ಮಲೀನ ಮೋಡ-ಉಪೇಕ್ಷೆ ಬೇಡ

ಗಾಳಿ, ನೀರು, ಆಹಾರ ಮಾತ್ರವಲ್ಲ ಆಗಸದಿಂದ ಸುರಿವ ಮಳೆ ಕೂಡ ಮಾಲಿನ್ಯಗೊಂಡಿದೆ. ಅಪಾಯಕಾರಿ ರಾಸಾಯನಿಕಗಳು ಮೋಡಗಳನ್ನು ಆವರಿಸಿರುವುದರಿಂದ, ರೋಗ ತರುವ ಮಳೆ- ಇಳೆಗೆ ಬಳುವಳಿಯಾಗಿದೆ.

(ಕಾರಣ): ಜಾಗತಿಕ ಮಟ್ಟದಲ್ಲಿ ತೀವ್ರಗೊಂಡಿರುವ ವಿಮಾನ ಹಾರಾಟ ಮತ್ತು ಉಪಗ್ರಹ ಉಡಾವಣೆಗಳಿಂದಾಗಿ ಮೋಡಗಳು ಮಾಲಿನ್ಯ ಆಗುತ್ತಿವೆ.ಇವು ಉಗುಳುವ ಹೊಗೆ ಮೊಡಗಳಿಗೆ ಆವರಿಸಿಕೊಳ್ಳುತ್ತಿವೆ. ಪರಿಣಾಮ,ವಿಷಯಕ್ತ ಮಳೆ ಬೀಳುತ್ತಿದೆ.ಈ ನೀರಿನ್ನು ಬಳಸಿದಾಗ ಚರ್ಮ ರೋಗ ಬರುತ್ತದೆ. ಸೇವಿಸಿದರೆ ಕೆಮ್ಮು, ಸೀತ, ಉದರ ಸಂಬಂಧಿ ಕಾಯಿಲೆಗಳು ಬರುತ್ತವೆ. ಕೆರೆ, ಕಾಲುವೆ, ನದಿಗಳೂ ಮಾಲಿನ್ಯಗೊಂಡಿರುವುದರಿಂದ- ಈ ನೀರು ಸಮುದ್ರ ಸೇರಿ ಆವಿಯರೂಪದಲ್ಲಿ ಮೋಡ ಸೇರುತ್ತಿವೆ. ಇದು ಸಹ ಮಾಲಿನ್ಯದ ಮಳೆಗೆ ಕಾರಣ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.ಆಗಸವೇ ಮಲೀನದ ಮನೆಯಾಗಿದ್ದು,ಧೂಳು ಹಾಗೂ ರಾಸಾಯನಿಕ ಕಣಗಳು ಮೋಡಗಳಿಗೆ ಅಂಟಿಕೊಳ್ಳುತ್ತಿವೆ. ಇದರಿಂದ ಸೂರ್ಯಕಿರಣ ನೇರವಾಗಿ ಭೂಮಿಗೆ ಬರುತ್ತಿಲ್ಲ. ಬರುವ ಸೂರ್ಯರಷ್ಮಿ ಕಲುಷಿತವಾಗಿವೆ. ಸುರ್ಯನಕಿರಣ ಗಳಿಂದ ಕರಗಿ, ಮಳೆಯಾಗಿ ಸುರಿದಾಗ ಅದರಲ್ಲಿ ಧೂಳು ಮತ್ತು ರಾಸಾಯನಿಕಗಳು ಬೆರೆತಿರುತ್ತವೆ .