸ ಗಿಡವು ಉದ್ದನೆಯದ್ದಾಗಿದ್ದು, ನೀಲಿ ಬಣ್ಣದ ಹೂವುಗಳನ್ನು ಬಿಡುವ ಗಿಡವಾಗಿದೆ. ಫ್ಲಾಕ್ಸ ಗಿಡದಿಂದ ಬೆಳೆಯುವ ಅಗಸೆ ಬೀಜಗಳು ಸಾಮಾನ್ಯವಾಗಿ ಕಂದು ಬಣ್ಣ ಅಥವಾ ಹಳದಿ ಬಣ್ಣದಲ್ಲಿರುತ್ತವೆ. ಈ ಫ್ಲಾಕ್ಸ ಗಿಡದಿಂದ ಲಿನಿನ್ ಬಟ್ಟೆಗಳನ್ನೂ ಕೂಡ ತಯಾರಿಸಲಾಗುತ್ತದೆ. ಅಗಸೆಯು ಅತ್ಯಂತ ಪ್ರಾಚೀನ […]

Read More

ಮೆದುಳಿನ ಬೆಳವಣಿಗೆಗೆ ಯಾವ ಆಹಾರ ಸೂಕ್ತ?

ಮೆದುಳು ಮತ್ತು ಆಹಾರ ನಮ್ಮ ಮೆದುಳು ಒಂದು ಕಾರಿನಂತೆ. ಕಾರನ್ನು ಸರಿಯಾಗಿ ಚಲಾಯಿಸಲು ಅದಕ್ಕೆ ತೈಲ ಮತ್ತು ಇತರೆ ದ್ರವಗಳ ಅವಶ್ಯವಿದೆ, ಹಾಗೆಯೇ ಮೆದುಳಿನ ಕಾರ್ಯಕ್ಕೆ ಕೂಡ ವಿವಿಧ ರೀತಿಯ ಪೋಷಕಾಂಶಗಳ ಅವಶ್ಯಕತೆಯಿದೆ. ಅವುಗಳೆಂದರೆ, ಗ್ಲುಕೋಸ್, ಜೀವಸತ್ವಗಳು ಹಾಗೂ ಖನಿಜಾಂಶಗಳು. ಮೆದುಳಿಗೆ ಇಂಧನ ಅಥವಾ ಶಕ್ತಿಯ ಮೂಲವು ಗ್ಲುಕೋಸ್‍ನಿಂದ ದೊರೆಯುತ್ತದೆ. ಈ ಗ್ಲುಕೋಸ್ ಅಂಶವು ನಾವು ದಿನನಿತ್ಯ ಸೇವಿಸುವ ಶರ್ಕರಗಳಿಂದ, ಪ್ರೋಟಿನ್ ಮತ್ತು ಕೊಬ್ಬಿನಾಂಶಗಳಿಂದ ಮೆದುಳಿಗೆ ತಲಪುತ್ತದೆ. ಪ್ರತಿಯೊಬ್ಬರ ಮೆದುಳಿನ ಬೆಳವಣಿಗೆಯು ತಾಯಿಯ ಗರ್ಭದಲ್ಲಿದ್ದಾಗಿನಿಂದ ಹಿಡಿದು ಮಗು […]

Read More

ಗೋದಿ ಹುಲ್ಲಿನ ರಸ – ವೀಟ್ ಗ್ರಾಸ್

ತಕ್ಷಣ ಆಯುರ್ವೇದ ರಕ್ತವನ್ನು ಪೋಷಿಸಿ ಆರೋಗ್ಯ ತರುವ ಹೆಲ್ತ್ ವಂಡರ್ ರಕ್ತದಲ್ಲಿ ಹೀಮೋಗ್ಲೋಬಿನ್ ಕಡಿಮೆಯಾಗಿ ಅಶಕ್ತತೆ ಹೊಂದಿ ಅದರಿಂದ ಹೊರಬಾರಲಾರದವರು ಒಂದುಕಡೆಯಾದರೆ ಅದೇ ರಕ್ತದಲ್ಲಿ ಜಾಸ್ತಿಯಾದ ಕೊಬ್ಬಿನ ಅಂಶವನ್ನು ಇಳಿಸಲಾರದೆ ಕಷ್ಟಪಡುವವರು ಇನ್ನು ಕೆಲವರು. ಇವರಿಗೆಲ್ಲಾ ಮನೆಯಲ್ಲೇ ಮಾಡಬಹುದಾದ ಮದ್ದು ಗೋದಿ ಹುಲ್ಲಿನ ರಸ. ಆಯುರ್ವೇದದ ಔಷಧಗಳಲ್ಲಿ ಮೊದಲನೇ ಸ್ಥಾನ ಸ್ವರಸಗಳಿಗೆ. ಕಾರಣ ಅವುಗಳು ಅತಿ ಕಡಿಮೆ ಕಾಲದಲ್ಲಿ ಫಲವನ್ನು ಕೊಡುವಂಥವುಗಳು. ಈ ಸ್ವರಸಗಳಲ್ಲಿ ಗೋದಿ ಹುಲ್ಲಿನ ರಸವು ತುಂಬಾ ಮುಖ್ಯವಾಗಿರುವುದು. ನಮ್ಮ ಮನೆಗಳಲ್ಲಿ ಬಳಸುವಂಥಹಾ ಗೋದೀ […]

