ಸೋರಿಯಾಸಿಸ್- ನೀವು ಏನನ್ನು ತಿಳಿದಿರಬೇಕು?

ಸೋರಿಯಾಸಿಸ್ ಎನ್ನುವುದು ಮಾನವರಲ್ಲಿ ಬರುವ ಒಂದು ಸಾಮಾನ್ಯ ಚರ್ಮರೋಗ. ಸಾಂಕ್ರಮಿಕವಲ್ಲದ,   ಚರ್ಮದ ನವೆಯೊಂದಿಗೆ, ದಪ್ಪ ಪೊರೆಯಂತಹ ಮರುಕಳಿಸುವ ಚರ್ಮದ ಸ್ಥಿತಿಯಾಗಿದೆ. ಈ ರೋಗವು ಕಡಿಮೆ ಪ್ರಮಾಣದಲ್ಲಿರುವ ಸ್ವಲ್ಪವೇ ಜಾಗದಲ್ಲಿ ಹಬ್ಬಿದ ಅಥವ ಬಹಳಷ್ಟು ಪ್ರಮಾಣದ ಜಾಗದಲ್ಲಿ ಹಬ್ಬಿರುವ ಅಂದರೆ ಪೂರ್ಣಪ್ರಮಾಣದಲ್ಲಿ ಇಡೀ ದೇಹಕ್ಕೆ ಹಬ್ಬಿರುವ ರೋಗವೂ ಇರಬಹುದು.

ಸೋರಿಯಾಸಿಸ್ ಎಂಬುದು ಒಂದು ಸಾಮಾನ್ಯ ಖಾಯಿಲೆಯಾಗಿದೆ. ಡಬ್ಲೂಎಚ್‍ಒದ ಸಮೀಕ್ಷೆಯ ಪ್ರಕಾರ ಶೇಕಡಾ 10% ರವರೆಗೆ ಜನ ತಮ್ಮ ಜೀವಮಾನದಲ್ಲಿ ಸೋರಿಯಾಸಿಸ್ ಖಾಯಿಲೆಯಿಂದ ಬಳಲುತ್ತಾರೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಸೋರಿಯಾಸಿಸ್ ಖಾಯಿಲೆಯು ಗಣನೀಯವಾದ ಹೆಚ್ಚಳವನ್ನು ಕಂಡಿದೆ. ಬಹುಶಃ ಜನರ ಜೀವನ ಶೈಲಿ ಈ ತರಹದ ಬದಲಾವಣೆಗೆ ಕಾರಣವಾಗಿರಬಹುದು. ಈ ಸೋರಿಯಾಸಿಸ್ ಖಾಯಿಲೆಯು ಎಲ್ಲ ವರ್ಗದ ಜನರಿಗೂ, ಎಲ್ಲ ವಯೋಮಾನದವರಿಗೂ, ಮತ್ತು ಎರಡೂ ಲಿಂಗದ ಜನರಿಗೂ ಬರಬಹುದಾಗಿದೆ. ಬಹಳ ಸಾಮಾನ್ಯವಾಗಿ ಮೊದಲು ಈ ಖಾಯಿಲೆ ಯೌವ್ವನದ ಮೊದಲ ಹಂತದಲ್ಲಿ ಬರಬಹುದಾದ ಖಾಯಿಲೆ ಎಂದೆನ್ನಲಾಗುತ್ತಿತ್ತು. ಹಾಗೆಯೇ ಈ ಖಾಯಿಲೆಯನ್ನು ವಾಸಿಮಾಡಲಾಗದ, ಮರುಕಳಿಸುವ ಖಾಯಿಲೆಯೆಂದೂ, ಕಾಲಕ್ರಮೇಣ ಹೆಚ್ಚಾಗುವ ಖಾಯಿಲೆಯೆಂದು ಪರಿಗಣಿಸಲಾಗಿತ್ತು. ಈ ಸೋರಿಯಾಸಿಸ್ ಖಾಯಿಲೆಯಲ್ಲಿ ಒಂದೇ ಸರಿ ಎಲ್ಲವೂ ಆರಾಮವಾದಂತೆ ಆಗುವುದು. ನಂತರ ಸ್ವಲ್ಪ ಸಮಯದಲ್ಲಿ ಮತ್ತೆ ಮರುಕಳಿಸುವುದು ಮತ್ತು ದೇಹದ ಕೆಲವು ಭಾಗಗಳಲ್ಲಿ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು ಅಸಹಜವೇನಲ್ಲ.

ಸಾಮಾನ್ಯವಾಗಿ ಚರ್ಮದ ಕೋಶಗಳು 28 ದಿನಗಳ ಅವಧಿಯಲ್ಲಿ ನಿರ್ಮಾಣಗೊಳ್ಳುತ್ತವೆ. ಈ ಸಮಯದಲ್ಲಿ ಅದು ಚರ್ಮದ ಹೊರ ಭಾಗದಲ್ಲಿ ಸಂಚರಿಸುತ್ತದೆ, ಅಲ್ಲಿ ನಿರಂತರವಾಗಿ ನಿರ್ಜೀವ ಕೋಶಗಳು ಕಾಣದಂತೆ ಹರಡಿಕೊಂಡಿರುತ್ತದೆ. ಈ ಸೋರಿಯಾಸಿಸ್‍ನ ತೇಪೆಗಳಲ್ಲಿ ಚರ್ಮಕೋಶಗಳ ವಹಿವಾಟು ಬಹಳ ವೇಗವಾಗಿ, ನಾಲ್ಕರಿಂದ ಏಳು ದಿನಗಳಲ್ಲಿ ಆಗುತ್ತದೆ ಮತ್ತು ಇದರ ಅರ್ಥ ಜೀವಂತ ಕೋಶಗಳೂ ಕೂಡ ಮೇಲ್ಭಾಗಕ್ಕೆ ತಲುಪಿ ಸತ್ತ ಕೋಶಗಳೊಂದಿಗೆ ಬೆರೆಯುತ್ತವೆ. ಇದರ ಅರ್ಥ ಕೋಶಗಳ ನಿರೋಧಕ ವ್ಯವಸ್ಥೆಯಲ್ಲಿ (ಟಿ ಕೋಶಗಳು) ವಿಪರೀತ ಕಾರ್ಯೋನ್ಮುಖವಾಗುತ್ತವೆ, ಇದರಿಂದ ಅವುಗಳ ಬೆಳವಣಿಗೆ ಚರ್ಮಕೋಶಗಳಲ್ಲಿ ಬಹಳ ಬೇಗ ಹಬ್ಬುತ್ತದೆ ಮತ್ತು ತುರಿಕೆಯು ಆರಂಭವಾಗುತ್ತದೆ. ಈ ಸೋರಿಯಾಸಿಸ್ ಹರಡುವುದು ದೇಹದ ಯಾವುದೇ ಭಾಗದಲ್ಲಿ ಆಗಿರಲಿ ಅದರ ಕಾರ್ಯವಿಧಾನವು ಒಂದೇ ರೀತಿಯದ್ದಾಗಿರುತ್ತದೆ.