ಈ ಎಲ್ಲ ಕಾರಣಕ್ಕೆ ಮಳೆಯಲ್ಲಿ ಅದರಲ್ಲೂ ಮೊದಲ ಮಳೆಯ ನೀರು ವಿಷಕಾರಿ ಆಗುತ್ತಿದೆ. ಈ ಮಳೆ ನೀರು ಮೈ ಸೊಕಿದಾಗ, ಚರ್ಮ ರೋಗ, ತುರಿಕೆ ಹಾಗೂ ಕುದಲು ಉದರಲು ಆರಂಭವಾಗುತ್ತದೆ. (ಮಾಂಸಾಹಾರದಲ್ಲಿ ವಿಷ) ರಾಸಾಯನಿಕಳಿಂದ ಮಾಲಿನ್ಯವಾಗಿರುವ ಹಳ್ಳ, ಕೆರೆ, ನದಿ ಮತ್ತು ಸಮುದ್ರಗಳಲ್ಲಿನ ಮೀನು ಸೇರಿದಂತೆ ಜಲಚರಗಳ ಸೇವನೆ ಕೂಡ ಸೇಫ್ ಆಗಿ ಉಳಿದಿಲ್ಲ. ಸಮುದ್ರದಲ್ಲಿ ಮದ್ದು ಸಿಡಸಿ ಮೀನು ಹಿಡಿಯುವ ಪದ್ಧತಿ ಕೆಲವು ಕಡೆ ಇದೆ. ಇದು ಅಪಾಯರಿಯೇ. ಜಲಚರಗಳು ಕೂಡ ಕಲುಷಿತವಾಗಿ,ಸೇವನೆಗೆ ಸುರಕ್ಷಿತ ವಾಗಿಲ್ಲ. ವಿಷಕಾರಿ ಮಳೆಯ ನೀರಿನಲ್ಲಿ ಬೆಳೆದ ತರಕಾರಿ, ಹಣ್ಣು ಇತರೆ ಆಹಾರ ಪದಾರ್ಥ ಬೇಗ ಜೀರ್ಣವಾಗುವುದಿಲ್ಲ.ಮಾಲಿನ್ಯ ದ ದುಷ್ಟ ಪರಿಣಾಮ ಉಸಿರಾಟ ಸಮಸ್ಯೆ ಗೂ ಕಾರಣ. ಮನುಷ್ಯ ಸಂತತಿಗೆ ಸಂಚಕಾರ ಒಡ್ಡುತ್ತಿರುವ ಕ್ಯಾನ್ಸರ್ ಗೆ ಇದೆ ಮೂಲ. ನಭೋಮಂಡಲಕ್ಕೂ ಮಾಲಿನ್ಯದ ಮೈಲಿಗೆ ಮಾಡಿರವ ಮಾನವನಿಗೆ, ಮಾಡಿದ್ದು ಉಣ್ಣೂ ಮಹದೇವ ಎನ್ನದೆ ಗತಿ ಇಲ್ಲ.
ಪರಿಸರಕ್ಕೆ ತದ್ವಿರುದ್ದ ದಿಕ್ಕಿನಲ್ಲಿ ಜೀವನ ಶ್ಯೆಲಿ ರೂಪಿಸಿಕೊಂಡಿರುವ ಮನುಷ್ಯ, ತನ್ನ ತಪ್ಪುಗಳಿಗೆ ಬೆಲೆ ತೆರಬೇಕಾಗಿದೆ. ಜನಸಂಖ್ಯಾ ಸ್ಪೋಟದಿಂದ ನಗರೀಕರಣವಾಗಿ ರೋಡ್ ಟ್ರಾಫಿಕ್ ಮಾತ್ರವಲ್ಲ ಏರ್ ಟ್ರಾಫಿಕ್ ಕೂಡ ಜಾಮ್ ಆಗ್ತಿದೆ.ಬಾನಂಗಳವನ್ನು ತನ್ನ ಕಾಲ್ಚ್ಂಡಿನಂತೆ ಮಾಡಿಕೊಂಡು, ಬೇಕಾದ ಹಾಗೆ ಬಳಸುತ್ತಿರುವುದರಿಂದ ಸಮಸ್ಯೆ ಪರಾಕಾಷ್ಟೆ ತಲುಪಿದೆ. ನೈಜ ಹಕ್ಕಿ ಗಳು ಇಲ್ಲದ ಬಾನಂಗಳದಲ್ಲಿ ಲೋಸದ ಹಕ್ಕಿ ಗಳದೆ ಕಾರಬಾರು.ಇವು ಸೂಸುವ ಕಾರ್ಬನ್ ಕೊಳೆಯಿಂದ ಮನ್ಸೂನ್ ಕೂಡ ಬದಲಾಗಿದೆ.