ಕ್ಯಾನ್ಸರ್ ನಿವಾರಣೆಗೆ ಮಹೋಷಧ ಕಲ್ಪ, ಸಾಕ್ಷಾಧಾರ

ಉಡುಪಿ, ಅ. 6: ಆರೋಗ್ಯವಂತರಲ್ಲಿ ಸಾಮಾನ್ಯವಾಗಿ ಜೀವಕಣಗಳು ಒಂದು ಎರಡಾಗಿ, ಎರಡು ನಾಲ್ಕಾಗಿ ಸಹಜವಾಗಿ ವಿಭಜನೆಗೊಳ್ಳುತ್ತಿರುತ್ತದೆ. ಇದು ಆರೋಗ್ಯವಂತಿಕೆಗೆ ಅಗತ್ಯ. ಜೀವಕಣಗಳು ಅಸಹಜವಾಗಿ ಅನಿಯಮಿತವಾಗಿ ಒಂದು ಕಣ ಹತ್ತಾಗಿ, ಹತ್ತು ನೂರಾಗಿ ವಿಭಜನೆಗೊಳ್ಳಲು ಶುರುವಾಗುವುದು ಕ್ಯಾನ್ಸರ್ ಮುಖ್ಯ ಲಕ್ಷಣ.

ಈ ರೀತಿ ಅನಿಯಮಿತ ವಿಭಜನೆಯಿಂದ ಕ್ಯಾನ್ಸರ್ ಗಡ್ಡೆ ಬೆಳವಣಿಗೆ ಆಗುತ್ತದೆ. ಇದಕ್ಕೆ ಕಾರಣವನ್ನು ಆಧುನಿಕ ವೈದ್ಯಶಾಸ್ತ್ರ ವಿವರಿಸಿಲ್ಲ. ಯಾವುದೇ ರೋಗಗಳನ್ನು ವೈರಿಯಾಗಿ ಕಂಡು ಚಿಕಿತ್ಸೆ ಕೊಡುವ ಬದಲು ಅದನ್ನು ಉಪಚರಿಸುವ ಚಿಕಿತ್ಸಾ ಕ್ರಮವನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ಇದರಂತೆ ಇದುವರೆಗೆ ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಉಪಚರಿಸಿ ಗುಣಮುಖರಾದವರ ಬಗೆಗೆ ದಾಖಲೆಗಳನ್ನು ಸಾಕ್ಷ್ಯಾಧಾರಿತ ಕ್ಯಾನ್ಸರ್ ಚಿಕಿತ್ಸೆಯ ಕುರಿತು ಮಹೋಷಧ 2017 ಎಂಬ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಯಿತು.
ಕ್ಯಾನ್ಸರ್‍ಗೆ ಆಧುನಿಕ ವೈದ್ಯಶಾಸ್ತ್ರವು ಅನುಸರಿಸುವ ಚಿಕಿತ್ಸೆಗಳು ಎರಡು. ಒಂದು ಕೆಮಿಕಲ್ ರಿಯೇಜೆಂಟ್‍ನ್ನು ರೋಗಿ ದೇಹಕ್ಕೆ ರಕ್ತದ ಮೂಲಕ ಕೊಟ್ಟು ಕ್ಯಾನ್ಸರ್ ಕಣಗಳನ್ನು ಕೊಲ್ಲುವ ಕಿಮೋಥೆರಪಿ. ಎರಡನೆಯದು ಕ್ಯಾನ್ಸರ್ ಗಡ್ಡೆಯನ್ನು ಸುಟ್ಟು ಹಾಕುವ ರೇಡಿಯೇಷನ್ ಥೆರಪಿ. ಈ ಎರಡೂ ವಿಧಾನಗಳಿಂದ ಕ್ಯಾನ್ಸರ್ ಕಣಗಳು ಮಾತ್ರವಲ್ಲದೆ ಆರೋಗ್ಯವಂತ ಜೀವಕಣಗಳೂ ಆಘಾತಕ್ಕೆ ಒಳಗಾಗುವುದರಿಂದ ದೇಹದಾದ್ಯಂತ ದುಷ್ಪರಿಣಾಮ ಬೀರುವುದು ಎಲ್ಲರಿಗೂ ತಿಳಿದ ವಿಷಯ. ಕಿಮೋಥೆರಪಿಯಿಂದ ಶೇ. 97 ಪ್ರಕರಣಗಳಲ್ಲಿ ಪ್ರಯೋಜನವಿಲ್ಲ ಎಂದು ಅಮೆರಿಕದ ವೈದ್ಯರು ಸಾರಿದ್ದಾರೆ.
ಯಾವ ದುಷ್ಪರಿಣಾಮವೂ ಇಲ್ಲದ, ರೋಗಿಗೆ ಆರೋಗ್ಯ ಪೂರ್ಣ ಮನಸ್ಸು ಉಂಟು ಮಾಡುವ, ಬುದ್ಧಾಯುರ್ವೇದ ಪದ್ಧತಿಯನ್ನು ಅಳವಡಿಸಿಕೊಂಡು “ಮಹೋಷಧಕಲ್ಪ”ವೆಂಬ ಚಿಕಿತ್ಸಾ ಕ್ರಮವನ್ನು ಮುನಿಯಾಲು ಸಂಸ್ಥೆಯ ಅಧ್ಯಕ್ಷ ಡಾ|ಎಂ. ವಿಜಯಭಾನು ಶೆಟ್ಟಿಯವರ ಕಲ್ಪನೆಯಂತೆ ಅಭಿವೃದ್ಧಿಪಡಿಸಲಾಗಿದೆ. ಕ್ಯಾನ್ಸರ್ ಗಡ್ಡೆಗಳನ್ನು ಕರಗಿಸುವ ಹಾಗೂ ಇತರ ಭಾಗಗಳಿಗೆ ಕ್ಯಾನ್ಸರ್ ಹರಡದಂತೆ ಮಾಡುವುದೆಂದು ವೈಜ್ಞಾನಿಕವಾಗಿ ದೃಢಪಟ್ಟಿರುವ ಸಂಸ್ಥೆಯ ಮುನೆಕ್ಸ್ ಮಾತ್ರೆಗಳು, ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಹಿರಣ್ಯಪ್ರಾಶ ಬಿಂದುಗಳು ಮತ್ತು ಸಂಸ್ಥೆಯ ಇತರ ಔಷಧಿಗಳನ್ನು ಒಳಗೊಂಡ ಮಹೋಷಧಕಲ್ಪವೆಂಬ ಚಿಕಿತ್ಸಾಕ್ರಮದ ಮೂಲಕ 50ಕ್ಕೂ ಹೆಚ್ಚು ರೀತಿಯ ಸುಮಾರು ನಾನೂರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಉತ್ತಮ ಫಲಿತಾಂಶ ಕಂಡು ಬಂದಿದ್ದು, ಸುಮಾರು 27 ಕ್ಯಾನ್ಸರ್ ರೋಗಿಗಳು ರೋಗ ಮುಕ್ತರಾಗಿದ್ದಾರೆ. ಮುಖ್ಯವಾಗಿ ಕಾಯಿಲೆಗಳಿಗೆ ಕಾರಣವಾದ ಆಹಾರ ಕ್ರಮದಲ್ಲಿ ಬದಲಾವಣೆ, ಋತುಚರ್ಯೆಯಲ್ಲಿ ಮಾಡಬೇಕಾದ ಬದಲಾವಣೆ, ಚಿತ್ತಶುದ್ಧಿಗೊಳಿಸುವ ಪ್ರಕ್ರಿಯೆ ಬಳಿಕ ಕರ್ಮದಿಂದ ಬಂದ ಕಾಯಿಲೆಗಳನ್ನು ಕೊಲ್ಲುವ ಬದಲು ಉಪಚರಿಸಿ ಗುಣಮುಖಪಡಿಸುವುದು ಚಿಕಿತ್ಸಾಕ್ರಮವಾಗಿದೆ.