ಸೋರಿಯಾಸಿಸ್ ಕಾರಣಗಳು – ಕೆಲವು ಪ್ರಚೋದಕಗಳು:

ಈ ಖಾಯಿಲೆಯ ನಿಖರವಾದ ಕಾರಣವನ್ನು ಇನ್ನೂ ಹುಡುಕುತ್ತಲೇ ಇದ್ದಾರೆ. ಸಂಶೋಧನೆಯ ಪ್ರಕಾರ ಪ್ರಮುಖವಾಗಿ ಮೂರು ಕಾರಣಗಳನ್ನು ಗುರುತಿಸುತ್ತಾರೆ – ಅನುವಂಶೀಯತೆ, ಪರಿಸರ ಮತ್ತು ರೋಗನಿರೋಧಕ ಶಕ್ತಿಯ ವ್ಯವಸ್ಥೆ. ಅಧ್ಯಯನದ ಪ್ರಕಾರ ಸ್ಷಷ್ಟವಾಗಿ ತಿಳಿಯುವುದೇನೆಂದರೆ ಈ ಸೋರಿಯಾಸಿಸ್ ಖಾಯಿಲೆ ಉಂಟಾಗಲು ಅನುವಂಶೀಯತೆಯು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಪೋಷಕರಲ್ಲಿ ಒಬ್ಬರಿಗೆ ಯಾರಿಗಾದರೂ ಸೋರಿಯಾಸಿಸ್ ಇದ್ದಲ್ಲಿ ಶೇಕಡಾ 15% ರಷ್ಟು ಮಕ್ಕಳಲ್ಲಿ ಈ ಖಾಯಿಲೆ ಉಂಟಾಗುವ ಸಾಧ್ಯತೆ ಇರುತ್ತದೆ. ಪೋಷಕರು ಇಬ್ಬರಲ್ಲೂ ಈ ಸೋರಿಯಾಸಿಸ್ ಖಾಯಿಲೆ ಇದ್ದ ಪಕ್ಷದಲ್ಲಿ ಮಕ್ಕಳಿಗೆ ಶೇಕಡಾ 45% ಈ ಖಾಯಿಲೆ ಉಂಟಾಗುವ ಸಾಧ್ಯತೆ ಇರುತ್ತದೆ. ಪೋಷಕರಿಬ್ಬರಿಗೂ ಈ ಖಾಯಿಲೆ ಇಲ್ಲದೆ ಒಬ್ಬ ಮಗುವುಗೆ ಬಂದಾಗ ಮತ್ತೊಬ್ಬ ಮಗುವಿಗೆ ಶೇಕಡಾ 20% ಈ ಖಾಯಿಲೆ ಸೋರಿಯಾಸಿಸ್ ಉಂಟಾಗುವ ಸಾಧ್ಯತೆ ಇರುತ್ತದೆ. ಇಂತಹ ಅನುವಂಶೀಯತೆಗೆ ಒಳಪಟ್ಟಿರುವ ವ್ಯಕ್ತಿಗಳಲ್ಲಿ ಕೆಲವೊಮ್ಮೆ ಪರಿಸರವೂ ಕಾರಣವಾಗಿರುತ್ತದೆ.  ಕೆಲವು ಪ್ರಚೋದಕಗಳು :

1. ಸೋಂಕು : ದೇಹದ ಯಾವುದೇ ಭಾಗದಲ್ಲಿ ಉಂಟಾಗುವ ಬ್ಯಾಕ್ಟೀರಿಯಾದ ಸೋಂಕು ಉದಾಹರಣೆಗೆ ಹಲ್ಲಿನ, ಗಂಟಲ ಅಥವಾ ಚರ್ಮದ ಸೋಂಕು ಹೆಚ್ಚಾಗಿ ಸೋರಿಯಾಸಿಸ್ ಆಗುವುದಕ್ಕೆ ಕಾರಣವಾಗುತ್ತದೆ. ಅದರಂತೆ ಎಚ್‍ಐವಿ ಸೋಂಕಿನಂತಹ ವೈರಾಣು ಸೋಂಕಿರುವ ಜನರಲ್ಲಿ ಇದು ಹೆಚ್ಚಾಗಿ ಹರಡುತ್ತದೆ.

2. ಚರ್ಮಕ್ಕೆ ಆಗುವ ಗಾಯ : ದೈಹಿಕವಾದ ಗಾಯಗಳು (ಗಾಯ, ತರಚು) ರಸಾಯನಿಕ ಗಾಯಗಳು, ಯಂತ್ರದಿಂದ ಆದ ಗಾಯಗಳು (ಹುಳದ ಕಡಿತ, ತೀವ್ರ ಬಿಸಿಲ ಸುಟ್ಟ ಗಾಯ) ಅಥವಾ ಕೆಲವೊಮ್ಮೆ ಚರ್ಮರೋಗಗಳಾದ ಸಿಡುಬು, ಸರ್ಪಸುತ್ತು ಮುಂತಾದವುಗಳಿಂದ ಸೋಂಕಿಗೆ ಒಳಗಾಗಿರುವ ಜಾಗಗಳು ಮುಂದೆ ಸೋರಿಯಾಸಿಸ್ ಬೆಳೆಯುವ ಸಾಧ್ಯತೆಗಳು ಇರುತ್ತದೆ

3. ಒತ್ತಡ : ಒತ್ತಡ ಪೂರ್ಣ ಜೀವನವೂ ಕೂಡ ಈ ಸೋರಿಯಾಸಿಸ್ ಖಾಯಿಲೆಗೆ ಬಲಿಯಾಗುವ ಕಾರಣಗಳಲ್ಲಿ ಒಂದಾಗಿದೆ. ಉದಾಹರಣೆಗೆ ಕೆಲಸದ ಬದಲಾವಣೆ, ದಾಪಂತ್ಯ ಜೀವನದಲ್ಲಿ ವಿರಸ, ಹಣ ಕಾಸಿನ ಅಭದ್ರತೆ ಮುಂತಾದವು.

4. ಧೂಮಪಾನ : ಸೋರಿಯಾಸಿಸ್ ಖಾಯಿಲೆಯು ಧೂಮಪಾನ ಮಾಡುವವರಲ್ಲಿ ಸಾಮಾನ್ಯವಾಗಿ ಹೆಚ್ಚಾಗಿಯೇ ಕಂಡು ಬರುತ್ತದೆ.

5. ಮದ್ಯಪಾನ : ಹೇರಳ ಮದ್ಯಪಾನ ಮತ್ತು ಸೋರಿಯಾಸಿಸ್ ನಡುವೆ ಬಹಳ ದೊಡ್ಡ ನಂಟು ಇದೆ.