Read More

ಸಂಬಾರ ಸಂಜೀವಿನಿ – ದಾಳಿಂಬೆ

ಮಗುವಿನಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ದಾಳಿಂಬೆ ಹಣ್ಣು ಸುಪರಿಚಿತವೇ. ಜೀವನದಲ್ಲಿ ಒಮ್ಮೆಯಾದರೂ ಇದರ ಹುಳಿ-ಹುಳಿ, ಸಿಹಿ-ಸಿಹಿ ಸ್ವಾದವನ್ನು ಚಪ್ಪರಿಸದವರು ಸಿಗುವುದೇ ವಿರಳ. ನಮ್ಮ ಭಾರತೀಯ ಸಾಮಾಜಿಕ ಬದುಕಿನಲ್ಲಿ ದಾಳಿಂಬೆ ಹಾಸು ಹೊಕ್ಕಾಗಿತ್ತು ಎನ್ನಲು ಸಾಕಷ್ಟು ಪುರಾವೆಗಳು ಸಿಗುತ್ತವೆ. ಉದಾಹರಣೆಗೆ ಭಾಣಭಟ್ಟಿ ಮಹಾಕವಿಯ ಕಾದಂಬರಿಯಲ್ಲಿ ದಾಳಿಂಬೆಯ ಉಲ್ಲೇಖವಿದೆ ಸುಂದರವಾದ ಚೆಲುವೆಯ ದಂತಪಂಕ್ತಿಗಳನ್ನು ರಸಿಕ ಕವಿಗಳು ದಾಳಿಂಬೆ ಬೀಜಗಳಿಗೆ ಹೋಲಿಸುವುದನ್ನಂತೂ ನಾವು ಓದಿದ್ದೇವೆ. ದಾಳಿಂಬೆಯನ್ನು ಮೊಟ್ಟ ಮೊದಲು ಕ್ರಿ. ಪೂ. 2ಂಂಂನೇ ಇಸವಿಯಲ್ಲಿ ಇರಾನಿನಲ್ಲಿ ಬೆಳೆಯ ಲಾಯಿತೆಂದು ಇತಿಹಾಸ ಹೇಳುತ್ತದೆ. […]

Read More

ನಾವು ಬೆಣ್ಣೆ ತುಪ್ಪವನ್ನು ತಿನ್ನಬೇಕು

50 ವರ್ಷಗಳ ನಂತರ ಅಮೆರಿಕ ದೇಶವು ಒಂದು ಒಳ್ಳೆಯ ವೈದ್ಯಕೀಯ ಸುದ್ದಿಯನ್ನು ಕೊಟ್ಟಿದೆ. 1970 ರಿಂದ ಇವತ್ತಿನವರೆಗೆ ಜನರು ಬೆಣ್ಣೆ, ತುಪ್ಪ, ಹಾಲು, ಮೊಸರು ತಿಂದರೆ, ನಿಮ್ಮ ದೇಹದಲ್ಲಿ ಕೊಬ್ಬು Cholesterol ಹೆಚ್ಚು ಆಗಿ ರಕ್ತನಾಳಗಳಲ್ಲಿ ಸಂಗ್ರಹವಾಗಿ ರಕ್ತ ಸಂಚಾರ ಸ್ಥಗಿತಗೊಂಡು ಹೃದಯ ರೋಗ- ಹೃದಯಾಘಾತವಾಗುತ್ತದೆ ಎಂದು ಬಿಂಬಿಸಿದ್ದರು, ಭಯ ಹುಟ್ಟಿಸಿದ್ದರು. ಬಹಳಷ್ಟು ಜನ ಬೆಣ್ಣೆ ತುಪ್ಪ, ಹಾಲು ಮತ್ತು ಮೊಸರುಗಳನ್ನು ತಿನ್ನುವುದು ಕಡಿಮೆ ಮಾಡಿದ್ದರು. ಅಮೆರಿಕ ದೇಶದ ಕೃಷಿ ಇಲಾಖೆಯು ಪ್ರತಿ 5 ವರ್ಷಗಳಿಗೊಮ್ಮೆ ಆಹಾರವಸ್ತುಗಳ […]

Read More

Back To Top