ಗುಣಮುಖರಾದವರ ಬಗೆಗೆ ಸಾಕ್ಷಾಧಾರಗಳನ್ನು ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಯಿತು. ಸಮ್ಮೇಳನದಲ್ಲಿ ದೇಶದ ಅನೇಕ ಭಾಗಗಳಿಂದ ಸುಮಾರು 200 ಪ್ರತಿನಿಧಿಗಳು ಭಾಗವಹಿಸಿದರು. ಸಮ್ಮೇಳನವನ್ನು ಮಣಿಪಾಲದ ಕೆಎಂಸಿ ರೇಡಿಯೋಥೆರಪಿ ಮತ್ತು ಆನ್ಕೋಲೊಜಿ ವಿಭಾಗದ ಡಾ| ಪ್ರಹ್ಲಾದ್ ಎಚ್. ಯತಿರಾಜ್ ಅವರು ಉದ್ಘಾಟಿಸಿದರು. ಪುಣೆಯ ಅಷ್ಟಾಂಗ ಆಯುರ್ವೇದ ಕಾಲೇಜಿನ ಡಾ| ರಂಜಿತ್ ನಿಂಬಾಳ್ಕರ್, ತಿರುನಲ್ವೇಲಿ ಸರಕಾರಿ ಸಿದ್ಧ ಕಾಲೇಜಿನ ಪ್ರಾಧ್ಯಾಪಕ ಡಾ| ಥೋಮಸ್ ವಾಲ್ಟರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಂಸ್ಥೆಯ ಅಧ್ಯಕ್ಷ ಡಾ| ಎಂ.ವಿಜಯಭಾನು ಶೆಟ್ಟಿ ಯವರು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ| ಸತ್ಯನಾರಾಯಣ ಬಿ. ಚಿಕಿತ್ಸಾನುಭವವನ್ನು ಹಂಚಿದರು.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!