6. ವಿಟಮಿನ್ ಡಿ ಕೊರತೆ : ವಿಟಮಿನ್ ಡಿ ಕೊರತೆಯು ಸೋರಿಯಾಸಿಸ್ ರೋಗಿಗಳಲ್ಲಿ ಹೆಚ್ಚಾಗಿ ಕಾಣಬಹುದು.

7. ಸ್ಥೂಲಕಾಯತೆ : ಬಹಳಷ್ಟು ಸೋರಿಯಾಸಿಸ್ ರೋಗಿಗಳು ಸ್ಥೂಲಕಾಯತೆಗೆ ಒಳಗಾಗಿರುತ್ತಾರೆ ಮತ್ತು  ಚಯಾಪಚಯಕ್ಕೆ ಸಂಬಂಧಿಸಿದ ಖಾಯಿಲೆಗಳಾದ ಡಯಾಬಿಟಿಸ್, ಕೊಲೆಸ್ಟ್ರಾಲ್‍ನ ಮಟ್ಟದಲ್ಲಿ ಏರಿಳಿತ ಮತ್ತು ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗಿರುತ್ತಾರೆ.

8. ಔಷಧೀಕರಣ : ಕೆಲವೊಂದು ಔಷಧಿಗಳಾದ ನೋವು ನಿವಾರಕ, ಮಲೇರಿಯಾ ರೋಗಕ್ಕೆ ಬಳಸುವ ಔಷಧಿ, ಅಪಸ್ಮಾರ, ಅಧಿಕ ರಕ್ತದೊತ್ತಡ, ಮತ್ತು ಕೆಲವು ಮಾನಸಿಕ ಚಿಕಿತ್ಸೆಯ ಔಷಧಿಗಳು ಸೋರಿಯಾಸಿಸ್ ಖಾಯಿಲೆಯನ್ನು ಉದ್ರೇಕಿಸುವ ಕೆಲಸವನ್ನು ಮಾಡುತ್ತವೆ

ಸೋರಿಯಾಸಿಸ್ ಹೇಗೆ ಇರುತ್ತದೆ?

ಸೋರಿಯಾಸಿಸ್ ಖಾಯಿಲೆಯು ವಿವಿಧ ಪ್ರಕಾರದ ಗಾಯಗಳಲ್ಲಿ ಇರುತ್ತದೆ. ಸಾಮಾನ್ಯವಾಗಿ ಒಣ ಚರ್ಮ ನೀಲಿಬಣ್ಣದಲ್ಲಿರುತ್ತದೆ. ನಂತರ ಸ್ವಲ್ಪ ಸಮಯದ ನಂತರ ಕೆಂಪು ದದ್ದುಗಳೊಂದಿಗೆ ಬಿಳಿಬಣ್ಣದ ಪೊರೆಗಳಿಂದ ಕೂಡಿರುತ್ತದೆ. ಇಂತಹ ಗಾಯಗಳು ಸಾಮಾನ್ಯವಾಗಿ ಮೊಣ ಕೈ, ಮೊಣ ಕಾಲು, ತೋಳಿನ ಹೊರಭಾಗ, ಕಾಲುಗಳು, ಬೆನ್ನಿನ ಕೆಳಭಾಗಗಳಲ್ಲಿ ಹೆಚ್ಚಾಗಿ ಆಗುತ್ತವೆ. ಇವುಗಳನ್ನು ಅಂಗೈ ಮತ್ತು ಅಂಗಾಲು ಮುಂತಾದ ಮೆತ್ತಗಿನ ಪ್ರದೇಶಗಳಲ್ಲಿ ಇದ್ದಾಗ ಅವುಗಳನ್ನು ಬದಲಾಯಿಸಬಹುದಾಗಿದೆ ಮತ್ತು ಅವು ಒಣ ಮತ್ತು ಒಡೆದ ಪೊರೆ ಬಂದಂತಹ ಚರ್ಮವಾಗಿ ಕಾಣುತ್ತವೆ. ಇಲ್ಲಿ ಮತ್ತೊಂದು ಕುತೂಹಲಕರವಾದ ಅಂಶವೆಂದರೆ ಚರ್ಮದ ಮೇಲೆ ಗಾಯವಾಗಿರುವ ಯಾವುದೇ ಭಾಗದಲ್ಲಿ ಆಗಬಹುದಾಗಿದೆ. ಅದರಂತೆ ಗಾಯವು ರೋಗಿಯ ತಲೆಯ ಮೇಲೆ ಬುರುಡೆ ಭಾಗದಲ್ಲೂ ಆಗಬಹುದುದಾಗಿದೆ ಸಾಮಾನ್ಯವಗಿ ಇಂತಹದ್ದನ್ನು ರೋಗಿಗಳು ಹೆರಳವಾದ ತಲೆ ಹೊಟ್ಟು ಎಂತಲೂ ಕರೆಯುತ್ತಾರೆ.

ಸಾಮಾನ್ಯವಾಗಿ ಎಲ್ಲ ರೋಗಿಗಳಲ್ಲಿಯೂ ತುರಿಕೆ ಇದ್ದೆ ಇರುತ್ತದೆ. ತುರಿಕೆಯ ತೀವ್ರತೆ ರೋಗಿಯಿಂದ ರೋಗಿಗೆ ವ್ಯತ್ಯಾಸವಿರುತ್ತದೆ, ದಿನದ ಬೇರೆ ಬೇರೆ ಸಮಯದಲ್ಲಿ ತುರಿಕೆ ಇರುತ್ತದೆ ಮತ್ತು ದೇಹದ ವಿವಿಧ ಭಾಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ತುರಿಕೆಯ ಪ್ರಮಾಣ ಹೆಚ್ಚಾಗಿದ್ದರೂ ಸಹ, ಪೊರೆಯಂತಹ ಪದಾರ್ಥ ಚರ್ಮದಿಂದ ಬಂದರೂ ಸಹ ಯಾವುದೇ ತರಹದ ಸೋರಿಕೆಯು ಆ ಭಾಗದಿಂದ ಆಗುತ್ತಿರುವುದಿಲ್ಲ. ಅಂಗಾಲುಗಳಲ್ಲಿ ಮತ್ತು ಅಂಗೈಗಳಲ್ಲಿ ಸೀಳುಗಳು ಎಷ್ಟೇ ದೊಡ್ಡದಾಗಿದ್ದರೂ ನೋವು ಹೆಚ್ಚಾಗಬಹುದೇ ಹೊರತು ಅವರ ದೈನಂದಿನ ಚಟುವಟಿಕೆಗಳಾದ ನಡೆದಾಡುವುದು ಅಥವಾ ಯಾವುದೇ ಮನೆಗೆಲಸವನ್ನು ಮಾಡುವಲ್ಲಿ ತೊಂದರೆ ಯಾಗುವುದಿಲ್ಲ.