ಮಳೆ, ಚಳಿ, ಬೇಸಿಗೆ ಕಾಲಗಳು ತಿರಗು-ಮುರುಗಾಗಿವೆ.ಇದಕ್ಕೆ ಹೊಂದಿಕೊಳ್ಳಲಾಗದೆ ಪರಿತಪಿಸುವ ಅಸಹಾಯಕ ಸ್ಥಿತಿ ತಲುಪಿದ್ದೇವೆ.ಆರೋಗ್ಯ ಸಮಸ್ಯೆ ಎಲ್ಲ ವಯಸ್ಸಿನವರಿಗೂ ಕಾಡುತ್ತಿದೆ.ಭೂಮಾತೆಯನ್ನು ಗಲೀಜು ಮಾಡಿದ್ದು ಸಾಲದೆ,ಆಕಾಶಕ್ಕೆ ಮುಖ ಮಾಡಿ ಉಗಿದರೆ ತನ್ನ ಮೇಲೇಯೇ ಬೀಳುತ್ತದೆ ಎಂಬ ಅರಿವು ಇಲ್ಲದಾಗಿದೆ.ದೀರ್ಘ ಕಾಲದ ಸಮಸ್ಯೆಗಳಿಗೆ ತನ್ನನ್ನು ಗುರಿಯಾಗಿಸಿಕೊಳ್ಳುತ್ತಿರುವ ಮನಷ್ಯ ಎಚ್ಚರದ ಗಂಟೆ ಉಪೇಕ್ಷೆ ಮಾಡದಿರಲಿ.
(ಅಸಮತೋಲನ): ಜೀವ ವಿರೋಧಿ ಕಲ್ಮಶ ರಾಸಾಯನಿಕಗಳಿಂದ ಕೂಡಿದ ದಟ್ಟ ಕಣಗಳು ಮೋಡಗಳನ್ನು ಕಂಬಳಿಯಂತೆ ಹೊದ್ದುಕೊಂಡಿವೆ.ಇದರಿಂದ ಸಕಾಲಕ್ಕೆ ಮಳೆ ಮೋಡಗಳು ಕರಗದೆ,ಮನ್ಸೂನ್ ಏರು-ಪೇರು ಆಗುತ್ತಿದೆ. ಇದು ಜಾಗತಿಕ ವಿದ್ಯಮಾನ(Global Phenomenon) ಎಂದು ತಜ್ಞರು ನೀಡುತ್ತಿರುವ ಎಚ್ಚರಿಕೆ ನಿರ್ಲಲಕ್ಷಿಸುವಂತಿಲ್ಲ.
(ಬರಗಾಲ): ವಿಶ್ವದಾದ್ಯಂತ ವರ್ಷದಿಂದ ವರ್ಷಕ್ಕೆ ಮಳೆ ಬೀಳುವ ಪ್ರಮಾಣ ಇಳಿಕೆ ಆಗುತ್ತಿದೆ. ಪರಿಸರಕ್ಕೆ ಪೂರಕವಲ್ಲದ ಮಾನವನ ಚಟುವಟಿಕೆ ಇದಕ್ಕೆ ಬಹುಮುಖ್ಯ ಕಾರಣ ಎಂಬುದು ಅಮೇರಿಕನ್ ವಿಶ್ವ ವಿದ್ಯಾಲಯದ ಸಂಶೋಧಕರ ಅಂಬೋಣ.ಕಲ್ಮಶಗಳಿಂದ ಆವ್ರೃತಗೊಂಡ ಮೊಡ ಬೇಗ ಕರಗುವುದಿಲ್ಲ, ಮಳೆ ಸುರಿಯುವದಿಲ್ಲ. ಬರಗಾಲಕ್ಕೆ ಕೊನೆ ಇಲ್ಲ.

ಹನುಮೇಶ ಯಾವಗಲ್
ಹಿರಿಯ ಪತ್ರಕರ್ತರು

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!