1. ಈ ಎಲ್ಲ ಲಕ್ಷಣಗಳು ಚಳಿಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

2. ಮೇಲಿನ ಈ ಎಲ್ಲ ಬದಲಾವಣೆಗಳು ಚರ್ಮದಲ್ಲಿ ಇದ್ದು, ಸುಮಾರು 1/3 ರೋಗಿಗಳಲ್ಲಿ ಉಗುರುಗಳಲ್ಲೂ ಬದಲಾವಣೆಯನ್ನು ಗಮನಿಸಬಹುದಾಗಿದೆ

3. ಶೇಕಡಾ 10-15% ರೋಗಿಗಳಲ್ಲಿ ಸಂದುಗಳಲ್ಲಿ ನೋವುಂಟಾಗಬಹುದು, ಊತ ಬರಬಹುದು ಅಥವಾ ಚಲನೆಯಲ್ಲಿ ಸೀಮಿತವಾದ ಚಲನೆ ಕಾಣಬಹುದಾಗಿದೆ

ಸೋರಿಯಾಸಿಸ್ ರೋಗ ನಿರ್ಣಯ

ನೀವು ಒಬ್ಬ ಚರ್ಮ ತಜ್ಞರ ಬಳಿಗೆ ಹೋದಾಗ ಅವರು ರೋಗಿಯ ರೋಗ ಲಕ್ಷಣ ಅದರ ಇತಿಹಾಸದ ಬಗೆಗೆ ತಿಳಿದು ಚರ್ಮದ ಪರಿಕ್ಷಣೆ ಮಾಡಿ ತಪಾಸಣೆಗಳನ್ನು ಮಾಡಿಸಬಹುದು. ಕೆಲವು ಕಠಿಣ ಸಂದರ್ಭಗಳಲ್ಲಿ ಚರ್ಮದ ನಿರ್ದಿಷ್ಟ ಭಾಗವನ್ನು ಮತ್ತಷ್ಟು ಕಠಿಣ ಪರೀಕ್ಷಣೆಗೆ ಒಳಪಡಿಸಿ (ಬಯಾಪ್ಸಿ ಮಾಡಿಸಿ) ನಂತರ ಸೋರಿಯಾಸಿಸ್ ಎಂದು ನಿರ್ಣಯ ಮಾಡಲಾಗುತ್ತದೆ. ಸೋರಿಯಾಸಿಸ್‍ನ ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುವುದು: ನಿಮ್ಮ ವೈದ್ಯರು ನಿಮಗೆ ಸೋರಿಯಾಸಿಸ್ ಇದೆ ಎಂದು ಗುರುತಿಸಿದಾಗ ನೀವು ಆ ರೋಗದ ಕೆಲವು ಲಕ್ಷಣಗಳನ್ನು ಅವಶ್ಯವಾಗಿ ತಿಳಿದು ಕೊಂಡಿರಲೇ ಬೇಕಾಗುತ್ತದೆ.

ಮೊದಲನೆಯದಾಗಿ, ಸೋರಿಯಾಸಿಸ್‍ನಲ್ಲಿ ಶಾಶ್ವತವಾದ ಪರಿಹಾರವೆಂಬುದು ಇಲ್ಲ. ಕೆಲವು ಜನರು ಶಾಶ್ವತವಾದ ಪರಿಹಾರ ಇದೆ ಎಂಬ ತಪ್ಪು ತಿಳುವಳಿಕೆಯಲ್ಲಿ ಇರುತ್ತಾರೆ ಕೆಲವೊಮ್ಮೆ ಇಂತಹ ಯಾವುದೋ ತಿಳಿಯದ ಉಪಚಾರದಿಂದ ಮತ್ತೊಂದು ರೋಗಕ್ಕೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ನಾವು ಇಲ್ಲಿ ಮುಖ್ಯವಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯವೆಂದರೆ ಬೇರೆ ಎಲ್ಲ ರೀತಿ ಆರೋಗ್ಯ ಸಮಸ್ಯೆಗಳೊಂದಿಗೆ ಈ ಖಾಯಿಲೆಯ ಉಪಚಾರವೂ ನಡೆಯುತ್ತಿರುವಾಗ ಔಷಧಿಯ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಯಾವುದೇ ಔಷಧಿಯೂ ಶೇಕಡಾ 100% ಎಲ್ಲರಿಗೂ ಪರಿಣಾಮ ಕಾರಿಯಾಗುತ್ತದೆಂದು ಹೇಳಲಾಗುವುದಿಲ್ಲ ಮತ್ತು ಯಾವ ಔಷಧೀಯ ಪದ್ಧತಿಯೂ 100% ಸುರಕ್ಷಿತ ಎಂದೂ ಹೇಳಲಾಗುವುದಿಲ್ಲ. ಯಾವುದೇ ರೀತಿಯ ಔಷಧೀಯ ಪದ್ಧತಿಯನ್ನು ಅನುಸರಿಸುವ ಮೊದಲು ಪೂರ್ವ ಭಾವಿಯಾಗಿ ಕುಲಂಕೂಷವಾಗಿ ಅದರ ಪರಿಣಾಮವನ್ನು ತಿಳಿದುಕೊಳ್ಳಬೇಕು ಮತ್ತು ವೈದ್ಯರು ಮತ್ತು ರೋಗಿಯ ನಡುವೆ ಈ ವಿಚಾರವಾಗಿ ಸರಿಯಾಗಿ ಚರ್ಚೆಯಾಗಿರಬೇಕು. ಇಬ್ಬರು ಬೇರೆ ಬೇರೆ ರೀತಿಯ ವ್ಯಕ್ತಿಗಳಿಗೆ ಒಂದೇ ತರಹದ ಔಷಧಿಯವನ್ನು ಕೊಟ್ಟು ಉಪಚರಿಸುತ್ತಿರುವಾಗ ಅವರ ಮೇಲೆ ಆಗುವ ಪರಿಣಾಮ ಒಂದೇ ಆಗಿರಬೇಕೆಂದೇನೂ ಇಲ್ಲ ಅವರ ಪ್ರತಿಕ್ರಿಯೆ, ಅಥವಾ ಅವರಲ್ಲಿ ಒಂದೇ ತರಹದ ಅಡ್ಡ ಪರಿಣಾಮಗಳು ಉಂಟಾಗಬೇಕೆಂದೆನೂ ಇರುವುದಿಲ್ಲ.

ಎರಡನೆಯದಾಗಿ, ಈ ಸೋರಿಯಾಸಿಸ್‍ನ್ನು ಉದ್ರೇಕಿಸುವ ಸಂಭಾವ್ಯ ಉದ್ರೇಕಕಾರಿಯಾಗಿ ಕೆಲಸ ಮಾಡುವ ಪರಿಸರವನ್ನು ತಿಳಿದುಕೊಳ್ಳಬೇಕು ಮತ್ತು ಆ ಉದ್ರೇಕಕಾರಿ ಅಂಶಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಸಾಧ್ಯವಾದ ಮಟ್ಟಿಗೆ ಅವರ ಜೀವನ ಶೈಲಿಯಲ್ಲಿ ಬದಲಾವಣೆ, ಸೋಂಕಿನ ನಿವಾರಣೆಗೆ ಮಾಡುವ ಉಪಚಾರವೇ ಈ ಸೋರಿಯಾಸಿಸ್‍ನಿಂದ ಹೊರ ಬರಲು ಮಾಡಬೇಕಾಗಿರುವ ಪ್ರಮುಖ ಅಂಶವಾಗಿದೆ ಇಲ್ಲಿ ಯಾವ ರೀತಿಯ ಔಷಧಿಯನ್ನು ತೆಗೆದುಕೊಂಡಿರಿ ಎಷ್ಟು ಔಷಧಿ ತೆಗೆದು ಕೊಳ್ಳಲಾಗಿದೆ ಎಂಬುದು ಮುಖ್ಯವಾಗುವುದಿಲ್ಲ.

ಮೂರನೆಯದಾಗಿ ಒಬ್ಬ ರೋಗಿಗೆ ಎಲ್ಲ ರೀತಿಯ ಔಷಧಿಯನ್ನು ಪ್ರಯತ್ನಿಸುವ ಅಮಿಷವುಂಟಾಗಬಹುದು ಮತ್ತು ಎಲ್ಲ ರೀತಿಯ ಔಷಧಾಲಯ ಆಸ್ಪತ್ರೆಗಳನ್ನು ಭೇಟಿ ಮಾಡಲೂ ಬಹುದು. ನೀವು ಉಪಚಾರ ಮಾಡಿಸಿಕೊಳ್ಳುತ್ತಿರುವ ವೈದ್ಯರೊಂದಿಗೆ ಚರ್ಚಿಸಿ ಮತ್ತುಯಾವ ರೀತಿಯ ಉಪಚಾರ ತೆಗೆದುಕೊಳ್ಳುವುದರಿಂದ ಏನು ಪರಿಣಾಮವಾಗಬಹುದೆಂದು ತಿಳಿದುಕೊಳ್ಳಿರಿ.

ಸೋರಿಯಾಸಿಸ್ ಜೀವನದ ಮೇಲೆ  ಪರಿಣಾಮ:

ಸೋರಿಯಾಸಿಸ್ ಎಂಬುದು ಒಂದು ದೀರ್ಘಕಾಲದ, ಯಾರಿಗೂ ಹೇಳಿಕೊಳ್ಳಲಾಗದ, ತುರಿಕೆಯುಕ್ತ, ನೋವುಭರಿತ, ವಿಕಾರವಾದ ಮತ್ತು ಅಶಕ್ತಗೊಳಿಸುವ ಒಂದು ಖಾಯಿಲೆಯಾಗಿದೆ ಇದಕ್ಕೆ ಯಾವುದೇ ಶಾಶ್ವತ ಪರಿಹಾರವಿರುವುದಿಲ್ಲ. ಇದು ರೋಗಿಯ ಜೀವನ ಶೈಲಿಯ ಮೇಲೆ ನಕಾರತ್ಮಕ ಪರಿಣಾಮ ಬೀರಬಹುದು. ಸೋರಿಯಾಸಿಸ್‍ನಿಂದ ಮನೆಯಲ್ಲಿ, ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಸಂಬಂಧಗಳ ಮೇಲೆ ಮತ್ತು ದಾಂಪತ್ಯದಲ್ಲಿ ಸಂಬಂಧಗಳ ನಡುವೆ ಮಾನಸಿಕ ಒತ್ತಡವನ್ನುಂಟು ಮಾಡಿ ಬೇರೆ ಬೇರೆ ಪರಿಣಾಮ ಉಂಟಾಗಬಹುದಾಗಿದೆ. ರೋಗಿಗಳು ಬಹಳಬೇಗ ಕಳಂಕಿತ ಭಾವನೆಗೆ ಒಳಗಾಗಿ ತಮ್ಮನ್ನು ತಾವು ಸಾಮಾನ್ಯ ಸಾಮಾಜಿಕ ಜೀವನದಿಂದ ದೂರ ಮಾಡಿಕೊಳ್ಳುತ್ತಾರೆ, ಶಾಲೆಯಿಂದ, ಕೆಲಸದ ಸ್ಥಳದಿಂದ, ಈಜುಕೊಳದಲ್ಲಿ ಮುಂತಾದ ಸ್ಥಳಗಳಲ್ಲಿ ದೂರವಿರಬಯಸುತ್ತಾರೆ. ಇದರ ಪರಿಣಾಮವಾಗಿ ಅವರು ಹೆಚ್ಚಾಗಿ ಸಾಮಾಜಿಕ ಚಟುವಟಿಕೆಗಳಿಂದ ದೂರ ಇರಲು ಬಯಸುತ್ತಾರೆ ಮತ್ತು ಸಾಮಾನ್ಯವಾಗಿ ಒಂಟಿತನದ ಅನುಭವವನ್ನು ಪಡೆಯುತ್ತಾರೆ, ಪ್ರತ್ಯೇಕತೆಯನ್ನು ತೋರುತ್ತಾರೆ, ಅವರು ಆಕರ್ಷಕವಾಗಿಲ್ಲ ಎಂಬ ಭಾವನೆಯನ್ನು ಹೊಂದಿರುತ್ತಾರೆ ಮತ್ತು ಅವರ ನಡವಳಿಕೆಯನ್ನು ಅಸಮಾಧಾನವು ಎದ್ದು ಕಾಣುತ್ತಿರುತ್ತದೆ.

ಸೋರಿಯಾಸಿಸ್‍ನ ಉಪಚಾರ ಹೇಗೆ?

ಈ ಕಾಯಿಲೆಗೆ ಉತ್ತಮ ಚಿಕಿತ್ಸೆಯನ್ನು ಆ ರೋಗಿಯನ್ನು ಉಪಚರಿಸುತ್ತಿರುವ ವೈದ್ಯರು ನಿರ್ಧರಿಸುತ್ತಾರೆ ಮತ್ತು ಅದು ಖಾಯಿಲೆಯ ವಿಧ, ಭಾಗದ, ಖಾಯಿಲೆಯ ತೀವ್ರತೆ, ಖಾಯಿಲೆಗೆ ತುತ್ತಾಗಿರುವ ದೇಹದ ಭಾಗಗಳು, ಉಪಚಾರ ಪಡೆಯುತ್ತಿರುವ ಔಷಧೀಯ ಪರಿಸ್ಥಿತಿ ಮತ್ತು ರೋಗಿಯ ಮಾನಸಿಕ ಪರಿಸ್ಥಿತಿಯ ಮೇಲೆ ನಿರ್ಧರಿತವಾಗುತ್ತದೆ. ಚರ್ಮವನ್ನು ಒಣ-ಒಣವಾಗಿ ಬಿಡದೆ ತೇವಭರಿತವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವೆನಿಸುತ್ತದೆ. ಪೆಟ್ರೋಲಿಯಮ್ ಜೆಲ್ಲಿ ಅಥವಾ ಆಲಿವ್ ಎಣ್ಣೆಯನ್ನು ಬಳಸಿ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಬಹುದು.

ಮಧ್ಯ ಮಧ್ಯ ಸಣ್ಣವಾಗಿ ಸ್ನಾನ ಮತ್ತು ಸ್ವಚ್ಛವಾಗಿಡಲು ಕೈಕಾಲು ಮುಖ ತೊಳೆಯುವದರಿಂದ ಚರ್ಮವು ಸುಲಿಯುವುದರಿಂದ ತಪ್ಪಿಸಕೊಳ್ಳಬಹುದಾಗಿದೆ ಮತ್ತು ಚರ್ಮದಲ್ಲಿರುವ ನೈಸರ್ಗಿಕ ತೈಲವನ್ನು ಉಳಿಸಿಕೊಳ್ಳಬಹುದಾಗಿದೆ. ಸ್ನಾನ ಮಾಡುವಾಗ ಅದರೊಂದಿಗೆ ಲವಣಗಳನ್ನು, ತೈಲವನ್ನು ಅಥವಾ ನುಣುಪಾಗಿರುವ ಒಟ್‍ಮೀಲನ್ನು ಉಪಯೋಗಿಸುವುದರಿಂದ ಚರ್ಮವನ್ನು ಮೃದುವಾಗಿ ಮಾಡಿಕೊಳ್ಳಬಹುದಾಗಿದೆ. ನೀವು ಡೆರ್ಮಟಾಲೊಜಿಸ್ಟ್ ಬಳಿ ಹೋದಾಗ ಅವರು ನಿಮ್ಮ ಖಾಯಿಲೆಯನ್ನು ಪರೀಕ್ಷಿಸಿ ಅದರ ತೀವ್ರತೆಯನ್ನು ಸೌಮ್ಯ, ಮಧ್ಯಮ ಅಥವಾ ತೀವ್ರ ಎಂದು ಗುರುತಿಸುತ್ತಾರೆ ಇದರ ಆದಾರದ ಮೇಲೆ ನೀವು ತೆಗೆದುಕೊಳ್ಳಬೇಕಾಗಿರುವ ಉಪಚಾರದ ವಿಧಾನವನ್ನು ನಿರ್ಧರಿಸಲಾಗುತ್ತದೆ.

1. ಸೌಮ್ಯ ಸೋರಿಯಾಸಿಸ್ : (ಶೇಕಡಾ 80% ಜನರಲ್ಲಿ ಈ ರೀತಿಯ ಖಾಯಿಲೆ ಉಂಟಾಗಿರುತ್ತದೆ) ಈ ಪರಿಸ್ಥಿತಿಯಲ್ಲಿ ದೇಹದ ಶೇಕಡಾ 3-5% ಭಾಗಗಳು ಮಾತ್ರ ಈ ಖಾಯಿಲೆಗೆ ಒಳಗಾಗಿರುತ್ತವೆ. ದೇಹದಲ್ಲಿ ಸ್ವಲ್ಪ ಭಾಗಗಳು ಮಾತ್ರ ಈ ಖಾಯಿಲೆಗೆ ಒಳಗಾಗಿರುತ್ತದೆ ಮತ್ತು ಅದನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ. ಸೋರಿಯಾಸಿಸ್ ಖಾಯಿಲೆಯು ಮುಖ್ಯವಾಗಿ ಚರ್ಮದ ಭಾಗಗಳಿಗೆ ಪರಿಣಾಮ ಬೀರುವುದರಿಂದ ಸ್ಥಳೀಯ ಚಿಕಿತ್ಸೆ ಬಹಳ ಉಪಯುಕ್ತವಾಗಿರುತ್ತದೆ ಏಕೆಂದರೆ ಇದು ಸುರಕ್ಷಿತ, ಸಾಧ್ಯವಾದಷ್ಟು ಮಟ್ಟಿಗೆ ಪರಿಣಾಮಕಾರಿ ಮತ್ತು ನೇರವಾಗಿ ಚರ್ಮದ ಮೇಲೆ ಲೇಪಿಸಲು ಸಾಧ್ಯವಿರುತ್ತದೆ. ಇವುಗಳನ್ನು ದ್ರವೌಷಧ, ಚರ್ಮಲೇಪ, ಮುಲಾಮು, ಜೆಲ್‍ಗಳು ಮತ್ತು ಶಾಂಪುಗಳು. ಇದರಲ್ಲಿ ಮಾಡುವ, ಸ್ಥಳೀಯ ಸ್ಟೆರೊಯ್ಡ್, ಮತ್ತು ಕ್ಯಾಲ್ಸಿಯಂ ಮಾರ್ಪಾಟು ಔಷಧಿಗಳೂ ಒಳಗೊಂಡಿರುತ್ತದೆ. ಚಿಕಿತ್ಸೆಯ ವಿಧಾನದೊಂದಿಗೆ ದೇಹದ ಯಾವ ಭಾಗವು ಉಪಚಾರಕ್ಕೆ ಒಳಗಾಗುತ್ತದೆಯೋ ಅದನ್ನು ಗಮನದಲ್ಲಿಟ್ಟುಕೊಂಡು ಔಷಧಿಯನ್ನು ಕೊಡಲಾಗುತ್ತದೆ.

2. ಮಧ್ಯಮ ಸೋರಿಯಾಸಿಸ್ : (ಶೇಕಡಾ 15% ರೋಗಿಗಳು ಇಂತಹ ಖಾಯಿಲೆಗೆ ಒಳಗಾಗಿರುತ್ತಾರೆ) ದೇಹದ 3 ರಿಂದ 10 % ಶೇಕಡಾ ಭಾಗದಲ್ಲಿ ಸೋಂಕಿಗೆ ಒಳಗಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಸೋಂಕು ಸ್ವಲ್ಪ ಹೆಚ್ಚಾಗಿ ಹರಡಿರುತ್ತದೆ ಆದರೂ ಸಹ ಅದನ್ನು ಸರಿಯಾದ ಪ್ರಮಾಣದ ಔಷಧಿಯನ್ನು ನೀಡಿ ನಿಯಂತ್ರಿಸಬಹುದಗಿರುತ್ತದೆ. ಸ್ಥಳೀಯ ಪದ್ಧತಿಯ ಔಷಧಿಯೊಂದಿಗೆ ಬೇರೆ ವಿಧಾನಗಳೊಂದಿಗೆ ಅಥವಾ ವಿಧಾನಗಳಿಲ್ಲದೆ ಉದಾಹರಣೆಗೆ ಫೋಟೋಥೆರಪಿ ಅಥವಾ ವ್ಯವಸ್ಥಿತ ಔಷಧಿಗಳೊಂದಿಗೆ ತೆಗೆದುಕೊಳ್ಳುವ ಯೋಜನೆಯನ್ನು ಮಾಡಬೇಕು.

3. ತೀವ್ರ ಸೋರಿಯಾಸಿಸ್ : (5% ಜನರು ಈ ರೀತಿಯ ಸೋರಿಯಾಸಿಸ್‍ಗೆ ಒಳಗಾಗಿರುತ್ತಾರೆ) ದೇಹದ 10% ಭಾಗಕ್ಕಿಂತಲೂ ಹೆಚ್ಚು ಭಾಗದಲ್ಲಿ ಈ ರೀತಿಯ ಸೋಂಕು ಉಂಟಾಗಿರುತ್ತದೆ, ಪರಿಣಾಮವಾಗಿ ಹೆಚಿನ ಭಾಗವು ಸೋರಿಯಾಸಿಸ್‍ಗೆ ಒಳಗಾಗಿರುತ್ತದೆ. ವಿಷಕಾರಿ ಔಷಧಿಗಳಾದ ಮೆಥೋಟೆಕ್ಸೆರೆಟ್, ರೆಟೆನೋಯ್ಡ್ಸ್, ಸೈಕ್ಲೋಪ್ರೈನ್ ಮತ್ತು ಹೊಸ ಜೈವಿಕಶಾಸ್ತ್ರ ವಿಧಾನಗಳನ್ನು ಬಳಸಲಾಗುತ್ತದೆ. ಇಲ್ಲಿ ಔಷಧಿಯನ್ನು ವ್ಯವಸ್ಥಿತವಾಗಿ (ಮೌಖಿಕವಾಗಿ, ಇಂಜೆಕ್ಷನ್ ಮೂಲಕ) ಸಾಮಾನ್ಯವಾಗಿ ನಿಯಮಿತವಾಗಿ ತೆಗೆದುಕೊಳ್ಳಲಾಗುತ್ತದೆ. ಈ ಔಷಧಿಯನ್ನು ತೆಗೆದುಕೊಳ್ಲುವಾಗ ಅಡ್ಡ ಪರಿಣಾಮಗಳು ಉಂಟಾಗುವ ಸಂಭಾವ್ಯತೆ ಹೆಚ್ಚಾಗಿ ಇರುತ್ತದೆ ಅದ್ದರಿಂದ ಈ ಖಾಯಿಲೆಯ ಔಷಧಿಯನ್ನು ವೈದ್ಯರ ಮೇಲ್ವಿಚಾರಣೆಯೊಂದಿಗೆ ತೆಗೆದುಕೊಳ್ಳಬೇಕಾಗುವುದು. ಪುನರಾವರ್ತಿತವಾಗಿ ಹಲವು ತಪಸಣೆಗಳನ್ನು ಮಾಡಿಸಬೇಕಾದ ಸಂದರ್ಭವು ಒದಗಬಹುದು.

ರೋಗ ಪರಿಹಾರವಾಗದೇ ಇದ್ದ ಪಕ್ಷದಲ್ಲಿ ವ್ಯಕ್ತಿಯು ದುರ್ಬಲನಾಗುತ್ತಾನೆ. ಕೆಲವೊಮ್ಮೆ ನೀವು ಪೂರ್ಣ ಗುಣಮುಖರೆನಿಸಿ ಪೂರ್ಣ ಪ್ರಮಾಣದ ಆಯೋಗ್ಯಯುತ ಚರ್ಮವೆನಿಸಬಹುದು, ಸ್ವಲ್ಪ ಖಾಯಿಲೆಯ ಚರ್ಮ ಎನಿಸಬಹುದು ಅಥವಾ ಸೋರಿಯಾಸಿಸ್‍ನ ಲಕ್ಷಣ ಕಾಣಿಸದೇ ಇರಬಹುದು. ಸಮನಾಗಿ ಕೆಲವೊಂದು ಸಮಯದಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಉದ್ರೇಕಿತವಾಗಿ ಹೆಚ್ಚಾಗಬಹುದು. ಈ ಉದ್ರೇಕಿತಗೊಂಡು ಖಾಯಿಲೆ ಹೆಚ್ಚಾದ ಸಮಯ ಮತ್ತು ಸಾಮಾನ್ಯ ಚರ್ಮದ ಸಮಯದ ನಡುವಿನ ಅಂತರ ಒಬ್ಬರಿಂದ ಮತ್ತೊಬ್ಬರಲ್ಲಿ ಬೇರೆ ಬೇರೆಯಾಗಿರುತ್ತದೆ ಮತ್ತು ಅದನ್ನು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ. ಅದು ವಾರಗಳು, ತಿಂಗಳುಗಳು ಅಥವಾ ವರ್ಷಗಳೇ ಆಗಬಹುದು.

ಬದಲಿ ಉಪಚಾರದ ವಿಧಾನಗಳೆಂದರೆ ಯೋಗ, ಧ್ಯಾನ ಸ್ಪಾ ಥೆರಪಿ ಮೊದಲಾದವುಗಳು ಸೋರಿಯಾಸಿಸ್‍ನ ಚಿಕಿತ್ಸಾ ವಿಧಾನಗಳಲ್ಲಿ ಇವುಗಳನ್ನು ಔಷಧಿಗಳ ಜೊತೆಯಾಗಿಯೂ ಬಳಸುತ್ತಾರೆ. ಇವುಗಳು ಸೋರಿಯಾಸಿಸ್‍ನ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿವೆ, ಇವುಗಳಿಂದ ಔಷಧಿಯ ಪರಿಣಾಮಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಲು ಸಹಾಯಕವಾಗುತ್ತದೆ. ಮತ್ತು ಆಗುವ ಅಡ್ಡ ಪರಿಣಾಮಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತವೆ. ಸೋರಿಯಾಸಿಸ್‍ನ ಚಿಕಿತ್ಸೆ ದೊಡ್ಡದು ಮತ್ತು ಬಹಳ ಸಮಯ ಹಿಡಿಯುವಂತದ್ದು. ಈ ಬಹಳ ಸಮಯ ರೋಗಿಗಳಲ್ಲಿ ಅಸಹನೆಯನ್ನು ಉಂಟುಮಾಡಬಹುದು. ಇಲ್ಲಿ ಮುಖ್ಯವಾಗಿ ವೈದ್ಯರು ರೋಗಿಗಳಿಗೆ ಈ ರೀತಿಯಾಗಿ ಬಹಳ ಸಮಯದ ಉಪಚಾರದ ಬಗೆಗೆ ಒಟ್ಟಾಗಿ ತಿಳಿವಳಿಕೆ ನೀಡುವುದು ಮುಖ್ಯವಾಗುತ್ತದೆ.

ಸೋರಿಯಾಸಿಸ್ ಚಿಕಿತ್ಸಾ ಪಥ್ಯವು ಪರಿಣಾಮಕಾರಿಗಾಗಿರುತ್ತದೆಯೇ?

ಸೋರಿಯಾಸಿಸ್‍ನ ಚಿಕಿತ್ಸೆಗೂ ಪಥ್ಯಕ್ಕೂ ನೇರ ಸಂಬಂಧವಿಲ್ಲ ಮತ್ತು ನೀವು ತಿನ್ನುವ ಪದಾರ್ಥದ ಮೇಲೆ ತೀವ್ರತೆ ನಿರ್ಧಾರವಾಗುವುದಿಲ್ಲ. ಅದು ಏನೇ ಇರಲಿ ಬ್ರಿಟಿಷ್ ನ್ಯೂಟ್ರಿಷನ್ ಫೌಂಡೇಷನ್‍ನವರ ಪ್ರಕಾರ ಕನಿಷ್ಠ 300 ಗ್ರಾಂ ಎಣ್ಣೆಯುಕ್ತ ಮೀನನ್ನು ವಾರಕ್ಕೆ ಒಮ್ಮೆ ತಿಂದರೆ ಸಾಮಾನ್ಯ ಆರೋಗ್ಯವು ಚೆನ್ನಾಗಿರುತ್ತದೆ. ಫ್ಯಾಟೀ ಆಸಿಡ್, ಪ್ರೋಟಿನ್ ಮತ್ತು ಆಂಟಿ ಆಕ್ಸಿಡೆಂಟ್ ಹೆಚ್ಚಿರುವ ಆಹಾರವನ್ನು ಹೆಚ್ಚಾಗಿ ಅದರಲ್ಲೂ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಲು ಸೂಚಿಸುತ್ತಾರೆ. ಜೆಡ್ಡು ಹೆಚ್ಚಿರುವ ಆಹಾರ, ಸಂಸ್ಕರಿಸಿದ ಆಹಾರ ಮತ್ತು ಹೆಚ್ಚಿನ ಪ್ರಮಾಣದ ಮದ್ಯ ಸೇವನೆಯನ್ನು ಬಿಡಬೇಕೆಂದು ಹೇಳಲಾಗುತ್ತದೆ.

ಸೋರಿಯಾಸಿಸ್ ಉದ್ರೇಕಗೊಂಡು ಹೆಚ್ಚಾಗದಂತೆ ತಡೆಯಲು ಕೆಲವು ಉಪಾಯಗಳು

1. ಒಳ್ಳೆಯ ಸಾಬೂನನ್ನು ಬಳಸಿ

2. ಮಾಯಿಸ್ಚರಾಯಿಸರ್, ಮುಲಾಮು ಮುಂತಾದವನ್ನು ಬಳಸಿ ಚರ್ಮವನ್ನು ಸದಾ ತೇವದಿಂದ ಇರುವಂತೆ ನೋಡಿಕೊಳ್ಳಿ

3. ಬಹಳ ಛಳಿ ಅಥವಾ ಬಹಳ ಒಣ ಹವೆಯನ್ನು ತಪ್ಪಿಸಿರಿ. ಮಧ್ಯಮ ಸೂರ್ಯನ ಬೆಳಕು ಚರ್ಮಕ್ಕೆ ಸಹಕಾರಿಯಾಗಿರುತ್ತದೆ.

4. ಸೋರಿಯಾಸಿಸ್‍ನ್ನು ಉದ್ರೇಕಿಸುವಂತಹ ಔಷಧಿಗಳನ್ನು ತೆಗೆದು ಕೊಳ್ಳುವುದನ್ನು ತಪ್ಪಿಸಿರಿ (ನೋವು ನಿವಾರಕ, ಮಲೇರಿಯಾ ನಿವಾರಕ ಔಷಧ, ಲಿಥಿಯಮ್, ಪ್ರೋಪರಾನಾಲ್, ಕ್ವಿನಿಡೈನ್ ಮುಂತಾದವು)

5. ಗಾಯಗಳು ಮತ್ತು ಸೋಂಕು ಆಗದಂತೆ ತಪ್ಪಿಸಿ ಆದಾಗ್ಯೂ ಆದಾಗ ನಿಮಗೆ ಸೋರಿಯಾಸಿಸ್ ಸೋಂಕಿರುವುದಾಗಿ ವೈದ್ಯರಿಗೆ ಮೊದಲೇ ಹೇಳಿ

6. ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ

7. ಧೂಮಪಾನ ಮತ್ತು ಮದ್ಯಪಾನವನ್ನು ಕಡಿಮೆ ಮಾಡಿ

8. ಉತ್ತಮವಾದ ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸಿ. ನಿತ್ಯವೂ ವ್ಯಾಯಾಮ ಮಾಡಿ. ಆರೋಗ್ಯಯುತ ತೂಕವನ್ನು ಕಾಯ್ದುಕೊಳ್ಳಿರಿ

9. ನೀವು ಸ್ವಯಂ ಔಷಧಿ ಮಾಡಿಕೊಳ್ಳಬೇಡಿ.

ಸೋರಿಯಾಸಿಸ್ ಎನ್ನುವುದು ಒಂದು ದೀರ್ಘಕಾಲೀನ ನ್ಯೂನತೆಯಾಗಿದೆ. ಈ ಖಾಯಿಲೆಗೆ ಕಾರಣಗಳು ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಲು ಇದುವರೆಗೂ ಆಗಿಲ್ಲ. ಕೆಲವು ಪ್ರಚೋದಕ ಕಾರಣಗಳು ಇವೆ ಅವುಗಳನ್ನು ಗುರುತಿಸಿ ಅದನ್ನು ತಪ್ಪಿಸಿರಿ. ಇದರ ಚಿಕಿತ್ಸೆಗೆ ಬಹಳ ಸಮಯದ ಅಗತ್ಯವಿರುತ್ತದೆ ಮತ್ತು ಚಿಕಿತ್ಸೆಯು ಒಬ್ಬರಿಂದ ಒಬ್ಬರಿಗೆ ಅವರವರ ಖಾಯಿಲೆಯ ತೀವ್ರತೆಯ ಆಧಾರದ ಮೇಲೆ ಭಿನ್ನವಾಗಿರುತ್ತದೆ.

ಡಾ. ಭಾನುಪ್ರಕಾಶ್
ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, #82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066
ಫೋನ್: 080-28413381/2/3/4    www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!